Thursday, March 23, 2023

ಮಂಗಳೂರು : ಪೊಲೀಸರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಮಾನಸಿಕ ಹಿಂಸೆ – ಕಬೀರ್ ಉಳ್ಳಾಲ್..!

ನಾನು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತದಿಂದ ಕಮಿಷನರ್‌ ಅವರಿಗೆ ನೋಟೀಸ್ ನೀಡಲಾಗಿತ್ತು. ಇದರ ದ್ವೇಷ ಸಾಧನೆಗಾಗಿ ಇದೀಗ ಕಮಿಷನರ್ ಅವರು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ

ಮಂಗಳೂರು : ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಎನ್‌ ಶಶಿಕುಮಾರ್ ಅವರು ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಕಮಿಷನರೇಟ್‌ ವ್ಯಾಪ್ತಿಯ ಪ್ರತೀ ಪೊಲೀಸ್ ಠಾಣೆಗಳಲ್ಲೂ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆರ್‌ ಟಿ ಐ ಕಾರ್ಯಕರ್ತ ಕಬೀರ್ ಉಳ್ಳಾಲ್‌ ಆರೋಪಿಸಿದ್ದಾರೆ.

ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತದಿಂದ ಕಮಿಷನರ್‌ ಅವರಿಗೆ ನೋಟೀಸ್ ನೀಡಲಾಗಿತ್ತು. ಇದರ ದ್ವೇಷ ಸಾಧನೆಗಾಗಿ ಇದೀಗ ಕಮಿಷನರ್ ಅವರು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದರು.

ಡಿಸಿಪಿ ಕಚೇರಿಯಿಂದ ನನಗೆ ಪದೇ ಪದೇ ಕರೆ ಮಾಡಿ, ನೊಟೀಸ್ ಕಳಿಸುವುದು, ವಿಚಾರಣೆ ಇದೆ ಎಂದು ಮನೆ ಹತ್ತಿರ ಪೊಲೀಸ್ ಕಚೇರಿಯಿಂದ ಜನ ಕಳುಹಿಸುತ್ತಿದ್ದಾರೆ.

ನಾನು ಇಂತಹ ಮಾನಸಿಕ ಹಿಂಸೆಯನ್ನು ಇದುವರೆಗೆ ನೋಡಿಲ್ಲ. ಮಂಗಳೂರಿನ ಜನತೆ ಇದೀಗ ಠಾಣೆಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ದೊಡ್ಡ ದೊಡ್ಡ ಪ್ರಕರಣಗಳನ್ನು ಯಾವುದೇ ಠಾಣೆಗಳಲ್ಲಿ ದಾಖಲು ಮಾಡುತ್ತಿಲ್ಲ. ಕಮಿಷನರ್ ಅವರ ಅನುಮತಿ ಕೇಳಿ ಬಳಿಕ ಪ್ರಕರಣ ದಾಖಲು ಮಾಡುವ ಪರಿಸ್ಥಿತಿ ಎದುರಾಗಿದೆ.

ಕಮಿಷನರ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಅದನ್ನು ಸಿಸಿಬಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ನಾನು ಸೂಚಿಸಿದ ಮೂರು ಪ್ರಕರಣಗಳನ್ನು ಸಿಸಿಬಿಗೆ ಕೊಟ್ಟರೆ ಕಮಿಷನರ್ ಅವರ ಶಾಮೀಲಾತಿ ಎಲ್ಲವೂ ಹೊರಗೆ ಬರುತ್ತದೆ ಎಂದರು.

ನನಗೆ ಮಾನಸಿಕ ಹಿಂಸೆ ನೀಡಿರುವ ಬಗ್ಗೆಯೂ ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದ ಅವರು ನಾನು ಕಮಿಷನರ್‌ ಕರೆಯುವ ವಿಚಾರಣೆಗೆ ಹಾಜರಾಗುವ ಅಗತ್ಯ ಇಲ್ಲ.

ಲೋಕಾಯುಕ್ತ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ, ನನಗೆ ಲೋಕಾಯುಕ್ತದಲ್ಲಿ ನ್ಯಾಯ ಸಿಗದಿದ್ದರೆ ನಾನು ಹೈಕೋರ್ಟ್‌ ಮೆಟ್ಟಲೇರುತ್ತೇನೆ. ಒಬ್ಬ ಭ್ರಷ್ಟ ಪೊಲೀಸ್ ಅಧಿಕಾರಿ ನಗರದಲ್ಲಿ ಇರಬಾರದು ಎಂದರು.

ಪೊಲೀಸ್ ಠಾಣೆ ಜನರ ರಕ್ಷಣೆಗೆ ಇರುವುದು. ಕಮಿಷನರ್ ಅವರೇ ಅಮಾಯಕರ ದೋಚಲು ಮುಂದಾದರೆ ರಕ್ಷಣೆ ಕೊಡುವವರು ಯಾರು..?

ಕಮಿಷನರ್ ವಿರುದ್ಧ ಜನ ಮಾತನಾಡಲಿಕ್ಕೆ ಹೆದರುವ ಸ್ಥಿತಿ ನಿರ್ಮಾಣವಾಗಿದೆ.

ದೊಡ್ಡ ದೊಡ್ಡ ಪ್ರಕರಣಗಳನ್ನು ಅವರಲ್ಲಿ ಕೇಳಿಯೇ ದಾಖಲು ಮಾಡಬೇಕಾಗಿದೆ ಎಂದರು.

ಉಳ್ಳಾಲದಲ್ಲಿ ಅಕ್ರಮ ಮರಳು ಸಾಗಾಟಗಾರರಿಂದ ದುಡ್ಡು ಹಿರಿಯ ಅಧಿಕಾರಿಗಳ ಮನೆಗೆ ತಲುಪುತ್ತಿದೆ. ಪ್ರತೀ ತಿಂಗಳ 1ರಿಂದ 6ನೇ ತಾರೀಖಿನ ಒಳಗೆ ದುಡ್ಡಿನ ಬಂಡಲ್‌ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಪಕ್ಷದ ಕಾರ್ಯಕರ್ತರಾದ ಅಲೆಕ್ಸಾಂಡರ್‌, ದಯಾನಂದ್‌, ಪ್ರೇಮಾ ಕೊಟ್ಟಾರಿ, ಇಮ್ತಿಯಾಝ್‌ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

Hot Topics

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದ ಕುಮಟಾದ ಯುವತಿ ಡಿಡೀರ್ ನಾಪತ್ತೆ..! 

ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು ಸಂದರ್ಶಿಸಲು ಬಂದಿದ್ದ ಹದಿ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ.ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು...

ಚಿಕ್ಕಮಗಳೂರು : ಬೈಕಿಗೆ ಬಸ್ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು..!

ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ. ಚಿಕ್ಕಮಗಳೂರು: ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು...

ಓಮನ್‌ನಲ್ಲಿ ಹೃದಯಾಘಾತದಿಂದ ಅನಿವಾಸಿ ಭಾರತೀಯ ಮಹಿಳೆ ಮೃತ್ಯು..!

ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ ಮಹಿಳೆ ಸೈಮಾ ಬಾಲಕೃಷ್ಣ ಮೃತ ಮಹಿಳೆಯಾಗಿದ್ದಾಳೆ.ಓಮನ್ : ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ...