ಮಂಗಳೂರು : ಹವಮಾನ ವೈಪರಿತ್ಯದಿಂದಾಗಿ ಅರಬ್ಬಿ ಸಮುದ್ರದಲ್ಲಿ ಸರಕು ಸಾಗಾಟದ ಹಡಗೊಂದು ಮುಳುಗಡೆಯಾಗಿದ್ದು ಅದರಲ್ಲಿದ್ದ 15 ಮಂದಿ ನಾವಿಕರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದೆ.
ಸಿರಿಯನ್ ರಾಷ್ಟ್ರೀಯತೆ ಹೊಂದಿರುವ ಎಂವಿ ಪ್ರಿನ್ಸೆಸ್ ಮಿರಾಲ್ ಹೆಸರಿನ ಈ ಹಡಗು ಮಲೇಷ್ಯಾದಿಂದ ಲೆಬನಾನ್‌ಗೆ ಕಬ್ಬಣದ ಅದಿರಿನ ಸರಕು ಹೇರಿ ಹೊರಟಿತ್ತು ಎನ್ನಲಾಗಿದೆ. ಸುಮಾರು 32 ವರ್ಷ ಹಳೆಯದಾಗಿತ್ತು ಈ ಹಡಗು.
ಆದ್ರೆ ಅರಬ್ಬೀ ಸಮುದ್ರದಲ್ಲಿ ಪ್ರತಿಕೂಲ ಹವಮಾನದಿಂದ ಹಡಗು ಮಂಗಳೂರಿನಿಂದ 6 ನಾಟಿಕಲ್ ಮೈಲ್ ದೂರದಲ್ಲಿ ತಾಂತ್ರಿಕ ಕಾರಣಗಳಿಂದ ಶಿಪ್ ಒಳಗೆ ನೀರು ತುಂಬಲಾರಂಭಿತ್ತು.
ರಕ್ಷಣೆ ಮಾಡುವ ಎಲ್ಲಾ ಯತ್ನಗಳು ವಿಫಲಗೊಂಡಿದ್ದರಿಂದ ಹಡಗಿನ ಕ್ಯಾಪ್ಟನ್ ರಕ್ಷಣೆಗಾಗಿ ಕೋಸ್ಟ್ ಗಾರ್ಡ್ ಮೊರೆ ಹೋಗಿದ್ದರು.
ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ವಿಕ್ರಮ್ ಮತ್ತು ಅಮರ್ಥ್ಯ ಹಡಗುಗಳನ್ನು ರಕ್ಷಣೆಗೆ ಕಳುಹಿಸಿದ್ದು, ಪ್ರತಿಕೂಲ ಹವಮಾನದ ಹೊರತಾಗಿಯೂ ಕೋಸ್ಟ್ ಗಾರ್ಡ್ ನೌಕೆಗಳು ಮುಳುಗುತ್ತಿದ್ದ ಹಡಗಿನ ಸಮೀಪ ತೆರಳಿ ಅದರಲ್ಲಿದ್ದ 15 ಜನರನ್ನು ರಕ್ಷಣೆ ಮಾಡಿ ಮಂಗಳೂರಿಗೆ ಕೆರೆ ತಂದಿದ್ದಾರೆ.