Connect with us

BELTHANGADY

ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದಿಂದ ಡಾ.ವಿರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನೆ

Published

on

ಮಂಗಳೂರು: ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವಿರೇಂದ್ರ ಹೆಗ್ಗಡೆಯವರನ್ನು ಮಂಗಳೂರು ಕಥೋಲಿಕ ಕ್ರೈಸ್ತ ಧರ್ಮಕ್ಷೇತ್ರದ ಧರ್ಮಗುರುಗಳು ಹಾಗೂ ಕ್ರೈಸ್ತ ಮುಖಂಡರು ಭೇಟಿ ಮಾಡಿ ಮಂಗಳೂರು ಧರ್ಮಕ್ಷೇತ್ರದ ಪರವಾಗಿ ಆಭಿನಂದನೆ ಸಲ್ಲಿಸಿದರು.


ಈ ವೇಳೆ ಧರ್ಮಕ್ಷೇತ್ರದ ಧರ್ಮಗುರುಗಳಾದ ಅತೀ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ಎಲ್ ನೊರೊನ್ಹಾ,

ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಅತೀ ವಂದನೀಯ ಡಾ. ಜೆ ಬಿ ಸಲ್ಡಾನ್ಹಾ ಮತ್ತು ರೋಯ್ ಕ್ಯಾಸ್ಟೆಲಿನೊ, ‘ರಾಕ್ಣೊ’ ಕೊಂಕಣಿ ವಾರಪತ್ರಿಕೆಯ ನೀಯೋಜಿತ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ, ಕೆನರಾ ಕಮ್ಯುನಿಕೇಶನ್ ಸೆಂಟರ್‌ನ ನಿರ್ದೇಶಕರಾದ ವಂದನೀಯ ಅನಿಲ್ ಫೆರ್ನಾಂಡಿಸ್,

ಧರ್ಮ ಕ್ಷೇತ್ರದ ಪಾಲನಾ ಪರಿಷದ್‌ನ ಕಾರ್ಯದರ್ಶಿ ಡಾ ಜಾನ್ ಡಿಸಿಲ್ವಾ, ಅಂತರ್-ಧರ್ಮಿಯ ಸಂವಾದ ಆಯೋಗದ ಸದಸ್ಯ ರೋಮನ್ಸ್ ಲೋಬೋ ಬಿಷಪ್ ಧರ್ಮಪ್ರಾಂತ್ಯದ ಪರವಾಗಿ ಡಾ. ಹೆಗ್ಗಡೆಯರನ್ನು ಅಭಿನಂದಿಸಿದರು.


ಈ ವೇಳೆ ಮಾತನಾಡಿದ ಡಾ. ಹೆಗ್ಗಡೆ “ಮಂಗಳೂರು ಬಿಷಪ್ ಇತ್ತೀಚೆಗೆ ನನ್ನೊಂದಿಗೆ ದೂರವಾಣಿ ಮೂಲಕ ಸಂದರ್ಶಿಸಿ ಹಾರೈಸಿದಾಗ ಅವರೊಂದಿಗೆ ಮಾತನಾಡಲು ನನಗೆ ತುಂಬಾ ಸಂತೋಷವಾಯಿತು.

ಗ್ರಾಮೀಣಾಭಿವೃದ್ಧಿ ಯೋಜನೆಗಳು, ಸ್ವಯಂ ಉದ್ಯೋಗ ಮತ್ತು ಮಹಿಳಾ ಸಬಲೀಕರಣದ ಮೂಲಕ ನಾವು ಕೇಂದ್ರ ಸರ್ಕಾರವನ್ನು ಆಕರ್ಷಿಸಲು ಸಾಧ್ಯವಾಯಿತು ಮತ್ತು ಈ ಯಶಸ್ವಿ ಮಾದರಿಗಳು ದೇಶಾದ್ಯಂತ ಪುನರಾವರ್ತಿಸಲಾಗಿದೆ. ರಾಜ್ಯಸಭೆಗೆ ನನ್ನ ನಾಮನಿರ್ದೇಶನದ ಮೂಲಕ ನಾನು ದೇಶಕ್ಕೆ ನನ್ನ ಸೇವೆಯನ್ನು ವಿಸ್ತರಿಸುತ್ತೇನೆ ಮತ್ತು ನಿಮ್ಮೆಲ್ಲರನ್ನು ಪ್ರತಿನಿಧಿಸುತ್ತೇನೆ” ಎಂದರು.

ರೋಮನ್ಸ್ ಲೋಬೋ ಮಾತನಾಡಿ, “ಡಾ ಹೆಗ್ಗಡೆಯವರು ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ಪಡೆದಿದ್ದಾರೆ, ಇದನ್ನು 2015 ರಲ್ಲಿ ಜನಸಾಮಾನ್ಯರ ಏಳಿಗೆಗೆ ಅವರ ಪರೋಪಕಾರಿ ಸೇವೆಗಳಿಗೆ ಮತ್ತು ದತ್ತಿ ಕಾರ್ಯಗಳಿಗಾಗಿ ಅವರಿಗೆ ನೀಡಲಾಯಿತು” ಎಂದರು.

ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ಶ್ರೀ ಹೆಗ್ಗಡೆಯವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ರಾಜ್ಯದ ಪ್ರಾತಿನಿಧ್ಯವನ್ನು ವಿಸ್ತರಿಸುತ್ತಾರೆ.

ಎಂದು ಅವರು ಉಲ್ಲೇಖಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲ ನಿಷ್ಠಾವಂತ ಪರೋಪಕಾರಿಯಾದ ಪೂಜ್ಯರು ಗ್ರಾಮೀಣಾಭಿವೃದ್ಧಿ, ಸ್ವಯಂ ಉದ್ಯೋಗದ ಮತ್ತು ಸ್ತ್ರೀ ಸಬಲೀಕರಣದ ಉಪಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುವ ಮೂಲಕ ಆವರ ಸೇವೆ ದೇಶದೆಲ್ಲೆಡೆ ವಿಸ್ತರಿಸಲಿ ಎಂದು ಹಾರೈಸಿದರು.


ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಪಾಧ್ಯಕ್ಷರುಗಳಾದ ಮನೋಹರ್ ಕುಟಿನ್ಹೊ ಮತ್ತು ವಿನೋದ್ ಪಿಂಟೋ, ಖಜಾಂಚಿ ಅಲ್ಫೋನ್ಸ್ ಫೆರ್ನಾಂಡಿಸ್, ಜಂಟಿ ಖಜಾಂಚಿ ಫ್ರಾನ್ಸಿಸ್ ಸೆರಾವೊ ಮತ್ತು ನಿಕಟಪೂರ್ವ ಅಧ್ಯಕ್ಷ ಪೌಲ್ ರೊಲ್ಫಿ ಡಿಕೋಸ್ಟಾ ಕಥೋಲಿಕ್ ಸಭಾ,

ಬೆಳ್ತಂಗಡಿ ಘಟಕದ ಅಧ್ಯಕ್ಷ ಎಡ್ವರ್ಡ್ ರೇಗೋ, ನಿಕಟಪೂರ್ವ ಅಧ್ಯಕ್ಷ ಜೆರೋಮ್ ಲೋಬೋ, ಉಪಾಧ್ಯಕ್ಷ ಅರುಣ್ ಫೆರ್ನಾಂಡಿಸ್ ಹಾಗೂ ಜಂಟಿ ಕಾರ್ಯದರ್ಶಿ ಗ್ರೆಗೊರಿ ಫೆರ್ನಾಂಡಿಸ್, ಬೆಳ್ತಂಗಡಿ ವಲಯದ ಧರ್ಮಗುರು ಆತೀ ವಂದನೀಯ ಜೋಸೆಫ್ ಕಾರ್ಡೋಜ, ಪ್ರಾಂಶುಪಾಲ ವಂದನೀಯ ಕ್ಲಿಫರ್ಡ್ ಪಿಂಟೋ ಮತ್ತು ಪಾಲಿನ್ ರೇಗೋ,
ಉಜಿರೆ ಚರ್ಚ್‌ನ ಧರ್ಮಗುರು ವಂದನೀಯ ಜೇಮ್ಸ್ ಡಿಸೋಜಾ, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂದನೀಯ ವಿಜಯ್ ಲೋಬೊ, ಮಡಂತ್ಯಾರು ಚರ್ಚಿನ ಧರ್ಮಗುರು ವಂದನೀಯ ಬಾಸಿಲ್ ವಾಸ್, ಲಿಯೋ ರೋಡ್ರಿಗಸ್, ವಿವೇಕ್ ವಿನ್ಸೆಂಟ್ ಪಾಯ್ಸ್ ಮತ್ತು ಜೆರಾಲ್ಡ್ ಮೊರಾಸ್,
ಬೆಳ್ತಂಗಡಿ ಮತ್ತು ಬದ್ಯಾರ್‌ನ ಧರ್ಮ ಭಗಿನಿಯರು ಸಿಸ್ಟರ್ ಫ್ಲೊಸ್ಸಿ, ಸಿಸ್ಟರ್ ರಮಿತಾ, ಸಿಸ್ಟರ್ ಜ್ಯೋತ್ಸ್ನಾ, ಸಿಸ್ಟರ್ ಸೇವ್ರಿನ್ ಮತ್ತು ಸಿಸ್ಟರ್ ವಲ್ಸಾ.
ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ ಮಂಗಳೂರು ಇದರ ಸಂಚಾಲಕ ವಂದನೀಯ ಅಶ್ವಿನ್ ಕಾರ್ಡೋಜ, ಅಧ್ಯಕ್ಷ ಜೈಸನ್ ಲಾರೆನ್ಸ್ ಕ್ರಾಸ್ತಾ ಮತ್ತು ನವೀನ್ ಡಿಸೋಜಾ ಇದ್ದರು.

BELTHANGADY

ಸೌದೆ ಒಡೆಯಲೂ ಬಂತು ಯಂತ್ರ… ಹೇಗಿದೆ ನೋಡಿ..!

Published

on

ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ಎಲ್ಲಾ ಕೆಲಸಗಳೂ ಯಂತ್ರದ ಮೂಲಕವೇ ನಡೆಯುತ್ತಿದೆ. ಮನೆಯಲ್ಲಿ ನೆಲ ಒರಸಲು ಮಿಷಿನ್, ಅಡುಗೆ ಮಾಡಲು ಮಿಷಿನ್ ಹಾಗೆಯೇ ವಾಷಿಂಗ್ ಮಿಷಿನ್‌ನಲ್ಲಿ ಬಟ್ಟೆ ಒಗೆದರೂ ಅದನ್ನು ಆರಿಸಲೂ ಒಂದು ಮಿಷಿನ್ ಬಂದಿದೆ. ಹೀಗೆ ಪ್ರತಿ ಕೆಲಸಕ್ಕೂ ಜನರು ಯಂತ್ರಗಳನ್ನು ಅವಲಂಭಿಸಿದ್ದಾರೆ. ಹಿಂದೆ ಮರ ಕಡಿಯಲೂ ಜನರೇ ಬೇಕಿತ್ತು. ಆದರೆ ಆ ಜಾಗಕ್ಕೂ ಮಿಷಿನ್ ಬಂತು. ಈಗ ಕಟ್ಟಿಗೆ ಒಡೆಯಲೂ ಮಿಷಿನ್ ಬಂದಿದೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೇ ಬೇಕಾದ ಸೈಝ್‌ಗೆ ಕಟ್ಟಿಗೆಯನ್ನು ಒಡೆಯಲು ವಿಶೇಷ ರೀತಿಯ ಯಂತ್ರವೊಂದು ಬಂದಿದೆ. ಈಗ ಬೇಸಿಗೆಯ ಬಿಸಿ ಏರಿದೆ. ಆದರೆ ನಾಳೆಯ ದಿನ ಮಳೆ ಬರಬಹುದು. ಆಗ ಸ್ನಾನ ಮಾಡಲು ನೀರು ಕಾಯಿಸಲು, ಅಡುಗೆಗೆ ಕಟ್ಟಿಗೆಯ ಉಪಯೋಗ ಆಗುತ್ತದೆ ಎಂದು ಜನರು ಈಗಲೇ ಅದನ್ನು ಸಂಗ್ರಹಿಸಿಡುತ್ತಾರೆ. ಇನ್ನು ಬೇಸಿಗೆಯಲ್ಲಿ ಸೋಲಾರ್ ಬಿಸಿ ಆದರೂ ಮಳೆಗಾಲದಲ್ಲಿ ಅದರ ಕೆಲಸ ಕಮ್ಮಿ. ಆಗ ಜನರು ಕಟ್ಟಿಗೆಗಾಗಿಯೇ ಅವಲಂಬಿತರಾಗುತ್ತಾರೆ. ಈಗ ಸೌದೆ ಒಡೆಯುವ ಕೆಲಸ ಯಂತ್ರಗಳೇ ಮಾಡುತ್ತಿದೆ. ಈ ಯಂತ್ರ ಜನರು ಪರಿಶ್ರಮಕ್ಕೆ ಬ್ರೇಕ್ ಹಾಕಿದ್ದು, ಕಷ್ಟದ ಕೆಲಸ ಸುಲಭ ಮಾಡುತ್ತಿದೆ.

ಈ ಮಿಷಿನ್‌ನ ಬೆಲೆ 2.5 ಲಕ್ಷ ರೂಪಾಯಿ. ಬೆಳ್ತಂಗಡಿ ತಾಲೂಕಿನ ಸವಣಾಲಿನ ಕೇಶವ ಗೌಡ ಎನ್ನುವವರು ಇದನ್ನು ತಮಿಳುನಾಡಿನಿಂದ ತರಿಸಿದ್ದಾರೆ. ಇದು ಪೆಟ್ರೋಲ್ ಚಾಲಿತ ಯಂತ್ರವಾಗಿದ್ದು, ಸಣ್ಣ ಕಟ್ಟಿಗೆಯಿಂದ ಹಿಡಿದು ದೊಡ್ಡ ಕಟ್ಟಿಗೆಯವರೆಗೆ ನಮಗೆ ಬೇಕಾದ ಗಾತ್ರಕ್ಕೆ ಈ ಯಂತ್ರದಲ್ಲಿ ತುಂಡು ಮಾಡಬಹುದು.

ಇದನ್ನೂ ಓದಿ : ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಭಾಗಿ!?

ಯಂತ್ರ ಚಾಲನೆಗೊಂಡಂತೆ ಚೂಪಾದ ಕೊಡಲಿಯ ಮೊನೆಯೊಂದು ಮೇಲಿನಿಂದ ಕೆಳಗೆ ಬರುತ್ತದೆ. ಇದು ಕಟ್ಟಿಗೆಯನ್ನು ಕ್ಷಣ ಮಾತ್ರದಲ್ಲಿ ಸೀಳಿ ಹಾಕುತ್ತದೆ. ಈ ಕೆಲಸಕ್ಕೆ ಇಬ್ಬರು ಇದ್ದಾರೆ.

ಜನರ ಶ್ರಮದಿಂದ ದಿನಗಟ್ಟಲೇ ಆಗುವ ಕೆಲಸ ಈ ಯಂತ್ರದ ಸಹಾಯದಿಂದ ಒಂದೆರಡು ಗಂಟೆಗಳಲ್ಲಿ ಆಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಕಟ್ಟಿಗೆ ಒಡೆಯಲು ಈಗ ಕಾರ್ಮಿಕರು ಸಿಗುತ್ತಿಲ್ಲ. ಆದ್ದರಿಂದ, ಈ ಯಂತ್ರ ಜನರ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎನ್ನುವುದು ಜನರ ಅಭಿಪ್ರಾಯ.

Continue Reading

BELTHANGADY

ಕಾಡಾನೆ ಮುಂದೆ ರೈಡಿಂಗ್..! ಸ್ವಲ್ಪದ್ರಲ್ಲಿ ಉಳಿಯಿತು ಜೀವ..!

Published

on

ಮಂಗಳೂರು : ಚಾರ್ಮಾಡಿ ಘಾಟ್‌ನಲ್ಲಿ ಒಂಟಿ ಸಲಗ ಓಡಾಡುತ್ತಿದ್ದು, ಎಪ್ರಿಲ್‌ 8 ಮದ್ಯಾಹ್ನ 12 ಸುಮಾರಿಗೆ ರಸ್ತೆಯಲ್ಲಿ ಕಾಣ ಸಿಕ್ಕಿದೆ. ಘಾಟ್‌ನ 9 ನೇ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಆನೆಯನ್ನು ಕಂಡ ಪ್ರಯಾಣಿಕರು ವಾಹನವನ್ನು ನಿಲ್ಲಿಸಿದ್ದಾರೆ. ಇದೇ ವೇಳೆ ಬೈಕ್‌ ಸವಾರನೊಬ್ಬ ಆನೆಯನ್ನು ಗಮನಿಸದೆ ಆನೆಯ ಎದುರಿನಿಂದಲೇ ಪಾಸ್‌ ಆಗಿದ್ದಾರೆ. ಅದೃಷ್ಟವಶಾತ್‌ ಬೈಕ್‌ ಪಾಸ್‌ ಆದ ಮೇಲೆ ಆನೆ ರಸ್ತೆಯಲ್ಲಿ ನಡೆದುಕೊಂಡು ಹೋಗಿದೆ.

ಆನೆ ಬಾಂಜಾರು ಮಲೆ ಕಡೆಯಿಂದ ಇಳಿದು ಬಂದಿರುವ ಸಾಧ್ಯತೆ ಇದೆ. ಇತ್ತೀಚೆಗೆ ಇದೇ ಆನೆ ಹಲವೆಡೆ ಓಡಾಡಿದ್ದು, ಕೃಷಿ ಹಾನಿ ಮಾಡಿದ್ದಾಗಿ ಜನರು ಮಾಹಿತಿ ನೀಡಿದ್ದಾರೆ. ನೀರನ್ನು ಹುಡುಕಿಕೊಂಡು ಆನೆ ಅಲೆದಾಡುತ್ತಿದೆ ಅನ್ನೋದು ಇನ್ನೊಂದಷ್ಟು ಜನರ ಅಭಿಪ್ರಾಯ. ಆದ್ರೆ ಈ ಆನೆಯಂತೂ ಕೆಲ ದಿನಗಳಿಂದ ಅಡ್ಡಾಡುತ್ತಿರುವುದಂತೂ ನಿಜ.

ಸದ್ಯ ಚಾರ್ಮಾಡಿ ಘಾಟ್‌ನ ತಿರುವಿನ ರಸ್ತೆಯಲ್ಲಿ ಎದುರಿನಿಂದ ಬರೋ ವಾಹನಗಳನ್ನ ಗಮನಿಸೋದೇ ಕಷ್ಟ. ಅಂತಹದ್ರಲ್ಲಿ ಆನೆಯೊಂದು ರಸ್ತೆಯ ಸೈಡ್‌ನಲ್ಲಿ ನಿಂತುಕೊಂಡಿರೋದನ್ನ ಯಾರೂ ಗಮನಿಸಲು ಸಾದ್ಯವಿಲ್ಲ . ಆದರೆ ಮೊದಲು ಆನೆಯನ್ನು ಕಂಡವರು ತಕ್ಷಣ ವಾಹನಗಳನ್ನು ನಿಲ್ಲಿಸಿ ಆನೆ ರಸ್ತೆ ದಾಟುವ ತನಕ ಕಾದಿದ್ದಾರೆ. ಬೈಕ್‌ ಸವಾರನಿಗೂ ಕೂಗಿ ಹೇಳಿದ್ರೂ ಕೇಳಿಸಿಕೊಳ್ಳದೆ ಆನೆಯ ಮುಂದೆಯೇ ಪಾಸ್‌ ಆಗಿ ಅಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್‌ ಆಗುತ್ತಿದೆ.

Continue Reading

BELTHANGADY

ವಿಷ ಉಣಿಸಿ ಮೂಕಪ್ರಾಣಿಗಳ ಹತ್ಯೆ*ಗೈದ ಪಾಪಿಗಳು..!!

Published

on

ಬೆಳ್ತಂಗಡಿ: ಬೆಳ್ತಂಗಡಿ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಕಿಡಿಗೇಡಿಗಳು ವಿಷವಿಕ್ಕಿದ ಪರಿಣಾಮ ಸಾಕು ನಾಯಿಗಳು ಸೇರಿದಂತೆ 10ಕ್ಕಿಂತ ಅಧಿಕ ನಾಯಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಮಾ.30 ರಂದು ರಾತ್ರಿ ಯಾರೋ ಕಿಡಿಗೇಡಿಗಳು ರಸ್ತೆಯುದ್ದಕ್ಕೂ ಅಲ್ಲಲ್ಲಿ ಆಹಾರದಲ್ಲಿ ವಿಷ ಬೆರೆಸಿ ಎಸೆದು ಹೋಗಿದ್ದಾರೆ. ಆಹಾರವನ್ನು ಸೇವಿಸಿರುವ 10ಕ್ಕೂ ಅಧಿಕ ಸಾಕು ನಾಯಿಗಳು ಹಾಗೂ ಬೀದಿ ಬದಿ ನಾಯಿಗಳು ಸಾವನ್ನಪ್ಪಿವೆ.

dog poision

ತಡರಾತ್ರಿ ಈಸ್ಟರ್ ಹಬ್ಬ ಮುಗಿಸಿ ಮನೆಗೆ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ, ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದಾಗ ಕೆಲ ಮನೆಗಳ ಅಂಗಳದಲ್ಲಿ ಕೂಡ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ಸಾವನ್ನಪ್ಪಿದ ನಾಯಿಗಳನ್ನು ಪಂಚಾಯತ್ ವತಿಯಿಂದ ಹೂಳುವ ವ್ಯವಸ್ಥೆ ಮಾಡಲಾಯಿತು.

Continue Reading

LATEST NEWS

Trending