Connect with us

  DAKSHINA KANNADA

  ಮಂಗಳೂರು 2ನೇ ಹಂತದ ಗ್ರಾಪಂ ಚುನಾವಣೆ; ಅಂತಿಮ ಕಣದಲ್ಲಿ  3,421ಅಭ್ಯರ್ಥಿಗಳು..!

  Published

  on

  ಮಂಗಳೂರು 2ನೇ ಹಂತದ ಗ್ರಾಪಂ ಚುನಾವಣೆ; ಅಂತಿಮ ಕಣದಲ್ಲಿ  3,421ಅಭ್ಯರ್ಥಿಗಳು..!

  ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ದಿನಾಂಕ  ಸಮೀಸುತಿದ್ದಂತೆ ಅತ್ತ ಭರದ ಪ್ರಚಾರ ಮುಂದುವರೆದಿದೆ. ಕರಾವಳಿ ಜಿಲ್ಲೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಟೆಯ ಕಣವಾಗಿ ಬಿಟ್ಟಿದೆ.

  ದ.ಕ.ಜಿಲ್ಲೆಯ 106 ಗ್ರಾಪಂಗಳ 1,631 ಸ್ಥಾನಗಳಿಗೆ ಮೊದಲ ಹಂತದಲ್ಲಿ ಡಿ.22ರಂದು ಚುನಾವಣೆ ನಡೆಯಲಿದ್ದು, 3,854 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

  ಮಂಗಳೂರು ತಾಲೂಕಿನ 37, ಮೂಡಬಿದಿರೆಯ 12, ಬಂಟ್ವಾಳದ 57 ಗ್ರಾಪಂನ 1,681 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ 50 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾದ ಕಾರಣ 1,631 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

  ಮತದಾನವು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ.ಅನುಸೂಚಿತ ಜಾತಿಯ 238, ಅನುಸೂಚಿತ ಪಂಗಡದ 215 ಹಾಗೂ ಹಿಂದುಳಿದ ‘ಅ’ ವರ್ಗದ 958, ಹಿಂದುಳಿದ ‘ಬಿ’ ವರ್ಗದ 226, ಸಾಮಾನ್ಯ 2,217 ಸಹಿತ ಒಟ್ಟು 3,854 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

  ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಮಂಗಳೂರಿನ 322, ಮೂಡುಬಿದಿರೆಯ 99, ಬಂಟ್ವಾಳದ 396 ಸಹಿತ 817 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ 1350 ಮತಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ.

  ಮಂಗಳೂರಿನಲ್ಲಿ 1,03,783 ಪುರುಷರು ಮತ್ತು 1,10,103 ಮಹಿಳೆಯರು ಹಾಗೂ 10 ಇತರರ ಸಹಿತ 2,13,896 ಮಂದಿ ಮತ ಚಲಾಯಿಸಲಿದ್ದಾರೆ.

  ಮೂಡುಬಿದಿರೆಯಲ್ಲಿ 1,35,186 ಪುರುಷರು ಮತ್ತು 1,38,228 ಮಹಿಳೆಯರು ಹಾಗೂ 10 ಇತರರ ಸಹಿತ 2,73,424 ಮಂದಿ ಹಕ್ಕು ಚಲಾಯಿಸಲಿದ್ದಾರೆ.

  ಬಂಟ್ವಾಳದಲ್ಲಿ 99,518 ಪುರುಷರು ಮತ್ತು 99,854 ಮಹಿಳೆಯರ ಸಹಿತ 1,99,372 ಮಂದಿ ಮತ ಚಲಾಯಿಸಲಿದ್ದಾರೆ. ಈ ಮಧ್ಯೆ ಮಂಗಳೂರು ತಾಲೂಕಿನಲ್ಲಿ 28 ಮಂದಿ ಅವಿರೋಧ ಆಯ್ಕೆಯಾಗಿದ್ದು, 1,510 ಮಂದಿ ಕಣದಲ್ಲಿದ್ದಾರೆ.

  ಮೂಡುಬಿದಿರೆಯಲ್ಲಿ 7 ಮಂದಿ ಅವಿರೋಧ ಆಯ್ಕೆಯಾಗಿದ್ದು, 419 ಮಂದಿ ಕಣದಲ್ಲಿದ್ದಾರೆ. ಬಂಟ್ವಾಳದ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 1,925 ಮಂದಿ ಕಣದಲ್ಲಿದ್ದಾರೆ.

  DAKSHINA KANNADA

  ಗಾಳಿಗೆ ಹಾರಿದ ಶಾಲೆಯ ಹೆಂಚು..! ರಜಾ ದಿನವಾದ ಕಾರಣ ತಪ್ಪಿದ ಅನಾಹುತ..!

  Published

  on

  ಮಂಗಳೂರು ( ಕಡಬ ) : ಕಡಬ ತಾಲೂಕಿನಲ್ಲಿ ಭಾನುವಾರ ಮದ್ಯಾಹ್ನ ಜೋರಾಗಿ ಬೀಸಿದ ಗಾಳಿಗೆ ಶಾಲೆಯೊಂದರ ಹೆಂಚುಗಳು ಹಾರಿ ಹೋದ ಘಟನೆ ನಡೆದಿದೆ. ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಜಾ ದಿನವಾದ ಕಾರಣ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.


  ಭಾನುವಾರ ಜೋರಾದ ಗಾಳಿಯ ಜೊತೆ ಮಳೆ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಮದ್ಯಾಹ್ನದ ವೇಳೆಗೆ ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಜೋರಾದ ಗಾಳಿ ಬೀಸಿದೆ. ಇದರ ಪರಿಣಾಮವಾಗಿ ಬಲ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ಹಾರಿ ಹೋಗಿದೆ. ಒಂದಷ್ಟು ಹೆಂಚುಗಳು ಶಾಲೆಯ ಹೊರಾಂಗಣದಲ್ಲಿ ಬಿದ್ದಿದ್ದರೆ, ಇನ್ನೂ ಕೆಲವು ಹೆಂಚುಗಳು ಶಾಲೆಯ ಕೊಠಡಿಯ ಒಳಗೆ ಬಿದ್ದಿದೆ. ಶಾಲೆಗೆ ಬಹುತೇಕ ಎಲ್ಲಾ ಕೊಠಡಿಯ ಹೆಂಚುಗಳು ಗಾಳಿಗೆ ಹಾರಿ ಹೋಗಿದೆ. ಅದೃಷ್ಟವಶಾತ್ ಭಾನುವಾರವಾದ ಕಾರಣ ಶಾಲೆಯಲ್ಲಿ ಮಕ್ಕಳು ಇರದ ಕಾರಣ ಯಾವುದೇ ಅನಾಹುತ ನಡೆದಿಲ್ಲ.


  ಬೀಸಿದ ಗಾಳಿಗೆ ಶಾಲೆಯ ಹೆಂಚಿನ ಜೊತೆಗೆ ಗ್ರಾಮದ ಕೃಷಿಕರ ಅಡಿಕೆ ತೋಟಕ್ಕೂ ಹಾನಿಯಾಗಿದೆ. ಹಲವು ಅಡಿಕೆ ಮರಗಳು ತುಂಡಾಗಿ ಬಿದ್ದಿದ್ದು, ಕೆಲವೆಡೆ ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಕ್ಕೂ ಕೂಡಾ ಹಾನಿ ಸಂಭವಿಸಿದೆ.
  ಜುಲೈ 15 ಮತ್ತು 16 ರಂದು ಕೂಡಾ ಜೋರಾದ ಗಾಳಿಯ ಜೊತೆ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

  Continue Reading

  DAKSHINA KANNADA

  ನಾಳೆ, ನಾಡಿದ್ದು ದ.ಕ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

  Published

  on

  ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಇಂದು, ನಾಳೆ ಮತ್ತು ನಾಡಿದ್ದು(ಜು.15,16,17) ಈ ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಿದೆ.

  ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಹೆಚ್ಚಳ

  ಜುಲೈ 17 ರಿಂದ 19 ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ದಿನವಿಡೀ ಉತ್ತಮ ಮಳೆ ಬಂದಿದೆ. ಮಳೆಯ ಜತೆಗೆ ಬಲವಾದ ಗಾಳಿಯೂ ಬೀಸುತ್ತಿದೆ. ಸಮುದ್ರದಲ್ಲಿ ಅಬ್ಬರದ ಅಲೆಗಳು ಕಂಡು ಬರುತ್ತಿವೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಬೆಳಗ್ಗೆ ಬೀಸಿದ ಬಲವಾದ ಗಾಳಿಗೆ ಉಳ್ಳಾಲ ತಾಲೂಕಿನ ಕೋಟೆಕಾರು ಬಳಿ ಬೀರಿ- ಪ್ರವಾಸಿ ಬಂಗ್ಲೆ ಕ್ರಾಸ್‌ ಸರ್ವೀಸ್‌ ರಸ್ತೆಯಲ್ಲಿ ಭಾರೀ ಗಾತ್ರದ ಮೇ ಫ್ಲವರ್‌ ಮರವೊಂದು ಉರುಳಿ ಬಿದ್ದ ಘಟನೆ ಸಂಭವಿಸಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಬದಿ ನಿಲ್ಲಿಸಿದ್ದ ಎರಡು ಲಾರಿಗಳ ಮಧ್ಯೆಮರ ಬಿದ್ದ ಕಾರಣ ಅಪಾಯ ತಪ್ಪಿದೆ. ಅಲ್ಲದೆ ಇಂದು ಭಾನುವಾರ ಆಗಿದ್ದ ಕಾರಣ ಈ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರ ಕಡಿಮೆ ಇತ್ತು.

  Continue Reading

  DAKSHINA KANNADA

  ಎಂಎಸ್‌ಇಝೆಡ್‌ ನಲ್ಲಿರುವ ಮೀನು ಸಂಸ್ಕರಣಾ ಘಟಕದಲ್ಲಿ ಭಾರಿ ಅ*ಗ್ನಿ ಅವಘಡ

  Published

  on

  ಮಂಗಳೂರು : ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಮೀನು ಸಂಸ್ಕರಣಾ ಘಟಕದಲ್ಲಿ ಭಾರಿ ಅ*ಗ್ನಿ ಅನಾಹುತ ಸಂಭವಿಸಿದೆ. ಹೊತ್ತಿ ಉರಿದ ಘಟಕದಲ್ಲಿ ಭಾರಿ ಪ್ರಮಾಣದಲ್ಲಿ ಬೆಂ*ಕಿ ಕಾಣಿಸಿಕೊಂಡಿದ್ದು ದಟ್ಟ ಹೊಗೆ ಆಕಾಶದೆತ್ತರಕ್ಕೆ ಏರಿದೆ. ಘಟನೆ ಸ್ಥಳೀಯ ಜನರ ಗಮನಕ್ಕೆ ಬಂದ ತಕ್ಷಣ ಸಮೀಪದ ಗ್ರಾಮದ ಜನರು ಆತಂಕಗೊಂಡಿದ್ದಾರೆ.


  ಎಂಎಸ್‌ಇಝೆಡ್‌ ವ್ಯಾಪ್ತಿಯಲ್ಲಿ ಅನೇಕ ಕೆಮಿಕಲ್ ಫ್ಯಾಕ್ಟರಿ, ಪೆಟ್ರೋಲಿಯಂ ಉತ್ಪನ್ನಗಳ ಫ್ಯಾಕ್ಟರಿ ಇರುವುದು ಈ ಆತಂಕಕ್ಕೆ ಕಾರಣವಾಗಿದೆ. ಫ್ಯಾಕ್ಟರಿಯಲ್ಲಿ ಬೆಂ*ಕಿ ಅವಘ*ಡ ಸಂಭವಿಸಿದ ತಕ್ಷಣ ಅಲರ್ಟ್ ಆದ ಅ*ಗ್ನಿಶಾಮಕ ತಂಡ ಬೆಂ*ಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದೆ.

  ಇದನ್ನೂ ಓದಿ :  ಜಗತ್ತಿನ ದೊಡ್ಡಣ್ಣನಲ್ಲಿ ಹ*ತ್ಯೆಯಾದ ಅಧ್ಯಕ್ಷರುಗಳು ಇವರು..!

  ಎಂಎಸ್ಇಝೆಡ್‌, ಎಂಆರ್‌ಪಿಎಲ್ ಹಾಗೂ ಜಿಎಂಪಿಎಲ್‌ನ ಅ*ಗ್ನಿ ಶಾಮಕ ವಾಹನಗಳು ಫ್ಯಾಕ್ಟರಿಯಲ್ಲಿನ ಬೆಂ*ಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಎಸ್‌ಇಝೆಡ್‌ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಅ*ಗ್ನಿ ಅವಘಡಗಳು ನಡಿತಾ ಇದ್ರೂ ಇದೊಂದು ಭಾರಿ ಅ*ಗ್ನಿ ಅವಘ*ಡವಾಗಿದೆ. ಆದ್ರೆ ಈ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

  Continue Reading

  LATEST NEWS

  Trending