Connect with us

  DAKSHINA KANNADA

  ಮಂಗಳೂರು: ಕುಡುಕನಿಗೆ ಸಿಕ್ಕಿದ ಲಕ್ಷ ರೂಪಾಯಿಗಳ ನೋಟಿನ ಬಂಡಲ್ ಪ್ರಕರಣದಲ್ಲಿ ಪೊಲೀಸ್ ಕಮಿಷನರ್ ಹೇಳಿದಿಷ್ಟು..!

  Published

  on

  ಪಂಪ್‌ವೆಲ್ ಬಳಿ ಕೆಲವು ದಿನಗಳ ಹಿಂದೆ ಮೆಕ್ಯಾನಿಕ್ ಶಿವರಾಜ್ ಎಂಬವರಿಗೆ ಸಿಕ್ಕಿದ್ದ ವಾರಿಸುದಾರರಿಲ್ಲದ ಹಣದ ಬಂಡಲ್‌ಗೆ ಸಂಬಂಧಿಸಿ ಸದ್ಯ 3.5 ಲಕ್ಷ ರೂಪಾಯಿ ಹಣ ಪೊಲೀಸರ ವಶದಲ್ಲಿದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

  ಮಂಗಳೂರು: ಪಂಪ್‌ವೆಲ್ ಬಳಿ ಕೆಲವು ದಿನಗಳ ಹಿಂದೆ ಮೆಕ್ಯಾನಿಕ್ ಶಿವರಾಜ್ ಎಂಬವರಿಗೆ ಸಿಕ್ಕಿದ್ದ ವಾರಿಸುದಾರರಿಲ್ಲದ ಹಣದ ಬಂಡಲ್‌ಗೆ ಸಂಬಂಧಿಸಿ 3.5 ಲಕ್ಷ ಪೊಲೀಸರ ವಶದಲ್ಲಿದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

  ತನ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈವರೆಗೂ ಈ ಹಣ ಯಾರದ್ದು, ದಾರಿ ಮಧ್ಯೆ ಹೇಗೆ ಬಿದ್ದು ಸಿಕ್ಕಿತು ? ಇನ್ನು ಸ್ಪಷ್ಟವಾಗಿಲ್ಲ.

  ಈ ಅನಾಮಧೇಯ ಹಣದ ಕಟ್ಟುಗಳ ವಾರಿಸುದಾರರು ಇದ್ದಲ್ಲಿ, ಸಂಬಂಧಪಟ್ಟ ಠಾಣೆಗೆ ಸೂಕ್ತ ಮಾಹಿತಿಯೊಂದಿಗೆ ಭೇಟಿ ನೀಡಿದರೆ ವಾಪಾಸು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದರು.

  ನ. 26ರಂದು ಶಿವರಾಜ್ ಎಂಬವರಿಗೆ ಬೆಳಗ್ಗಿನ ಹೊತ್ತು ಪಂಪ್‌ವೆಲ್ ಬಳಿ ಬಾಕ್ಸ್ ಹಾಗೂ ಪ್ಲಾಸ್ಟಿಕ್ ಚೀಲದಲ್ಲಿ ಹಣದ ಬಂಡಲ್‌ಗಳು ಸಿಕ್ಕಿತ್ತು.

  ಅದರಲ್ಲಿ ಎಷ್ಟು ಹಣ ಇತ್ತೆಂಬ ಬಗ್ಗೆ ಸ್ಪಷ್ಟವಾಗಿ ಅವನು ಹೇಳುತ್ತಿಲ್ಲ. ಮಾಧ್ಯಮದಲ್ಲಿ 10 ಲಕ್ಷ ರೂ. ಹಣದ ಕವರ್ ಸಿಕ್ಕಿರುವುದಾಗಿ ವರದಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

  ಹಣ ದೊರೆತಿರುವ ಪ್ರದೇಶದ ಸಿಸಿ ಕ್ಯಾಮರಾ ಕೂಡಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

  ಶಿವರಾಜ್ ಹಣದ ಕಟ್ಟು ಸಿಕ್ಕಿದ ತನ್ನ ಜತೆ ಮದ್ಯಪಾನ ಮಾಡುವ ವ್ಯಕ್ತಿ ತುಕರಾಂ ಎಂಬವರಿಗೆ 500 ರೂ.ಗಳ ಆರು ಕಟ್ಟು ಹಣವನ್ನು ನೀಡಿದ್ದಾಗಿ ಹೇಳಿಕೊಂಡಿದ್ದ. ಈ ಬಗ್ಗೆ ಮಾದ್ಯಮದಲ್ಲಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ತುಕರಾಂ 2,99,500 ರೂ.ಗಳನ್ನು ಠಾಣೆಗೆ ತಂದು ನೀಡಿದ್ದಾನೆ.

  ಶಿವರಾಜ್

  ಶಿವರಾಜ್‌ನಿಂದ ಹಣದ ಕಟ್ಟುಗಳನ್ನು ಪಡೆದಿದ್ದ ತುಕಾರಾಂ ಒಂದು ಕಟ್ಟಿನಿಂದ 500 ರೂ. ತೆಗೆದು ಮದ್ಯಪಾನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

  ಈ ಬಗ್ಗೆ ಶಿವರಾಜ್ “ಹಣದ ಕಟ್ಟು ಹಿಡಿದುಕೊಂಡು ಮಲಗಿದ್ದೆ. ತನ್ನದಲ್ಲಿದ್ದ ಹಣದ ಒಂದು ಕಟ್ಟಿನಿಂದ ಒಂದು ನೋಟು ತೆಗೆದು ಮದ್ಯಪಾನ ಮಾಡಿ ಮಲಗಿದ್ದೆ. ಬಳಿಕ ಎಚ್ಚರವಾದಾಗ ಒಂದು ನೋಟು ತೆಗೆದ ಕಟ್ಟು ಬಿಟ್ಟು ಬೇರೆ ಯಾವುದೇ ಹಣ ಇರಲಿಲ್ಲ” ಎನ್ನುತ್ತಾನೆ.

  ಒಟ್ಟು ಇದೀಗ ತುಕರಾಂ ತಂದು ಕೊಟ್ಟ 2,99,500 ಮತ್ತು 49,000 ರೂ. ಪೊಲೀಸರ ವಶದಲ್ಲಿದೆ. ಅದನ್ನು ಸೂಕ್ತ ದಾಖಲೀಕರಣದೊಂದಿಗೆ ಪೊಲೀಸರ ವಶದಲ್ಲಿರಿಸಲಾಗಿದೆ.

  ವಾರಿಸುದಾರರು ಬಾರದಿದ್ದಲ್ಲಿ ಮುಂದಿನ ಕ್ರಮ ವಹಿಸಲಾಗುವುದು. ಈಗಾಗಲೇ ಅದರಲ್ಲಿ 10 ಲಕ್ಷ ಇತ್ತೆಂದು ಹೇಳಲಾಗಿರುವಂತೆ, ಯಾರಾದರೂ ಶಿವರಾಜ್ ಬಳಿ ಇದ್ದ ಹಣವನ್ನು ಕೊಂಡು ಹೋಗಿದ್ದಲ್ಲಿ ಅದನ್ನು ಠಾಣೆಗೆ ಒಪ್ಪಿಸಿದರೆ ಅವರ ಮೇಲೆ ಯಾವುದೇ ರೀತಿಯ ಪ್ರಕರಣ ದಾಖಲಿಸಲಾಗುವುದಿಲ್ಲ.

  ಒಂದು ವೇಳೆ ತನಿಖೆಯ ವೇಳೆ, ಸಿಸಿ ಕ್ಯಾಮರಾ ಫೂಟೇಜ್ ತಪಾಸಣೆಯ ಸಂದರ್ಭ ಯಾರಾದರೂ ಶಿವರಾಜ್ ಬಳಿ ಇದ್ದ ಹಣ ಕದ್ದುಕೊಂಡು ಹೋಗಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಸುಲಿಗೆ, ದರೋಡೆ ಪ್ರಕರಣ ದಾಖಲಾಗುತ್ತದೆ.

  ಉಳಿದಂತೆ ಶಿವರಾಜ್ ಅಥವಾ ತುಕರಾಂ ಮೇಲೆ ಯಾವುದೇ ರೀತಿಯ ಅಪರಾಧ ಪ್ರಕರಣ ದಾಖಲಿಸಲಾಗಿಲ್ಲ.

  ಪೊಲೀಸರು ತಡವಾಗಿ ಈ ಪ್ರಕರಣದಲ್ಲಿ ಮಾಡಿದ ಬಗ್ಗೆ ವರದಿ ತರಿಸುತ್ತೇನೆ ಈ ವಿಚಾರದಲ್ಲಿ 75KP ಆಕ್ಟ್ ನಡಿ ವಾರೀಸುದಾರರಿಲ್ಲದ ಹಣದ ಪ್ರಕರಣ ಮಾಡಿದ್ದೇವೆ ಎಂದು ಆಯಕ್ತರು ಸ್ಪಷ್ಟಪಡಿಸಿದ್ದಾರೆ.

  Click to comment

  Leave a Reply

  Your email address will not be published. Required fields are marked *

  DAKSHINA KANNADA

  ಅಂಗಡಿ ಕಳ್ಳರ ಬಂಧನ..! ಕೃತ್ಯ ನಡೆಸಿ ಗಂಟೆಗಳಲ್ಲಿ ಕಾರ್ಯಾಚರಣೆ..!

  Published

  on

  ಮಂಗಳೂರು : ಮಂಗಳೂರಿನ ಉರ್ವದ ಕೋಟೆಕಣಿಯ ದರೋಡೆ ಪ್ರಕರಣವನ್ನು ಐದು ಘಂಟೆಯಲ್ಲಿ ಬೇಧಿಸಿರುವ ಮಂಗಳೂರು ನಗರ ಪೊಲೀಸರು ಮತ್ತೊಂದು ಸಾಧನೆ ಮಾಡಿದ್ದಾರೆ. ಉರ್ವ ಮನೆ ದರೋಡೆ ನಡೆದ ದಿನದಂದೇ ವೆಲೆನ್ಸಿಯಾದಲ್ಲಿ ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣದ ಆರೋಪಿಗಳನ್ನೂ ರಾತ್ರಿಯೊಳಗೆ ಬಂಧಿಸಿದ್ದಾರೆ.

  ಉರ್ವದ ದರೋಡೆ ಪ್ರಕರಣದಿಂದ ಮಂಗಳೂರು ನಗರದ ಜನ ಬೆಚ್ಚಿ ಬಿದ್ದಿರುವಾಗಲೇ ನಗರದ ವೆಲೆನ್ಸಿಯಾದಲ್ಲಿ ಅಂಗಡಿ ಕಳ್ಳತನ ನಡೆದಿತ್ತು. ಅಂಗಡಿಯ ಶಟರ್ ಮುರಿದ ಕಳ್ಳರು ಅಂಗಡಿಯ ಒಳಗಿಟ್ಟಿದ್ದ 10 ಲಕ್ಷ ನಗದು ಕದ್ದೊಯ್ದಿದ್ದರು. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ಬೆನ್ನತ್ತಿದ್ದ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್‌ ಅವರು ಕೇವಲ ನಾಲ್ಕು ಗಂಟೆಯಲ್ಲಿ ಕಳ್ಳರ ಜಾಡು ಪತ್ತೆ ಹಚ್ಚಿ ರಾತ್ರಿಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಇಳಿದ ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜ್‌ ಅಂಗಡಿಯ ಸಿಸಿ ಟಿವಿ ಮೂಲಕ ಇಬ್ಬರು ಕಳ್ಳರ ಕೃತ್ಯ ಅನ್ನೋದನ್ನು ಸ್ಪಷ್ಟ ಪಡಿಸಿಕೊಂಡಿದ್ದಾರೆ. ಬಳಿಕ ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಅಟೋ ಚಾಲಕನ ಮೂಲಕ ಕಳ್ಳರು ರೈಲ್ವೇ ಸ್ಟೇಷನ್‌ಗೆ ಹೋಗುತ್ತಿರುವ ಹಾಗೂ ಹಿಂದಿ ಮಾತನಾಡುತ್ತಿರುವ ವಿಚಾರ ಸಂಗ್ರಹಿಸಿದ್ದಾರೆ. ಬಳಿಕ ರೈಲ್ವೇ ಸ್ಟೇಷನ್‌ನ ಸಿಸಿ ಟಿವಿ ಪರಿಶೀಲಿಸಿ ಅಂಗಡಿಯ ಸಿಸಿ ಟಿವಿಯಲ್ಲಿ ಕಾಣಿಸಿದ ವ್ಯಕ್ತಿಗಳ ಹೋಲಿಕೆಯ ವ್ಯಕ್ತಿಗಳಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಅದೇ ಸಾಮ್ಯತೆಯ ಇಬ್ಬರು ಎರ್ನಾಕುಲಂ ನಿಂದ ಪೂನಾ ಹೋಗುವ ರೈಲು ಹತ್ತಿರುವುದು ಪತ್ತೆ ಹಚ್ಚಿದ್ದಾರೆ.


  ಈ ಎಲ್ಲಾ ಪ್ರಕ್ರಿಯೆ ಕೇವಲ ನಾಲ್ಕು ಗಂಟೆಯಲ್ಲಿ ಮುಗಿದಿದ್ದು, ಬಳಿಕ ಪೂನಾ ರೈಲ್ವೇ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ರೈಲು ಕರ್ನಾಟಕದ ಗಡಿ ದಾಟಿ ಸತ್ತಾರ ದಾಟಿದ್ದ ಕಾರಣ ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡಬಾರದು ಎಂದು ತಕ್ಷಣ ಮಂಗಳೂರು ಪೊಲೀಸರು ಕಾರ್ಯಪ್ರವೃತ್ತರಾದ ಕಾರಣ ಈ ಆರೋಪಿಗಳ ಬಂಧನ ಸಾಧ್ಯವಾಗಿದೆ.
  ಇಬ್ಬರೂ ಆರೋಪಿಗಳು ಉತ್ತರ ಪ್ರದೇಶ ಮೂಲದವರಾಗಿದ್ದು, ಮಂಗಳೂರಿನಲ್ಲಿನ ಚಿನ್ನದ ಅಂಗಡಿ ಹಾಗೂ ಪ್ರಾವಿಜನ್ ಸ್ಟೋರ್‌ ಮಾಹಿತಿ ಪಡೆದು ಬಂದಿದ್ದಾರೆ. ಇಲ್ಲೇ ಕೆಲಸ ಹುಡುಕುವಂತೆ ಮಾಡಿ ಅಂಗಡಿಗಳನ್ನು ಗಮನಿಸಿದ್ದು, ಕಪಿತಾನಿಯೋದ ಅಂಗಡಿಯನ್ನು ಕೊಳ್ಳೆ ಹೊಡೆದು ಪರಾರಿಯಾಗಿದ್ದರು.

  Continue Reading

  DAKSHINA KANNADA

  ಜು. 15ರಿಂದ ಮುಂಗಾರು ಅಧಿವೇಶನ: ಯು.ಟಿ ಖಾದರ್

  Published

  on

  ಬೆಂಗಳೂರು: 16ನೇ ವಿಧಾನಸಭೆಯ ಮುಂಗಾರು ಅಧಿವೇಶನ ಜುಲೈ 15 ರಿಂದ 26ರವರೆಗೆ ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ಸಭಾಧ್ಯಕ್ಷ ಯು.ಟಿ ಖಾದರ್ ತಿಳಿಸಿದ್ದಾರೆ.

  ವಿಧಾನಸೌಧದಲ್ಲಿ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನ ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು ಎಂದರು.

  9 ದಿನಗಳ ಕಾಲ ಪ್ರಶ್ನೋತ್ತರ ಕಲಾಪವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕ್ರಮಗಳನ್ನ ನಡೆಸಲಾಗುವುದು.

  2023-24ನೇ ಸಾಲಿನ ವಿಧಾನ ಮಂಡಲ, ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಅವಧಿ ಆಗಸ್ಟ್ 8ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ 2024-25ನೇ ಸಾಲಿಗೆ ಹೊಸದಾಗಿ ಸಮಿತಿಗಳನ್ನ ರಚಿಸುವ ಸಂಬಂಧ ಚುನಾವಣಾ ಪ್ರಸ್ತಾವವನ್ನ ಮಂಡಿಸಿ, ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

  Continue Reading

  DAKSHINA KANNADA

  ಕುಡುಕರನ್ನು ಓಡಿಸಲು ಕುಡಿದೇ ಬಂದ ಪೊಲೀಸರು

  Published

  on

  ಸುಳ್ಯ: ಕುಡುಕರ ಹಾವಳಿ ತಡೆಯಲು ಪೊಲೀಸರೇ ಎಣ್ಣೆ ಹೊಡೆದು ಡ್ಯೂಟಿಗೆ ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಗುತ್ತಿಗಾರಿ ಎಂಬಲ್ಲಿ ನಡೆದಿದೆ.

  ಹೊಯ್ಸಳ ವಾಹನದಲ್ಲಿ ಕುಡಿದು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಶಂಕೆ ಮೇಲೆ ಅನುಮಾನ ಬಂದ ಸ್ಥಳೀಯರು ಪ್ರಶ್ನಿಸಿದ್ದಾರೆ. ಜೊತೆಗೆ ಪೊಲೀಸರಿಗೆ ಬುದ್ದಿವಾದ ಹೇಳುವ ವೀಡಿಯೋ ವೈರಲ್​ ಆಗಿದೆ.

  ಜುಲೈ 11 ರಂದು ಕುಡಿದು ಬಸ್ ಸ್ಟ್ಯಾಂಡ್​ನಲ್ಲಿ ಬಾಟಲಿ ಒಡೆದು ಮಲಗಿದ್ದ ಕುಡುಕರ ಹಾವಳಿ ತಡೆಯಲು ಮಹಿಳೆಯೋರ್ವಳು ರಕ್ಷಣೆ ಕೋರಿ 112 ಗೆ ಕರೆ ಮಾಡಿದ್ದರು. ಈ ವೇಳೆ ಓರ್ವ ಎ.ಎಸ್.ಐ ಮತ್ತು ಡ್ರೈವರ್ ಆಗಮಿಸಿದ್ದರು. ಆದರೆ, ಕುಡುಕರ ಮೇಲೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ. ಈ ವೇಳೆ ಅನುಮಾನ ಬಂದು ಸ್ಥಳೀಯರು ಪ್ರಶ್ನಿಸಿದಾಗ ಪೊಲೀಸರೇ ಕುಡಿದು ಬಂದಿರುವುದು ಬೆಳಕಿಗೆ ಬಂದಿದೆ.

  ಕುಡಿದು ವಾಹನ ಚಾಲನೆ ಮಾಡಬೇಡಿ‌ ಎಂದ ಸ್ಥಳೀಯರು

  ಇನ್ನು ಕುಡಿದು ವಾಹನ ಚಾಲನೆ ಮಾಡಬೇಡಿ‌. ಪೊಲೀಸ್ ಜೀಪ್ ಇಲ್ಲೇ ಬಿಟ್ಟು ಹೋಗಿ ಎಂದು ಸ್ಥಳೀಯರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು, ‘ ನಾವು ಸುಳ್ಯ ಪೊಲೀಸ್ ಠಾಣೆಯಿಂದ ಬಂದಿದ್ದು, ಡೈಲಿ ಕುಡಿಯುತ್ತೇವೆ. ಆದ್ರೆ, ಈಗ ಕುಡಿದಿಲ್ಲ, ಪಾರ್ಸೆಲ್ ತಗೊಂಡಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ‘ನನಗೆ ಆರೋಗ್ಯ ಸರಿ ಇಲ್ಲ ಎಂದು ಪೊಲೀಸ್ ವಾಹನ ಚಾಲಕ ಹೇಳಿದ್ದಾನೆ.

  Continue Reading

  LATEST NEWS

  Trending