Monday, August 15, 2022

ಸಮಯದ ಬಳಿಕ ಮಾದಕ ದೃವ್ಯ ಜಾಲದ ಬೆನ್ನು ಬಿದ್ದ ಪೊಲೀಸರು : ಉಳ್ಳಾಲದಲ್ಲಿ 23 ಲಕ್ಷದ ಗಾಂಜಾ ಸೊತ್ತುಗಳು ವಶ..!

ಸಮಯದ ಬಳಿಕ ಮಾದಕ ದೃವ್ಯ ಜಾಲದ ಬೆನ್ನು ಬಿದ್ದ ಪೊಲೀಸರು : ಉಳ್ಳಾಲದಲ್ಲಿ 23 ಲಕ್ಷದ ಗಾಂಜಾ ಸೊತ್ತುಗಳು ವಶ..!

ಮಂಗಳೂರು : ಬಹಳ ಸಮಯದ ಬಳಿಕ ಮಂಗಳೂರು ಪೊಲೀಸರು ಮತ್ತೆ ಮಾದಕ ದೃವ್ಯ ಜಾಲದ ಬೆನ್ನು ಬಿದ್ದಿದ್ದಾರೆ.ಮಾತ್ರವಲ್ಲ ಭಾರಿ ಪ್ರಮಾಣದಲ್ಲಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

 

ಕರಾವಳಿ ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಮಾದಕ ದೃವ್ಯದ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ನಟೋರಿಯಸ್ ತಂಡವನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ನಗರದ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರಿನ ದೆಕ್ಕಾಡು ಪರಿಸರದಲ್ಲಿ ಭಾರಿ ಪ್ರಮಾಣದ ಗಾಂಜವನ್ನು ಮಾರಕ್ಕೆ ಯತ್ನಿಸಿದಾಗ ಪೊಲಿಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಬಂಧಿತರು ತೆಲಂಗಾಣ ಹಾಗು ಬೀದರ್ ಮೂಲದವರಾಗಿದ್ದು  ಒಟ್ಟು ಏಳು ಮಂದಿಯ ಬಂಧಿಸಲಾಗಿದೆ. ಅಜೀಜ್ ಯಾನೆ ಅಬ್ದುಲ್ ಅಜೀದ್, ಮೋಯ್ದಿನ್ ಹಫೀಸ್ ಯಾನೆ ಅಬಿ, ವಿಠಲ್ ಚವ್ಹಾಣ, ಸಂಜುಕುಮಾರ್ ಯಾನೆ ಸಂಜು, ಕಲ್ಲಪ್ಪ, ಮೊಹಮ್ಮದ್ ಹಫೀಜ್, ಯಾನೆ ಅಪ್ಪಿ, ಸಂದೀಪ್ ಬಂಧಿತರಾಗಿದ್ದಾರೆ.

ತೆಲಂಗಾದಿಂದ ಗಾಂಜಾ ತಂದು ಅದನ್ನು ಕರ್ನಾಟಕದ ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಮಾರಾಟ ಮಾಡಲು ಯೋಜನೆ ಹಾಕಿಕೊಂಡಿದ್ದಾಗಿ ತನಿಖೆ ವೆಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಆಯುಕ್ತರು ತಿಳಿಸಿದ್ದು ಅವರಿಂದ 44 ಕೆಜಿ ಗಾಂಜಾ, ಎರಡು ಕಾರು, ಆರು ಬೈಕ್ ,ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ 23ಲಕ್ಷವಾಗಿದೆ ಎಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here

Hot Topics

ಕಡಬ: ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕ ಕುಸಿದು ಬಿದ್ದು ಸಾವು

ಕಡಬ: ತಾಲೂಕಿನ ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ನಡೆದ ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕರೋರ್ವರು ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ನಡೆದಿದೆ.ಧ್ವಜಾರೋಹಣವನ್ನು...

ಬಿ.ಸಿ ರೋಡಿನ ಬಾನೆತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಬಂಟ್ವಾಳ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಂಟ್ವಾಳದ ಬಿ.ಸಿ ರೋಡಿನ ವಿಜಯಲಕ್ಮೀ ಗ್ರೂಪ್ ವತಿಯಿಂದ ಬಾನೆತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು.20×30 ಅಳತೆಯ ರಾಷ್ಟ್ರ ಧ್ವಜವನ್ನು ಕ್ರೇನ್ ಮೂಲಕ ಸುಮಾರು 174 ಅಡಿ ಎತ್ತರದಲ್ಲಿ...

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...