ಬೆಳ್ತಂಗಡಿ: ಕೆಲವು ತಿಂಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ ಘಟನೆ ಬೆಳ್ತಂಗಡಿಯ ಬೆಳಾಲುವಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬೆಳಾಲು ನಿವಾಸಿ ಹರೀಶ್ ಮಡಿವಾಳ (35) ಮೃತ ದುರ್ದೈವಿ.
ಕಳೆದ ಜನವರಿಯಲ್ಲಿ ಧರ್ಮಸ್ಥಳದಲ್ಲಿ ಬೈಕ್ ಮತ್ತು ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇವರು ಮಂಗಳೂರು ಮತ್ತು ಕೆಲವು ದಿನಗಳಿಂದ ಉಜಿರೆ ಎಸ್. ಡಿ. ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೌಕರರಾಗಿದ್ದ ಇವರು ಪತ್ನಿ, ಇಬ್ಬರು ಸಣ್ಣ ಮಕ್ಕಳು, ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.