Connect with us

LATEST NEWS

ಮಂಗಳೂರು: ಸ್ಪೀಕರ್ ಯು.ಟಿ ಖಾದರ್ ದಕ್ಷಿಣ ಕೊರಿಯಾದಲ್ಲಿ ಅಧ್ಯಯನ ಪ್ರವಾಸ

Published

on

ಮಂಗಳೂರು: ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಕಾಮನ್‍ವೆಲ್ತ್ ಸಂಸದೀಯ ಸಂಘ, ಕರ್ನಾಟಕ ಶಾಖೆ ಇದರ ಪ್ರತಿನಿಧಿಯಾಗಿ ಆಸ್ಟ್ರೇಲಿಯಾ ದೇಶದ ಸಿಡ್ನಿಯಲ್ಲಿ ನವೆಂಬರ್ 5 ರಿಂದ 8ವರೆಗೆ ನಡೆಯಲಿರುವ 67ನೇ ಕಾಮನ್‍ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭ ಅಕ್ಟೋಬರ್ 25 ರಿಂದ 28ರವರೆಗೆ ದಕ್ಷಿಣ ಕೊರಿಯಾ ದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಈ ಅಧ್ಯಯನ ಪ್ರವಾಸ ಸಂದರ್ಭದಲ್ಲಿ ಸ್ಪೀಕರ್ ಅವರು ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ಭಾರತದ ರಾಯಭಾರಿ ಅಮಿತ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ಈ ಭೇಟಿಯ ಸಂದರ್ಭ ಉಭಯ ದೇಶಗಳ ಸಂಬಂಧಗಳು, ಶಿಕ್ಷಣ, ವ್ಯಾಪಾರ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಅನೌಪಚಾರಿಕವಾಗಿ ಚರ್ಚಿಸುತ್ತಾ, ದಕ್ಷಿಣ ಕೊರಿಯಾ ದೇಶದ. ಕರ್ನಾಟಕದಲ್ಲಿ ಹೂಡಿಕೆಯ ನಿರೀಕ್ಷೆಗಳು/ಅವಕಾಶಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ಸಭಾಧ್ಯಕ್ಷರು ಕರ್ನಾಟಕದ ವಿಶ್ವವಿದ್ಯಾಲಯಗಳು ಕೊರಿಯಾ ದೇಶದ ವಿವಿಗಳೊಂದಿಗೆ ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳ ಮತ್ತು ಉದ್ಯೋಗಾವಕಾಶಗಳ ಕುರಿತು ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳುವ ಬಗ್ಗೆ ಭಾರತದ ರಾಯಭಾರಿಗಳೊಂದಿಗೆ ಚರ್ಚಿಸಿದರು. ಉಭಯ ದೇಶಗಳ ಮೂಲಸೌಲಭ್ಯಗಳು, ಆರ್ಥಿಕತೆ ಕುರಿತಾಗಿ ಚರ್ಚಿಸಿ ಈ ಭೇಟಿಯು ಫಲಪ್ರದವಾಗಿದ್ದು, ವಿಶೇಷವಾಗಿ ದಕ್ಷಿಣ ಕೊರಿಯಾ ಮತ್ತು ಕರ್ನಾಟಕದ ನಡುವಿನ ಸಂಬಂಧಗಳು ಇನ್ನು ಹೆಚ್ಚಿನ ರೀತಿ ಬೆಳೆಯಲಿ ಎಂದು ಸಭಾಧ್ಯಕ್ಷರು ಆಶಿಸಿದರು.

LATEST NEWS

ಮಕ್ಕಳ ಜೀವಕ್ಕೆ ಕುತ್ತು ತಂದ ಇಲಿ ಪಾಷಾಣ

Published

on

ಮನೆಯಲ್ಲಿ ಇಲಿ ಕಾಟ ಹೆಚ್ಚಿದೆ ಎಂದು ಪೋಷಕರು ರೂಮಿನಲ್ಲಿ ಇಲಿ ಪಾಷಾಣವನ್ನಿಟ್ಟು ಮಲಗಿದ್ದಾರೆ, ಬೆಳಗಾಗುವಷ್ಟರಲ್ಲಿ ಇಲಿಗಳ ಬದಲು ಇಬ್ಬರು ಮಕ್ಕಳು ಕೊನೆಯು*ಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಚೆನ್ನೈನಲ್ಲಿ ಈ ಘಟನೆ ನಡೆದಿದೆ,. ರಾತ್ರಿ ಇಲಿ ಪಾಷಾಣವನ್ನು ಪುಡಿ ರೂಪದಲ್ಲಿ ರೂಮಿನಲ್ಲಿರಿಸಿದ್ದರು. ಚೆನ್ನೈ ಹೊರವಲಯದಲ್ಲಿರುವ ಕುಂದ್ರತೂರಿನ ಮನಂಚೇರಿ ಪ್ರದೇಶದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ನಾಲ್ವರು ಕುಟುಂಬ ಸದಸ್ಯರು ಕೋಣೆಯಲ್ಲಿ ಇಲಿ ವಿಷವನ್ನು ಪುಡಿಮಾಡಿಟ್ಟು ಮಲಗಿದ್ದರು. ಫ್ಯಾನ್​ನಿಂದಾಗಿ ಆ ಪುಡಿಯನ್ನು ಅವರು ಗಾಳಿಯ ಮೂಲಕ ಉಸಿರಾಡಿದ್ದ ಕಾರಣ ಇಬ್ಬರು ಸಾ*ವನ್ನಪ್ಪಿದ್ದಾರೆ.

ಮರುದಿನ ಅಕ್ಕಪಕ್ಕದ ಮನೆಯವರು ಗಿರಿಧರನ್, ಪವಿತ್ರಾ, ಅವರ ಒಂದು ವರ್ಷದ ಮಗ ಮತ್ತು ಆರು ವರ್ಷದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಎಲ್ಲರೂ ವಾಂತಿ ಮಾಡಿಕೊಂಡಿದ್ದರು. ಮಗ ಸಾಯಿ ಸುದರ್ಶನ್ ಮತ್ತು ಮಗಳು ವಿಶಾಲಿನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಗಿರಿಧರನ್ ಮತ್ತು ಪವಿತ್ರ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ಕುಂದ್ರತ್ತೂರು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಕೀಟ ನಿಯಂತ್ರಣ ಕಂಪನಿಯ ಇಬ್ಬರು ಸಿಬ್ಬಂದಿ ಇಲಿ ವಿಷವನ್ನು ಹಾಕಿದ್ದಾರೆ ಎಂದು ಪ್ರಾಥಮಿಕ ಸಂಶೋಧನೆಗಳು ತೋರಿಸುತ್ತವೆ.

ಈ ಇಲಿ ವಿಷವನ್ನು ಪುಡಿಯ ರೂಪದಲ್ಲಿ ಇರಿಸಿದ್ದರು. ಮುಚ್ಚಿದ ಹವಾನಿಯಂತ್ರಿತ ಕೋಣೆಯಾಗಿದ್ದ ಕಾರಣ ಆ ವಿಷ ಇಡಿ ರೂಮನ್ನು ಆಕ್ರಮಿಸಿತ್ತು. ನಾಲ್ವರೂ ರಾತ್ರಿಯಿಡೀ ತಿಳಿಯದೆ ವಿಷಗಾಳಿಯನ್ನು ಉಸಿರಾಡಿದ್ದರು. ಕೀಟ ನಿಯಂತ್ರಣ ಕಂಪನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

LATEST NEWS

ಕಾರ್ಕಳ: ಅಣ್ಣನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ತಂಗಿ ವಿದ್ಯುತ್ ಆಘಾ*ತಕ್ಕೊಳಗಾಗಿ ದಾರುಣ ಸಾ*ವು

Published

on

ಕಾರ್ಕಳ: ಅಣ್ಣನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ತಂಗಿ ವಿದ್ಯುತ್ ಆಘಾತಕ್ಕೊಳಗಾಗಿ ದಾರುಣ ರೀತಿಯಲ್ಲಿ ಮೃ*ತಪಟ್ಟ ಘಟನೆ ನಿಟ್ಟೆ ಪರಪ್ಪಾಡಿ ಎಂಬಲ್ಲಿ ಸಂಭವಿಸಿದೆ. ಗುರುವಾರ ರಾತ್ರಿ ಈ ಘಟನೆಯಲ್ಲಿ ಲಲಿತಾ ಬೋಂಡ್ರ ಮೃ*ತಪಟ್ಟ ಮಹಿಳೆ.

ನಿಟ್ಟೆ ಪರಪ್ಪಾಡಿಯ ರಾಘು ಬೋಂಡ್ರ ಎಂಬವರು ಕೆಲ ದಿನಳ ಹಿಂದೆ ಮೃ*ತಪಟ್ಟಿದ್ದರು. ಅಣ್ಣನ‌ ತಿಥಿಯ ಪೂರ್ವ ಸಿದ್ಧತೆಗಾಗಿ ಬಂದಿದ್ದ ತಂಗಿ ಲಲಿತಾ ಬೋಂಡ್ರ ಅವರು ಗುರುವಾರ ರಾತ್ರಿ ಅಡುಗೆ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಮನೆ ಹೊರಾಂಗಣದಲ್ಲಿ ಅಳವಡಿಸಲಾಗಿದ್ದ ಶಾಮಿಯಾನದ ಕಬ್ಬಿಣದ ಕಂಬವನ್ನು ಹಿಡಿಯುತ್ತಿದ್ದಂತೆ ಅವರು ವಿದ್ಯುತ್ ಅಘಾ*ತಕ್ಕೊಳಗಾಗಿ ಘಟನಾ ಸ್ಥಳದಲ್ಲಿ ಕುಸಿದು ಬಿದ್ದು ದಾರು*ಣ ಅಂ*ತ್ಯ ಕಂಡಿದ್ದಾರೆ.

ಶಾಮೀಯನ ಅಳವಡಿಸಿದಾಗ ಅದರ ಕಬ್ಬಣದ ಕಂಬಕ್ಕೆ‌ ಟ್ಯೂಬ್ ಲೈಟ್ ಅಳವಡಿಸಲಾಗಿ ಅದರ ಮೂಲ ವಿದ್ಯುತ್ ಸೋರಿಕೆಯಾಗಿ ಈ ಘಟನೆ ಸಂಭವಿಸಿಎಬಹುದೆಂಬ ಮಾಹಿತಿ ತಿಳಿದು ಬಂದಿದೆ.

Continue Reading

LATEST NEWS

ಹೆಂಡತಿ ಮೇಲೆ ಶಂಕೆ; ಪತ್ನಿಯನ್ನು ಕೊಂ*ದು ತಾನೂ ಆ*ತ್ಮಹತ್ಯೆ

Published

on

ಮಂಗಳೂರು/ಲಂಗಾಣ: ಪತ್ನಿಯನ್ನು ಕೊಂ*ದು ರೈತನೊಬ್ಬ ಆ*ತ್ಮಹತ್ಯೆಗೆ ಶರಣಾದ ಘಟನೆ ಗುರುವಾರ(ನ.14) ತೆಲಂಗಾಣದ ಸಿರ್ಸಿಲ್ಲ ಪಟ್ಟಣದಲ್ಲಿ ನಡೆದಿದೆ.

ಸಿರ್ಸಿಲ್ಲಾ ಪಟ್ಟಣದ ಶಾಂತಿನಗರ ನಿವಾಸಿ ಮುದಂ ವೆಂಕಟೇಶಂ (40) ತನ್ನ ಪತ್ನಿ ಬೊಳ್ಳ ವಸಂತ (35) ನನ್ನು ನರ್ಸಿಂಗ್ ಕಾಲೇಜು ಹಿಂಭಾಗದಲ್ಲಿರುವ ತನ್ನ ಗದ್ದೆಗೆ ಕರೆದೊಯ್ದಿದ್ದಾನೆ. ಬಳಿಕ ಪತ್ನಿಯನ್ನು ಕೊಂದು, ಬಳಿಕ ತಾನು ಕೀಟನಾಶಕ ಸೇವಿಸಿ ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರಂಭದಲ್ಲಿ ದಂಪತಿ ಕೀಟನಾಶಕ ಸೇವಿಸಿ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಭಾವಿಸಿದ್ದರು. ಆದರೆ, ಸ್ಥಳದಲ್ಲಿಯೇ ರ*ಕ್ತ ಬಿದ್ದಿರುವುದನ್ನು ಗಮನಿಸಿದ ಬಳಿಕ ಕೊ*ಲೆ ಶಂಕೆ ವ್ಯಕ್ತವಾಗಿದೆ.

ಕೊ*ಲೆಗೆ ಕಾರಣ :

ಪತ್ನಿಯ ಶೀ*ಲ ಶಂಕಿಸಿದ ವೆಂಕಟೇಶಂ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕೆಲವರು ಹೇಳಿಕೆ ನೀಡಿದ್ದಾರೆ. ದಂಪತಿಗೆ ವರ್ಷಿಣಿ ಮತ್ತು ಅಜಿತ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಕುರಿತು ದ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

LATEST NEWS

Trending

Exit mobile version