ದೇವನಹಳ್ಳಿ: ಕೊಟ್ಟ ಸಾಲ ತೀರಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಕಿರಾತಕನೊಬ್ಬ ನಗ್ನಗೊಳಿಸಿ ಹಲ್ಲೆ ಮಾಡಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ.
ಕೆ.ಆರ್.ಪುರಂನ ಸತೀಶ್ ಹಲ್ಲೆಗೊಳಗಾದ ವ್ಯಕ್ತಿ. ಈತ ಮಂಜು ಅಲಿಯಾಸ್ ಪುಲಿ ಮಂಜು ಎಂಬುವವನ ಬಳಿ 2 ಲಕ್ಷ ಸಾಲ ಮಾಡಿದ್ದ.
ಸತೀಶ್ ಸಾಲ ವಾಪಸ್ ನೀಡದ ಕಾರಣ ಆತನನ್ನು ನಗ್ನಗೊಳಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿ ಡ್ಯಾನ್ಸ್ ಮಾಡಿಸಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ.
2 ತಿಂಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಸತೀಶ್‌ನ ಪತ್ನಿ ಘಟನೆ ಸಂಬಂಧ ಮೊದಲಿಗೆ ಕೆಆರ್ ಪುರಂ ಪೊಲೀಸರಿಗೆ ದೂರು ನೀಡಿದ್ದರು.
ನಂತರ ಆವಲಹಳ್ಳಿ ವ್ಯಾಪ್ತಿಯಲ್ಲಿ ಘಟನೆ ನಡೆದ ಕಾರಣ ಕೇಸ್ ಆವಲಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.
ಹಲ್ಲೆ ನಡೆಸಿದ ನಂತರ ಆರೋಪಿ ದಯಾಲು ಮಂಜು ಅಲಿಯಾಸ್ ಪುಲಿ ಮಂಜು ನಾಪತ್ತೆಯಾಗಿದ್ದಾನೆ.
ಆವಲಹಳ್ಳಿ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ಶುರು ಮಾಡಲಾಗಿದೆ.