ಪುತ್ತೂರಿನಲ್ಲಿ ಜಿಂಕೆ ಕೊಂಬು ಸಾಗಿಸುತ್ತಿದ್ದ ಆರೋಪಿ ಬಂಧನ..!
ಪುತ್ತೂರು : ಪೊಲೀಸ್ ಅರಣ್ಯ ಸಂಚಾರಿ ದಳ ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಜಿಂಕೆ ಕೊಂಬು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸೂತ್ರಬೆಟ್ಟು ಸಮೀಪ ಮಾರುತಿ ಕಾರಿನಲ್ಲಿ ಜಿಂಕೆ ಕೊಂಬು ಸಾಗಾಟ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಕಬಕ ನಿವಾಸಿ ಶೇಖ್ ಅನ್ಸಾರ್ನನ್ನು ವಶಕ್ಕೆ ಪಡೆಯಲಾಗಿದೆ.
ಇನ್ನೋರ್ವ ಆರೋಪಿ ಸಾಮೆತ್ತಡ್ಕ ನಿವಾಸಿ ತಲೆಮರೆಸಿಕೊಂಡಿದ್ದಾರೆ.
ಜಿಂಕೆ ಕೊಂಬು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದು ಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಅರಣ್ಯ ಸಂಚಾರದಳ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ.