Connect with us

DAKSHINA KANNADA

ಮಹಾನಗರಪಾಲಿಕೆಗೆ ಮುಖಭಂಗ.. ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಪ್ರಾರಂಭ

Published

on

ಮಂಗಳೂರು ಅಗಸ್ಟ್ 13: ಲಾಕ್ ಡೌನ್ ಸಂದರ್ಭ ಕೊರೊನಾ ವಿಚಾರವನ್ನು ಮುಂದಿಟ್ಟುಕೊಂಡು ಏಕಾಎಕಿ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳನ್ನು ತೆರವುಗೊಳಿಸಿದ್ದ ಮಹಾನಗರಪಾಲಿಕೆಗೆ ಮುಖಭಂಗವಾಗಿದೆ. ಮಹಾನಗರಪಾಲಿಕೆಯ ಆಯುಕ್ತರೆ ತಾವು ಹಿಂದೆ ನೀಡಿ ತೆರವು ಆದೇಶವನ್ನು ವಾಪಾಸು ಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


ಮಂಗಳೂರು ಸೆಂಟ್ರಲ್ ಮಾರುಕಟ್ಟೆಯ ತರಕಾರಿ, ಮೀನು ಹಾಗೂ ಇತರ ವ್ಯಾಪಾರಸ್ಥರನ್ನು ತೆರವುಗೊಳಿಸಲು ಮಹಾನಗರ ಪಾಲಿಕೆಯ ಆಯುಕ್ತರು ಮಾರ್ಚ್ 7, 2020ರಂದು ತೆರವು ಗೊಳಿಸಲು ಆದೇಶ ನೀಡಿದ್ದರು, ಲಾಕ್ ಡೌನ್ ಹಾಗೂ ಕೊರೊನಾ ಭಯದಿಂದ ಬಹುತೇಕ ವರ್ತಕರು ಅಂಗಡಿ ಖಾಲಿ ಮಾಡಿದ್ದರು. ಆದರೆ ಪರ್ಯಾಯ ಸ್ಥಳ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿತ್ತು. ಈ ಹಿನ್ನಲೆ ಮಂಗಳೂರು ಸೆಂಟ್ರಲ್ ಮಾರ್ಕೆಟ್ ವ್ಯಾಪಾರಿಗಳನ್ನು ಹಾಲಿ ಕಟ್ಟಡದಿಂದ ತೆರವುಗೊಳಿಸಲು ಏಕಾಏಕಿ ಮಹಾನಗರ ಪಾಲಿಕೆಯ ವತಿಯಿಂದ ಮಾಡಲಾದ ಆದೇಶದ ವಿರುದ್ಧ ಸೆಂಟ್ರಲ್ ಮಾರ್ಕೆಟ್ ನ ಸುಮಾರು 37 ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು.


ಈ ಬಗ್ಗೆ ರಾಜ್ಯದ ಹೈಕೋರ್ಟ್ ನಲ್ಲಿ ಕಾನೂನು ಸಮರ ನಡೆಯುತ್ತಿತ್ತು. ವ್ಯಾಪಾರಸ್ಥರು ಮನಪಾ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಅಂಗಡಿ ತೆರವುಗೊಳಿಸಲು ಮನಪಾ ವತಿಯಿಂದ ಸಲ್ಲಿಸಲಾದ ಅರ್ಜಿಗಳಿಗೂ ನ್ಯಾಯಾಲಯ ಸಮ್ಮತಿ ನೀಡಿರಲಿಲ್ಲ. ಈ ಪ್ರಕರಣದಲ್ಲಿ ನ್ಯಾಯಸಮ್ಮತವಾಗಿ ಕಾನೂನು ಪಾಲನೆ ಮಾಡುವಂತೆ ಮುಖ್ಯ ನ್ಯಾಯಾಧೀಶರ ಆದೇಶ ಹಿನ್ನೆಲೆಯಲ್ಲಿ ಮನಪಾ ಆಯುಕ್ತರು ವ್ಯಾಪಾರಸ್ಥರಿಗೆ ನೀಡಿದ್ದ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ.


ಪೊಲೀಸ್ ಬಲದೊಂದಿಗೆ ಮಾರ್ಕೇಟ್ ತೆರವುಗೊಳಿಸಿಯೇ ಸಿದ್ದ ಎಂದು ಕೂಗಾಡಿದ ಮಹಾನಗರಪಾಲಿಕೆಯ ಅಧಿಕಾರಿಗಳು ಈಗ ಉಲ್ಟಾ ಹೊಡೆದಿದ್ದಾರೆ.ಇದರಿಂದ ಕಾನೂನು ಹೋರಾಟದಲ್ಲಿ ಮನಪಾಕ್ಕೆ ಹಿನ್ನಡೆಯಾಗಿದ್ದು, ಸೆಂಟ್ರಲ್ ಮಾರ್ಕೆಟ್‌ ನ ವ್ಯಾಪಾರಸ್ಥರಿಗೆ ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಇದ್ದ ಅಡಚಣೆ ದೂರವಾಗಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಬಿಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!

Published

on

ಮಂಗಳೂರು : ‘ಬಿರುವೆರ ಕುಡ್ಲ‘ದ ಮುಖಂಡ ಉದಯ ಪೂಜಾರಿಯನ್ನು ತುಳಿಯಲು ಹೋಗಿ ಬಿಜೆಪಿ ಮತ್ತೆ ದೊಡ್ಡ ಯಡವಟ್ಟು ಮಾಡಿಕೊಂಡಿತಾ ಇಂತಹ ಒಂದು ಪ್ರಶ್ನೆ ಸದ್ಯ ಸಾಮಾಜಿಕ‌ ಜಾಲತಾಣದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರಿಕಾಗೋಷ್ಠಿಯಲ್ಲಿ ಬಯಲಾದ ಅಸಲಿಯತ್ತು..!

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನಾರಾಯಣ ಗುರು ವೃತ್ತವನ್ನು ನಿರ್ಮಾಣ ಮಾಡಿದ್ದು ‘ಬಿರುವೆರ ಕುಡ್ಲ‘ ಅಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸತೀಶ್ ಕುಂಪಲ ಅವರ ಈ ಹೇಳಿಕೆ ಈಗ ‘ಬಿರುವೆರ ಕುಡ್ಲ’ದ ಮುಖಂಡ ಉದಯ ಪೂಜಾರಿ ಅವರಲ್ಲೂ ಅಸಮಾಧಾನ ಮೂಡಿಸಿದೆ.

ನಾರಾಯಣ ಗುರು ವೃತ್ತ

ಸತೀಶ್ ಕುಂಪಲ ಹೇಳಿದ್ದೇನು ?

“ನಾರಾಯಣ ಗುರು ವೃತ್ತ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಸಂಘರ್ಷ ಆಗಿತ್ತು. ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಪೊರೇಟರ್ ದಿವಾಕರ್ ವೃತ್ತ ನಿರ್ಮಾಣದ ವಿಚಾರ ಪ್ರಸ್ತಾವಿಸಿದ್ದರು. ಮೇಯರ್ ಆಗಿದ್ದ ಪ್ರೇಮಾನಂದ ಶೆಟ್ಟಿ, ವೃತ್ತ ನಿರ್ಮಾಣದ ಬಗ್ಗೆ ಮೂಡಾದಿಂದ ಅನುದಾನ ಕೊಡಿಸಿದ್ದರು. ಮೂಡಾದ ಅಂದಿನ ಅಧ್ಯಕ್ಷರಾಗಿದ್ದ ರವಿಶಂಕರ್ ಮಿಜಾರ್ ಅನುದಾನ ನೀಡಿದ್ದರು. ಇನ್ನು ವೃತ್ತ ನಿರ್ಮಾಣದ ಬಗ್ಗೆ ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಮುತುವರ್ಜಿ ವಹಿಸಿದ್ದರು. ಪ್ರಧಾನಿ ಮೋದಿ ಅವರು ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿರುವುದು ಇವರೆಲ್ಲರಿಗೂ ಸಾರ್ಥಕತೆ ತರಿಸಿದೆ” ಎಂದು ಹೇಳುವ ಮೂಲಕ ಇಲ್ಲಿ ‘ಬಿರುವೆರ ಕುಡ್ಲ‘ದ ಪಾತ್ರ ಏನು ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಮೋದಿ ಅಭಿಮಾನಿ ಉದಯ ಪೂಜಾರಿ ..!

ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಉದಯ ಪೂಜಾರಿ ಈ ಬಾರಿ ನ್ಯೂಟ್ರಲ್ ಆಗಿದ್ದರು. ಅಸಲಿಗೆ ನಳಿನ್ ಕುಮಾರ್ ಅವರ ಆಪ್ತರಾಗಿ, ಬಿಜೆಪಿಯ ಬೆಂಬಲಿಗರಾಗಿ, ಮೋದಿಯ ಅಭಿಮಾನಿಯೂ ಆಗಿದ್ದರು.

ನಳಿನ್ ಹಾಗೂ ವೇದವ್ಯಾಸ್ ಜೊತೆ ಉದಯ ಪೂಜಾರಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ತಮ್ಮದೇ ಸಮೂದಾಯದ ರಕ್ಷಿತ್ ಶಿವರಾಂ ಸ್ಪರ್ಧೆ ಮಾಡಿದ್ರೂ ಹರೀಶ್ ಪೂಂಜಾ ಪರ ಪ್ರಚಾರ ಮಾಡಿದ್ರು. ಬಿಜೆಪಿ ಪಕ್ಷ ಹಾಗೂ ಮೋದಿಯ ಅಭಿಮಾನಿಯಾಗಿ ಜೊತೆಗೆ ತನ್ನ ಸಮಾಜದ ಜನರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು.

ಸಮಾಜಕ್ಕೆ ಅಂಬ್ಯಲೆನ್ಸ್ ಹಸ್ತಾಂತರ

ಆದರೆ ‘ಬಿರುವೆರ ಕುಡ್ಲ‘ದ ಉದಯ ಪೂಜಾರಿ ಸದ್ಯ ಬಿಜೆಪಿಗೆ ಬೇಡದವರಾಗಿದ್ದಾರೆ. ಆದರೆ ‘ಬಿರುವೆರ ಕುಡ್ಲ‘ ಸಂಘಟನೆಯ ಮೂಲಕ ಸಾಕಷ್ಟು ಬಡ ಜನರಿಗೆ ಸಹಾಯ ಮಾಡಿದ ಉದಯ ಪೂಜಾರಿ ಬೆನ್ನ ಹಿಂದೆ ಸಾವಿರಾರು ಬಿಲ್ಲವ ಯುವಕರ ಪಡೆ ಇದೆ ಅನ್ನೋದು ಬಿಜೆಪಿ ಮರೆತಿದೆ. ಆದರೆ ಇದು ರಾಜಕೀಯವಾಗಿ ಉದಯ ಪೂಜಾರಿ ಬೆಳೆಯಬಹುದು ಎಂಬ ಕಾರಣಕ್ಕೆ ಮೋದಿ ಅವರ ಭೇಟಿಯಿಂದ ಅವರನ್ನು ದೂರ ಇರಿಸಲಾಗಿತ್ತು ಅನ್ನೋದು ಈಗ ರಾಜಕೀಯವಾಗಿ ಚರ್ಚಿತದಲ್ಲಿದೆ.

ಸಮಾಜಿಕ ಜಾಲತಾಣದಲ್ಲಿ ಆಕ್ರೋಶ…!

ಉದಯ ಪೂಜಾರಿಯನ್ನು ತುಳಿಯಲು ಬಿಜೆಪಿ ನಾರಾಯಣ ಗುರುಗಳನ್ನೇಹೈಜಾಕ್ ಮಾಡಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡಿತಾ ಇದೆ. ಬಿರುವೆರ ಕುಡ್ಲದ ಶ್ರಮ ಹಾಗೂ ಕೊಡುಗೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಬಿಜೆಪಿ ಸಾಧನೆ ಅಂದಿದ್ದಾರೆ. ಹೇಗೆ ಹಿಂದುತ್ವವನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಂಡಿದೋ ಅದೇ ರೀತಿ ಈಗ ಬಿಲ್ಲವ ಸಮೂದಾಯವನ್ನು ಬಳಸಲು ಹೊರಟಿದೆ. ಒಂದೇ ಜಾತಿ ಒಂದೇ ಮತ ಒಂದೇ ದೇವರು ಅಂದಿದ್ದ ನಾರಾಯಣಗುರುಗಳನ್ನು ಓಟಿಗಾಗಿ ಹೈಜಾಕ್ ಮಾಡಲು ಹೊರಟಿದೆ ಎಂದು ಚರ್ಚೆ ನಡೆಯುತ್ತಿದೆ. ವಿಮಾನ ನಿಲ್ದಾಣದಲ್ಲಿ ಪ್ರವೀಣ್ ನೆಟ್ಟಾರು ತಾಯಿಯನ್ನು ಕರೆತಂದು ಪ್ರಧಾನಿಗೆ ಪರಿಚಯಿಸಿ ಬಿಲ್ಲವರನ್ನು ಓಲೈಸಲಾಗಿದೆ.  ಮತ್ತೊಂದೆಡೆ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸಿ ಬಿಲ್ಲವರನ್ನು ಖುಷಿ ಪಡಿಸಿದೆ. ಆದರೆ ಬೆಳೆಯುತ್ತಿದ್ದ ಬಿಲ್ಲವ ನಾಯಕನನ್ನು  ಸೈಲೆಂಟ್ ಆಗಿ ಚಿವುಟಿ ಹಾಕುವ ಎಲ್ಲಾ ಪ್ಲ್ಯಾನ್ ಬಿಜೆಪಿಯಿಂದ ಆಗಿದೆ ಅನ್ನೋ ವಿಚಾರ ಚರ್ಚೆ ಆಗುತ್ತಿದೆ.

 

Continue Reading

DAKSHINA KANNADA

ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!

Published

on

ಮಂಗಳೂರು : ಆಕೆ ಆರೋಗ್ಯವಾಗಿದ್ದು, ಇನ್ನೊಬ್ಬರ ಆರೋಗ್ಯ ವಿಚಾರಿಸುವ ವೈದ್ಯೆಯಾಗಿದ್ದವರು. ದಂತ ವೈದ್ಯಕೀಯ ಪದವಿ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕು ಅಂತ ಒಂದು ಕ್ಲಿನಿಕ್‌ಗೆ ಜಾಯಿನ್ ಆಗಿದ್ದಾರೆ. ಆದ್ರೆ ದುರಾದೃಷ್ಟ ಅಂದ್ರೆ ಕೆಲಸಕ್ಕೆ ಜಾಯಿನ್ ಆಗುವ ದಿನವೇ ಆಕೆ ಇಹಲೋಕ ತ್ಯಜಿಸಿದ್ದಾರೆ. ಉಳ್ಳಾಲ ತಾಲೂಕಿನ ನರಿಂಘಾನ ಗ್ರಾಮದ ಆಳ್ವರಬೆಟ್ಟು ನಿವಾಸಿ 24 ವರ್ಷದ ಸ್ವಾತಿ ಶೆಟ್ಟಿ ಇಹಲೋಕ ತ್ಯಜಿಸಿದ ವೈದ್ಯೆಯಾಗಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಆಳ್ವರಬೆಟ್ಟು ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ, ಶಾಂತಿಪಳಿಕೆ ಶ್ರೀ ಮಹಾಮ್ಮಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿ ಪುತ್ರಿ ಇವರು.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿ ಮಂಗಳವಾರದಿಂದ(16-04-2024) ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಕೆಲಸಕ್ಕೆ ಜಾಯಿನ್ ಆಗುವವರಿದ್ದರು. ಹೀಗಾಗಿ ಸೋಮವಾರ (15-04-2024) ಸಂಜೆ ಪಾಂಡೇಶ್ವರದ ಪಿಜಿ ಬಂದು ಜಾಯಿನ್ ಆಗಿದ್ದರು. ಮರುದಿನ ಹೊಸ ಕೆಲಸಕ್ಕೆ ಹೋಗುವ ಕಾರಣ ಸಾಕಷ್ಟು ಎಕ್ಸೈಟ್ ಆಗಿದ್ದ ಸ್ವಾತಿ ತಂದೆ ತಾಯಿ ಜೊತೆ ಫೋನ್ ಮೂಲಕ ಮಾತನಾಡಿದ್ದರು. ಈ ವೇಳೆ ವಿಪರೀತ ತಲೆನೋವು ಕಾಣಿಸಿಕೊಂಡ ಕಾರಣ ಬೇಗನೆ ಮಲಗುವುದಾಗಿ ಹೇಳಿ ಸ್ವಾತಿ ನಿದ್ರೆಗೆ ಜಾರಿದ್ದರು. ಈ ವೇಳೆ ರೂಮ್ ಮೇಟ್ ಕೂಡಾ ಜೊತೆಯಲ್ಲಿ ಇದ್ದರಾದ್ರೂ ತಲೆನೋವಿನ ಕಾರಣ ತೊಂದರೆ ಕೊಡದೆ ಅವರೂ ಕೂಡಾ ಮಲಗಿದ್ದರು. ಮುಂಜಾನೆ ಸ್ವಾತಿ ಎದ್ದಿಲ್ಲ ಅನ್ನೋ ಕಾರಣಕ್ಕೆ ಅವರನ್ನು ಅಲುಗಾಡಿಸಲು ಹೋದಾಗ ಮೈ ತಣ್ಣಗಾಗಿರುವುದು ಗೊತ್ತಾಗಿದೆ.  ತಕ್ಷಣ ಅಂಬ್ಯುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅಷ್ಟರಲ್ಲಾಗಲೇ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ವಾತಿ ಅವರಿಗೆ ಅಪರೂಪಕ್ಕೆ ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದ್ರೆ ಅವರ ಈ ಧಿಡೀರ್ ಸಾವಿಗೆ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ.

 

 

Continue Reading

DAKSHINA KANNADA

ದೇಶದಲ್ಲಿ ಮೊದಲ ಬಾರಿಗೆ QR ಕೋಡ್ ವೋಟರ್ ಸ್ಲಿಪ್

Published

on

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ ನೀಡಲಾಗುವುದು.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ ನೀಡಲಾಗುವ ವೋಟರ್‌ ಸ್ಲಿಪ್‌ ಗಳಲ್ಲಿ ಮತಗಟ್ಟೆಯ ಕ್ಯೂ ಆರ್‌ ಕೋಡ್‌ ಮುದ್ರಿಸಲಾಗಿದೆ.

ನಗರದ ನಿವಾಸಿಗಳು ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.

Continue Reading

LATEST NEWS

Trending