Monday, August 15, 2022

ಇಂದೂ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್‌ ಹೈಡ್ರಾಮ: ಡಿಸಿ ಭೇಟಿಗೆ ತೆರಳಿದ ವಿದ್ಯಾರ್ಥಿನಿಯರು

ಮಂಗಳೂರು: ಮಂಗಳೂರು ವಿವಿ ಕಾಲೇಜಿನಲ್ಲಿ ಇಂದೂ ಹಿಜಾಬ್‌ ಡ್ರಾಮಾ ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ. ಸಿಂಡಿಕೇಟ್‌ ಸಭೆ, ಶಾಸಕ, ಕುಲಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತರಗತಿ ಹಾಗೂ ಕಾಲೇಜು ಆವರಣದಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ ಎಂದರೂ ಕ್ಯಾರೇ ಅನ್ನದ 12 ವಿದ್ಯಾರ್ಥಿಗಳು ಇಂದು ಡಿಸಿ ಭೇಟಿ ಮಾಡಿ ಹಿಜಾಬ್‌ಗೆ ಅವಕಾಶ ನೀಡುವಂತೆ ಡಿಸಿ ಕಚೇರಿಗೆ ತೆರಳಿದ್ದಾರೆ.


ಇಂದು ಬೆಳಗ್ಗೆ ಹಿಜಾಬ್‌ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಪ್ರಾಂಶುಪಾಲರ ಬಳಿ ಪಟ್ಟು ಹಿಡಿದಿದ್ದಾರೆ.

+ಆಗ ಹಿಜಾಬ್‌ಗೆ ಅವಕಾಶ ನೀಡಲು ಸಾಧ್ಯ ಇಲ್ಲ ಎಂದು ಪ್ರಾಂಶುಪಾಲರು ಮನವೊಲಿಸಿದರೂ ಬಗ್ಗದ ವಿದ್ಯಾರ್ಥಿನಿಯರು ಹತ್ತಿರದಲ್ಲಿಯೇ ಇದ್ದ ಡಿಸಿ ಕಚೇರಿಗೆ ದೂರು ನೀಡಲು ಭೇಟಿ ನೀಡಿದ್ದಾರೆ.


ಮೇ 26ಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಶನಿವಾರ ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಹೋಗದಂತೆ ತಡೆದಿದ್ದರು. ಬಳಿಕ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದ್ದರು.

ಅಲ್ಲೂ ವಿದ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ಧಿ ಹೇಳಿದ್ದರು. ಇಂದು ಮತ್ತೆ ಹಿಜಾಬ್‌ ಧರಿಸಿ ಕಾಲೇಜಿಗೆ ಬಂದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಕಂದಾವರ ನೂರುಲ್ ಇಸ್ಲಾಂ ಮಸ್ಜಿದ್‌- ಮದರಸದಲ್ಲಿ 75ರ ಸ್ವಾತಂತ್ರ್ಯ ಸಂಭ್ರಮ

ಮಂಗಳೂರು: ನೂರುಲ್ ಇಸ್ಲಾಂ ಮಸ್ಜಿದ್ ಮತ್ತು ಮದರಸ ಮೂಡುಕರೆ ಕಂದಾವರ ಇಲ್ಲಿ 75ನೇ ಸ್ವಾತಂತ್ರ್ಯವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಗೌರವಧ್ಯಕ್ಷರಾದ ಎಂ ಎಸ್ ಅಲಿಯಬ್ಬ ಅವರು ಸಬೀಹ್ ಅಲಿ ಅವರಿಂದ ಗೌರವವಂದನೆಯನ್ನು ಸ್ವೀಕರಿಸಿ ಧ್ವಜಾರೋಹಣ...

ಮಂಗಳೂರು: ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಸ್ವಾತಂತ್ರ್ಯ ಸಂಭ್ರಮ

ಮಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಗಳೂರು ನಗರ ಹೊರವಲಯದ ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಫ್ರೆಂಡ್ಸ್ ಕ್ಲಬ್ ಅಡ್ಡೂರು ಇದರ ವತಿಯಿಂದ ಧ್ವಜಾರೋಹಣ ನಡೆಯಿತು.ಮೊದಲಿಗೆ ಅಡ್ಡೂರು ಜಂಕ್ಷನ್‌ನಲ್ಲಿ ನಿರ್ಮಿಸಲಾಗಿರುವ ನೂತನ ಧ್ವಜಸ್ತoಭವನ್ನು ನಿಕಟಪೂರ್ವ...

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...