Thursday, February 9, 2023

ಕೂಳೂರು ರಸ್ತೆ ಅಗಲೀಕರಣದ ಮಾಹಿತಿ ನೀಡದ ಹೆದ್ದಾರಿ ಇಲಾಖೆ  : ಸ್ಥಳೀಯ ವ್ಯಾಪಾರಸ್ಥರ ಆಕ್ರೋಶ

ಕೂಳೂರು ರಸ್ತೆ ಅಗಲೀಕರಣದ ಮಾಹಿತಿ ನೀಡದ ಹೆದ್ದಾರಿ ಇಲಾಖೆ  : ಸ್ಥಳೀಯ ವ್ಯಾಪಾರಸ್ಥರ ಆಕ್ರೋಶ

ಮಂಗಳೂರು :ಮಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರು ಜಂಕ್ಷನ್ ನಲ್ಲಿ ಅಗತ್ಯವಿಲ್ಲದಿದ್ದರೂ ಮೇಲ್ಸೇತುವೆ ಮಾಡಿ ವ್ಯಾಪಾರಿಗಳಿಗೆ ಹೊಡೆತ ನೀಡಿದೆ.

ಇದೀಗ ಮತ್ತೆ ಹೆದ್ದಾರಿ ಇಲಾಖೆ ಅಗಲೀಕರಣಕ್ಕಾಗಿ ಸರ್ವೆ ನಡೆಸುತ್ತಿದ್ದೆ. ವ್ಯಾಪಾರಿಗಳಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಕೂಳೂರು ನಾಗರಿಕ ಸಮಿತಿಯ ಸಂಚಾಲಕ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಆಕ್ರೋಶ ವ್ಯಕ್ತ ಪಡಿಸಿದರು.

ಕೂಳೂರಿನಲ್ಲಿ ಗುರುವಾರ ಸ್ಥಳೀಯ ವ್ಯಾಪರಸ್ಥರ ಸಭೆಯಲ್ಲಿ ಮಾತನಾಡಿದರು. ಈ ಹೆದ್ದಾರಿ ನಿರ್ಮಾಣ ಮಾಡಲು 10-15 ವರ್ಷ ತೆಗೆದುಕೊಂಡಿದ್ದಾರೆ.ಇನ್ನೊಂದೆಡೆ ಅವೈಜ್ಞಾನಿಕ ಕಾಮಗಾರಿಯಾಗಿದೆ.ಸಾವು ನೋವು ಹೆಚ್ಚಾಗಿದೆ.

ಕಳೆದ ಬಾರಿ ಹೆದ್ದಾರಿ ಕಾಮಗಾರಿ ಮಾಡುವ ಸಂದರ್ಭ ಅರೆಬರೆ ಕಾಮಗಾರಿ ಹಾಗೆಯೇ ಬಿಟ್ಟು ತೆರಳಿದ್ದರು.ಹೆದ್ದಾರಿ ಎತ್ತರಿಸಿದ ಕಾರಣ ಮಳಿಗೆಗಳು ತಗ್ಗಾಗಿ ಮಳೆಗಾಲದಲ್ಲಿ ಕೃತಕ ನೆರೆಯ ಸಮಸ್ಯೆ ಉದ್ಭವಿಸಿತು.ರಸ್ತೆಯ ಮೇಲೆ ನೀರು ನಿಂತು ಕೊಳವಾಗುತ್ತಿದೆ.

ತಾವಾಗಿ ಲಕ್ಷಾಂತರ ರೂ.ಖರ್ಚು ಮಾಡಿ ತಡೆಗೋಡೆ ದಂಡೆ ಕಟ್ಟಿ ವ್ಯಾಪಾರ ಮುಂದುವರಿಸಿದ್ದೇವೆ.ಇದೀಗ ಹೊಸ ಕೂಳೂರು ಸೇತುವೆ ಕಾಮಗಾರಿ ಇದಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಹೆದ್ದಾರಿ ಅಗಲೀಕರಣ ಮಾಡಲು ಇಲಾಖೆ ಮುಂದಾಗಿದೆ.

ಮಾಹಿತಿ ಕೇಳಿದರೆ ನಿರ್ಲಕ್ಷಿಸುತ್ತಿದ್ದಾರೆ.ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಇಲ್ಲಿನ ವ್ಯಾಪಾರಿಗಳು,ಅಂಗಡಿದಾರರಿಗೆ ಮತ್ತೆ ಆಘಾತವುಂಟಾಗಿದೆ.

ಇಲಾಖೆ ಅಸಡ್ಡೆ ವರ್ತನೆಯನ್ನು ಸಹಿಸಲಾಗದು.ತಕ್ಷಣ ಸ್ಥಳೀಯರ ಸಭೆ ಕರೆದು ಸಮಗ್ರ ಮಾಹಿತಿ ನೀಡುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.

ಹೆದ್ದಾರಿ ಇಲಾಖೆಯ ಅಗಲೀಕರಣಕ್ಕೆ ಮುಂದಾಗಿದೆ.ನಮ್ಮ ಅಂಡಿ ಮುಂಭಾಗ ಅಗೆದರೆ ವ್ಯಾಪಾರ ನಡೆಸುವುದಾದರೂ ಹೇಗೆ ,ನಮಗೆ ಪರ್ಯಾಯ ವ್ಯವಸ್ಥೆ ಮಾಡಿ ಕೊಡಲಿ ಇಲ್ಲವೇ ಪರಿಹಾರ ಕೊಡುವಂತಾಗಬೇಕು ಎಂದು ಪತ್ರಿಕಾ ವಿತರಕ ಮನೋಹರ ಶೆಟ್ಟಿ ಒತ್ತಾಯಿಸಿದರು.

ಕಳೆದ ಹಲವಾರು ವರ್ಷಗಳಿಂದ ಇಲ್ಲಿಯೇ ವ್ಯಾಪಾರ ಮಾಡಿ ಕುಟುಂಬ ಕಟ್ಟಿಕೊಂಡಿದ್ದೇವೆ.

ಕಳೆದ ಹೆದ್ದಾರಿ ಕಾಮಗಾರಿ ಸಂದರ್ಭ ಹೆದ್ದಾರಿ ಎತ್ತರವಾಗಿ ಪ್ರತೀ ವರ್ಷ ಅಂಗಡಿ ಒಳಗೆ ನೀರು ನುಗ್ಗಿ ಲಕ್ಷಾಂತರ ನಷ್ಟವಾಗುತ್ತಿದೆ. ಈ ಬಾರಿ ಮತ್ತೆ ಅಗಲೀಕರಣಕ್ಕೆ ಮುಂದಾಗಿದ್ದು ಕೊರೊನಾವಹಾವಳಿಯಿಂದ ನಷ್ಟದಲ್ಲಿರುವ ನಮಗೆ ಮತ್ತೆ ಹೊಡೆತವಾಗಿದೆ.

ನಮಗೆ ಬೇರೆ ಕಟ್ಟಡ ಕಟ್ಟಿ ಕೊಡಲಿ ಇಲ್ಲವೇ ಪರಿಹಾರ ಬೇಕು ಎಂದು ವ್ಯಾಪಾರಸ್ಥ ಮಹಮ್ಮದ್ ಇಕ್ಬಾಲ್ ಆಗ್ರಹಿಸಿದರು.
ಸಭೆಯಲ್ಲಿ ಶ್ರೀಧರ್ ಪೂಜಾರಿ,ಮನೋಹರ್ ಶೆಟ್ಟಿ ,ವ್ಯಾಪಾರಿ ಜೆಸ್ಸಿಲ್ ,ವ್ಯಾಪಾರಿ ಹೋಟೆಲು ಉದ್ಯಮಿ ಪ್ರಮೋದ್ ಭಟ್,
ಪ್ರಭಾಕರ್ ,ಅರ್ಪಿತ ಸ್ಟುಡಿಯೋ ಮಾಲಕ ಹೋಟೆಲ್ ಉದ್ಯಮಿ ಗಣೇಶ್, ಮಹಮ್ಮದ್ ಇಕ್ಬಾಕ್, ಚಂದ್ರ ಶೆಟ್ಟಿ.ಜೀವನ್ , ಮನೋಜ್ ಚಂದ್ರ ಶೆಟ್ಟಿ,ಅರುಣ್ ಶೆಟ್ಟಿ,ಲೂಯಿಸ್ ಡಿಸೋಜ ಮತ್ತಿತರರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಸುರತ್ಕಲ್ ‌ಫಾಝಿಲ್ ಕೊಲೆ ಆರೋಪಿಯಿಂದ ಹಣಕ್ಕಾಗಿ ಬೆದರಿಕೆ: ಉಳ್ಳಾಲ ಠಾಣೆಯಲ್ಲಿ ‌ಪ್ರಕರಣ ದಾಖಲು

ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ನಡೆದಿದೆ.ಉಳ್ಳಾಲ: ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ...

ಚಾರ್ಮಾಡಿಯಲ್ಲಿ ಶಿಕಾರಿಗಳ ಗುಂಡೇಟಿಗೆ ಕಡವೆ ಬಲಿ..!

ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನ ಮಲಯಮಾರುತ ಬಳಿ ನಿನ್ನೆ ನಡೆದಿದೆ.ಬೆಳ್ತಂಗಡಿ : ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ...

ಸುರತ್ಕಲ್ ವ್ಯಾಪ್ತಿಯಲ್ಲಿ ಲಘು ಅಪಘಾತ: ಇತ್ತಂಡಗಳ ಮಧ್ಯೆ ಹೊಯ್‌ಕೈ- ಮಾತಿನ ಚಕಮಕಿ..!

ಮಂಗಳೂರು : ಮಂಗಳೂರು ಹೊವಲಯದ  ಸುರತ್ಕಲ್ ಠಾಣಾ ವ್ಯಾಪ್ತಿಯ ಗಣೇಶ್ ಪುರ ಎಂಬಲ್ಲಿ ಬುಧವಾರ ರಾತ್ರಿ ಬೈಕ್- ಕಾರ್ ನಡುವೆ ಲಘು ಅಪಘಾತ ಸಂಭವಿಸಿದ್ದು, ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೆಲ ಕಾಲ...