ಮಂಗಳೂರು: ನವರಾತ್ರಿ ಸಂದರ್ಭದಲ್ಲಿ ಮನೆ ಮನೆಗೆ ಹೆಣ್ಣು ವೇಷ ಧರಿಸಿ ಹೋಗುತ್ತಿದ್ದ ವ್ಯಕ್ತಿಯೋರ್ವರ ಮೃತದೇಹ ಮಂಗಳೂರಿನ ಕೊಂಚಾಡಿಯಲ್ಲಿ ಕುತ್ತಿಗೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೊಲೀಸರು ಇದನ್ನು ಕೊಲೆಯೆಂದು ಶಂಕಿಸಿದ್ದು ಜಯಾನಂದ (65) ಎಂದು ಗುರುತ್ತಿಸಲಾಗಿದೆ.
ಸ್ಥಳೀಯರು ನೀಡಿದ ದೂರಿನಂತೆ ಹರಿಪದವು ಕಿಯೋನಿಕ್ಸ್ ಗೆ ಸಂಬಂದಪಟ್ಟ ಖಾಲಿ ಜಾಗಕ್ಕೆ ಬಂದು ನೋಡಿದಾಗ ಜಯಾನಂದ ರವರನ್ನು ಯಾರೋ ಕುತ್ತಿಗೆಗೆ ಪ್ಲಾಸ್ಟಿಕ್ ಕೆಂಪು ದಾರದಿಂದ ಬಲವಾಗಿ ಬಿಗಿದು ಕೊಲೆ ಮಾಡಿರುವಂತೆ ಕಂಡುಬಂದಿದ್ದು, ಮುಖದ ತುಂಬಾ ಇರುವೆಗಳು, ನೋಣಗಳು ಮುತ್ತಿಕೊಂಡಿತ್ತು.
ಜಯಾನಂದ ವಿಪರೀತವಾದ ಆಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದರು.
ನಿನ್ನೆ ಯಾರೋ ಅಪರಿಚಿತರ ಮಧ್ಯೆ ಯಾವುದೋ ಕಾರಣಕ್ಕೆ ಕಿರಿಕ್ ಆಗಿ ಜಯಾನಂದರವರನ್ನು ಕುತ್ತಿಗೆಗೆ ಪ್ಲಾಸ್ಟಿಕ್ ಕೆಂಪುದಾರದಿಂದ ಬಿಗಿದು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕಾವೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.