ಮಂಗಳೂರು: ಕನ್ನಡ ಚಲನಚಿತ್ರ ನಟಿ ಮಾಲಾಶ್ರೀ ಅವರು ಮೇ.19ರಂದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕನ್ನಡ ಚಿತ್ರರಂಗದಲ್ಲಿ ನಾಯಕಿ ಪಾತ್ರದಲ್ಲಿ ಹೆಸರುವಾಸಿಯಾಗಿರುವ ನಟಿ ಮಾಲಾಶ್ರೀ ಹಾಗೂ ಅವರ ಮಗ, ಮಗಳು, ತಾಯಿ ಜೊತೆಗೆ ಕುಟುಂಬ ಸಮೇತರಾಗಿ ಕರಾವಳಿಯ ದೈವ ದೇವರ ಮೊರೆ ಹೋಗಿದ್ದಾರೆ.
ಕೊರಗಜ್ಜನ ಕಟ್ಟೆಗೆ ತೆರಳಿ ಅವರ ಮೂಲ ತರವಾಡು ಮನೆ ಮಾಗಣೆದಡಿ ಗುತ್ತಿಗೆ ಹೋಗಿದ್ದರು. ಅದೇ ದಿನ ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.