Thursday, August 11, 2022

ಬಸ್‌ ನಲ್ಲಿ ಯುವತಿ ಕಿರುಕುಳ ನೀಡಿದ ಆರೋಪಿ ಕೊನೆಗೂ ಅರೆಸ್ಟ್..! ಹುಸೈನ್ ನ ಕಪಾಳಕ್ಕೆ ಬಾರಿಸಿದ ಸಂತ್ರಸ್ಥೆ..!

ಬಸ್‌ ನಲ್ಲಿ ಯುವತಿ ಕಿರುಕುಳ ನೀಡಿದ ಆರೋಪಿ ಕೊನೆಗೂ ಅರೆಸ್ಟ್..! ಹುಸೈನ್ ನ ಕಪಾಳಕ್ಕೆ ಬಾರಿಸಿದ ಸಂತ್ರಸ್ಥೆ..!

Mangalore city bus molestation-case-main-accused-arrest by police

ಮಂಗಳೂರು : ನಗರದ ಖಾಸಗಿ ಬಸ್ಸಿನಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಪೆರ್ಲ ಸಮೀಪದ ಕಟ್ಟತ್ತಡ್ಕ ನಿವಾಸಿ ಹುಸೈನ್ (41) ಬಂಧಿತ ಆರೋಪಿಯಾಗಿದ್ದು ಮಂಗಳೂರು ಪೊಲೀಸರು ಆರೋಪಿಯನ್ನು ಇಂದು ಮಾದ್ಯಮದ ಎದುರು ಹಾಜರುಪಡಿಸಿದ್ದರು.

ಜನವರಿ 14 ರಂದು ಮಂಗಳೂರು ಹೊರವಲಯದ ದೇರಳಕಟ್ಟೆಯಿಂದ ಮಂಗಳೂರಿಗೆ ಖಾಸಾಗಿ ಸಿಟಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬರುತ್ತಿದ್ದ ವೇಳೆ ಬಸ್ ನಲ್ಲಿದ್ದ ಬಸ್‌ ನಲ್ಲಿದ್ದ ವ್ಯಕ್ತಿಯೋರ್ವ ತನಗೆ ಕಿರುಕುಳ ನೀಡಿದ್ದಾಗಿ ತಸ್ಲಿಮಾ ನಸ್ರೀನ್ ಎಂಬ ಯುವತಿ ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೋ ಅಪ್ಲೋಡ್ ಮಾಡಿದ್ದಳು.

ಬಸ್ಸಿನಲ್ಲಿ ನಿರಂತರ ಕಿರುಕುಳ ನೀಡಿದ್ದು ಆ ಬಗ್ಗೆ ಸಹಾಯಕ್ಕೆ ಬಸ್ ಸಿಬಂದಿಯಾಗಲೀ, ಇತರೇ ಪ್ರಯಾಣಿಕರಾಗಲೀ ಬರಲಿಲ್ಲ ಎಂದು ನೋವು ತೋಡಿಕೊಂಡಿದ್ದಳು.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಬಳಿಕ ಸ್ವತಃ ಮಂಗಳೂರು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್, ಆಕೆಯನ್ನು ಸಂಪರ್ಕಿಸಿ ಆರೋಪಿಯನ್ನು ಬಂಧಿಸುವುದಾಗಿ ಹೇಳಿದ್ದಲ್ಲದೆ, ಈ ಬಗ್ಗೆ ಪೊಲೀಸ್ ದೂರು ನೀಡುವಂತೆ ಕೇಳಿಕೊಂಡಿದ್ದರು.

ಅದರಂತೆ, ಯುವತಿ ತನ್ನ ಆಪ್ತರ ಜೊತೆ ಮಂಗಳೂರಿನ ಮಹಿಳಾ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದರು. ಆರೋಪಿ ಹುಸೈನ್ ನನ್ನು ಹಿಡಿದು ಕಮಿಷನರ್ ಕಚೇರಿಗೆ ತಂದಿದ್ದ ಪೊಲೀಸರು, ಬಳಿಕ ಸಂತ್ರಸ್ತ ಯುವತಿಯನ್ನೂ ಕರೆಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಬಳಿಕ ಸುದ್ದಿಗೋಷ್ಠಿ ಕರೆದು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಲ್ಲದೆ ಆರೋಪಿಯನ್ನು ಮಾಧ್ಯಮದ ಮುಂದೆ ತೋರಿಸಿದ್ದಾರೆ.

ಆಗ ಅಲ್ಲಿಯೇ ಕುಳಿತಿದ್ದ ಯುವತಿ ಸಿಟ್ಟಿನಲ್ಲಿ ಪೊಲೀಸರ ಎದುರೇ ಆತನ ಕಪಾಳಕ್ಕೆ ಹೊಡೆದು ತನ್ನ ಆಕ್ರೋಶವನ್ನು ತೋರಿಸಿದ್ದಾರೆ. ಇನ್ನಿ ಈ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್ ಶಶಿಕುಮಾರ್, ಇಂಥ ಪ್ರಕರಣದಲ್ಲಿ ಯುವತಿಯೇ ಆರೋಪಿಯ ಫೋಟೋ ತೆಗೆದು ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರಿಂದ ಪೊಲೀಸರಿಗೆ ಪತ್ತೆ ಮಾಡಲು ಸಾಧ್ಯವಾಗಿದೆ.

ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಯುವತಿಯನ್ನು ಅಭಿನಂದಿಸುವುದಾಗಿ ಹೇಳಿದರು. ಅಲ್ಲದೆ, ಸಮಾಜಕ್ಕೆ ಪ್ರೇರಣೆಯಾಗುವಂತೆ ವರ್ತಿಸಿದ ಯುವತಿಯನ್ನು ಶಾಲು ಹೊದಿಸಿ ಸನ್ಮಾನಿಸಿದರು.

 

LEAVE A REPLY

Please enter your comment!
Please enter your name here

Hot Topics

‘ಪ್ರವೀಣ್‌’ ಬೇಟೆಗೆ 6 ವೆಹಿಕಲ್‌ 10 ಹತ್ಯೆಕೋರರು..!: ಪಿನ್‌ ಟು ಪಿನ್‌ ಡಿಟೇಲ್ಸ್‌

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ನಡೆದ 16 ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಒಟ್ಟು...

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

ಪ್ರವೀಣ್ ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ-ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಶಿಯಾಬ್, ಬಶೀರ್, ರಿಯಾಝ್ ಎಂದು...