Tuesday, July 5, 2022

ಮೃತ ಹೋಂಗಾರ್ಡ್‌ ಮನೆಗೆ ಭೇಟಿ ನೀಡಿ ಸಂತೈಸಿದ ಕಮಿಷನರ್‌ ಶಶಿಕುಮಾರ್‌

ಮೂಲ್ಕಿ: ವಾರದ ಹಿಂದೆ ಅಪಘಾತಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹೋಂಗಾರ್ಡ್‌ ರಾಕೇಶ್ ಕುಬೆವೂರು ಮನೆಗೆ ಮಂಗಳೂರು ನಗರ ಪೊಲೀಸ್‌ ಕಮಿಷನರ್ ಎನ್‌.ಶಶಿಕುಮಾರ್‌ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ರಾಕೇಶ್ ಕುಬೆವೂರು ತಂದೆ-ತಾಯಿ ಅವರನ್ನು ಭೇಟಿ ಮಾಡಿದ ಕಮಿಷನರ್‌, ‘ನಿಮ್ಮ ಮಗ ಇಲಾಖೆಗೆ ನೀಡಿದ ಸೇವೆ ಅಮೂಲ್ಯವಾದುದು. ಇಲಾಖೆ ವತಿಯಿಂದ ನಿಮಗೆ ಯಾವುದೇ ಸಹಾಯ ನೀಡಲು ಸಿದ್ದ’ ಎಂದು ಭರವಸೆ ನೀಡಿದರು. ಈ ವೇಳೆ ಇಲಾಖೆ ವತಿಯಿಂದ 5.26 ಲಕ್ಷ ರೂಪಾಯಿಯ ಚೆಕ್‌ ನೀಡಿದರು. ಮಂಗಳೂರಿನ ವಿವಿಧ ಠಾಣೆಯ ಸಿಬ್ಬಂದಿ ತಮ್ಮ ಕೈಲಾದ ಸಹಾಯದಿಂದ ನೀಡಿದ ಮೊತ್ತವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಮೂಲ್ಕಿ ಠಾಣೆಯ ಸಿಬ್ಬಂದಿ ಒಂದು ಲಕ್ಷ ರೂಪಾಯಿ ಸಂಗ್ರಹಿಸಿದ್ದರು ಎಂದು ಕಮಿಷನರ್‌ ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ

ಜೂ.30ರಂದು ರಾಕೇಶ್ ಕುಬೆವೂರು ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಬಲಾಯಿಪಾದೆ ಜಂಕ್ಷನ್ ಬಳಿ ಬುಧವಾರ ಮುಂಜಾನೆ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸಿ, ಉಡುಪಿಯಲ್ಲಿರುವ ತಂಗಿಯ ಮನೆಗೆ ತೆರಳುತ್ತಿದ್ದಾಗ ಕಾರು ಟ್ಯಾಂಕರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿತ್ತು.

ಢಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡಿದ್ದ ಗಾಯಾಳು ರಾಕೇಶ್ ಅವರನ್ನು ಸ್ಥಳೀಯರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

 

 

 

 

 

https://wp.me/pbCr8b-96d

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...