ಚಿಕ್ಕಮಗಳೂರು – ಅಡಿಕೆ ಕದಿಯಲು ಅಡಿಕೆ ಮರವನ್ನೆ ಕಡಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಸ್ಥಳೀಯರೆ ಹಿಡಿದು ಪೊಲೀಸ್ ರಿಗೆ ಒಪ್ಪಿಸಿದ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಆರೋಪಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಇತ 70 ಅಡಿಕೆ ಮರ ಕಡಿದು, 3500 ಕೆ.ಜಿ.ಗೂ ಅಧಿಕ ಹಸಿ ಅಡಿಕೆ ಕಳ್ಳತನ ಮಾಡಿದ್ದ ಎಂದು ಆರೋಪಿಸಲಾಗಿದೆ.
ಬಾಳೆಹೊನ್ನೂರಲ್ಲಿ ಹಲವು ದಿನಗಳಿಂದ ಅಡಿಕೆ ಕಳ್ಳತನ ನಡೆಯುತ್ತಿತ್ತು, ಹತ್ತಾರು ವರ್ಷಗಳಿಂದ ಬೆಳೆದ ಮರಗಳನ್ನ ನೆಲಕ್ಕುರುಳಿಸಿ ಕಳ್ಳತನ ಮಾಡಲಾಗುತ್ತಿತ್ತು. ಮರ ಧರೆಗುರುಳಿರುವುದನ್ನ ಕಂಡು ತೋಟದ ಮಾಲೀಕರು ಕಂಗಾಲಾಗಿದ್ದರು. ಬಾಳೆಹೊನ್ನೂರು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.