Connect with us

DAKSHINA KANNADA

ಮಂಗಳೂರು ಪಾಲಿಕೆ ಕಮಿಷನರ್ ಎಲ್ಲೆ ಮೀರಿ ಸದನಕ್ಕೆ ಅಗೌರವ ತಂದಿದ್ದಾರೆ-J.R ಲೋಬೋ

Published

on

ಮಂಗಳೂರು: ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳ ಪ್ರಶ್ನೆ ಇದ್ದ ಸಂಶಯವನ್ನು ಕಾಂಗ್ರೆಸ್ ನಾಯಕ ವಿನಯರಾಜ್ ಅವರು ಸದನದಲ್ಲಿ ಪ್ರಶ್ನಿಸಿದಾಗ ಒಬ್ಬ ಆಯುಕ್ತ ಅವರನ್ನು ಕುಳಿತುಕೊಳ್ಳಿ ಎಂದು ಏರುದನಿಯಲ್ಲಿ ಹೇಳುವುದು ಎಷ್ಟು ಸರಿ ? ಇದು ಇಡೀ ಸದನಕ್ಕೆ ಆಗುವ ಅಗೌರವ. ಜನಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಉತ್ತರ ನೀಡುವ ಕೆಲಸ ಜನಪ್ರತಿನಿಧಿ ಆಗಿರುವ ಮೇಯರ್ ಕೆಲಸ. ಅವರಿಗೆ ಪೂರಕವಾಗಿ ಸಹಾಯ ಮಾಡುವವರು ಆಯುಕ್ತರು. ಆದರೆ ಆಯುಕ್ತರು ಒಬ್ಬ ಜನಪ್ರತಿನಿಧಿಯಲ್ಲಿ ಈ ರೀತಿ ವರ್ತಿಸುವುದು ತಪ್ಪು’ ಎಂದು ದಕ್ಷಿಣ ವಿಧಾನ ಸಭಾ ಕ್ಷೆತ್ರದ ಮಾಜಿ ಶಾಸಕ ಜೆ ಆರ್ ಲೋಬೋ ಹೇಳಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮುಖ್ಯ ಕಾರ್ಯದರ್ಶಿ ಒಬ್ಬ ಶಾಸಕನಿಗೆ ನೀನು ಕೂತ್ಕೊ ಅಂತ ಹೇಳುವುದು ದೊಡ್ಡ ಅವಮಾನ. ಅವರಿಗಷ್ಟೇ ಅಲ್ಲ. ಸ್ಪೀಕರ್‌ಗೆ ಕೂಡಾ ಅವಮಾನ. ಇವತ್ತು ಇದನ್ನು ನಾನು ಸಮರ್ಥಿಸಿಕೊಂಡ್ರೆ ಮುಂದೆ ಜನಪ್ರತಿನಿಧಿಗಳ ಅವಸ್ಥೆ ಏನಾಗಬೇಡ.

ನಾನು ರಾಜಕೀಯ ವ್ಯಕ್ತಿಯಾಗಿ ಮಾತಾಡುತ್ತಿಲ್ಲ. ಓರ್ವ ಮಾಜಿ ಅಧಿಕಾರಿ ಆಗಿ ಮಾತನಾಡುತ್ತಿದ್ದೇನೆ. ಜನಪ್ರತಿನಿಧಿಗಳಿಗೆ ಮೇಯರ್ ನ್ಯಾಯ ಕೊಡಿಸಬೇಕು. ಆಗದಿದ್ದರೆ ಅಸಮರ್ಥ. ಇಂತಹ ಘಟನೆ ನಡೆದಾಗ ಮೇಯರ್ ಸರಿಯಾಗಿ ನಡೆಸದೇ ಇದ್ದರೆ ಬಿಜೆಪಿ ಪಕ್ಷ ಅಸಮರ್ಥವಾಗಿದೆ ಎಂದೇ ಅರ್ಥ.

ಅಧಿಕಾರಿಗೆ ತನ್ನದೇ ಆದ ಗಡಿರೇಖೆಗಳಿವೆ. ಅಧಿಕಾರಿಗಳೇ ನೀವು ರಾಜಕೀಯ ವ್ಯಕ್ತಿಗಳ ಕೈಗೊಂಬೆ ಆಗಬೇಡಿ. ಇಂತಹ ದುರ್ವ್ಯವಸ್ಥೆಯಲ್ಲಿ ಮುಂದೆ ಸಿಕ್ಕಿಹಾಕಿಕೊಳ್ಳುವುದು ರಾಜಕೀಯ ವ್ಯಕ್ತಿಗಳಲ್ಲ. ಅವರು ಸುಲಭವಾಗಿ ಸೇವ್ ಆಗುತ್ತಾರೆ. ಅಧಿಕಾರಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ. ಮುಂದೆ ನಾವು ಅಧಿಕಾರಕ್ಕೆ ಬಂದಲ್ಲಿ ಸ್ಮಾರ್ಟ್‌ಸಿಟಿಯ ಸಂಪೂರ್ಣ ಅವ್ಯವಹಾರದ ತನಿಖೆ ನಡೆಸುತ್ತೇವೆ ಎಂದರು.


ಇನ್ನು ಸ್ಮಾರ್ಟ್‌ ಸಿಟಿ ವ್ಯವಸ್ಥೆಯ ಬಗ್ಗೆ ಮಾತನಾಡಿ ‘ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇಲ್ಲಿ ನಡೆಯುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ವಿಚಾರಗಳು ಬಂದಾಗ ಪ್ರತಿಪಕ್ಷವಾಗಿ ಕಾಂಗ್ರೆಸ್ ಅದರ ವಿರುದ್ಧ ದನಿ ಎತ್ತುತ್ತದೆ. ಸ್ಮಾರ್ಟ್‌ ಸಿಟಿಯಲ್ಲಿ 32 ಕೋಟಿ ರೂಪಾಯಿಯನ್ನು ಕಮಾಂಡ್ ಕಂಟ್ರೋಲ್‌ ಎಂದು ಖರ್ಚು ಮಾಡಿದ್ದಾರೆ.

ಆದರೆ ಇಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳೂ ಒಂದು ಕೂಡಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. 32 ಕೋಟಿ ಖರ್ಚು ಮಾಡುವಾಗ ಇದರ ಬಗ್ಗೆ ಏನು ಅಧ್ಯಯನ ಮಾಡಿದ್ದಾರೆ. ಮಿಲಾಗ್ರಿಸ್‌ನಲ್ಲಿ ಬ್ಲಾಕ್, ನಂತೂರಿನಲ್ಲಿ ಬ್ಲಾಕ್, ಕೆಪಿಟಿಯಲ್ಲಿ ಬ್ಲಾಕ್, ಲಾಲ್‌ಬಾಗ್‌ನಲ್ಲಿ ಬ್ಲಾಕ್ ಎಲ್ಲಿ ನೋಡಿದ್ರೂ ಬ್ಲಾಕ್. ಇಡೀ ನಗರವೇ ಅಸ್ತವ್ಯಸ್ತವಾಗಿದೆ. ಹಾಗಾದ್ರೆ ಇಷ್ಟರವರೆಗೆ ಇಷ್ಟು ಕೋಟಿ ಖರ್ಚು ಮಾಡಿದ್ರಲ್ವಾ ಅದಕ್ಕೆ ಅಡಿಟ್ ಇಲ್ವಾ..?

ಯಾವ ಸಿಗ್ನಲ್‌ಗಳೂ ನಡೆಯುತ್ತಿಲ್ಲ. ಸ್ಮಾರ್ಟ್ ಸಿಟಿಯ ಬಗ್ಗೆ ಹೇಳೋರಿಲ್ಲ. ಕೇಳೋರಿಲ್ಲ. ಇದರ ಬಗ್ಗೆ ದುಡ್ಡು ಮಾಡ್ಲಿಕ್ಕೆ ಯಾರು ಹೊರಟಿದ್ದಾರೆ ಗೊತ್ತಿಲ್ಲ.

ಮಾಡಿದ್ದರೆ ಅದನ್ನು ಜನರ ಮುಂದೆ ಇಡಬೇಕು. ಜನರ ತೆರಿಗೆ ಹಣವನ್ನು ವಿನಾಕಾರಣ ಪೋಲು ಮಾಡಲು ಕಾಂಗ್ರೆಸ್ ಎಂದಿಗೂ ಬಿಡುವುದಿಲ್ಲ. ಇದರಲ್ಲಿ ಯಾರೆಲ್ಲ ದುಡ್ಡು ಮಾಡಲು ಮಾಡಲು ಮುಂದಾಗಿದ್ದಾರೆ. ? ಇದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Click to comment

Leave a Reply

Your email address will not be published. Required fields are marked *

DAKSHINA KANNADA

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಗಣಪತಿ ವಿಗ್ರಹದ ವಿಸರ್ಜನೆ

Published

on

ಮಂಗಳೂರು: ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ 3ದಿನಗಳ ಕಾಲ ನಡೆದ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಗುರುವಾರ ರಾತ್ರಿ ಸಂಪನ್ನಗೊಂಡಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಯೋಗದಲ್ಲಿ ನಡೆದ ಈ ಉತ್ಸವದ ಕೊನೆಗೆ ಶ್ರೀ ಸಿದ್ದಿವಿನಾಯಕ ದೇವರಿಗೆ ಮಹಾಪೂಜೆ ನೆರವೇರಿಸಲಾಯಿತು.

ಬಳಿಕ ಕಡೆಂಜ ಅಶೋಕ್ ಕುಮಾರ್ ಚೌಟ ಶೋಭಾಯಾತ್ರೆಯನ್ನು ಉದ್ಘಾಟಿಸಿದರು. ಚೆಂಡೆ ವಾದ್ಯ ಮೇಳ ಮತ್ತು ಭಜನಾ ಸೇವೆಗಳ ಜೊತೆಗೆ ಸಾಗಿ ಬಂದ ಶೋಭಾಯಾತ್ರೆಯು ಬಂಟ್ಸ್ ಹಾಸ್ಟೆಲ್ ನ ಹಿಂಭಾಗವಾಗಿ ಹೊರಟು ಪಿವಿಸ್ ಸರ್ಕಲ್, ನವಭಾರತ ಸರ್ಕಲ್, ಡೊಂಗರಕೇರಿ, ನ್ಯೂ ಚಿತ್ರ ಆಗಿ ಕಾರ್ ಸ್ಟ್ರೀಟ್ ಗೆ ಸಾಗಿ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಗೆ ಬಂದು ಗಣಪತಿ ಮೂರ್ತಿಯ ವಿಗ್ರಹದ ವಿಸರ್ಜನೆ ಮಾಡಲಾಯಿತು.

3ಜಿಲ್ಲೆಗಳಿಂದ ಆಗಮಿಸಿದ ಬಂಟರ ಮತ್ತು ಊರ – ಪರವೂರ ಭಕ್ತರು ವೈಭವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು .

Continue Reading

DAKSHINA KANNADA

ಹಿಂದೂ ನಾಯಕರ ಫೇಸ್ಬುಕ್‌ ಅಕೌಂಟ್‌ ಹ್ಯಾಕ್‌- ಶ್ರೀಕಾಂತ್‌ ಶೆಟ್ಟಿ ಆರೋಪ..!

Published

on

ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್‌ ಖಾತೆಗಳನ್ನು ನಿಷ್ಕ್ರೀಯಗೊಳಿಸಿದಕ್ಕೆ ಹಿಂದೂ ಜಾಗರಣ  ವೇದಿಕೆ ಮುಖಂಡ ಶ್ರೀಕಾಂತ್‌ ಶೆಟ್ಟಿ ಆರೋಪಿಸಿದ್ದಾರೆ. 

ಉಡುಪಿ: ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್‌ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ.

ಆದರೆ ಇದನ್ನು ಸ್ವತಃ ಫೇಸ್ಬುಕ್‌ ಸಂಸ್ಥೆಯೇ ನಿಷ್ಕ್ರೀಯಗೊಳಿಸಿದೆಯೋ ಅಥವಾ ಯಾರದ್ದೋ ದೂರಿನ ಆಧಾರದಲ್ಲಿ ನಿಷ್ಕ್ರೀಯಗೊಳಿಸಲಾಗಿದೆಯೋ ಎನ್ನುವುದು ತಿಳಿದು ಬಂದಿಲ್ಲ.

ಆದರೆ ಇದು ಹಿಂದೂ ವಿಚಾರಧಾರೆಯ ಪ್ರಚಾರ ಮತ್ತು ಹೋರಾಟ ನಡೆಸುತ್ತಿರುವವರ ಮೇಲೆ ನಡೆದ ವ್ಯವಸ್ಥಿತ ಸೈಬರ್  ದಾಳಿಯಾಗಿದೆ ಎಂದು ವೇದಿಕೆ ಮುಖಂಡ ಶ್ರೀಕಾಂತ್‌ ಶೆಟ್ಟಿ ಆರೋಪಿಸಿದ್ದಾರೆ.

ಸ್ವತಃ ಶ್ರೀಕಾಂತ್‌ ಶೆಟ್ಟಿ ಸಂಘಟನೆಯ ಇತರ ಪ್ರಚಾರಕರಾದ ಪ್ರವೀಣ್‌ ಯಕ್ಷಮಠ, ಕೆ ಟಿ ಉಲ್ಲಾಸ್‌, ಸುಕೃತ್‌ ಭಾರದ್ವಾಜ್‌, ಅರವಿಂದ ಕೋಟೇಶ್ವರ ಮೊದಲಾದ 20ಕ್ಕೂ ಹೆಚ್ಚು ಮಂದಿಯ ಫೇಸ್ಬುಕ್‌ ಪೇಜ್‌ಗಳನ್ನು ಡಿಲಿಟ್ ಮಾಡಲಾಗಿದೆ.

ನಾವು ಯಾರೂ ಸಾಮಾಜಿಕ ಸಾಮರಸ್ಯವನ್ನು ಕೆಡಿಸಿಲ್ಲ. ಗಲಭೆ ಸೃಷ್ಟಿಸಿಲ್ಲ. ಕೇವಲ ಹಿಂದೂಪರ ಹೋರಾಟ ಮಾಡುತ್ತಿರುವವರು.

ಆದ್ದರಿಂದ ಹಿಂದೂ ಚಳುವಳಿಯಲ್ಲಿ ಭಾಗವಹಿಸುತ್ತಿರುವವರನ್ನು ಹತ್ತಿಕ್ಕುವ ಹುನ್ನಾರ ಇದು ಎನ್ನುವುದು ಸಾಬೀತಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿರುವ ಕೆಲಸ ಇದು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದೂವಾದಿ ಸಂಗಟನೆಳು ಮೋದಿ ಪರವಾಗಿ ಯಶಸ್ವಿ ಕೆಲಸ ಮಾಡಿದ್ದೆವು.

2024ರ ಚುನಾವಣೆಯಲ್ಲಿ ಮತ್ತೇ ಅದಾಗಬಾರದು ಎನ್ನುವ ಪೂರ್ವ ತಯಾರಿ ಇದಾಗಿದೆ ಎಂದವರು ಹೇಳಿದ್ದಾರೆ.

ಆದರೆ ಆರ್‌ಎಸ್‌ಎಸ್‌ನ ಭಾಗವಾಗಿರುವ ಹಿಂದು ಜಾಗರಣ ವೇದಿಕೆ ಸಾಮಾಜಿಕ ಜಾಲತಾಣಗಳನ್ನು ನಂಬಿಕೊಂಡಿರುವ ಫೇಸ್ಬುಕ್‌ ಉಳಿಯಲ್ಲ.

ಆನ್ ಗ್ರೌಂಡ್‌ ಜನರ ಮಧ್ಯೆ ಕೆಲಸ ಮಾಡವ ವೇದಿಕೆ.

ಈ ಫೇಸ್ಬುಕ್‌ ಖಾತೆಗಳ ನಿಷ್ಕ್ರೀಯ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

Continue Reading

DAKSHINA KANNADA

Mangaluru: ಅಯ್ಯೋ… ಸಂಚಾರಿ ಪೊಲೀಸರ ಕಷ್ಟಕ್ಕೆ ಸ್ಪಂದಿಸುವವರು ಯಾರು..?

Published

on

 ಮಂಗಳೂರು ನಗರದಲ್ಲಿ ಹೊಂಡಗುಂಡಿಗಳನ್ನು ಸರಿಪಡಿಸುವ ಗತಿ ಇಲ್ಲದ ಕಾರಣ, ಇದೀಗ ಸಂಚಾರಿ ಪೊಲೀಸರೇ ಹಾರೆ ಕೈಯಲ್ಲಿ ಹಿಡಿದುಕೊಂಡು ಬಿರುಬಿಸಿಲಿಗೆ ಹೊಂಡಗುಂಡಿಗಳನ್ನು ತುಂಬಿಸುತ್ತಿದ್ದಾರೆ.

ಮಂಗಳೂರು: ಮಂಗಳೂರು ನಗರದಲ್ಲಿ ಹೊಂಡಗುಂಡಿಗಳನ್ನು ಸರಿಪಡಿಸುವ ಗತಿ ಇಲ್ಲದ ಕಾರಣ, ಇದೀಗ ಸಂಚಾರಿ ಪೊಲೀಸರೇ ಹಾರೆ ಕೈಯಲ್ಲಿ ಹಿಡಿದುಕೊಂಡು ಬಿರುಬಿಸಿಲಿಗೆ ಹೊಂಡಗುಂಡಿಗಳನ್ನು ತುಂಬಿಸುತ್ತಿದ್ದಾರೆ.

ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಭ್ ಇನ್ಸ್ ಪೆಕ್ಟರ್ ಈಶ್ವರ ಸ್ವಾಮಿ , ಎಎಸ್‌ಐ ವಿಶ್ವನಾಥ ರೈ ಅವರು  ಹಾರೆ, ಗುದ್ದಲಿ ಹಿಡಿದು ಈ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್‌ ಆಗುತ್ತಿದೆ.

ಮಂಗಳೂರಿನ ಬಹುತೇಕ ರಸ್ತೆಗಳಲ್ಲಿ ಈಗ ಹೊಂಡಗಳೇ ಇವೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದ್ದರೂ ಆಟಕ್ಕುಂಟು…ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಂಡಗುಂಡಿಗಳೂ ಇವೆ. ಆದರೆ ಇದನ್ನು ಸರಿಪಡಿಸಬೇಕಾದ ಹೆದ್ದಾರಿ ಇಲಾಖೆ ಅದಕ್ಕೆ ಮುಂದಾಗುತ್ತಿಲ್ಲ.

ಅದಕ್ಕೆ ಹೆದ್ದಾರಿಯ ಗುಂಡಿಗಳನ್ನು ಕೂಡಾ ಸಂಚಾರಿ ಪೊಲೀಸರೇ ಹಾರೆ ಹಿಡಿದು ತುಂಬಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಹೇಳಿ…ಕೇಳಿ ನಗರದ ನಂತೂರು ವೃತ್ತ ಸಾವಿನ ಸರಮಾಲೆಗೆ ಕಾರಣವಾಗಿರುವ ಜಂಕ್ಷನ್‌. ಇಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಲವು ಮಾರ್ಪಾಟುಗಳನ್ನು ಮಾಡಿದ್ದಾರೆ.

ಸದ್ಯ ಇತ್ತೀಚೆಗೆ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಇಲ್ಲಿನ ಹೆದ್ದಾರಿಗಳ ಹೊಂಡ ತುಂಬಿ, ಸಾವಿಗೆ ನ್ಯಾಯ ಕೊಡಿ ಎಂದು ಸಾಮಾಜಿಕ ಕಾರ್ಯಕರ್ತರು ಕೈಯಲ್ಲಿ ಪ್ಲೇಕಾರ್ಡ್‌ ಹಿಡಿದು ಪ್ರತಿಭಟನೆಯನ್ನೂ ನಡೆಸಿದ್ದರು.

ಇದೀಗ ನಂತೂರಿನ ಹೊಂಡಗುಂಡಿಗಳನ್ನು ಸಂಚಾರಿ ಪೊಲೀಸರೇ ತುಂಬಿಸುತ್ತಿರುವುದು ಪಾಪ ಅನ್ನಿಸಿದರೂ ಅವರ ಕಾರ್ಯಕ್ಕೆ ವಾಹನ ಸವಾರರು, ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬಿರುಬಿಸಿಲಿಗೂ ಅವರು ಸಿಮೆಂಟ್‌, ಜಲ್ಲಿಕಲ್ಲು ಮಿಕ್ಸರ್ ಹಾಕಿ ರಸ್ತೆ ಸರಿಪಡಿಸುತ್ತಿರುವುದು ನೋಡಿದರೆ ಅಯ್ಯೋ ಅನ್ನಿಸುತ್ತಿದೆ.

ಇನ್ನೊಂದೆಡೆ ರಸ್ತೆ ಬ್ಲಾಕ್‌ ಆಗಿ ಜನ ಹಿಡಿಶಾಪ ಹಾಕುತ್ತಿದ್ದಾರೆ.

 

Continue Reading

LATEST NEWS

Trending