ಸ್ವಿಮ್ಮಿಂಗ್ ಪೂಲ್ಗೆ ಬೀಳುವ ವೇಳೆ ಸನ್ನಿ ಲಿಯೋನ್ ಜೋರಾಗಿ ಕೂಗುತ್ತಾರೆ. ನಂತರ ಗಾಬರಿಗೆ ಒಳಗಾದ ಸನ್ನಿ, ಜೋರಾಗಿ ಆತನಿಗೆ ಬಯ್ಯುತ್ತಾರೆ. ಅಲ್ಲದೇ ಚಪ್ಪಲಿ ತೆಗೆದುಕೊಂಡು ಆತನ ಮೇಲೆ ಎಸೆಯುತ್ತಾರೆ.
ಮುಂಬೈ : ಬಾಲಿವುಡ್ ನಟಿ, ಸನ್ನಿ ಲಿಯೋನ್ ಹಾಗೆನೇ, ಸದಾ ಒಂದಲ್ಲ ಒಂದು ಸುದ್ದಿಯಾಲ್ಲಿರುತ್ತಾಳೆ ಮತ್ತು ತಮ್ಮ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಏನಾದರೂ ಕೊಡುತ್ತಲೇ ಇರುತ್ತಾರೆ.
ಅದರಂತೆ ಒಂದು ಗಂಟೆಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನ ಹಾಕಿದ್ದು, ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ.
ಅಂದ್ಹಾಗೆ ಈ ಘಟನೆ ಫನ್ನಿಯಾಗಿ ನಡೆದಿದೆ. ಸ್ವಿಮ್ಮಿಂಗ್ ಪೂಲ್ ಒಂದರ ಕಟ್ಟೆ ಮೇಲೆ ಸನ್ನಿ ಲಿಯೋನ್ ನಡೆದುಕೊಂಡು ಬರುತ್ತಿರುತ್ತಾರೆ.
ಓರ್ವ ಸಹಾಯಕ ಅವರಿಗೆ ಛತ್ರಿಯನ್ನ ಸೂಡಿಸಿ ಬಿಸಿಲು ತಾಗದಂತೆ ನೋಡಿಕೊಂಡು ಬರುತ್ತಾರೆ. ಹಿಂಬದಿಯಿಂದ ಬಂದ ಮತ್ತೋರ್ವ, ಸನ್ನಿಯನ್ನ ಸ್ವಿಮ್ಮಿಂಗ್ ಪೂಲ್ಗೆ ತಳ್ಳಿ ಮಜಾ ತೆಗೆದುಕೊಳ್ತಾರೆ.
ಸ್ವಿಮ್ಮಿಂಗ್ ಪೂಲ್ಗೆ ಬೀಳುವ ವೇಳೆ ಸನ್ನಿ ಲಿಯೋನ್ ಜೋರಾಗಿ ಕೂಗುತ್ತಾರೆ. ನಂತರ ಗಾಬರಿಗೆ ಒಳಗಾದ ಸನ್ನಿ, ಜೋರಾಗಿ ಆತನಿಗೆ ಬಯ್ಯುತ್ತಾರೆ. ಅಲ್ಲದೇ ಚಪ್ಪಲಿ ತೆಗೆದುಕೊಂಡು ಆತನ ಮೇಲೆ ಎಸೆಯುತ್ತಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.