ಮಂಗಳೂರು: ಚಳಿಗಾಲ ಸೀಸನ್ ಸಲುವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ 2023 ಮಾರ್ಚ್ 25ರವರೆಗೆ ಮಂಗಳೂರು ಸೇರಿದಂತೆ ಭಾರತದ ವಿವಿಧ ವಿಮಾನ ನಿಲ್ದಾಣ ಹಾಗೂ ದೋಹಾ ಮಧ್ಯೆ ವಿಮಾನ ಸಂಚಾರದ ವೇಳಾಪಟ್ಟಿ ಪ್ರಕಟಿಸಿದೆ.
ಕೊಚ್ಚಿ-ದೋಹಾ ಹಾಗೂ ಕೋಯಿಕ್ಕೋಡ್ -ದೋಹಾ ನಡುವೆ ನಿತ್ಯ ವಿಮಾನ ಸಂಚಾರ ಇರಲಿದೆ. ಕಣ್ಣೂರು ದೋಹಾ ನಡುವೆ ಸೋಮವಾರ, ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ
ಮಂಗಳೂರು-ದೋಹಾ ಮಧ್ಯೆ ಗುರುವಾರ ಮತ್ತು ಭಾನುವಾರ, ಮುಂಬೈ-ದೋಹಾ ನಡುವೆ ಗುರುವಾರ, ಭಾನುವಾರ ಮತ್ತು ಶುಕ್ರವಾರ, ತ್ರಿಚ್ಚಿ-ದೋಹಾ ನಡುವೆ ಶುಕ್ರವಾರ, ಭಾನುವಾರ ಹಾಗೂ ತಿರುವನಂತಪುರಂ-ದೋಹಾ ಮಧ್ಯೆ ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ವಿಮಾನ ಸಂಚಾರ ಇರಲಿದೆ.