DAKSHINA KANNADA
ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ !!
Published
8 hours agoon
ಮಂಗಳೂರು : ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ನವೆಂಬರ್ 30ರಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಅಕ್ರಮ್ ವೈಖರ್ ಎನ್ನುವ ಇ-ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದ್ದು, ಟರ್ಮಿನಲ್‌ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಕೆ ಒಡ್ಡಲಾಗಿದೆ.
ನಿಲ್ದಾಣದ ಸಿಐಎಸ್‌ಎಫ್ ಸಿಬಂದಿ ಟರ್ಮಿನಲ್‌ನಲ್ಲಿ ಸೇರಿದಂತೆ ನಿಲ್ದಾಣದ ವಿವಿಧೆಡೆ ಶೋಧ ನಡೆಸಿದ್ದು, ಯಾವುದೇ ಬಾಂಬ್ ಸ್ಫೋಟಕಗಳು ಪತ್ತೆಯಾಗಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇ-ಮೇಲ್ ಸಂದೇಶದಲ್ಲಿ ತಮಿಳು ನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ ಕಿಂಗ್‌ಪಿನ್ ಎನ್ನಲಾದ ಜಾಫರ್ ಸಾದಿಕ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಪತ್ನಿ, ಚಿತ್ರ ನಿರ್ಮಾಪಕಿ ಕೃತಿಗಾ ಉದಯನಿಧಿ ಅವರ ಮೇಲಿರುವ ಪ್ರಕರಣವನ್ನು ವಾಪಸ್ ಪಡೆಯಬೇಕು.
ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿರುವ ಟಿಎನ್‌ಎಲ್‌ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್. ಮಾರನ್‌ನನ್ನು ಬಿಡುಗಡೆ ಮಾಡಬೇಕು ಎನ್ನುವ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ. ಇದೇ ರೀತಿಯ ಬೆದರಿಕೆ ಸಂದೇಶ ಕಳೆದ ಅ. 25ರಂದು ತಿರುಪತಿಯ ಮೂರು ಹೊಟೇಲ್‌ಗಳಿಗೆ ಬಂದಿತ್ತು. ಅದರಲ್ಲಿಯೂ ಜಾಫರ್ ಸಾದಿಕ್ ಮತ್ತು ಕೃತಿಕಾ ಉದಯನಿಧಿ ಹೆಸರು ಉಲ್ಲೇಖ ಆಗಿತ್ತು. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಈ ಕೃತ್ಯದಲ್ಲಿ ಅಲ್ಲಿನವರೇ ಇರುವ ಸಾಧ್ಯತೆಯಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಹಿಂದೆ ಹಲವು ಬಾರಿ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿವೆ.
ಮಂಗಳೂರು: ಎಂ.ಆರ್.ಪಿ.ಎಲ್ ಸುತ್ತಮುತ್ತದ ಸರಕಾರಿ ಶಾಲೆಗಳ ಗೋಡೆಗಳು ಇದೀಗ ಬಣ್ಣ ಬಣ್ಣದ ಚಿತ್ತಾರದಿಂದ ಕಂಗೊಳಿಸುತಿದೆ. ಎಂ.ಆರ್.ಪಿ.ಎಲ್ ತನ್ನ ಸಿ.ಎಸ್.ಆರ್. ಅನುದಾನದಲ್ಲಿ ಸರಕಾರಿ ಶಾಲೆಗಳ ಗೋಡೆಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆ ಯೋಚನೆ ರೂಪಿಸಿದೆ.
ಸರಕಾರಿ ಶಾಲೆಯ ಮಕ್ಕಳು ಪುಲ್ ಖುಷ್ ಆಗಿದ್ದಾರೆ. ಶಾಲೆಯ ಗೋಡೆಗಳಲ್ಲಿ ಭಾರತ, ದ.ಕನ್ನಡ ಹೀಗೆ ಬೇರೆ ಬೇರೆ ದೇಶ ಮತ್ತು ರಾಜ್ಯಗಳ ಚಿತ್ರಗಳು, ದಾಸವಾಳ, ಗುಲಾಬಿ ಇದರ ಬಗೆಗಿನ ವಿವರ, ಅನ್ನನಾಳ, ಜೀರ್ಣಕ್ರಿಯೆ ಹೇಗೆ ನಡೆಯುತ್ತದೆ, ಹೃದಯ, ಪಿತ್ತಜನಕಾಂಗ ಎಂಬ ಬಗೆಗಿನ ಸವಿವರವಾರ ಮಾಹಿತಿ, ಬಾಳೆಗಿಡ, ಹಳ್ಳಿ ,ಗದ್ದೆ ಉಳುಮೆ ರೈತರ ದಿನಚರಿ, ನಾಡಿನ ಬೇರೆ ಬೇರೆ ಸಾಹಿತಿಗಳು, ವಿವಿಧ ರೇಖಾ ಚಿತ್ರಗಳು ಹೀಗೆ, ಶಾಲೆಯ ವಾತಾವರಣ ಈ ಗೋಡೆ ಬರಹಗಳಿಂದ ತುಂಬಿದೆ. ಹಿಂದಿನ ದಿನಗಳಲ್ಲಿ ಮಕ್ಕಳಿಗೆ ಈ ಎಲ್ಲಾ ವಿವರಣೆಗಳು ಸಿಗಬೇಕಾದರೆ ಪುಸ್ತಕವನ್ನು ತೆರೆಯುವ ಅಗತ್ಯತೆ ಇತ್ತು, ಆದರೆ ಇದೀಗ ಶಾಲೆಯ ಅಂಗಳಕ್ಕೆ ಬಂದಂತೆ ಶಿಕ್ಷಣಕ್ಕೆ ಸಂಬಂಧಿಸಿದ ಚಿತ್ರಗಳು ವಿದ್ಯಾರ್ಥಿಗಳನ್ನು ಶಾಲೆಗೆ ಬರ ಮಾಡುತ್ತದೆ. ಶಿಕ್ಷಕರು ಬೋರ್ಡಿನಲ್ಲಿ ಚಿತ್ರ ಬರೆದು, ವಿದ್ಯಾರ್ಥಿಗಳಿಗೆ ವಿವರಿಸುವ ಬದಲು, ಚಿತ್ರ ಬಳಿಯೇ ಎಲ್ಲವನ್ನು ವಿವರಿಸಬಹುದಾಗಿದೆ, ಚಿತ್ರಗಳು ಅತ್ಯಂತ ಸ್ಪಷ್ಟವಾಗಿದ್ದು, ವಿದ್ಯಾರ್ಥಿಗಳಿಗೆ ಅರ್ಥವಾಗುವ ನಿಟ್ಟಿನಲ್ಲಿ ಬೇರೆ ಬೇರೆ ಭಾಗಗಳಿಗೆ ಬೇರೆ ಬೇರೆ ಬಣ್ಣಗಳನ್ನು ಬಳಿಯಲಾಗಿದೆ. ಇದೀಗ ದೇಲಂತಬೆಟ್ಟು, ಚೇಳಾಯರು, ಕುತ್ತೆತ್ತೂರು, ಸೂರಿಂಜೆ ಮತ್ತಿತರ ಸರಕಾರಿ ಶಾಲೆಗಳ ಗೋಡೆಗಳಲ್ಲಿ ಇಂತಹ ಚಿತ್ರ ಬಿಡಿಸಲಾಗಿದ್ದು, ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಲಾಗಿದೆ.
ಎಂ.ಆರ್.ಪಿ.ಎಲ್ ನಿರಂತರ ಸಮಾಜಮುಖಿ ಚಟುವಟಿಕೆಗಳಿಂದ ತೊಡಗಿಕೊಂಡಿದ್ದು, ಶಿಕ್ಷಣ, ಆರೋಗ್ಯ, ನೈರ್ಮಲ್ಯ , ಮೂಲಭೂತ ಸೌಕರ್ಯ ಹೀಗೆ ನಾನಾ ವಿಷಗಳ ಬಗ್ಗೆ ಯೋಜನೆ ರೂಪಿಸಿ ಅದಕ್ಕೆ ಸಹಕಾರ ನೀಡುತ್ತಿದೆ, ಕಳೆದ ಹಲವು ವರ್ಷಗಳಲ್ಲಿ ಹಲವು ಕೋಟಿಗಳನ್ನು ಸಂಸ್ಥೆ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿದೆ. ಇದೀಗ ಕಲಿಕೆಗೆ ಪೂರಕವಾದ ಗೋಡೆ ಬರಹಗಳನ್ನು ಚಿತ್ರಿಸಿ ಸಂಸ್ಥೆ ಮತ್ತೊಮ್ಮೆ ಗಮನ ಸೆಳೆದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಮೂಲ ಉದ್ದೇಶದಿಂದ ಪಾಠಕ್ಕೆ ಸಂಬಂಧಪಟ್ಟ, ಚಿತ್ರಗಳನ್ನು ಗೋಡೆಯಲ್ಲಿ ಬಿಡಿಸಲಾಗಿದೆ, ಇದರಿಂದ ಮಕ್ಕಳ ಕಲಿಕೆಗೆ ತುಂಬಾ ಅನುಕೂಲವಾಗುತ್ತದೆ, ಎಂ ಆರ್ ಪಿ ಎಲ್ ಸಿ.ಎಸ್. ಅರ್. ಅನುದಾನದಿಂದ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
DAKSHINA KANNADA
ಹಿಂದೂ ಸಂಘಟನೆಯ ಪ್ರ*ತಿಭಟನೆಯಲ್ಲಿ ಪುಂಡಾಟ..! ಮಾಧ್ಯಮದವರ ಮೇಲೆ ಹ*ಲ್ಲೆ..!
Published
5 hours agoon
04/12/2024ಮಂಗಳೂರು : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜ*ನ್ಯ ಎಸೆಗಲಾಗುತ್ತದೆ ಎಂದು ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನಾ ಸಭೆ ನಡೆಸಲಾಗಿದೆ. ಈ ಪ್ರತಿಭಟನೆಯಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸಂಚಾರಕ್ಕೆ ದಾರಿ ಬಿಡಿ ಎಂದ ಪೊಲೀಸರ ಮೇಲೆ ದಬ್ಬಾ*ಳಿಕೆ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಇದನ್ನು ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಹಿಂದೂ ಕಾರ್ಯಕರ್ತರು ಹ*ಲ್ಲೆ ನಡೆಸಿ ಪುಂ*ಡಾಟ ತೋರಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಕಾರಣದಿಂದ ಅಲ್ಲಿ ದೊಂಬಿಗಳು ನಡೆದು ದೇಶದ ಪ್ರಧಾನಿ ಶೇಖ್ ಹಸಿನಾ ದೇಶದಿಂದ ಪಲಾಯನ ಮಾಡಿದ್ದಾರೆ. ಈ ನಡುವೆ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಹಿಂದೂಗಳ ಮೇಲೆ ದೌರ್ಜ*ನ್ಯ ನಡೆಯುತ್ತಿದೆ ಎಂದು ಭಾರತದಲ್ಲಿ ಆತಂಕ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆ ಇಸ್ಕಾನ್ ಮುಖ್ಯಸ್ಥ ಚಿನ್ಮಯ ಕೃಷ್ಣದಾಸ್ ನನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ರಾಷ್ಟ್ರಧ್ವಜದ ಮೇಲೆ ಇಸ್ಕಾನ್ ಧ್ವಜ ಹಾರಿಸಿದ್ದ ಆರೋಪವನ್ನು ಚಿನ್ಮಯ ಕೃಷ್ಣದಾಸ್ ಮೇಲೆ ಹೊರಿಸಲಾಗಿದೆ. ಈ ಬೆಳವಣಿಗೆಯ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆ ಮಾಡಿ ಎಂದು ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಕಾರ್ಯಕರ್ತರಿಂದ ಪುಂಡಾಟ..!
ಮಂಗಳೂರು ನಗರದ ಅಂಬೆಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮಾಡಿದ ಸಾವಿರಾರು ಜನರಿಂದ ಮುಂಜಾನೆಯೇ ಟ್ರಾಫಿಕ್ ಜಾಂ ಸಮಸ್ಯೆಯಿಂದ ಜನರು ತತ್ತರಿಸಿ ಹೋಗಿದ್ದರು. ಮೆರವಣಿಗೆಯ ಬಳಿಕ ಕ್ಲಾಕ್ ಟವರ್ ಬಳಿಯಲ್ಲಿ ವಾಹನಗಳು ಸಂಚಾರ ಮಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ವಾಹನ ಸಂಚಾರಕ್ಕೆ ಅನುವು ಮಾಡುವಂತೆ ಡಿಸಿಪಿ ಯವರೇ ಖುದ್ದಾಗಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು. ಆದ್ರೆ ಡಿಸಿಪಿಯ ಮಾತಿಗೂ ಕ್ಯಾರೇ ಅನ್ನದ ಕಾರ್ಯಕರ್ತರು ಪೊಲೀಸರ ನಿರಾಕರಣೆಯ ಬಳಿಕವೂ ರಸ್ತೆ ತಡೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದನ್ನು ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದ ಚಾನೆಲ್ಗಳ ಕ್ಯಾಮರಾಮೆನ್ ಗಳ ಮೇಲೆ ಹ*ಲ್ಲೆ ನಡೆಸಿ ಕ್ಯಾಮರಾ ಪುಡಿ ಮಾಡಲು ಯತ್ನಿಸಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಮಧ್ಯಪ್ರವೇಶದಿಂದ ಪ್ರಕರಣ ತಿಳಿಯಾಯ್ತಾದ್ರೂ , ಎಲ್ಲಾ ಮಾಧ್ಯಮದವರು ಪ್ರತಿಭಟನಾ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದಿದ್ದಾರೆ.
ಹಿಂದೂ ಸಂಘಟನೆಗಳ ಮೇಲೆ ಕೇ*ಸ್ ದಾಖಲಿಸಲು ಆಗ್ರಹ…!
ಪ್ಯಾಲಿಸ್ತಿನ್ ನಲ್ಲಿ ನಡೆಯುತ್ತಿರುವ ದೌರ್ಜ*ನ್ಯ ವಿರೋಧಿಸಿ ನಡೆಸಲಾದ ಪ್ರತಿಭಟನೆಗೆ ಪ್ರತಿಭಟನಾಕಾರರ ಮೇಲೆ ಕೇಸ್ ದಾಖಲಿಸಲಾಗಿದೆ. ಹೆದ್ದಾರಿ ದುರಸ್ಥಿತಿಗೆ ಆಗ್ರಹಿಸಿ ನಡೆದ ಪ್ರತಿಭಟನೆಗೂ ಪ್ರತಿಭಟನಾಕಾರರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆದ್ರೆ, ಈ ಎರಡೂ ಪ್ರತಿಭಟನೆಯಲ್ಲೂ ಯಾವುದೇ ರೀತಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸುವ ಕೆಲಸವಾಗಲಿ, ಪ್ರತಿಭಟನಾ ನಿರತರು ಪುಂಡಾಟ ನಡೆಸಿದ ಘಟನೆಗಳು ನಡೆದಿಲ್ಲ. ಆದ್ರೆ ಇದೀಗ ಬಾಂಗ್ಲಾದೇಶದಲ್ಲಿನ ಆಂತರಿಕ ವಿಚಾರದಲ್ಲಿ ಅಲ್ಲಿನ ಹಿಂದೂಗಳಿಗೆ ದೌರ್ಜ*ನ್ಯವಾಗುತ್ತಿದೆ ಎಂದು ಮಂಗಳೂರಿನಲ್ಲಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ ಪ್ರತಿಭಟನೆ ನಡೆದಿದೆ. ಅಷ್ಟೇ ಅಲ್ಲದೆ, ಕಾರ್ಯರ್ತರು ಮಾಧ್ಯಮದವರ ಮೇಲೆ ಹ*ಲ್ಲೆ ನಡೆಸುವಂತ ಕೃ*ತ್ಯ ನಡೆಸಿದ್ದಾರೆ. ಹೀಗಿರುವಾಗ ಈ ಪ್ರತಿಭಟನೆಯನ್ನು ಆಯೋಜಿಸಿದ ಹಾಗೂ ಇದರ ನೇತೃತ್ವ ವಹಿಸಿದವರ ಮೇಲೂ ಕೇಸ್ ದಾಖಲಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
DAKSHINA KANNADA
ಉಳ್ಳಾಲ: ಯುಐ ಚಿತ್ರದ ಯಶಸ್ಸಿಗೆ ಕೊರಗಜ್ಜನಿಗೆ ಅಡ್ಡಬಿದ್ದ ಉಪೇಂದ್ರ
Published
6 hours agoon
04/12/2024ಉಳ್ಳಾಲ: ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರವು ಪ್ರಕೃತಿಗೆ ಹತ್ತಿರವಾಗಿದ್ದು, ದೈವದ ಹೆಸರಲ್ಲಿ ಇಲ್ಲಿ ಪೃಕೃತಿಯ ಆರಾಧನೆಯಾಗುತ್ತಿದೆ ಎಂದು ಸ್ಯಾಂಡಲ್ ವುಡ್‌ನ ರಿಯಲ್ ಸ್ಟಾರ್ ನಟ , ನಿರ್ದೇಶಕ ಉಪೇಂದ್ರ ಹೇಳಿದರು.
ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಮಂಗಳವಾರದಂದು ಅವರು ಭೇಟಿ ನೀಡಿ ಡಿಸೆಂಬರ್ 20 ರಂದು ತೆರೆ ಕಾಣಲಿರುವ ತನ್ನದೇ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯ ಸಿನೆಮಾ ಯುಐ ಸಿನೆಮಾದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.
ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಬಂದಿದ್ದೇವೆ. ಕುತ್ತಾರಿನ ಕೊರಗಜ್ಜ ದೈವದ ಕ್ಷೇತ್ರವು ಪ್ರಕೃತಿ ರಮಣೀಯವಾಗಿದೆ. ಕೊರಗಜ್ಜನ ದಯೆಯು ನಮ್ಮ ಮೇಲಿರಲಿ ಎಂದರು. ಚಿತ್ರದ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್, ಲಹರಿ ವೇಲು, ನವೀನ್ ಮನೋಹರ್ , ರಾಜೇಶ್ ಭಟ್ ಮೊದಲಾದವರಿದ್ದರು. ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ನಟ ಉಪೇಂದ್ರ ಅವರನ್ನು ಕ್ಷೇತ್ರದ ಪರವಾಗಿ ಅಭಿನಂದಿಸಿದರು.
LATEST NEWS
ಎಂ.ಆರ್.ಪಿ.ಎಲ್ ನಿಂದ ಶಿಕ್ಷಣಕ್ಕೆ ಪೂರಕ ಗೋಡೆ ಬರಹ…!!
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ನಾಳೆ ಪ್ರಮಾಣ ವಚನ ಸ್ವೀಕಾರ
12ನೇ ತರಗತಿ ವಿದ್ಯಾರ್ಥಿಯಿಂದ ಮನುಷ್ಯರನ್ನೇ ಹೊತ್ತೊಯ್ಯುವ ಡ್ರೋನ್ ಆವಿಷ್ಕಾರ !!
ಭಟ್ರಕುಮೇರು : ಡಿ.8 ರಂದು ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ
16 ವರ್ಷದ ಬಾಲಕನನ್ನು ಮದುವೆಯಾದ ಶಿಕ್ಷಕಿ !
ಉಳ್ಳಾಲ: ಯುಐ ಚಿತ್ರದ ಯಶಸ್ಸಿಗೆ ಕೊರಗಜ್ಜನಿಗೆ ಅಡ್ಡಬಿದ್ದ ಉಪೇಂದ್ರ
Trending
- BANTWAL6 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM5 days ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru7 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS6 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !