Monday, January 24, 2022

ಗಣಪತಿ ಸ್ತುತಿ ಜೊತೆ ಮಕ್ಕಳಿಗೆ ಪಾಠ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆದ ಮಾನಸಿ ಸುಧೀರ್ ಹೊಸ ಹಾಡು

ಉಡುಪಿ : ತಮ್ಮ ನಾಟಕೀಯ ಶೈಲಿಯ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಠಿಸಿರುವ ಕಲಾವಿದೆ, ಮಾನಸಿ ಸುಧೀರ್ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಅವರ ಮತ್ತೊಂದು ಅದ್ಬುತ ಹಾಡು ರಿಲೀಸ್ ಆಗಿದೆ.

ಕಥನ ಶೈಲಿಯ ಈ ಹಾಡು ಈಗ ಸಖತ್ ವೈರಲ್ ಆಗಿದೆ. ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳನ್ನು ಇಟ್ಟುಕೊಂಡು ಗಣೇಶ ಹಬ್ಬದ ಸಂಭ್ರಮವನ್ನು ವಿವರಿಸಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಮನಸ್ಸನ್ನೂ ಗೆದ್ದಿದೆ. ದಿವಂಗತ ಮುಂಡಾಜೆ ರಾಮಚಂದ್ರ ಭಟ್ ಅವರು ಆರೇಳು ದಶಕಗಳ ಹಿಂದೆ ಬರೆದ ಈ ಶಿಶುಗೀತೆ ಗೆ ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ಬಂದಿದೆ.


ಹಬ್ಬದ ಖುಷಿಯ ಜೊತೆಗೆ ಕನ್ನಡ ಪ್ರೀತಿಯನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳುವ ಈ ಹಾಡು ಅನೇಕರ ಮೆಚ್ಚುಗೆಗೂ ಪಾತ್ರವಾಗಿದೆ. ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿರುವುದರಿಂದ, ಈ ರೀತಿಯಲ್ಲೂ ಪಾಠ ಮಾಡಿ ಮಕ್ಕಳ ಮನ ಗೆಲ್ಲಬಹುದು ಅಂತ ಈ ವಿಡಿಯೋ ಸಾರಿ ಹೇಳುತ್ತಿದೆ.

Hot Topics

ಕೋಟ ಲಾಠಿ ಚಾರ್ಜ್ ಪ್ರಕರಣ: ಹುಸಿಯಾದ ಗೃಹಸಚಿವರ ಭರವಸೆ- ಮತ್ತೆ ಪ್ರತಿಭಟನೆಗೆ ನಿರ್ಧಾರ

ಕೋಟ: ಇಲ್ಲಿನ ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್‌ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕೆಲವರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಕಾಲೊನಿಗೆ ಭೇಟಿ ನೀಡಿದ್ದ ಗೃಹ ಸಚಿವರ ಭರವಸೆ ಅವರ ಹಿಂದೆಯೇ...

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...

ಕುಂಪಲ: ಪ್ರಯಾಣಿಕರನ್ನು ಇಳಿಸುವ ವೇಳೆ ಖಾಸಗಿ ಸಿಟಿ ಬಸ್‌ಗಳ ಢಿಕ್ಕಿ

ಮಂಗಳೂರು: ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸುವ ಸಂದರ್ಭ ಬಸ್‌ಗೆ ಮತ್ತೊಂದು ಬಸ್‌ ಢಿಕ್ಕಿ ಹೊಡೆದ ಘಟನೆ ಉಳ್ಳಾಲ ಕುಂಪಲದ ಬೈಪಾಸ್ ಬಸ್ಸು ತಂಗುದಾಣದಲ್ಲಿ ಇಂದು ನಡೆದಿದೆ.ಕುಂಪಲದಿಂದ ಮಂಗಳೂರು ಕಡೆಗೆ ಸಾಗುವ ಖಾಸಗಿ ಸಿಟಿ...