Connect with us

ರೋಡ್ ಬಂದ್ ಆಗಿದೆ ಅಂತ ಬೋಟ್ ನಲ್ಲಿ ತಿರುಗಾಡ್ತಿದ್ದಾರೆ: ಈ ಜನಗಳಿಗೇನಾಗಿದೆ ಸ್ವಾಮಿ.?

Published

on

ರೋಡ್ ಬಂದ್ ಆಗಿದೆ ಅಂತ ಬೋಟ್ ನಲ್ಲಿ ತಿರುಗಾಡ್ತಿದ್ದಾರೆ: ಈ ಜನಗಳಿಗೇನಾಗಿದೆ ಸ್ವಾಮಿ.?

ಮಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ.

ಈ ಕಾರಣಕ್ಕಾಗಿ ಎಲ್ಲಾ ರೀತಿಯ ಸಂಚಾರಿ ವ್ಯವಸ್ತೆಗಳನ್ನು ಬಂದ್ ಮಾಡಲು ಆದೇಶವನ್ನೂ ಹೊರಡಿಸಿದ ಹಿನ್ನಲೆಯಲ್ಲಿ ಬಸ್, ಆಟೋ, ರೈಲು, ವಿಮಾನ ಸೇರಿದಂತೆ ಎಲ್ಲಾ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಮಂದಿ ಇದೀಗ ಬೋಟ್ ಗಳ ಮೂಲಕ ತಿರುಗಾಡಲು ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಂಗಳೂರಿನಿಂದ ಉಳ್ಳಾಲ ಪರಿಸರಕ್ಕೆ ಹಲವು ಬೋಟ್ ಗಳು ನೇತ್ರಾವತಿ ನದಿ ಮೂಲಕ ಸಂಚರಿಸುತ್ತಿದೆ ಎನ್ನಲಾಗಿದೆ.

ಒಂದೊಂದು ಬೋಟ್ ನಲ್ಲಿ ಐದಾರು ಜನ ಒಟ್ಟಾಗಿ ಪ್ರಯಾಣಿಸುತ್ತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.

ಮಂಗಳೂರಿನ ಬೆಂಗ್ರೆ ಪ್ರದೇಶದಿಂದ ಉಳ್ಳಾಲ ಭಾಗಗಳಿಗೆ ಈ ಬೋಟ್ ಗಳು ಸಂಚರಿಸುತ್ತಿದೆ.

ಕೊರೊನಾ ಭೀತಿಯನ್ನು ಈ ಜನರು ಗಾಳಿಗೆ ತೂರಿ ತಮಗೆ ಇಷ್ಟಬಂದಂತೆ ಸ್ವಚ್ಛಂದವಾಗಿ ಸಂಚರಿಸುತ್ತಿದ್ದಾರೆ.

ಸರ್ಕಾರ, ಜಿಲ್ಲಾಡಳಿತ, ಪೊಲೀಸರು ಅದೆಷ್ಟೇ ಬಾಯಿ ಬಡ್ಕೊಂಡ್ರು ನಮ್ ಜನರಿಗೆ ವಿಶಮ ಪರಿಸ್ಥಿತಿ ಅರಿವಾದಂತಿಲ್ಲ.

Click to comment

Leave a Reply

Your email address will not be published. Required fields are marked *

bangalore

ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!

Published

on

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶಿಸಿ ಬಿಜೆಪಿ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.

ishwarappaishwarappa

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕೆಎಸ್‌ ಈಶ್ವರಪ್ಪ, ತಮ್ಮ ನಾಮಪತ್ರವನ್ನು ಹಿಂಪಡೆಯಲು ನಿನ್ನೆ(ಎ.22) ಕೊನೆಯ ದಿನವಾಗಿತ್ತು. ಆದರೆ, ಈಶ್ವರಪ್ಪ ನಾಮಪತ್ರವನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಆರು ವರ್ಷಗಳ ಕಾಲ ಅವರು ಬಿಜೆಪಿ ಪಕ್ಷದಡಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಮುಂದೆ ಓದಿ..; ಚೌಟ ಪರ ಪ್ರಚಾರಕ್ಕೆ ಪುತ್ತೂರಿಗೆ ಬರಲಿದ್ದಾರೆ ಅಣ್ಣಾಮಲೈ

ಬಿಜೆಪಿ ಪಕ್ಷದಲ್ಲೇ ಇದ್ದುಕೊಂಡ ಕೆ ಎಸ್ ಈಶ್ವರಪ್ಪ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ನಿಂದಿಸುತ್ತಿದ್ದರು. ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜಕಾರಣವನ್ನು ಕೆ ಎಸ್ ಈಶ್ವರಪ್ಪ ತೀವ್ರವಾಗಿ ಟೀಕಿಸುತ್ತಿದ್ದರು. ತನ್ನ ಬೆಂಬಲ ಮೋದಿ ಪ್ರಧಾನಿಗೆ ಇದೆ ಎಂದು ಹೇಳಿಕೊಂಡಿದ್ದ ಈಶ್ವರಪ್ಪ ತಾನು ಗೆದ್ದ ಬಳಿಕ ಮೋದಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡುತ್ತಿದ್ದರು. ಆದರೆ ಇದೀಗ ಪಕ್ಷದಿಂದಲೇ ಇವರನ್ನು ಉಚ್ಛಾಟಿಸಲಾಗಿದೆ.

Continue Reading

FILM

ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?

Published

on

ನಾಗಚೈತನ್ಯ ಹಾಗೂ ಸಮಂತಾ ರುತ್‌ ಪ್ರಭು ವಿಚ್ಛೇದನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಓಡಾಡುತ್ತಿತ್ತು. ಸಮಂತಾ ಅಭಿಮಾನಿಗಳು ನಾಗಚೈತನ್ಯ ವಿರುದ್ಧ ಕಮೆಂಟ್‌ಗಳನ್ನೂ ಹಾಕ್ತಾ ಇದ್ರು. ಇದರ ಬೆನ್ನಲ್ಲೇ ನಾಗಚೈತನ್ಯ ಹಾಗೂ ಶೋಬಿತಾ ಡೇಟಿಂಗ್ ಮಾಡ್ತಿದ್ದಾರೆ ಅನ್ನೊ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ಇವರಿಬ್ಬರು ಇದನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಂತಿದ್ದಾರೆ ಶೋಭಿತಾ ಹಾಗೂ ನಾಗಚೈತನ್ಯ.

nagachaithanya

ಒಂದೇ ಕಡೆ ಫೊಟೋ ಶೂಟ್ ಮಾಡಿಕೊಂಡ್ರ ಶೋಬಿತಾ-ನಾಗಚೈತನ್ಯ!

ಇದೀಗ ಶೋಭಿತಾ ಅರಣ್ಯ ಸುತ್ತಾಟದ ಫೊಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದ್ರಲ್ಲೇನಿದೆ ವಿಶೇಷ ಅಂತ ನೀವು ಕೇಳ್ಬೋದು.. ನಾಗಚೈನ್ಯ ಕೂಡಾ ಇದೇ ರೀತಿಯ ಬ್ಯಾಕ್‌ಗ್ರೌಂಡ್‌ ಇರೋ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಇವರಿಬ್ಬರೂ ಒಂದೇ ಲೊಕೇಶನ್‌ನಿಂದ ಫೊಟೋ ಶೇರ್ ಮಾಡಿದ್ದಾರೆ. ಜೊತೆಯಾಗಿ ವನ್ಯ ಜೀವಿಧಾಮದಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಗಚೈತನ್ಯ ಹಾಗೂ ಶೋಭಿತಾ ಲಂಡನ್‌ನ ಹೋಟೆಲ್‌ವೊಂದರಲ್ಲಿ ಊಟಕ್ಕೆಂದು ತೆರಳಿದ್ದರು.

ಮುಂದೆ ಓದಿ..; ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾದ ಜೆರುಶಾ

chef met nagachaithanya

ಹೊಟೆಲ್ ಚೆಫ್‌ ನಾಗಚೈತನ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸೋಶೀಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಫೊಟೋ ಹಿಂದೆ ಶೋಬಿತಾ ಇರೋದು ಕಂಡು ಬಂದಿದೆ. ಇದರಿಂದ ಈಗಾಗಲೆ ಇವರಿಬ್ರು ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗೆ ಪುಷ್ಠಿನೀಡಿದಂತಾಗಿದೆ.

ಫ್ಯಾನ್ಸ್ ಏನಂದ್ರು..?

ಇನ್ನು ಇವರಿಬ್ಬರು ಜೊತೆಗಿರುವ ಫೊಟೋ ಎಲ್ಲೂ ಕಾಣ ಸಿಗಲಿಲ್ಲ. ಹಾಗಾಗಿ ಇಬ್ಬರೂ ಜೋಡಿ ಹೌದೋ ಇಲ್ಲವೋ ಅನ್ನೋದು ಇನ್ನೂ ಖಚಿತಗೊಂಡಿಲ್ಲ. ಸಮಂತಾ ಜೊತೆ ವಿಚ್ಛೇದನ ಬಳಿಕ ನಾಗಚೈನ್ಯ ಶೋಬಿತಾ ಜೊತೆ ಕ್ಲೋಸ್ ಆಗಿದ್ದಾರೆ. ಸಮಂತಾ ನಾಗಚೈತನ್ಯ ಬೇರೆ ಬೇರ ಆದರೂ ಕೂಡಾ ಫ್ಯಾನ್ಸ್ ಇವರಿಬ್ಬರನ್ನೂ ಜೋಡಿಯಾಗಿ ನೋಡಲು ಕಾಯ್ತಾ ಇದ್ದಾರೆ. ಒಂದು ವೇಳೆ ಶೋಬಿತಾ ಜೊತೆ ಚೈತನ್ಯ ಡೇಟಿಂಗ್‌ನಲ್ಲಿರೋದು ಪಕ್ಕಾ ಆದ್ರೆ ಫ್ಯಾನ್ಸ್ ಅಂತೂ ಸಿಟ್ಟಿಗೇಳೋದು ಗ್ಯಾರಂಟಿ.

 

Continue Reading

DAKSHINA KANNADA

ಕಾಗೆ ನಿಜಕ್ಕೂ ನಮ್ಮ ಪಿತೃನಾ..?

Published

on

ಹಿಂದೂ ಸಂಪ್ರದಾಯದ ಪ್ರಕಾರ ಕಾಗೆಗೆ ವಿಶೇಷವಾದ ಸ್ಥಾನಮಾನವಿದೆ. ಪಕ್ಷಿ ಜಾತಿಗೆ ಸೇರಿದ ಕಾಗೆಯನ್ನ ಹಿಂದಿನ ಕಾಲದಲ್ಲಿ ಸಂಪರ್ಕ ಸಾಧನವಾಗಿ ಬಳಸಲಾಗುತ್ತಿತ್ತು. ಯಾವೂದೇ ರೀತಿಯ ತಂತ್ರಜ್ಞಾನ ಹಾಗೂ ದೂರವಾಣಿ ಇಲ್ಲದಂತಹ ಸಮಯದಲ್ಲಿ ಕಾಗೆಯನ್ನೇ ಸಂದೇಶ ರವಾನಿಸಲು ಬಳಸಲಾಗುತ್ತಿತ್ತು. ನಮ್ಮ ಹಿರಿಯರ ಪ್ರಕಾರ ಕಾಗೆಗೂ ಮನುಷ್ಯರಿಗೂ ಅವೀನಾಭಾವ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಹಿಂದೂಗಳ ಆಚರಣೆಯಲ್ಲಿ ಕಾಗೆಗೆ ಪಿಂಡ ಕೂಡ ಇಡುತ್ತಾರೆ.

ಪಿತೃ ಪಕ್ಷದ ಶ್ರಾದ್ಧ ಸಮಯದಲ್ಲಿ ಕಾಗೆಗೆ ಪಿಂಡ ಇಡುತ್ತೇವೆ. ಕಾರಣ ಇಷ್ಟೇ, ಕಾಗೆಯನ್ನ ‘ಮೇಸೆಂಜರ್ ಆಫ್ ಪಿತೃಲೋಕ’ ಎಂದು ಪರಿಗಣಿಸಲಾಗುತ್ತೆ. ಇನ್ನು, ಅದೇ ಪಿತೃಲೋಕದಲ್ಲಿ ನಮ್ಮ ಪಿತೃಗಳು ಇರುವುದು. ನಮ್ಮ ಪಿತೃಗಳ ಆತ್ಮ ಕಾಗೆಯಲ್ಲಿ ಇದೆ ಎನ್ನುವ ನಂಬಿಕೆಯಿಂದ. ಕಾಗೆ ಸ್ವೀಕಾರ ಮಾಡಿದ ಆಹಾರ ನಮ್ಮ ಪಿತೃಗಳನ್ನ ಖುಷಿ ಪಡಿಸುತ್ತೆ ಎನ್ನುವ ನಂಬಿಕೆ ಕೂಡ ಇದೆ.

ಪಿತೃಗಳಂತೆ ಕಾಗೆ..!

ಕಾಗೆ ಎದ್ದೇಳೋದು ಬ್ರಾಹ್ಮಿ ಮುಹೂರ್ತದಲ್ಲಿ. ಕೋಳಿ ಅಲ್ವಾ ಮುಂಜಾನೆ ಬೇಗ ಏಳೋದು ಅಂತ ಕೇಳಿದ್ರೆ ನೀವು, ಕೋಳಿ ಸೂರ್ಯೋದಯದ ಸಮಯದಲ್ಲಿ ಎದ್ದೇಳುತ್ತೆ. ಆದ್ರೆ, ಬ್ರಾಹ್ಮಿ ಮೂಹೂರ್ತದಲ್ಲಿ ಅಂದ್ರೆ ಸೂರ್ಯೋದಯಕ್ಕೂ ಮುಂಚೆ ಎದ್ದೇಳೋದು ಕಾಗೆ. ಇನ್ನು ಸೂರ್ಯಾಸ್ತ ಆದ ನಂತರ ಅದು ಏನನ್ನು ಸೇರಿಸೋದಿಲ್ಲ. ಇವೆಲ್ಲಾ ಶಾಸ್ತ್ರದ ಪ್ರಕಾರ ಇದೆ.

ನಾವು ಏನೇ ಆಹಾರ ಕೊಟ್ರು ಕಾಗೆಗಳು ಅದನ್ನ ಹಂಚಿ ತಿನ್ನುತ್ತವೆ. ನಮ್ಮ ಪಿತೃಗಳು ಇದ್ದದ್ದೂ ಹಾಗೇ ಅಲ್ವಾ.. ಈಗ ಹಂಚಿ ತಿನ್ನೋದು, ಬ್ರಾಹ್ಮಿ ಮೂಹೂರ್ತಕ್ಕೆ ಏಳೋದು, ಸೂರ್ಯಾಸ್ತ ಆಗುವ ಮೊದಲು ಊಟ ಮುಗಿಸೋದು ಈ ಎಲ್ಲವೂ ಕಮ್ಮಿ ಆಗಿದೆ. ಅದಕ್ಕೆ ಕಾಗೆಗಳು ಕೂಡ ಮೊದಲಿನ ಹಾಗೇ ಹೆಚ್ಚು ಕಂಡು ಬರುವುದಿಲ್ಲ.

ಕಾ..ಕಾ…ಅಂದ್ರೇನು..?

ಕಾಗೆ ಶನಿಯ ವಾಹನ ಕೂಡ ಹೌದು. ಹಾಗಾಗಿ ಕಾಗೆ ಜೀವನದಲ್ಲಿ ಬರುವ ಒಳ್ಳೆಯ ಅಥವಾ ಕೆಟ್ಟ ಸೂಚನೆಗಳನ್ನ ಕೊಡುವ ಒಂದು ಮಾಧ್ಯಮ ಕೂಡ ಹೌದು. ಕಾಗೆಯನ್ನು ನಾವು ಕರೆಯುವಾಗ ಕಾ… ಕಾ… ಅಂತ ಕರೆಯುತ್ತೇವೆ. ಈ ಕಾ ಅಂದ್ರೆ ಕಾಪಾಡು ಅನ್ನೋ ಅರ್ಥ ಕೂಡ ಬರುತ್ತೆ. ಒಂದು ಲೆಕ್ಕದಲ್ಲಿ ನೋಡಲು ಹೋದರೆ ಪಿತೃಗಳಲ್ಲಿ ನಾವು ಕೇಳೋ ಮೊರೆ ಇದು. ‘ನಮ್ಮನ್ನು ಕಾಪಾಡಿ’ ಎಂದು. ಇದಕ್ಕೆ ಉತ್ತರವಾಗಿ ಕಾಗೆ ಕೂಡ ‘ಕಾ ಕಾ’ ಅನ್ನುತ್ತದೆ.

ಕಾ ಅಂದ್ರೆ ಸಂಸ್ಕೃತದಲ್ಲಿ ಯಾರು ಎಂದು ಅರ್ಥ. ನೀನ್ಯಾರು..? ನಿನ್ನೊಂದಿಗೆ ಇರೋರು ಯಾರು..? ನೀನು ಸತ್ತ ಮೇಲೆ ನಿನ್ನೊಂದಿಗೆ ಬರುವವರು ಯಾರು..? ಯೋಚಿಸು ಅನ್ನೋ ಸಂದೇಶ ಕೂಡ ಇದರಲ್ಲಿ ಗೌಪ್ಯವಾಗಿ ಅಡಗಿದೆ. ಹೆಚ್ಚಿನ ಜನರಿಗೆ ನಿಮ್ಮ ಪಿತೃಗಳು ಕಾಗೆಯ ರೂಪದಲ್ಲಿ ಬಂದು ನಿಮಗೆ ಸೂಚನೆ ಕೊಟ್ಟದ್ದು ಇರಬಹುದು. ಒಟ್ಟಾರೆಯಾಗಿ, ಹೇಳುವುದಾದರೆ ಕಾಗೆಗೇ ತನ್ನದೇ ಆದಂತಹ ವೈಶಿಷ್ಟ್ಯಗಳು ಇವೆ.

Continue Reading

LATEST NEWS

Trending