Connect with us

DAKSHINA KANNADA

ಮಂಗಳೂರು ಉದ್ಯಮಿಗೆ ಭೂ*ಗತ ಪಾ*ತಕಿಯಿಂದ ಬೆ*ದರಿಕೆ ಕರೆ!

Published

on

ಮಂಗಳೂರು : ಹಲವು ವರ್ಷಗಳ ಸದ್ದಡಗಿದ್ದ ಭೂಗತ ಲೋಕದ ಸದ್ದು ಮಂಗಳೂರಿನಲ್ಲಿ ಮತ್ತೆ ಕೇಳಿಸಿದೆ. ವಿದೇಶದಲ್ಲಿ ಕುಳಿತು ಮಂಗಳೂರಿನ ಉದ್ಯಮಿಗೆ ಹಫ್ತಾ ನೀಡುವಂತೆ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಈ ಹಿಂದೆ ಮಂಗಳೂರು ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ಅಪರಾಧ ಪ್ರಕರಣಗಳ ಹಿಂದೆ ಇದ್ದ ಕಲಿ ಯೋಗೀಶ ಮತ್ತೆ ಫೀಲ್ಡ್‌ಗೆ ಇಳಿದಿದ್ದಾನೆ ಎಂಬ ಅನುಮಾನ ಮೂಡಿದೆ.

ರವಿ ಪೂಜಾರಿ, ಬನ್ನಂಜೆ ರಾಜ ಮೊದಲಾದ ಪಾ*ತಕಿಗಳ ಬಂಧನದ ಬಳಿಕ ಬಹುತೇಕ ಎಲ್ಲಾ ಭೂ*ಗತ ಪಾ*ತಕಿಗಳ ಸದ್ದು ಅಡಗಿ ಹೋಗಿತ್ತು. ಹೀಗಾಗಿ ಒಂದಷ್ಟು ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ತಮ್ಮ ವ್ಯವಹಾರ ನಡೆಸ್ತಾ ಇದ್ರು. ಆದ್ರೆ ಈಗ ಬಜಪೆಯ ಉದ್ಯಮಿ ರೊನಾಲ್ಡ್ ಎಂಬವರಿಗೆ ಕಲಿ ಯೋಗೀಶನ ಹೆಸರಿನಲ್ಲಿ  ಫೋನ್ ಮಾಡಿ ಬೆ*ದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ : ಗೀಸರ್ ರಿಪೇರಿಗಂತ ಬಂದ ರಹಸ್ಯ ಕ್ಯಾಮರಾ ಇಟ್ಟ…ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ಸಿಕ್ಕಿ ಬಿದ್ದಿದ್ಹೇಗೆ?

ಜನವರಿ 17 ರಂದು ಈ ಕರೆ ಬಂದಿದ್ದು 3 ಕೋಟಿ ನೀಡಬೇಕು, ಇಲ್ಲವಾದಲ್ಲಿ ಮನೆಯವರೆಲ್ಲರನ್ನೂ ಕೊ*ಲ್ಲುವುದಾಗಿ ಬೆ*ದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

 

 

DAKSHINA KANNADA

ಎಜೆ ಆಸ್ಪತ್ರೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆ; ಮೊಣಕಾಲು, ಸೊಂಟದ ಶಸ್ತ್ರ ಚಿಕಿತ್ಸೆಗೆ ರೋಬೋಟ್ ಬಳಕೆ

Published

on

ಮಂಗಳೂರು : ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪಿಸಿರುವ ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಯುಎಸ್‌ ಎಯಲ್ಲಿ ಅಭಿವೃದ್ದಿ ಪಡಿಸಲಾದ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ ಮೆಂಟ್ ಟೆಕ್ನಾಲಜಿಯನ್ನು ಮಂಗಳೂರಿಗೆ ಪರಿಚಯಿಸಿದೆ. ಸ್ಮಿತ್ ಪ್ಲಸ್ ನೆವ್ಯೂದವರು ಅಭಿವೃದ್ದಿ ಪಡಿಸಿರುವ ಈ ಸುಧಾರಿತ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಡಾ. ಎ.ಜೆ.ಶೆಟ್ಟಿ ಅವರು ಉದ್ಘಾಟಿಸಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಹೇಳಿದ್ದಾರೆ.

ಈ ವ್ಯವಸ್ಥೆಯ ಮೂಲಕ ರೋಗಿಗಳಿಗೆ ಉತ್ತಮ ಶಸ್ತ್ರ ಚಿಕಿತ್ಸಾ ಫಲಿತಾಂಶ ಹಾಗೂ ವೇಗವಾಗಿ ಚೇತರಿಕೆಗೆ ದಾರಿ ಮಾಡಿಕೊಡುತ್ತದೆ. ಈ ಹಿಂದೆಯೂ ಹಲವು ತಂತ್ರಜ್ಞಾನಗಳನ್ನು ಮೊದಲು ಮಂಗಳೂರಿಗೆ ಪರಿಚಯಿಸಿದ ಎಜೆ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಇದೀಗ ಪರಿಚಯಿಸಿರುವ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ತಂತ್ರಜ್ಞಾನ ಕೂಡ ಎಜೆ ಆಸ್ಪತ್ರೆಯ ಗರಿಮೆಯನ್ನು ಹೆಚ್ಚು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ; ಜ.29ಕ್ಕೆ 100ನೇ ಉಪಗ್ರಹ ಉಡಾವಣೆ

ಪತ್ರಿಕಾಗೋಷ್ಠಿಯಲ್ಲಿ ಡಾ.ಸುದೀಪ್ ಶೆಟ್ಟಿ, ಡಾ.ಮಯೂರ್ ರೈ, ಡಾ.ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು.

Continue Reading

DAKSHINA KANNADA

ದೈವದ ಮುನಿಸೇ ಈ ಗ್ರಾಮದಲ್ಲಿ ಜನರ ಸರಣಿ ಸಾವಿಗೆ ಕಾರಣವಾಯಿತಾ ?

Published

on

ಮಂಗಳೂರು : ದೈವದ ಶಾಪದಿಂದಾಗಿ ಸಾಲು ಸಾಲು ಅಕಾಲಿಕ ಸಾವು ಸಂಭವಿಸುತ್ತಿದೆ ಎಂದು ದೈವ ದೇವರುಗಳ ನಂಬಿಕೆಗೆ ಹೆಸರಾದ ದಕ್ಷಿಣಕನ್ನಡ ಜಿಲ್ಲೆಯ ಕುಂಪಲ ಗ್ರಾಮದಲ್ಲಿ ಆತಂಕ ಸೃಷ್ಠಿಯಾಗಿದೆ.

ಸುಮಾರು 50ಕ್ಕೂ ಹೆಚ್ಚು ಮಂದಿ 2019ರಿಂದ ವಯಸಲ್ಲದ ವಯಸ್ಸಿಗೆ ಅಪಮೃತ್ಯು ಹೊಂದಿದ್ದು, ಹೆಚ್ಚಿನ ಮಂದಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಅಪಘಾತ, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ ರೂಪದರ್ಶಿಯಾಗಿದ್ದ ಪ್ರೇಕ್ಷಾ ಎಂಬ ಯುವತಿ ನೇಣಿಗೆ ಕೊರಳೊಡ್ಡಿದ್ದರೆ, ಅಶ್ವಿನಿ ಬಂಗೇರ ಎಂಬ ಯುವತಿ ಗೃಹಪ್ರವೇಶವಾದ ಐದೇ ದಿನದಲ್ಲಿ ತನ್ನದೇ ನೂತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ದುರಂತ ಸಂಭವನೆಗೆ ಮೂಲ ಕಾರಣ ಏನು ?

ಸರಣಿ ಸಾವಿನಿಂದ ಭಯಭೀತರಾಗಿದ್ದ ಊರಿನ ಮಂದಿ ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದೈವಜ್ಞರ ಮೂಲಕ ಪ್ರಶ್ನಾ ಚಿಂತನೆಯನ್ನಿಟ್ಟಿದ್ದು, ಸರಣಿ ಸಾವಿಗೆ ದೈವದ ಮುನಿಸೇ ಕಾರಣ ಎಂಬ ಸುಳಿವು ಸಿಕ್ಕಿತು. ಇದರ ಜೊತೆ ಗ್ರಾಮದ ಜನರ ಅಕಾಲಿಕ ಮರಣಕ್ಕೆ ತಡೆ ನೀಡಲು ಮಹಾ ಮೃತ್ಯುಂಜಯ ಯಾಗ ನಡೆಸಬೇಕೆಂದು ಸೂಚನೆ ನೀಡಿದ್ದು, ಈ ಸಾವು ನೋವು ತಡೆಯಲು ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.

ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯ ಇರುವ ಬಗ್ಗೆ ಕುಂಪಲ ಗ್ರಾಮಸ್ಥರಿಗೆ ಸುಳಿವು ಸಿಕ್ಕಿತ್ತು. ಆದರೆ ಅದು ಪಾಳು ಬಿದ್ದು ದೈವಕ್ಕೆ ಕಾಲಾದಿಯಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು ನಿಂತಿರುವ ಬಗ್ಗೆ ಗೋಚರವಾಗಿದೆ. ಮೃತ್ಯು ಭಯವನ್ನು ಶಮನಗೊಳಿಸಲು ಮಹಾ ಮೃತ್ಯುಂಜಯ ಯಾಗ ಮಾಡಲಾಗುತ್ತದೆ. ಇದೀಗ ಕುಂಪಲ ಗ್ರಾಮದಲ್ಲಿಯು ಈ ಯಾಗ ನಡೆಸಲಾಗಿದ್ದು ಸಕರಾತ್ಮಕ ವಾತಾವರಣ ಸೃಷ್ಟಿಯಾಗಿದೆ ಎಂದು ಅಲ್ಲಿನವರು ಹೇಳುತ್ತಾರೆ. ಮುಂದಿನ ದಿನಗಳಲ್ಲಾದರೂ ಕುಂಪಲ ಗ್ರಾಮದಲ್ಲಿ ದುರ್ಘಟನೆಗಳು ನಿವಾರಣೆಯಾಗಿ ಮನೆ ಮನೆಯಲ್ಲಿ ನೆಮ್ಮದಿ ನೆಲೆಯೂರುವುದೋ ಎಂಬುವುದನ್ನು ನಿರೀಕ್ಷಿಸಬೇಕಷ್ಟೇ.

Continue Reading

DAKSHINA KANNADA

ತಡರಾತ್ರಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ; ಜಪ್ಪಿನಮೊಗರು ಬಳಿ ಹೊತ್ತಿ ಉರಿದ ಅಂಗಡಿ

Published

on

ಮಂಗಳೂರು : ಭಾನುವಾರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಜಪ್ಪಿನ ಮೊಗರು ಬಳಿಯ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಸಂಭವಿಸಿದೆ.

ಜಪ್ಪಿನ ಮೊಗರು ಬಳಿಯ ಗ್ಲಾಸ್ ಸೆಂಟರ್ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಇಡೀ ಅಂಗಡಿಯನ್ನು ಬಸ್ಮ ಮಾಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದು, ಅಗ್ನಿ ಶಾಮಕದಳಕ್ಕೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಡಲ್ಕೊರೆತ ತಡೆಗಾಗಿ ವಿಷ್ಣು ಸಹಸ್ರನಾಮ ಪಠಣ

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯುಟ್ ಕಾರಣ ಅಂತ ಹೇಳಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ.

ಅಗ್ನಿಯ ಕೆನ್ನಾಲಿಗೆ ಸುಟ್ಟು ಕರಕಲಾದ ಗ್ಲಾಸ್ ಸೆಂಟರ್‌ನಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

Continue Reading

LATEST NEWS

Trending

Exit mobile version