Connect with us

    LATEST NEWS

    ಕರಾವಳಿ ಉತ್ಸವ ಹಿನ್ನೆಲೆ: ಜ.4-5, 11-12ರಂದು ನಿಗದಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚನೆ

    Published

    on

    ಮಂಗಳೂರು: ದ.ಕ. ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಕರಾಾವಳಿ ಉತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿ ನಗರದ ಕದ್ರಿ ಪಾರ್ಕ್ ಆವರಣದಲ್ಲಿ ಜ.5ರಂದು ಕಾರು ಮತ್ತು ಬೈಕ್ ಶೋ, ಜ.5ರಂದು ಯುವಮನ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ. ಜ.11,12ರಂದು ನಡೆಯುವ ಕಲಾಪರ್ಬ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಹಿನ್ನೆಲೆಯಲ್ಲಿ ಈ ನಾಲ್ಕು ದಿನಗಳಲ್ಲಿ ಕಾರ್ಯಕ್ರಮಕ್ಕೆ ಬರುವವರು ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ಪಾರ್ಕ್ ಮಾಡಲು ನಗರ ಪೊಲೀಸ್ ಆಯುಕ್ತ ಸೂಚಿಸಿದ್ದಾರೆ.

    ಪದುವಾ ಮೈದಾನ, ಪದುವಾ ಶಾಲಾ ಮೈದಾನ, ಡಿಂಕಿ ಡೈನ್ ಹೊಟೇಲ್ ವಠಾರ, ಬಿಎಸ್‌ಎನ್‌ಎಲ್ ಕಚೇರಿ ವಠಾರ, ಕೆಪಿಟಿ ಬಳಿ ಇರುವ ಆರ್‌ಟಿಒ ಮೈದಾನದಲ್ಲಿ, ಸರ್ಕ್ಯೂಟ್ ಹೌಸ್ ವಠಾರದಲ್ಲಿ ಪಾರ್ಕ್ ಮಾಡಬಹುದಾಗಿದೆ.

    ಕದ್ರಿ ಪಾರ್ಕ್ ರಸ್ತೆಯಲ್ಲಿ ಅಂದರೆ ಪದುವಾ ಕೊಚ್ಚಿನ್ ಬೇಕರಿಯಿಂದ ಸರ್ಕ್ಯೂಟ್ ಹೌಸ್ ಜಂಕ್ಷನ್‌ವರೆಗೆ ಎಲ್ಲಾ ತರದ ವಾಹನ ಗಳ ಸಂಚಾರವನ್ನು ನಿಷೇಧಿಸಲಾಗಿದೆ. ನಗರದ ಕೆಪಿಟಿ ವೃತ್ತದಿಂದ ಬಟ್ಟಗುಡ್ಡೆ, ಬಿಜೈ ಕೆಎಸ್‌ಆರ್‌ಟಿಸಿ, ಲಾಲ್‌ಭಾಗ್-ಕರಾವಳಿ ಉತ್ಸವ ಮೈದಾನದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

    LATEST NEWS

    ಬಾಯ್ ಫ್ರೆಂಡ್ ಗಾಗಿ ಹುಡುಗಿಯರಿಬ್ಬರ ಬೀದಿ ಜಗಳ

    Published

    on

    ಮಂಗಳೂರು/ಉತ್ತರಪ್ರದೇಶ : ‘ಪ್ರೀತಿಸುವ ಹುಡುಗಿಗೆ ಬುದ್ದಿ ಬಂತು ಎಂದರೆ ಯಮರಾಜನ ಜೊತೆಗೂ ಜಗಳವಾಡುತ್ತಾಳೆ’ ಎಂಬ ಆಡು ಭಾಷೆಯಂತೆ ಇಬ್ಬರು ಸಹೋದರಿಯರು ತಮ್ಮ ತಂದೆಯ ಎದುರೇ, ನಡುರಸ್ತೆಯಲ್ಲಿ ಬಟ್ಟೆ ಹರಿದಾಡಿಕೊಂಡು ಬಾಯ್ ಫ್ರೆಂಡ್ ಗಾಗಿ ಜಗಳವಾಡಿದ್ದಾರೆ.

    ಇದು ಉತ್ತರಪ್ರದೇಶದ ಬಾಗ್ ಪತ್ ನಲ್ಲಿ ಎರಡು ಹುಡುಗಿಯರ ಗುಂಪುಗಳ ನಡುವೆ ನಡೆದ ಜಗಳ. ಅಷ್ಟಕ್ಕೂ ವಿಷಯ ಏನೂ ಅಂದರೆ, ಇಬ್ಬರೂ ಹುಡುಗಿಯರು ಒಬ್ಬ ಹುಡುಗನೊಂದಿಗೆ ಮಾತನಾಡಿದಕ್ಕೆ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದೆ.

    ಒಬ್ಬ ಹುಡುಗನನ್ನು ಇಬ್ಬರೂ ಹುಡುಗಿಯರು ಪ್ರೀತಿಸುತ್ತಿದ್ದರು. ಇವರ ನಡುವೆ ಮೆಸೇಜ್ ಚಾಟ್ ಕೂಡ ನಡೆಯುತ್ತಿತ್ತು. ಇದೀಗ ಇದು, ಪರಸ್ಪರ ಜಗಳಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಪ್ರಕಾರ, ರಸ್ತೆಯಲ್ಲಿ ಗುಂಪಾಗಿ ಹೋಗುತ್ತಿದ್ದ ಹುಡುಗಿಯರ ಗುಂಪನ್ನು ತಡೆದು ತನ್ನ ಗೆಳತಿಗೆ ಹುಡುಗ ಕಪಾಳಮೋಕ್ಷ ಮಾಡಿದ್ದಾನೆ.

    ಇದನ್ನೂ ಓದಿ: ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?

    ಇದರಿಂದ ಗೆಳತಿ, ಪಕ್ಕದಲ್ಲೇ ಬರುತ್ತಿದ್ದ ಇನ್ನೊಂದು ಗುಂಪಿನಲ್ಲಿದ್ದ ತನ್ನ ಪ್ರೇಮಿಯೊಂದಿಗೆ ನಂಟು ಹೊಂದಿರುವ ಸಹೋದರಿಗೆ ಹೊಡೆದಿದ್ದಾಳೆ. ಇದರಿಂದ ಇಬ್ಬರ ನಡುವೆ ತೀವ್ರ ಹೊಡೆದಾಟ ನಡೆದಿದೆ. ಪರಸ್ಪರ ಕೂದಲನ್ನು ಎಳೆದಾಡಿಕೊಂಡು, ಬಟ್ಟೆಗಳನ್ನು ಹರಿದು ಹಾಕುವ ಹಂತಕ್ಕೆ ಈ ಜಗಳ ತಲುಪಿತ್ತು. ಇದನ್ನು ತಡೆಯಲು ಬಂದ ತಂದೆಯ ಮಾತುಗಳನ್ನು ಕೇಳದೆ ಸಹೋದರಿಯರು ಜಗಳವಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಸ್ಥಳೀಯರು, ಈ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಿದ್ದಾರೆ.

    Continue Reading

    LATEST NEWS

    ಸೆಂಟ್ರಿಂಗ್ ಮರದ ತುಂಡು ಬಿದ್ದು ಬಾಲಕಿ ಸಾವು ಕೇಸ್: ಎಂಜಿನಿಯರ್ ಪೊಲೀಸ್ ವಶಕ್ಕೆ

    Published

    on

    ಬೆಂಗಳೂರಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಮರದ ತುಂಡು ಬಿದ್ದು 15 ವರ್ಷದ ಬಾಲಕಿ ತೇಜಸ್ವಿನಿ ಸಾವನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಕಟ್ಟಡದ ಇಂಜಿನಿಯರ್ ಚಂದ್ರಶೇಖರ್ ಎನ್ನುವವರನ್ನು ವಿವಿ ಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಹೌದು ಕಟ್ಟಡ ನಿರ್ಮಾಣ ಮಾಡುತ್ತಿರುವ ಇಂಜಿನಿಯರ್ ಅನ್ನು ವಿವಿ ಪುರಂ ಠಾಣೆ ಪೋಲಿಸಿರುವ ಅವಶ್ಯಕತೆ ಪಡೆದುಕೊಂಡು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಸಂಬಂಧ ತೇಜಸ್ವಿನಿ ತಂದೆ ಸುಧಾಕರ್‌ ರಾವ್‌ ಅವರು ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲಿಕ, ಗುತ್ತಿಗೆದಾರ, ಎಂಜಿನಿಯರ್‌, ಬಿಬಿಎಂಪಿ ಅಧಿಕಾರಿಗಳು ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಇನ್ನು ಕಟ್ಟಡ ಮಾಲಿಕ, ಗುತ್ತಿಗೆದಾರ ಹಾಗೂ ಘಟನೆ ವೇಳೆ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇನ್ನು ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿಲ್ಲ ಎಂಬುದು ಗೊತ್ತಾಗಿದೆ. ಎಲ್ಲಾ ಆರೋಪಿಗಳನ್ನು ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

    Continue Reading

    LATEST NEWS

    ಬರ್ತ್‌ಡೇ ದಿನದಂದೇ ಹಾಸ್ಟೆಲ್ ಕಟ್ಟಡದಿಂದ ಬಿದ್ದು ‘IIM’ ವಿದ್ಯಾರ್ಥಿ ಸಾವು

    Published

    on

    ಬೆಂಗಳೂರು: ಬೆಂಗಳೂರಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ತನ್ನ ಹುಟ್ಟು ಹಬ್ಬದ ದಿನದಂದೇ ಐಐಎಂ ವಿದ್ಯಾರ್ಥಿ ಒಬ್ಬ ಹಾಸ್ಟೆಲ್ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.

    ಮೃತ ವಿದ್ಯಾರ್ಥಿಯನ್ನು ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ಕೈಲಾಶ್‌ಭಾಯ್ ಪಟೇಲ್ (28) ಎಂದು ಗುರುತಿಸಲಾಗಿದೆ. ಈತ ಗುಜರಾತ್ ಮೂಲದವನು ಎಂದು ತಿಳಿದುಬಂದಿದ್ದು, ಹಾಸ್ಟೆಲ್ ಕಟ್ಟಡದ 3ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು, ಕೈಲಾಶ್ ಮೃತಪಟ್ಟಿದ್ದಾನೆ.

    ಶನಿವಾರ ನಿಲಯ್ ತನ್ನ ಹುಟ್ಟುಹಬ್ಬವಿದ್ದ ಕಾರಣ ಸ್ನೇಹಿತರೊಂದಿಗೆ ಹೊರಗಡೆ ತೆರಳಿದ್ದ. ನಂತರ ಹಾಸ್ಟೆಲ್​ನಲ್ಲಿರುವ ಸ್ನೇಹಿತನ‌ ಕೊಠಡಿಯಲ್ಲಿ ನಿಲಯ್ ಹುಟ್ಟುಹಬ್ಬ ಆಚರಿಸಲಾಗಿತ್ತು. ಬಳಿಕ ತನ್ನ ಕೋಣೆಗೆ ಹಿಂತಿರುಗುತ್ತಿದ್ದಾಗ ಅವಘಡ ಸಂಭವಿಸಿದೆ. ಭಾನುವಾರ ಬೆಳಗ್ಗೆ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    Trending