DAKSHINA KANNADA
ಮಂಗಳೂರು ಸಿಸಿಬಿ ಕಾರ್ಯಾಚರಣೆ :ಕುಖ್ಯಾತ ಅಂತಾರಾಜ್ಯ ಸಾಹೀಬ್ ಗಂಜ್ ದರೋಡೆ ಗ್ಯಾಂಗ್ ಸೆರೆ..!.
ಮಂಗಳೂರು : ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿಯೊಂದನ್ನು ಕನ್ನ ಕೊರೆದು ದರೋಡೆಗೆ ಯತ್ನಿಸಿದ್ದ ಕುಖ್ಯಾತ ಆಂತಾರಾಜ್ಯ ಜ್ಯುವೆಲ್ಲರಿ/ ಬ್ಯಾಂಕ್ ದರೋಡೆ ಗ್ಯಾಂಗ್ ನ 9 ಮಂದಿಯನ್ನು ದಸ್ತಗಿರಿ ಮಾಡಿ ದರೋಡೆಗಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ನವೆಂಬರ್ 29 ರಂದು ರಾತ್ರಿ ವೇಳೆಯಲ್ಲಿ ಮಂಗಳೂರು ನಗರದ ತೊಕ್ಕೊಟ್ಟು ಮಂಚಿಲ ಪರಿಸರದ ಮನೆಯೊಂದರಲ್ಲಿ ಉತ್ತರ ಭಾರತದ ಕುಖ್ಯಾತ “ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ” ನ ವ್ಯಕ್ತಿಗಳು ತೊಕ್ಕೊಟ್ಟಿನ ಜ್ಯುವೆಲ್ಲರಿ ಅಂಗಡಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಫಿಸುತ್ತಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ರವರ ನೇತೃತ್ವದಲ್ಲಿನ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳ ವಿವರ :
1. ಭಾಸ್ಕರ ಬೆಳ್ಚಪಾಡ(65), ವಾಸ: ಚೆನ್ನಯ ಮೂಲೆ, ಕನ್ಯಾನ ನದಿಯ ಹತ್ತಿರ, ಬಂಟ್ವಾಳ, ಕನ್ಯಾನ, ದಕ್ಷಿಣ ಕನ್ನಡ. ಹಾಲಿ ವಿಳಾಸ- ಉಮ್ಮರ್ ಗಾಂವ್, ಗಾಂಧಿ ಆಸ್ಪತ್ರೆ ಎದುರು, ಗಾಂಧಿವಾಡಿ, ಗುಜರಾತ್.
2. ದಿನೇಶ್ ರಾವಲ್ @ ಸಾಗರ್ @ ದಿಲ್ಲಿ(38), ವಾಸ: ರೂಮ್ ನಂ-5, ಶಾಂತೀಸ್ ಬಾಯಿ, ಕೆ ಎಲ್ ಚಾಲ್, ಶ್ರೀನಾಥಜಿ ವಾಪಿ ಚಾಲ್, ವಲ್ಸಾದ್, ಗುಜರಾತ್. ಖಾಯಂ ವಿಳಾಸ: ಬೋಜಾನ ಜಿಲ್ಲೆ, ಚನ್ನಾ ಗ್ರಾಮ,ಜೈನಪುರ ತಾಲೂಕು, ಕೈಲಾಲಿ ರಾಜ್ಯ , ನೇಪಾಳ.
3. ಮೊಹಮ್ಮದ್ ಜಾಮೀಲ್ ಶೇಖ್(29), ವಾಸ: ಮದ್ಯ ನಾರಾಯಣಪುರ ಕಚ್ವಾಕೋಲ, ನಾರಾಯಣಪುರ, ರಾಜಮಹಲ್ ತಾಲೂಕು, ಸಾಹೇಬ್ ಗಂಜ್ ಜಿಲ್ಲೆ, ಜಾರ್ಖಂಡ್ ರಾಜ್ಯ.
4. ಇಂಜಮಾಮ್ ಉಲ್ ಹಕ್(27), ವಾಸ: ಮಾಣಿಕ ಪಾರಾ ಗ್ರಾಮ, ವಾರ್ಡ್ ನಂ-02, ಪಂಚಾಯತ್ –ಮಾಣಿಕ ಪಾರಾ. ಪಾಕೂರ್,ಮಾಣಿಕಪಾರಾ,ಪಾಕೂರ್ ಜಿಲ್ಲೆ,ಜಾರ್ಖಂಡ್ ರಾಜ್ಯ.
5. ಬಿಸ್ತ ರೂಪ್ ಸಿಂಗ್ (34), ವಾಸ: 7 ವಿಶ್ವಕರ್ಮ ಸೊಸೈಟಿ, ಲಿಂಬಾಯತ್, ಸೂರತ್, ಗುಜರಾತ್ -ಖಾಯಂ ವಿಳಾಸ:ಸುಖಾಡ್ ಸಾಡೆಪಾನಿ ಗ್ರಾಮ, ಕೈಲಾಲಿ ಜಿಲ್ಲೆ, ಅಂಚಲ್ ರಾಜ್ಯ,ನೇಪಾಳ.
6. ಕೃಷ್ಣ ಬಹದ್ದೂರ್ ಬೋಗಟಿ, ಪ್ರಾಯ(41), ವಾಸ: ಡೋರ್ ನಂಬ್ರ:8-4-549/258, ಇರಗದ್ದ, ನೇತಾಜಿ ನಗರ, ರಂಗರೆಡ್ಡಿ, ಹೈದರಾಬಾದ್, ಆಂಧ್ರಪ್ರದೇಶ. ಖಾಯಂ ವಿಳಾಸ: ಅಚ್ಚಾಂ ಜಿಲ್ಲಾ, ಡಾಕು-7, ನೇಪಾಳ.
7. ಇಮ್ದದುಲ್ ರಝಾಕ್ ಶೇಖ್, ಪ್ರಾಯ(32), ವಾಸ: ಅಜಮತ್ತುಲ್ಲಾ ಮನೆ, ಪರಂಗ್ ಪುರ ಅಂಚೆ, ರಾಧಾನಗರ ಪೊಲೀಸ್ ಠಾಣಾ ವ್ಯಾಪ್ತಿ, ಸಾಹೇಬ್ ಗಂಝ್ ಜಿಲ್ಲೆ, ಜಾರ್ಖಂಡ್ ರಾಜ್ಯ.
8. ಬಿವುಲ್ ಶೇಖ್,ಪ್ರಾಯ(31), ವಾಸ: ವಾರ್ಡ್ ನಂಬ್ರ: 3, ಉತ್ತರ ಪಿಯಾರ್ಪುರ್, ಸಾಹೇಜ್ ಗಂಜ್ ಜಿಲ್ಲಾ, ಜಾರ್ಖಂಡ್ ರಾಜ್ಯ.
9. ಇಮ್ರಾನ್ ಶೇಖ್, ಪ್ರಾಯ(30), ವಾಸ: ಅಜುಲ್ ತೋಲಾ, ಉತ್ತರ ಪ್ಲಾಝ್ಲಾಚಿ, ಸಾಹೇಜ್ ಗಂಜ್, ಜಾರ್ಖಂಡ್ ರಾಜ್ಯ.
ಆರೋಪಿಗಳೆಲ್ಲರೂ ಉತ್ತರ ಭಾರತ ಮೂಲದ ಕುಖ್ಯಾತ “ಸಾಹೇಬ್ ಗಂಜ್” ದರೋಡೆ ಗ್ಯಾಂಗ್ ನ ಸದಸ್ಯರಾಗಿದ್ದು, ಮಂಗಳೂರು ತೊಕ್ಕೊಟ್ಟಿನ ಸೂಪರ್ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡುವ ಉದ್ದೇಶದಿಂದ ಸುಮಾರು 15 ದಿನಗಳ ಹಿಂದೆ ಮಂಗಳೂರಿಗೆ ರೈಲಿನಲ್ಲಿ ಬಂದು ನಂತರ ತೊಕ್ಕೊಟ್ಟು ಬಳಿಯ ಲಾಡ್ಜ್ ವೊಂದರಲ್ಲಿ ಹಾಗೂ ತೊಕ್ಕೊಟ್ಟು ಮಂಚಿಲ ಬಳಿಯ ವ್ಯಕ್ತಿಯೊಬ್ಬರ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ನಂತರ ದರೋಡೆಗೆ ಸಂಚು ರೂಫಿಸಿದ ಸೂಪರ್ ಗೋಲ್ಡ್ & ಡೈಮಂಡ್ಸ್ ಜ್ಯುವೆಲ್ಲರಿಯನ್ನು ಗುರುತಿಸಿಕೊಂಡು ದರೋಡೆಗೆ ಬೇಕಾದ ಗ್ಯಾಸ್ ಕಟ್ಟರ್, ಅಕ್ಸಿಜನ್ ಸಿಲಿಂಡರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟಿಂಗ್ ನೋಝಲ್, ಕಟ್ಟಿಂಗ್ ಹೋಸ್ ಪೈಪ್, ಲೆದರ್ ಹ್ಯಾಂಡ್ ಗ್ಲೌಸ್, ಕಬ್ಬಿಣದ ರಾಡ್, ತಲವಾರು, ಅಕ್ಸೋ ಬ್ಲೇಡ್, ಹ್ಯಾಮರ್, ಸ್ಕ್ರೂಡ್ರೈವರ್, ಮೆಣಸಿನ ಹುಡಿ, ನೈಲಾನ್ ಹಗ್ಗ ಹಾಗೂ ಇತರ ಹಲವಾರು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,90,000/- ಆಗಿರುತ್ತದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಇತ್ತೀಚೆಗೆ ಮಂಗಳೂರು ನಗರದ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆಂಬಿಕಾ ರೋಡ್, ಉಚ್ಚಿಲ ಬಳಿಯಿಂದ ರಾತ್ರಿ ವೇಳೆಯಲ್ಲಿ ಮೂರು ದ್ವಿಚಕ್ರ ವಾಹನದ ಸವಾರರನ್ನು ಅಡ್ಡಗಟ್ಟಿ ಹಿಂದಿ ಭಾಷೆಯಲ್ಲಿ ಬೈದು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಅವರಿಂದ ಸ್ಕೂಟರ್ ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ್ದರು, ಈ ಸ್ಕೂಟರ್ ನ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಇದೇ ಸಾಹೇಜ್ ಗಂಜ್ ದರೋಡೆ ಗ್ಯಾಂಗ್ ನ ಆರೋಪಿಗಳು ಜ್ಯುವೆಲ್ಲರಿ ದರೋಡೆ ನಡೆಸಲು ಸಂಚು ರೂಫಿಸುವ ಸಮಯ ಸ್ಥಳೀಯವಾಗಿ ಓಡಾಟದ ಸಲುವಾಗಿ ಈ ಸ್ಕೂಟರ್ ಗಳ ಸವಾರರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿ ಉಪಯೋಗಿಸುತ್ತಿದ್ದರು. ಮೇಲ್ಕಂಡ ಮೂರು ಸ್ಕೂಟರ್ ಗಳನ್ನು ಕೂಡಾ ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಗಳ ಪೈಕಿ ಭಾಸ್ಕರ ಬೆಳ್ಚಡ, ದಿನೇಶ್ ರಾವಲ್ @ ಸಾಗರ್ @ ದಿಲ್ಲಿ, ಇಂಜಮಾಮ್ ಉಲ್ ಹಕ್, ಬಿಸ್ತ ರೂಪ್ ಸಿಂಗ್, ಕೃಷ್ಣ ಬಹದ್ದೂರ್ ಬೋಗಟಿ ಎಂಬವರ ವಿರುದ್ಧ ಮುಂಬೈ,ಪುಣಿ, ಸೂರತ್, ಮಧ್ಯಪ್ರದೇಶದ ಮಾಧವ ನಗರ, ಕೇರಳದ ತ್ರಿಶೂರ್, ಪಂಜಾಬ್ ರಾಜ್ಯಗಳಲ್ಲಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಬ್ಯಾಂಕ್ ದರೋಡೆ, ಜ್ಯುವೆಲ್ಲರಿ ದರೋಡೆ ಪ್ರಕರಣಗಳು ದಾಖಲಾಗಿರುತ್ತದೆ.
ಈ ಕುಖ್ಯಾತ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಬಿ, ಪ್ರದೀಪ ಟಿ ಆರ್, ಎಎಸ್ಐ ಯವರಾದ ಶಶಿಧರ ಶೆಟ್ಟಿ, ಮೋಹನ್ ಕೆ ವಿ, ಹರೀಶ ಪಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
“ಸಾಹೇಜ್ ಗಂಜ್ ಗ್ಯಾಂಗ್” :
ಸಾಹೇಬ್ ಗಂಜ್ ಗ್ಯಾಂಗ್ ಎಂಬುವುದು ಉತ್ತರ ಭಾರತದ ಜಾರ್ಖಂಡ್ ರಾಜ್ಯದ ಕುಖ್ಯಾತ ದರೋಡೆ ಗ್ಯಾಂಗ್ ಆಗಿದ್ದು, ಈ ಗ್ಯಾಂಗ್ ನಲ್ಲಿನಲ್ಲಿ ನೇಪಾಳ ದೇಶದ ಪ್ರಜೆಗಳು ಕೂಡಾ ಇದ್ದು, ಇವರು ಪ್ರಮುಖವಾಗಿ ದೊಡ್ಡ ದೊಡ್ಡ ನಗರಗಳಲ್ಲಿನ ಬ್ಯಾಂಕ್, ಜ್ಯುವೆಲ್ಲರಿ ಅಂಗಡಿಗಳನ್ನು ಗುರುತಿಸಿ ಅಲ್ಲಿಯ ಪರಿಸರದಲ್ಲಿ ಬಾಡಿಗೆಗೆ ಮನೆ/ಲಾಡ್ಜ್ ಗಳನ್ನು ಮಾಡಿಕೊಂಡು ಸ್ಥಳೀಯವಾಗಿ ದರೋಡೆ ಮಾಡಲು ಬೇಕಾದ ಸಲಕರಣೆಗಳನ್ನು ಖರೀದಿಸಿಕೊಂಡು ನಂತರ ಜ್ಯುವೆಲ್ಲರಿ ಅಂಗಡಿ, ಬ್ಯಾಂಕ್ ಗಳ ಗೋಡೆ ಕನ್ನ ಕೊರೆದು, ಗ್ಲಾಸ್ ಕಟ್ಟರ್ ಮೂಲಕ ತಿಜೋರಿಯನ್ನು ಒಡೆದು ಕೋಟ್ಯಾಂತರ ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡುವ ಕುಖ್ಯಾತ ಗ್ಯಾಂಗ್ ಆಗಿದ್ದು, ಈ ಗ್ಯಾಂಗ್ ನಲ್ಲಿದ್ದವರು ದೇಶದ ವಿವಿಧಡೆಗಳಲ್ಲಿ ಈ ಹಿಂದೆ ನಡೆದ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಈ ಗ್ಯಾಂಗ್ ನಲ್ಲಿ ನೇಪಾಳ ದೇಶದ ಹಲವಾರು ಮಂದಿ ಆರೋಪಿಗಳಿದ್ದು, ಇವರು ಕೃತ್ಯ ನಡೆಸಿದ ನಂತರ ಸೊತ್ತಿನೊಂದಿಗೆ ನೇಪಾಳಕ್ಕೆ ಪರಾರಿಯಾಗುತ್ತಿದ್ದರು.
DAKSHINA KANNADA
ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ- ಬಿರುವೆರ್ ಕುಡ್ಲ ಉದಯ್ ಪೂಜಾರಿ
ಮಂಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸಿದ್ದರು. ಮುಂಬರುವ ಚುನಾವಣೆಯಲ್ಲಿ ದ.ಕ ಜಿಲ್ಲಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಬ್ಯಾಟ್ ಬೀಸಿದ್ದರು. ಈ ವೇಳೆ ನಾರಾಯಣ ಗುರು ಸರ್ಕಲ್ ನಲ್ಲಿರುವ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದರು.
ಆದರೆ ಈ ಸಂದರ್ಭ ಬಿಜೆಪಿ ಬೆಂಬಲಿಗರಾದ ಬಿರುವೆರ್ ಕುಡ್ಲ ಸಂಘಟನೆಯನ್ನು ಕಡೆಗಣಿಸಿರುವುದಕ್ಕೆ ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ನಾರಾಯಣ ಗುರು ವೃತ್ತ ನಿರ್ಮಾಣ ಮಾಡುವಾಗ ಸತೀಶ್ ಕುಂಪಲ ಎಲ್ಲಿದ್ದರು…?
ಮಂಗಳೂರಿನಲ್ಲಿ ನಾರಾಯಣ ಗುರು ವೃತ್ತವನ್ನು ಲೇಡಿಹಿಲ್ ಸರ್ಕಲ್ ಬಳಿ ನೂತನವಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸತೀಶ್ ಕುಂಪಲ ಎಲ್ಲಿದ್ದರು…? ನಾವು ಸರ್ಕಲ್ ಮಾಡಲು ಹೋರಾಟ ಮಾಡುವಾಗ ಅವರು ಎಲ್ಲಿದ್ದರು..? ಇಂದು ಕೇವಲ ತನ್ನ ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ. ಅವರು ಬಿಲ್ಲವ ಎನ್ನುವ ಕಾರಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ಅವರು ಬಿಲ್ಲವರಿಗೋಸ್ಕರ, ಬಿಲ್ಲವ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ ಎಂದು ಉದಯ ಪೂಜಾರಿ ಹೇಳಿದ್ದಾರೆ.
ಇದನ್ನೂ ಓದಿ..;ಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!
ಬಿಲ್ಲವ ಸಂಘಟನೆಗಳ ಮನವಿ ಬಳಿಕ ನಾರಾಯಣ ಗುರು ವೃತ್ತ ನಿರ್ಮಾಣ
ನಾರಾಯಣ ಗುರು ವೃತ್ತ ನಿರ್ಮಾಣ ಮಾಡಿದ್ದು, ಬಿಜೆಪಿ ನಾಯಕರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿರುವೆರ್ ಕುಡ್ಲದ ಮುಖಂಡ ಉದಯ್ ಪೂಜಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 13 ವರ್ಷಗಳ ಹಿಂದೆ ನಾವು ಕಾಂಗ್ರೆಸ್ ಸರಕಾರ ಇದ್ದಾಗ ಅಲ್ಲಿ ನಾರಾಯಣ ಗುರು ವೃತ್ತ ಮಾಡಲು ಮನವಿ ಮಾಡಿದ್ದೆವು. ಸಂಸದ ನಳಿನ್ ಕುಮಾರ್ ಸಹಿತ ಎಲ್ಲಾ ಶಾಸಕರಿಗೂ ಮನವಿ ನೀಡಿದ್ದೆವು. ಸುಮಾರು 200 ಬಿಲ್ಲವ ಸಂಘಟನೆಗಳು ಮನವಿ ನೀಡಿದ ಬಳಿಕ ಅಲ್ಲಿ ನಾರಾಯಣ ಗುರು ವೃತ್ತ ಮಾಡಲಾಗಿದೆ ಎಂದು ಹೇಳಿದ್ರು.
ಬಿರುವೆರ್ ಕುಡ್ಲ ಸಂಘಟನೆ ದೂರವಿಟ್ಟಿದ್ದಕ್ಕೆ ಆಕ್ರೋಶ
ಆದರೆ, ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಉದ್ಯಮಿಗಳು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ನಮ್ಮ ಸಂಘಟನೆಯನ್ನು ದೂರ ಇಟ್ಟಿರುವುದು ನಮಗೆ ಬೇಸರ ಮೂಡಿಸಿದೆ ಎಂದರು. ಕನಿಷ್ಠ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್ ಎಸ್ ಸಾಯಿರಾಂ ಅವರನ್ನಾದರೂ ಕರೆಯಬಹುದಿತ್ತು ಎಂದರು. ನಳಿನ್ ಕುಮಾರ್ ಕಟೀಲು, ವೇದವ್ಯಾಸ ಸಹಿತ ಹಲವು ಮಂದಿ ನಾಯಕರು ನಮ್ಮ ಕಷ್ಟಕ್ಕೆ ಸ್ಪಂದಿಸಿದ್ದವರು. ಆದರೆ ಇಂದು ಬಿಜೆಪಿಯಲ್ಲೇ ಎರಡು ಬಣ ಆಗಿದೆ. ಇದು ನಮಗೆ ಬೇಸರ ತರುವ ಕೆಲಸ ಎಂದರು. ಬಿಜೆಪಿ ನಡೆಯಿಂದ ನಮ್ಮ ಸಂಘಟನೆಗೆ ಬೇಸರವಾಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಾವು ಇಂಥವರಿಗೇ ಮತ ಚಲಾಯಿಸಿ ಎಂದು ಯಾರಿಗೂ ಹೇಳಲ್ಲ. ಯಾರು ಒಳ್ಳೆಯ ಅಭ್ಯರ್ಥಿ ಇದ್ದಾರೋ ಅವರಿಗೆ ಮತ ಹಾಕಿ ಎಂದರು.
DAKSHINA KANNADA
ನಾಳೆ ನಿಮ್ಮೂರಿಗೆ ಬರ್ತಿದ್ದಾನೆ ಮೇಘರಾಜ: ತಂಪಾಗಲಿದೆ ಇಳೆ
ಬೆಂಗಳೂರು: ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ಮಲೆನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿದೆ.
ಈ ಬಾರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಜೂನ್ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ
ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಗಳಿದ್ದು, 85.2 ಸೆಂ.ಮಿ ಮಳೆ ಬೀಳುವ ನಿರೀಕ್ಷೆಗಳಿವೆ. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಕ್ರಮವಾಗಿ 19.9 ಸೆಂ.ಮೀ., 27.1 ಸೆಂ.ಮೀ., ಆಗಸ್ಟ್ 22 ಸೆಂ.ಮೀ ಹಾಗೂ 16.1 ಸೆಂಮೀ ಮಳೆಯಾಗುವ ನಿರೀಕ್ಷೆಗಳಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಹೇಳಿದೆ.
ನಾಳೆ ಈ ಜಿಲ್ಲೆಗಳಲ್ಲಿ ಆಗಲಿದೆ ಮಳೆ
ನಾಳೆ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂಉರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
DAKSHINA KANNADA
ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಂತೆ..! ಏನಿದು ಸೀರೆ ಕ್ಯಾನ್ಸರ್?
ಬೆಂಗಳೂರು: ಸೀರೆ ಭಾರತೀಯ ಮಹಿಳೆಯ ಗುರುತು. ಐದೂವರೆಯಿಂದ ಆರು ಮೀಟರ್ ಉದ್ದದ ಈ ಸುಂದರವಾದ ಉಡುಪು ಮಹಿಳೆಯರ ಅಂದವನ್ನು ದುಪ್ಪಟ್ಟಾಗಿಸುವುದರಲ್ಲಿ ಅನುಮಾನವಿಲ್ಲ. ಆದರೆ, ಸೀರೆ ಕೂಡಾ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬುದು ನಿಮಗೆ ಗೊತ್ತೇ? ಇದಲ್ಲದೆ, ಇತರ ಬಟ್ಟೆಗಳನ್ನು ತಪ್ಪಾಗಿ ಧರಿಸಿದರೆ ಕ್ಯಾನ್ಸರ್ ಉಂಟಾಗುತ್ತದೆ. ಸೀರೆ ಕ್ಯಾನ್ಸರ್ ಭಾರತದಲ್ಲಿ ಮಾತ್ರ ಕಂಡುಬರುತ್ತದೆ. ಏಕೆಂದರೆ ಭಾರತದಲ್ಲಿ ಮಾತ್ರ ಸೀರೆಯನ್ನು ಹೆಚ್ಚಾಗಿ ಮಹಿಳೆಯರು ಧರಿಸುತ್ತಾರೆ.
ದೆಹಲಿಯ ಪಿಎಸ್ ಆರ್ ಐ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕರ ಪ್ರಕಾರ, ಮಹಿಳೆ ಒಂದೇ ಉಡುಪನ್ನು ದೀರ್ಘಕಾಲದವರೆಗೆ ಧರಿಸಿದರೆ, ಅದು ಸೊಂಟದ ಮೇಲೆ ಉಜ್ಜಲು ಪ್ರಾರಂಭಿಸುತ್ತದೆ. ಅಲ್ಲಿ ಚರ್ಮವು ಸಿಪ್ಪೆ ಸುಲಿದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಪುನರಾವರ್ತಿತವಾಗುತ್ತಾ ನಿಧಾನವಾಗಿ ಕ್ಯಾನ್ಸರ್ ಪ್ರಾರಂಭವಾಗಬಹುದು.
ಸೀರೆ ಕ್ಯಾನ್ಸರ್ಗೆ ಅಸ್ವಚ್ಛತೆಯೇ ಹೆಚ್ಚು ಕಾರಣ. ಹೆಚ್ಚಿನ ಶಾಖ ಮತ್ತು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಈ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಬಿಹಾರ ಮತ್ತು ಜಾರ್ಖಂಡ್ನಲ್ಲಿ ಇದರ ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗುತ್ತವೆ. ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರುವ ಎಲ್ಲಾ ಕ್ಯಾನ್ಸರ್ಗಳಲ್ಲಿ ಸೀರೆ ಕ್ಯಾನ್ಸರ್ ಶೇಕಡಾ 1 ರಷ್ಟಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ.
ಮುಂಬೈನಲ್ಲಿ ಕಂಡು ಬಂದ ಮೊದಲ ಪ್ರಕರಣ:
ಮುಂಬೈನ ಆರ್ ಎನ್ ಕೂಪರ್ ಆಸ್ಪತ್ರೆಯಲ್ಲಿ 68 ವರ್ಷದ ಮಹಿಳೆಗೆ ಸೀರೆಯಿಂದಾಗಿ ಕ್ಯಾನ್ಸರ್ ಬಂದ ಕಾರಣ ವೈದ್ಯರು ಸೀರೆ ಕ್ಯಾನ್ಸರ್ ಎಂಬ ಹೆಸರನ್ನು ನೀಡಿದ್ದಾರೆ. ತುಂಬಾ ಬಿಗಿಯಾದ ಬಟ್ಟೆಗಳನ್ನು ಗಂಟೆಗಳ ಕಾಲ ಹಾಕಿದರೆ ಅದು ದೇಹಕ್ಕೆ ಹಾನಿ ಮಾಡುತ್ತದೆ.
ಇನ್ನು ತುಂಬಾ ಬಿಗಿಯಾದ ಫಿಟ್ ಜೀನ್ಸ್ ಪುರುಷರಲ್ಲಿ ಕ್ಯಾನ್ಸರ್ ಗೆ ಕಾರಣವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ತುಂಬಾ ಬಿಗಿಯಾದ ಬಟ್ಟೆಗಳನ್ನು ಗಂಟೆಗಳ ಕಾಲ ಧರಿಸಿದರೆ ಅದು ದೇಹಕ್ಕೆ ಹಾನಿ ಮಾಡುತ್ತದೆ. ಆ ಪ್ರದೇಶದಲ್ಲಿ ಆಮ್ಲಜನಕದ ಹರಿವಿಗೆ ತೊಂದರೆಯಾಗಬಹುದು.
ಸೀರೆ ಕ್ಯಾನ್ಸರ್ನ ಲಕ್ಷಣಗಳು:
ಸೀರೆ ಕ್ಯಾನ್ಸರ್ನ ಪ್ರಮುಖ ಲಕ್ಷಣಗಳೆಂದರೆ, ಸೊಂಟದ ಸುತ್ತಲೂ ತುರಿಕೆ ಉಂಟಾಗಿ ಕಿರಿಕಿರಿ ಇರುತ್ತದೆ. ಈ ಸಮಸ್ಯೆ ಕಾಣಿಸಿದ ವ್ಯಕ್ತಿಯ ಸೊಂಟದ ಬಳಿ ವಾಸಿಯಾಗದ ಗಾಯಗಳು ಆಗಬಹುದು. ಈ ಗಾಯದಿಂದ ಕೆಟ್ಟ ವಾಸನೆ ಬರುತ್ತದೆ. ಹೆಸರೇ ಸೂಚಿಸುವಂತೆ, ಸೀರೆಯೇ ಈ ‘ಸೀರೆ ಕ್ಯಾನ್ಸರ್’ಗೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಈ ಸೀರೆ ಕ್ಯಾನ್ಸರ್ ಮಾರಣಾಂತಿಕ ರೂಪವನ್ನು ಪಡೆಯುತ್ತಿದ್ದು, ಅನೇಕ ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಸೀರೆಯನ್ನು ತುಂಬಾ ಸಲ ಬಳಸಿ, ಅದನ್ನು ಒಗೆಯದೇ ಇರುವುದರಿಂದ, ಇಲ್ಲವಾದರೆ ತುಂಬಾ ಗಂಟೆಗಳ ಕಾಲ ಹಾಕುವುದರಿಂದ ಸೀರೆ ಕ್ಯಾನ್ಸರ್ ಬರಬಹುದು.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ಒಪ್ಪಂದ ಮಾಡಿಕೊಂಡ ನಿಶಾ ಅಂಬಾನಿ..! ಏನು ಗೊತ್ತಾ?
(more…)
- LATEST NEWS6 days ago
‘ಬಿಗ್ ಬಾಸ್’ ಮತ್ತೆ ಆರಂಭ.. ಇಲ್ಲಿದೆ ಸ್ಪರ್ಧಿಗಳ ಲಿಸ್ಟ್..!
- DAKSHINA KANNADA6 days ago
ಬತ್ತೇರಿ ಹೆಸರು ‘ಗಣಪತಿ ವೆಟ್ಟಂ’… ಟೀಕೆಗೆ ಗುರಿಯಾದ ಸುರೇಂದ್ರನ್ ಹೇಳಿಕೆ.
- LATEST NEWS6 days ago
ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೂಪರ್ ಹಿಟ್ ಧಾರಾವಾಹಿ ‘ಕೃಷ್ಣ ರುಕ್ಮಿಣಿ’ ನಟಿ
- chikkamagaluru5 days ago
ರಾಜ್ಯದ ಹಲವೆಡೆ ಮಳೆಯ ಸಿಂಚನ.. ಸಿಡಿಲಿನ ಅಬ್ಬರಕ್ಕೆ ಇಬ್ಬರ ಬ*ಲಿ..!!