ಮಂಗಳೂರು: ಯಕ್ಷಗಾನ ಮೇಳಗಳ ಪ್ರದರ್ಶನ ಏರ್ಪಡಿಸುವ ಮೂಲಕ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ನಗರದ ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನ ಮುಂಭಾಗ ನಿನ್ನೆ ರಾತ್ರಿ ನಡೆದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿಯ ನೂತನ ರಂಗಸ್ಥಳ ಉದ್ಘಾಟನೆ ಮತ್ತು ಪ್ರಥಮ ಸೇವೆಯಾಟ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು, ಮೇಳದ ತಿರುಗಾಟ ಯಶಸ್ವಿಯಾಗಲಿ ಎಂದರು.
ಅತಿಥಿಯಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಮಾತನಾಡಿ, ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರ ನೇಮಕಾತಿ ಆದ ಬಳಿಕ ಮಂಗಳಾದೇವಿ ಸಹಿತ ಯಕ್ಷಗಾನ ಮೇಳಗಳಿಗೆ ಅಕಾಡೆಮಿಯಿಂದ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದರು.
ಮಂಗಳಾದೇವಿ ದೇವಸ್ಥಾನ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ನಟ ಅರವಿಂದ ಬೋಳಾರ್, ಹಿರಿಯ ಕಲಾವಿದರಾದ ಕೆ.ಎಚ್. ದಾಸಪ್ಪ ರೈ, ಶಿವರಾಮ ಜೋಗಿ ಬಿಸಿರೋಡು, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಅಶೋಕ ಶೆಟ್ಟಿ ಸರಪಾಡಿ ಶುಭ ಹಾರೈಸಿದರು.
ಮೇಳದ ವ್ಯವಸ್ಥಾಪಕ ಎಸ್.ಎ. ವರ್ಕಾಡಿ ಉಪಸ್ಥಿತರಿದ್ದರು.
ಮಂಗಳಾದೇವಿ ಮೇಳಕ್ಕೆ ದೇವರ ಪ್ರಭಾವಳಿ ನೀಡಿದ ಮೇಳದ ಕಲಾವಿದ ಸಚ್ಚಿದಾನಂದ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ತುಳು ಲಿಪಿಯಲ್ಲಿ ಬರೆದ ಶಶಿ ಆಚಾರ್ಯ ಕನ್ಯಾನ ಅವರನ್ನು ಗೌರವಿಸಲಾಯಿತು.
ಮೇಳದ ಸಂಚಾಲಕ ದಿನೇಶ್ ರೈ ಕಡಬ ಸ್ವಾಗತಿಸಿ, ವಂದಿಸಿದರು. ಶರಣ್ ಕೈಕಂಬ ನಿರೂಪಿಸಿದರು. ಆರಂಭದಲ್ಲಿ ಗೆಜ್ಜೆ ಮುಹೂರ್ತ ನೆರವೇರಿತು. ಬಳಿಕ ತುಳುವಿನಲ್ಲಿ ಪಾಂಡವಾಶ್ವಮೇಧ ಪ್ರಸಂಗ ಪ್ರದರ್ಶನಗೊಂಡಿತು.
ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಪ್ರಯತ್ನದಿಂದ ಸಂಸದ ನಳಿನ್ ಕುಮಾರ್ ಅವರ ಸಹಕಾರ,
ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕಲಾವಿದರನ್ನು ಅಸಂಘಟಿತ ವಲಯ ಎಂಬ ನೆಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಲಾಗುತ್ತಿದೆ.
ನೋಂದಣಿ ಮಾಡಿಕೊಂಡ ಕಲಾವಿದರಿಗೆ ಗುರುತುಚೀಟಿ, ಅಸಂಘಟಿತ ವಲಯದ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಎಲ್ಲ ಸಾಮಾಜಿಕ ಭದ್ರತಾ ಯೋಜನೆಗಳು ದೊರೆಯಲಿವೆ.
ಎಲ್ಲ ಕಲಾವಿದರು ಕಾರ್ಮಿಕ ಇಲಾಖೆ ನೋಂದಾಯಿಸಿಕೊಂಡು ಈ ಸೌಲಭ್ಯ ಪಡೆಯಬೇಕು ಎಂದು ದ.ಕ. ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಜಿಲ್ಲಾಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅಭಿಪ್ರಾಯಪಟ್ಟರು
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ತತ್‌ಕ್ಷಣ ಜಾರಿಗೆ ಬರುವಂತೆ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅವರನ್ನು ಹಿಂಪಡೆಯಲಾಗಿದೆ.
ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ರವಿಚಂದ್ರ ನಾಯಕ್ ಅವರನ್ನು ನೂತನ ಆಯುಕ್ತರಾಗಿ ಸರಕಾರ ನೇಮಕ ಮಾಡಿದೆ.
ಮಂಗಳೂರು : ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಜ. 20 ಮತ್ತು 21ರಂದು ಬಿಹಾರಕ್ಕೆ ತೆರಳಿದ್ದಾರೆ.
ಪಾಟ್ನಾದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಪೀಠಾಸೀನಾ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಲಿರುವ ಅವರು “ಸಂವಿಧಾನದ 75ನೇ ವಾರ್ಷಿಕೋತ್ಸವ: ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಸಂಸತ್ತು ಮತ್ತು ಶಾಸಕಾಂಗ ಸಂಸ್ಥೆಗಳ ಕೊಡುಗೆ” ಎಂಬ ವಿಷಯದಲ್ಲಿ ತಮ್ಮ ಅನಿಸಿಕೆಗಳನ್ನು ಮಂಡಿಸಲಿದ್ದಾರೆ.
ಮಂಗಳುರು/ಅಮರಾವತಿ: ಮಾಟಮಂತ್ರ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ 77 ವರ್ಷದ ಮಹಿಳೆಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ್ದು ಮಾತ್ರವಲ್ಲದೆ ಬಳಿಕ ಕಬ್ಬಿಣದ ರಾಡ್‌ನಿಂದ ಹೊಡೆದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಡಿಸೆಂಬರ್ 30ರಂದು ಈ ಘಟನೆ ನಡೆದಿದ್ದರೂ ಈ ತಿಂಗಳ ಆರಂಭದಲ್ಲಿ ಪೊಲೀಸ್ ದೂರು ದಾಖಲಾಗಿದ್ದು, ಶುಕ್ರವಾರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಚಿಕಲ್ದಾರಾ ತಾಲೂಕಿನ ರೆತ್ಯಾಖೇಡ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಡಿಸೆಂಬರ್ 30ರಂದು ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ನೆರೆಹೊರೆಯವರು ಆಕೆಯನ್ನು ಹಿಡಿದು ಆಕೆ ಮಾಟಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಕಟ್ಟಿಹಾಕಿದ್ದಾರೆ. ಬಳಿಕ, ಗ್ರಾಮಸ್ಥರು ಸಂತ್ರಸ್ತೆಯನ್ನು ಮರದ ಕೋಲಿನಿಂದ ಹೊಡೆದು, ಕಪಾಳಮೋಕ್ಷ ಮಾಡಿ ಥಳಿಸಿದ್ದಾರೆ. ಆಕೆಯ ಕೈ ಮತ್ತು ಕಾಲುಗಳ ಮೇಲೆ ಬಿಸಿ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಲಾಗಿದೆ. ಆ ಮಹಿಳೆಗೆ ಮೂತ್ರ ಕುಡಿಯಲು ಮತ್ತು ನಾಯಿಯ ಮಲ ಸೇವಿಸಲು ಒತ್ತಾಯಿಸಲಾಯಿತು. ನಂತರ ಆಕೆಯ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಯಿತು. ಕೆಲಸಕ್ಕೆ ಹೋಗಿದ್ದ ಆ ಮಹಿಳೆಯ ಮಗ ಮತ್ತು ಸೊಸೆ ಮನೆಗೆ ಬಂದಾಗ ಈ ವಿಷಯ ತಿಳಿದು ಅವರು ಜನವರಿ 5ರಂದು ಪೊಲೀಸರಿಗೆ ದೂರು ನೀಡಿದ್ದಾರೆ.