Sunday, November 27, 2022

ಮಂಗಳೂರು ಆಟೋ ರಿಕ್ಷಾ ಸ್ಫೋಟ ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್​ ಸೂದ್

ಮಂಗಳೂರಿನ ಗರೋಡಿ ಬಳಿ ನಡೆದ ಆಟೋ ರಿಕ್ಷಾ ಸ್ಫೋಟ ಪ್ರಕರಣ ಭಯೋತ್ಪದನಾ ಕೃತ್ಯ ಎಂದು ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರು ಖಚಿತಪಡಿಸಿಕೊಂಡಿದ್ದಾರೆ.

ಮಂಗಳೂರು: ಮಂಗಳೂರು ನಗರದ ಗರೋಡಿ ಬಳಿ ಶನಿವಾರ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟವು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿಯೇ ನಡೆದ ಭಯೋತ್ಪಾದಕ ಕೃತ್ಯ ಎಂದು ಡಿಜಿಪಿ ಪ್ರವೀಣ್​ ಸೂದ್​  ಖಚಿತ ಪಡಿಸಿದ್ದಾರೆ.

ಘಟನೆ ಬಗ್ಗೆ ಟ್ವೀಟ್​ ಮಾಡಿರುವ ಅವರು, ‘ಸ್ಫೋಟವು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿ ನಡೆದಿದೆ. ಗಂಭೀರ ಹಾನಿ ಉಂಟು ಮಾಡುವ ಉದ್ದೇಶದಿಂದ ಭಯೋತ್ಪಾದಕ ಕೃತ್ಯ ಎಸಗಲಾಗಿದೆ.

ಈ ನಿಟ್ಟಿನಲ್ಲಿ  ರಾಜ್ಯ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ನಿಖಟ ಸಂಪರ್ಕದಲ್ಲಿದ್ದು ಘಟನೆ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ ಎಂದು ಡಿಜಿಪಿ ಪ್ರವೀಣ್​ ಸೂದ್ ತಿಳಿಸಿದ್ದಾರೆ.

ಪ್ರಸ್ತುತ ಸ್ಪೋಟದಲ್ಲಿ ಗಾಯಗೊಂಡವರು ನಗರದ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬಿಗಿ ಭದ್ರತೆ ಒದಗಿಸಲಾಗಿದೆ.

ಇಂದು ಅಪರಾಹ್ನ ವೇಳೆಗೆ ಎನ್‌ ಐಎ  ತಂಡ, ಎಡಿಜಿಪಿ ಮಂಗಳೂರು ಆಗಮಿಸಲಿದ್ದು ಸ್ಫೋಟದ ಬಗ್ಗೆ ಆಳವಾದ ತನಿಖೆ ಕೈಗೊಳ್ಳಲಿದ್ದಾರೆ.

ಈ ಸ್ಫೋಟಕ ಎಲ್ಲಿ ತಯಾರಾಗಿತ್ತು ಮತ್ತು ಅದನ್ನು ಎಲ್ಲಿ ಸಾಗಿಸಲಾಗುತ್ತಿತ್ತು ಎಂಬುದನ್ನು ಪೊಲೀಸ್ ಅಧಿಕಾರಿಗಳು ಇನ್ನು ಬಹಿರಂಗ ಪಡಿಸಿಲ್ಲ.

ಶನಿವಾರ ರಾಜ್ಯದ ಮುಖ್ಯಮಂತ್ರಿಗಳ ಮಂಗಳೂರು ನಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಪರಾಹ್ನ ಬಳಿಕ ಬೆಂಗಳೂರಿಗೆ ಹಿಂದಿರುಗಿದ್ದರು.

ಇದಾದ ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದ್ದು ಆತಂಕ ಸೃಷ್ಟಿಸಿದೆ.

 

LEAVE A REPLY

Please enter your comment!
Please enter your name here

Hot Topics

ಸುಳ್ಯದಲ್ಲಿ ಪತ್ನಿಯನ್ನು ಕೊಂದು ಮೃತದೇಹವನ್ನು ಗೋಣಿಚೀಲದಲ್ಲಿಟ್ಟಿದ್ದ ಪಾಪಿ ಪತಿ ಪ.ಬಂಗಾಳದಲ್ಲಿ ಅರೆಸ್ಟ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೀರಮಂಗಲ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಗೋಣಿಚೀಲದೊಳಗೆ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಪಶ್ಚಿಮ ಬಂಗಾಲದಲ್ಲಿ ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ಇಬ್ರಾನ್ ಶೇಖ್...

ಬಾಂಬ್ ಸ್ಫೋಟ ಆರೋಪಿ ಶಾರೀಕ್‌ಗೆ ಆಸ್ಪತ್ರೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌-ಸ್ಪೋಟದ ಬೆನ್ನಲ್ಲೇ ಟ್ವೀಟ್‌ ಮಾಡಿದ ಝಾಕೀರ್‌…

ಮಂಗಳೂರು: ಮಂಗಳೂರಿನಲ್ಲಿ ರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಇದೀಗ ಶಾರೀಕ್‌ ಜೀವಕ್ಕೂ ಆಪತ್ತು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಪೊಲೀಸರು ಬಿಗು...

ಸುಳ್ಯ: ಸಚಿವ ಅಂಗಾರ ಅವರಿಗೆ ಡೆಂಗ್ಯೂ ದೃಢ-ಆಸ್ಪತ್ರೆಗೆ ದಾಖಲು

ಸುಳ್ಯ: ಶಾಸಕ, ಬಂದರು, ಮೀನುಗಾರಿಕೆ ಹಾಗೂ ಒಳ ನಾಡು ಜಲ ಸಾರಿಗೆ ಸಚಿವ ಎಸ್‌. ಅಂಗಾರ ಅವರಿಗೆ ಡೆಂಗ್ಯೂ ದೃಢಪಟ್ಟ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.  ಈ ಹಿನ್ನೆಲೆ ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿರುವುದಾಗಿ...