Connect with us

DAKSHINA KANNADA

ತಡರಾತ್ರಿ ಉಚ್ಚಿಲ ಬಸ್ಸು ನಿಲ್ದಾಣದಲ್ಲಿ ಪಾರ್ಟಿ ಮಾಡುತ್ತಿದ್ದ ಆರು ಮಂದಿಯನ್ನ ಬೆಂಡತ್ತಿದ್ದ ನಗರ ಪೊಲೀಸ್ ಕಮೀಷನರ್ ..!

Published

on

ತಡರಾತ್ರಿ ಉಚ್ಚಿಲ ಬಸ್ಸು ನಿಲ್ದಾಣದಲ್ಲಿ ಪಾರ್ಟಿ ಮಾಡುತ್ತಿದ್ದ ಆರು ಮಂದಿಯನ್ನ ಬೆಂಡತ್ತಿದ್ದ ನಗರ ಪೊಲೀಸ್ ಕಮೀಷನರ್ ..!

ಮಂಗಳೂರು: ಮಂಗಳೂರು ಹೊರ ವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಸ್ ನಿಲ್ದಾಣದಲ್ಲಿ ತಡರಾತ್ರಿ ಪಾರ್ಟಿ ಮಾಡುತ್ತಿದ್ದ ಆರು ಮಂದಿ ಯುವಕರನ್ನು ತರಾಟೆಗೆ ತೆಗೆದುಕೊಂಡಿರುವ ನೂತನ ಕಮೀಷನರ್ ಶಶಿ ಕುಮಾರ್ ಅವರ ವಿರುದ್ಧ ಕೇಸು ದಾಖಲಿಸಿ ಎಚ್ಚರಿಕೆ ನೀಡಿದ್ದಾರೆ.

ಕಮೀಷನರ್ ಅಧಿಕಾರ ಸ್ವೀಕರಿಸಿದ್ದ ಎರಡೇ ದಿನದಲ್ಲಿ ತಡರಾತ್ರಿ ಅವಶ್ಯಕತೆಯಿಲ್ಲದೆ ತಿರುಗಾಡುವವರನ್ನು, ಬೀದಿಬದಿ ಕುಳಿತುಕೊಳ್ಳುವವರಿಗೆ ಎಚ್ಚರಿಕೆ ನೀಡಿದ್ದರು.

ಅಲ್ಲದೆ ಮಂಗಳೂರು ನಗರದಲ್ಲಿ ಕುಳಿತವರ ವಿರುದ್ಧ ಕ್ರಮ ತೆಗೆದುಕೊಂಡು ಕಮೀಷನರೇಟ್ ವ್ಯಾಪ್ತಿಯಲ್ಲಿ ಎಲ್ಲಿಯೂ ತಡರಾತ್ರಿ ಅಡ್ಡಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದರು.

ಆದರೆ ಮಂಗಳವಾರ ತಡರಾತ್ರಿ ವೇಳೆ ರಾ.ಹೆ.66ರ ಉಚ್ಚಿಲ ಬಸ್ ನಿಲ್ದಾಣದಲ್ಲಿ , ಉಚ್ಚಿಲ ಆಸುಪಾಸಿನ ಆರು ಮಂದಿ ಯುವಕರು ಮದ್ಯ ಪಾರ್ಟಿ ನಡೆಸುತ್ತಿದ್ದರು.

ಖುದ್ದು ರೌಂಡ್ಸ್ ನಲ್ಲಿದ್ದ  ಪೊಲೀಸ್  ಕಮೀಷನರ್ ಬಸ್ ನಿಲ್ದಾಣಕ್ಕೆ ದಾಳಿ ನಡೆಸಿ , ಆರು ಮಂದಿ ಯುವಕರನ್ನು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಅಲ್ಲದೆ ಬಸ್ ನಿಲ್ದಾಣದಲ್ಲಿ ಕುಳಿತಿರುವ ಕುರಿತು ವೀಡಿಯೋ ಕೂಡ ನಡೆಸಿದ್ದಾರೆ. ಯುವಕರ ಬಳಿಯಿದ್ದ ನಾಲ್ಕು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೆ.ಪಿ ಆಕ್ಟ್ ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳೂರಿಗೆ ನೂತನ ಪೊಲೀಸ್ ಆಯುಕ್ತರಾಗಿ ಎನ್ ಶಶಿ ಕುಮಾರ್ ಅಧಿಕಾರ ವಹಿಕೊಂಡ ಬಳಿಕದ ವಿದ್ಯಮಾನಗಳನ್ನು ಗಮನಿಸಿದಾಗ ಕಾನೂನು ಸುವ್ಯವಸ್ಥೆಯಲ್ಲಿ ಹಳಿ ತಪ್ಪಿದ್ದ ಮಂಗಳೂರು ನಗರ ಮತ್ತೆ ಸರಿದಾರಿಗೆ ಬರುವ ಲಕ್ಷಣಗಳು ಗೋಚರಿಸುತ್ತಿದೆ.

ಅಧಿಕಾರ ವಹಿಸಿಕೊಂಡ ದಿನದಿಂದಲೇ ಖುದ್ದಾಗಿ ಫೀಳ್ಡಿಗಿಳಿದು ಶಶಿಕುಮಾರ್ ಅವರು ಕರ್ತವ್ಯ ನಿರ್ವರಣೆ ಮಾಡುತ್ತಿದ್ದಾರೆ. ಆಯುಕ್ತರ ಪೊಲೀಸ್ ಗಿರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಪುತ್ತೂರಿನಲ್ಲಿ ಕಳವುಗೈದ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ..!

Published

on

ಪುತ್ತೂರು: ಅಂತರ್‌ ಜಿಲ್ಲಾ ಕಳವು ಪ್ರಕರಣದ ಕುಖ್ಯಾತ ಆರೋಪಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್ ಎಂಬಾತನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್ ಚಿಕ್ಕಮಂಗಳೂರು ತಾಲೂಕಿನ ಉಪ್ಪಳ್ಳಿ ಮನೆ ನಿವಾಸಿಯಾಗಿದ್ದು, ಆತನ ಮೇಲೆ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ 80 ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ 2023 ರಲ್ಲಿಯೇ ಎರಡು ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಡಿಸೆಂಬರ್‌ 19 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

BANTWAL

ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

Published

on

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2017 ರಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಾಲಮ ಹೆಹರು ತಾಲೂಕಿನ ಚಿನ್ನಪಳ್ಳಿ ಪೆದ್ದ ಗ್ರಾಮದ ನಿವಾಸಿ ಬಿ. ಮೌಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಿ. ಮೌಲಾ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಕುತ್ತಾರು ಎಂಬಲ್ಲಿ ಇದ್ದಾನೆ ಎಂಬುದಾಗಿ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ, ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ ಸ್ಟೆಬಲ್‌ ಗಣೇಶ್ ಪ್ರಸಾದ್ ಮತ್ತು ಕಾನ್‌ ಸ್ಟೆಬಲ್‌ ವಿಜಯ ಕುಮಾರ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Continue Reading

DAKSHINA KANNADA

ಮಂಗಳೂರಿನಲ್ಲಿ ಮೂರು ದಿನ ನೀರು ಪೂರೈಕೆ ವ್ಯತ್ಯಯ

Published

on

ಮಂಗಳೂರು: ಮಂಗಳೂರು ಮಹಾ ನಗರಪಾಲಿಕೆಯು ನೀರು ಸರಬರಾಜು ವ್ಯವಸ್ಥೆಯ ಕೊಳವೆಯನ್ನು ಬಲಪಡಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಡಿ. 6 ರ ಬುಧವಾರ ಬೆಳಗ್ಗೆ 6 ಗಂಟೆಯಿಂದ ಡಿ. 8 ರ ಶುಕ್ರವಾರ ಬೆಳಗ್ಗೆ 6 ಗಂಟೆಯ ವರೆಗೆ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯತ್ಯಯಗೊಳ್ಳಲಿದೆ ಎಂದು ಪಾಲಿಕೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ತಿಳಿಸಿದ್ದಾರೆ.

ತುಂಬೆ- ಬೆಂದೂರ್‌ವೆಲ್–ಪಣಂಬೂರು ಪ್ರದೇಶಗಳಿಗೆ ನೀರು ಪೂರೈಸುವ 1 ಸಾವಿರ ಮಿಲಿ ಮೀಟರ್ ವ್ಯಾಸದ ಮುಖ್ಯ ಕೊಳವೆಯನ್ನು ನಾಗುರಿ ಮಾರುಕಟ್ಟೆ ಬಳಿ ಬಲಪಡಿಸುವುದು, ತುಂಬೆ ರಾಮಲ್‌ಕಟ್ಟೆ ಬಳಿ ಕೆಯುಐಡಿಎಫ್‌ಸಿ ವತಿಯಿಂದ ಬಲ್ಕ್‌ ಫ್ಲೋ ಮೀಟರ್‌ ಅಳವಡಿಕೆ ಹಾಗೂ ಪಾಲಿಕೆ ವತಿಯಿಂದ 900 ಮಿ.ಮೀ ವ್ಯಾಸದ ಕೊಳವೆಯನ್ನು ಕೆಐಒಸಿಎಲ್‌ ಬಳಿ ಬದಲಾಯಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮಂಗಳೂರಿನ ಬೆಂದೂರ್‌ವೆಲ್‌ಗಿಂತ ತಗ್ಗಿನಲ್ಲಿರುವ ಪ್ರದೇಶಗಳಾದ ಪಿ.ವಿ.ಎಸ್, ಲೇಡಿಹಿಲ್, ಬಂದರು ಹಾಗೂ ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲ್‌ಬೈಲ್, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯು ಭಾಗಶಃ ಸ್ಥಗಿತಗೊಳ್ಳಲಿದೆ. ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಪ್ರದೇಶಗಳಿಗೆ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

Continue Reading

LATEST NEWS

Trending