Home ದೇಶ-ವಿದೇಶ ಜನರಿಗೆ ಚಮಕ್‌ ಕೊಡಲು ಹೋಗಿ ಜೈಲು ಸೇರಿದ…!?

ಜನರಿಗೆ ಚಮಕ್‌ ಕೊಡಲು ಹೋಗಿ ಜೈಲು ಸೇರಿದ…!?

ಜನರಿಗೆ ಚಮಕ್‌ ಕೊಡಲು ಹೋಗಿ ಜೈಲು ಸೇರಿದ…!?

ರಷ್ಯಾ: ರಷ್ಯಾದಲ್ಲಿ ತೋಡಿದ ಹಳ್ಳಕ್ಕೆ ತಾನೇ ಬಿದ್ದು ಒದ್ದಾಡಿದ ಘಟನೆಯೊಂದು ನಡೆದಿದೆ. ತನಗೆ ಕೊರೊನಾ ಸೋಂಕು ಇದೆ ಎಂದು ಹೇಳಿ ನಾಟಕವಾಡಿ ಜನರನ್ನು ಬಕ್ರ ಮಾಡಲು ಹೋಗಿ ತಾನೇ ಬಕ್ರ ಆಗಿದ್ದು, ಪೋಲಿಸರ ಅತಿಥಿಯಾಗಿದ್ದಾನೆ.

ಝಬೊರೊವ್ ಎಂಬಾತ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡೀಯೋವೊಂದನ್ನು ಪೋಸ್ಟ್‌ ಮಾಡಿದ್ದ. ವಿಡೀಯೋದಲ್ಲಿ, ಮಾಸ್ಕ್​ ಧರಿಸಿರುವ ಝಬೊರೊವ್ ಮೆಟ್ರೋ ರೈಲೊಂದರಲ್ಲಿ ಪ್ರಯಾಣಿಕರು ಬಳಿಗೆ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಾನೆ. ಬಳಿಕ ಕೆಳಗೆ ಬಿದ್ದ ಆತ ಒದ್ದಾಡಲು ಆರಂಭಿಸುತ್ತಾನೆ. ನಂತರ ಆತನ ಸ್ನೇಹಿತರು ಪ್ರಯಾಣಿಕರಲ್ಲಿ ಝಬೊರೊವ್‌ಗೆ ಕೊರೊನಾ ವೈರಸ್​ ಸೋಂಕು ಇದೆ ಎಂದು ಕೂಗಿ ಹೇಳುತ್ತಾರೆ. ಇದರಿಂದ ಭಯಗೊಳ್ಳುವ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಅಲ್ಲಿಂದ ಓಡಿದ್ದಾರೆ.

ಈ ವಿಡಿಯೋ ಇತ್ತೀಚಿನ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ವಿಡಿಯೋವನ್ನು ಫೆ.2ರಂದು ಝಬೊರೊವ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್​ ಮಾಡಿಕೊಂಡು ಇದೊಂದು ಜೋಕ್ಸ್​ ಅಥವಾ ಪ್ರ್ಯಾಂಕ್ ಎಂದು ಬರೆದುಕೊಂಡಿದ್ದ. ಸದ್ಯ ಅದನ್ನು ಈಗ ತೆಗೆದುಹಾಕಲಾಗಿದೆ. ಫೆಬ್ರವರಿ 8 ರಂದು ರಷ್ಯಾ ಪೊಲೀಸರು ಝಬೊರೊವ್ ಎಂಬಾತನನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ಭಯ ಉಂಟುಮಾಡಿದ ಹಿನ್ನೆಲೆಯಲ್ಲಿ ಆತನ ಮೇಲೆ ಗೂಂಡಾಗಿರಿ ಪ್ರಕರಣವನ್ನು ದಾಖಲಿಸಿದ್ದು, ಅದರನ್ವಯ ಝಬೊರೊವ್​ 5 ವರ್ಷ ರಷ್ಯಾ ಕಾರಾಗೃಹದಲ್ಲಿ ಕಂಬಿ ಎಣಿಸಬೇಕಾಗಿದೆ.

ಝಬೊರೊವ್ ಬಂಧನದ ಬಳಿಕ ಆತನ ಆಪ್ತರಿಬ್ಬರನ್ನು ರಷ್ಯಾ ಅಧಿಕಾರಿಗಳು ಪತ್ತೆಹಚ್ಚಿದ್ದು, ಅವರನ್ನು ರಷ್ಯಾ ತ್ಯಜಿಸುವಂತೆ ರಷ್ಯಾ ಸಚಿವಾಲಯ ಆದೇಶಿಸಿದೆ. ಕೊರೊನಾ ರೋಗದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಈ ರೀತಿ ಮಾಡಿರುವುದಾಗಿ ಝಬೊರೊವ್ ಪರ ವಕೀಲರು ವಾದಿಸಿದ್ದು, ಆತನ ಬಿಡುಗಡೆಗೆ ಯತ್ನಿಸುತ್ತಿದ್ದಾರೆ.

- Advertisment -

RECENT NEWS

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!!

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!! ಮಂಗಳೂರು /ಉಡುಪಿ/ಕಾಸರಗೋಡು : ಇಂದು ಕೂಡ ಕರಾವಳಿಯ ಜನತೆಗೆ ನಮ್ಮದಿಯ ಉಸಿರು ಬಿಟ್ಟಿದ್ದಾರೆ. ಕೋರೊನದ ವಿರುದ್ದದ ಜಿಲ್ಲಾಡಳಿತಗಳು, ಸರ್ಕಾರ, ಜನಪ್ರತಿನಿಧಿಗಳು ನಡೆಸುತ್ತಿರುವ ಸಮರಕ್ಕೆ...

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..! 

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..!  ಸುಳ್ಯ: ಕೇರಳ ಗಡಿ ದಾಟಲು ಯತ್ನಿಸಿ ವಿಫಲನಾದ ಯುವಕ ಕರ್ನಾಟಕ ಪೊಲೀಸರು ಮತ್ತು ವಾಹನದ ಮೇಲೆ ಕಲ್ಲು ತೂರಿದ...

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರೆಸ್ಟ್..!

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರಸ್ಟ್..! ಬಂಟ್ವಾಳ : ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ...

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ ಮಂಗಳೂರು: ಕೊರೋನ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ...