ಮಂಗಳೂರಿನಲ್ಲಿ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗುದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಪುಲ್ಲೂರು ಪೆರಿಯಾದಲ್ಲಿ ನಡೆದಿದೆ.
ಕಾಸರಗೋಡು: ಮಂಗಳೂರಿನಲ್ಲಿ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗುದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಪುಲ್ಲೂರು ಪೆರಿಯಾದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಪೆರಿಯ ಚಾಳಿಂಗಲ್ ಎನ್ನಪಾರ ನಿವಾಸಿ ಫಾತಿಮಾ(18) ಎಂದು ಗುರುತಿಸಲಾಗಿದೆ. ಫಾತಿಮಾ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮಂಗಳೂರಿನಲ್ಲಿ ನರ್ಸಿಂಗ್ ಓದುತ್ತಿದ್ದ ಫಾತಿಮಾ ಶುಕ್ರವಾರ ಕಾಲೇಜಿಗೆ ಹೋಗಿರಲಿಲ್ಲ.
ಸಂಜೆ ಕಾಞಂಗಾಡ್‌ನಿಂದ ತಾಯಿ ಮತ್ತು ಅವರ ಸಹೋದರಿ ಹಿಂದಿರುಗಿದಾಗ ಫಾತಿಮಾ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಫಾತಿಮಾಳಿಗೆ ಇತ್ತೀಚೆಗಷ್ಟೇ ಗಲ್ಫ್ ವ್ಯಕ್ತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು.
ಮದುವೆಯ ನಂತರ ನನ್ನ ಓದು ನಿಲ್ಲುತ್ತದೆ ಎಂಬ ಆತಂಕದಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಫಾತಿಮಾಳ ತಂದೆ ಶಂಶುದ್ದೀನ್ ಕೋವಿಡ್ ಸಮಯದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಮನೆಮಗಳ ಅಗಲುವಿಕೆ ಕುಟುಂಬಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿದೆ.