Sunday, May 22, 2022

ಮಂಗಳೂರು : ವೀರ ವೆಂಕಟೇಶ ದೇವರ ನೂತನ ಬ್ರಹ್ಮರಥದ ಪುರ ಪ್ರವೇಶ..!

ಮಂಗಳೂರು : ಇತಿಹಾಸ ಪ್ರಸಿದ್ಧ ಕೋಡಿಯಲ್ ತೇರ್ ( ಮಂಗಳೂರು ರಥ ) ಎಂದೇ ಪ್ರಖ್ಯಾತವಾದ ಇತಿಹಾಸ ಪ್ರಸಿದ್ದ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಬ್ರಹ್ಮರಥವು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದಶನದಲ್ಲಿ ನಿರ್ಮಾಣಗೊಂಡಿದೆ.

 ಉಡುಪಿ ಜಿಲ್ಲೆಯ ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ದಲ್ಲಿ ನಿರ್ಮಾಣ ಗೊಂಡ ಈ ಬ್ರಹ್ಮರಥದ ಪುರಪ್ರವೇಶವು ಸೋಮವಾರ ವಿಜೃಂಭಣೆಯಿಂದ ಜರಗಿತು .

ನೂತನ ಬ್ರಹ್ಮರಥದ ಹಸ್ತಾಂತರ ಕಾರ್ಯಕ್ರಮ ಕೋಟೇಶ್ವರದಲ್ಲಿ ಜರಗಿದ್ದು ಬಳಿಕ ಕೋಟೇಶ್ವರ , ಬ್ರಹ್ಮಾವರ , ಉಡುಪಿ ಮೂಲಕ ಮಂಗಳೂರಿಗೆ ತಲುಪಿದ್ದು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ತರಲಾಯಿತು .

ನೂತನ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮ ಇದೇ ಬರುವ ೨೫-೦೧-೨೦೨೨ ರಂದು ಜರಗ ಲಿರುವುದು . ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಸಿ . ಎಲ್ . ಶೆಣೈ , ಕೆ . ಪಿ . ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

Hot Topics

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿ

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿಯಾಗಿ ಕಾರು ಹಾಗೂ ಬಸ್ಸು ಜಖಂಗೊಂಡ ಘಟನೆ ಪುತ್ತೂರು–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಇಂದು ಬೆಳಿಗ್ಗೆ 7.30ರ ಸುಮಾರಿಗೆ ಕೋಡಿಂಬಾಡಿಯ ವಿನಾಯಕ ನಗರದ...

ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಕುಸಿತ: ಸಂಕಷ್ಟದಲ್ಲಿ 10 ಸಾವಿರ ಯಾತ್ರಿಕರು

ಬಂದಾರ್: ಹಿಂದೂಗಳ ನಾಲ್ಕು ಪ್ರಮುಖ ಯಾತ್ರಾಸ್ಥಳಗಳಲ್ಲೊಂದಾದ ಉತ್ತರಾಖಂಡ್‌ನ ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿದಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 10,000 ಜನರು ಹೆದ್ದಾರಿಯ ವಿವಿಧೆಡೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.ಮೂಲಗಳ...

ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ನಾಳೆ ‘ಟೆಡೆಕ್ಸ್‌’ ಭಾಷಣ ಸರಣಿ

ಮಂಗಳೂರು: ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಟೆಡೆಕ್ಸ್‌ನ ಭಾಷಣ ಸರಣಿ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಮೇ 22ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಫಾದರ್ ಡಾ ಪ್ರವೀಣ್‌ ಮಾರ್ಟಿಸ್‌ ಅವರು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ...