Connect with us

BELTHANGADY

ಮಂಗಳೂರು: ನಮ್ಮದು ಅಸಲಿ ಹಿಂದುತ್ವ, ರಾಜಕೀಯಕ್ಕೋಸ್ಕರ ಇರುವ ನಕಲಿ ಹಿಂದುತ್ವ ಅಲ್ಲ – ಹರೀಶ್ ಪೂಂಜ ವಿರುದ್ಧ ಪ್ರವೀಣ್ ವಾಲ್ಕೆ ಆಕ್ರೋಶ

Published

on

ನಮ್ಮದು ನಕಲಿ ಹಿಂದುತ್ವ ಅಲ್ಲ, ರಾಜಕೀಯಕ್ಕೋಸ್ಕರ ನಮ್ಮ ಹಿಂದುತ್ವ ಅಲ್ಲ. ನಮ್ಮ ಹಿಂದುತ್ವವನ್ನು ಪೂಂಜರಿಗೆ ಹೇಳುವ ಅಗತ್ಯ ಇಲ್ಲ ಎಂದು ಹಿಂದೂ ಪರ ಹೋರಾಟಗಾರ ಪ್ರವೀಣ್ ವಾಲ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ನಮ್ಮದು ನಕಲಿ ಹಿಂದುತ್ವ ಅಲ್ಲ, ರಾಜಕೀಯಕ್ಕೋಸ್ಕರ ನಮ್ಮ ಹಿಂದುತ್ವ ಅಲ್ಲ. ನಮ್ಮ ಹಿಂದುತ್ವವನ್ನು ಪೂಂಜರಿಗೆ ಹೇಳುವ ಅಗತ್ಯ ಇಲ್ಲ ಎಂದು ಹಿಂದೂ ಪರ ಹೋರಾಟಗಾರ ಪ್ರವೀಣ್ ವಾಲ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ಕ್ಷೇತ್ರ ಶಾಸಕ ಹರೀಶ್ ಪೂಂಜಾ ತಮ್ಮ ಗೆಲುವಿನ ಬಳಿಕ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಕಾರ್ಯಕರ್ತರ ಮುಂದೆ ಮಾತನಾಡುತ್ತಾ ಹಿಂದೂ ಪರ ಹೋರಾಟಗಾರರಾದ ಪ್ರವೀಣ್ ವಾಲ್ಕೆ, ಸತ್ಯಜಿತ್ ಸುರತ್ಕಲ್‌ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಟೀಕಿಸಿದ್ದರು.

ತನ್ನ ಸೋಲಿಸಲು ಈ ಮೂವರು ನಾಯಕರು ನನ್ನ ವಿರುದ್ಧ ಕೆಲಸ ಮಾಡಿದ್ದರು.

ಇವರದ್ದು ಯಾವ ಹಿಂದುತ್ವ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರವೀಣ್‌ ವಾಲ್ಕೆ ಅವರು, ನಮ್ಮ ಹಿಂದುತ್ವ ಏನು ಎನ್ನುವುದು ಸಮಾಜಕ್ಕೆ ಗೊತ್ತಿದೆ.

ಹರೀಶ್ ಪೂಂಜಾರಿಗೆ ಹೇಳುವ ಅಗತ್ಯ ಇಲ್ಲ. ಇವರಿಗೆ ಬೇಕಾದ ಹಾಗೆ ಹಿಂದುತ್ವವನ್ನು ಇವರು ನಡೆಸುವವರು.

ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಾವೆಷ್ಟು ತ್ಯಾಗ ಮಾಡಿದ್ದೇವೆ ಎನ್ನುವುದು ಸಮಾಜಕ್ಕೆ ಗೊತ್ತಿದೆ.

ಪೂಂಜಾರಿಗೆ ನಮ್ಮನ್ನು ಪ್ರಶ್ನಿಸುವ ಯೋಗ್ಯತೆಯೇ ಇಲ್ಲ. ನಮ್ಮ ಬಗ್ಗೆ ಮಾತನಾಡುವಾಗ ಆಲೋಚನೆ ಮಾಡಬೇಕು.

ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮುಸಲ್ಮಾನರಿಂದ ಏನೂ ತೊಂದರೆ ಆಗಿಲ್ಲ. ನಮ್ಮ ಪರಿಸ್ಥಿತಿಗೆ ಕಾರಣ ಹಿಂದೂ ನಾಯಕರೇ. ಇವರೆಲ್ಲರೂ ಕಾಲು ಹಿಡಿದು ಎಳೆಯುವವರೇ ಆಗಿದ್ದಾರೆ.

ಯೋಗಿ ಅವರ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇತ್ತು. ಅಂದು ಹೋದ ಸಂದರ್ಭದಲ್ಲಿ ಅಳದಂಗಡಿ ಬಳಿ ಕೆಲವು ಪರಿಚಯದ ಹುಡುಗರು ನನ್ನ ಜೊತೆ ಮಾತನಾಡಿ ಫೋಟೋ ತೆಗೆಸಿಕೊಂಡಿದ್ದರು.

ಅದು ಬಿಟ್ಟರೆ ನಾನು ಹರೀಶ್ ಪೂಂಜಾ ವಿರುದ್ಧ ಚುನಾವಣಾ ಪ್ರಚಾರ ಮಾಡಿಲ್ಲ ಎಂದರು. ಹಿಂದುತ್ವದ ಭದ್ರಕೋಟೆ ಆಗಲು ಇಲ್ಲಿ ನಮ್ಮ ಶ್ರಮವೂ ಇದೆ. ಆದರೆ ಹರೀಶ್ ಪೂಂಜಾರ ಕೊಡುಗೆ ಏನಿದೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

BELTHANGADY

ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ

Published

on

ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್‌ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.

chitha

ಮುಂದೆ ಓದಿ..; ಕಾಗೆ ನಿಜಕ್ಕೂ ನಮ್ಮ ಪಿತೃನಾ..?

ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Continue Reading

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

BELTHANGADY

ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾ*ವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ

Published

on

ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮಕ್ಕೆ ಸಂಬಂಧಪಟ್ಟಂತೆ ಕೊಯ್ಯೂರು ರಸ್ತೆಯ ಬದ್ಯಾರು ಎಂಬಲ್ಲಿ ಹೆಚ್ ಪದ್ಮ‌ಗೌಡ ಎಂಬವರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ*ದೇಹ ಪತ್ತೆಯಾಗಿದೆ.

bison

ಮುಂದೆ ನೋಡಿ..; ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!

ಈ ಕೆರೆಗೆ ಸುತ್ತ ಕಾಂಕ್ರೀಟ್ ರಿಂಗ್ ಅಳವಡಿಸಿದ್ದು ನೀರು ಕುಡಿಯಲು ಬಂದ ಕಾಡುಕೋಣ ಮೂರ್ನಾಲ್ಕು ದಿನಗಳ ಹಿಂದೆಯೇ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಹೆಚ್ಚೂ ಕಮ್ಮಿ 10 ಕ್ವಿಂಟಾಲ್ ತೂಕ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಕೊಳೆತು ವಾಸನೆ ಬೀರುತ್ತಿತ್ತು. ಶೌರ್ಯ ವಿಪತ್ತು ತಂಡಕ್ಕೆ ಬಂದ ಮಾಹಿತಿಯಂತೆ ಉಜಿರೆ- ಬೆಳಾಲು ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ಮುಳುಗು ಪರಿಣತ ಹರೀಶ ಕೂಡುಗೆ, ಮುಹಮ್ಮದ್ ಶರೀಫ್ ಬೆಳಾಲು, ಅವಿನಾಶ್ ಭಿಡೆ ಅರಸಿಮನಕ್ಕಿ, ರವೀಂದ್ರ ಉಜಿರೆ, ಸುರೇಂದ್ರ ಉಜಿರೆ, ಅನಿಲ್ ಚಾರ್ಮಾಡಿ, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಧರ್ಮಸ್ಥಳ, ನಳಿನ್ ಕುಮಾರ್ ಧರ್ಮಸ್ಥಳ ಮೊದಲಾದವರು ಸಾರ್ವಜನಿಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಕಾಡುಕೋಣದ ಕಳೇಬರವನ್ನು ಮೇಲೆತ್ತಿದ್ದಾರೆ. ಬಳಿಕ ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ಪ್ರಕ್ರೀಯೆ ನಡೆಸಿದ್ದು, ತೋಟದಲ್ಲೇ ಹೊಂಡ ತೋಡಿ ಅಂತ್ಯಸಂಸ್ಕಾರ ನಡೆಸಲಾಗಿದೆ.

Continue Reading

LATEST NEWS

Trending