Connect with us

    DAKSHINA KANNADA

    ಮಳಲಿ ಮಸೀದಿ – ದೇಗುಲ ವಿವಾದ ಪ್ರಕರಣ : ಜೂನ್​ 14ಕ್ಕೆ ವಿಚಾರಣೆ ಮುಂದೂಡಿದ ಮಂಗಳೂರು ಕೋರ್ಟ್​​

    Published

    on

    ಮಂಗಳೂರು ನಗರದ ಹೊರಲವಯದ ಗಂಜಿಮಠ ಬಳಿಯ ಮಳಲಿ ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

    ಮಂಗಳೂರು:  ಮಂಗಳೂರು ನಗರದ ಹೊರಲವಯದ ಗಂಜಿಮಠ ಬಳಿಯ ಮಳಲಿ ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

    ಇತ್ತಂಡಗಳ ವಾದಗಳನ್ನು ಕೇಳಿದ ನ್ಯಾಯಾಧೀಶರು ಮತ್ತೆ ಜೂನ್​ 14ಕ್ಕೆ ಪ್ರಕರಣ ಮುಂದೂಡಿದರು.

    ಮಳಲಿಯ ಮಸೀದಿಯಲ್ಲಿ ‌ದೇಗುಲ ಶೈಲಿ ಪತ್ತೆ ವಿಚಾರದಲ್ಲಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರದ ಬಗ್ಗೆ ವಿಹೆಚ್​​ಪಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ತಿರಸ್ಕರಿಸುವಂತೆ ಮತ್ತು ಈ ವಿಚಾರವು ವಕ್ಫ್ ಕೋರ್ಟ್​ನ ವ್ಯಾಪ್ತಿಗೆ ಬರುವುದೆಂದು ಮಸೀದಿ ಆಡಳಿತ ಮಂಡಳಿ ವಾದ ಮಾಡುತ್ತಿದೆ.ನಿನ್ನೆ ವಿಹೆಚ್​ಪಿ ಪರ ವಕೀಲ ಚಿದಾನಂದ ಕೆದಿಲಾಯ ವಾದ ಮಾಡಿದ್ದು, ಇಂದು ಮಸೀದಿ ಆಡಳಿತ ಮಂಡಳಿಯ ಪರ ವಕೀಲ ಎಂ.ಪಿ.ಶೆಣೈ ವಾದ ಮಂಡಿಸಿದ್ದಾರೆ.

    ಮಳಲಿಯಲ್ಲಿ ಸರ್ಕಾರಿ ವಕ್ಫ್ ದಾಖಲೆ ಪ್ರಕಾರ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ. ಅದನ್ನು ಮಸೀದಿ ಅಂತ ಮತ್ತೆ ಸಾಬೀತಪಡಿಸುವ ಅಗತ್ಯ ಇರುವುದಿಲ್ಲ.

    ಮಸೀದಿ ಎಂದರೆ ವಕ್ಫ್ ಕಾನೂನಿನ ಪ್ರಕಾರ ಪ್ರಾರ್ಥನಾ ಸ್ಥಳವಾಗಿದ್ದು, ಅಂತಹ ಸ್ಥಳಗಳನ್ನು ನಿಯಮಗಳ ಪ್ರಕಾರ ವಕ್ಫ್ ಆಸ್ತಿ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

    ಒಂದು ಜಾಗವನ್ನು ಪುರಾತನ ಸ್ಮಾರಕ ಎಂದು ಹೇಳಲು ಕೇಂದ್ರ ಸರ್ಕಾರದಿಂದ ನೋಟಿಫಿಕೇಷನ್ ಆಗಬೇಕಾಗಿದೆ.

    ಆದರೆ ಮಳಲಿಯ ಮಸೀದಿ ಮೇಲೆ ಯಾವುದೇ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಹೀಗಿರುವಾಗ ಇದನ್ನು ಪುರಾತನ ಸ್ಮಾರಕವೆಂದು ಹೇಳಲು ಸಾಧ್ಯವಿಲ್ಲ.

    ಅಲ್ಲದೇ ಇದನ್ನು ಸ್ಮಾರಕವೋ ಅಲ್ಲವೋ ಎಂದು ಹೇಳಲು ಸಿವಿಲ್ ಕೋರ್ಟ್​​​ಗೆ ಅಧಿಕಾರವು ಇಲ್ಲ.

    ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಎಂ.ಪಿ ಶೆಣೈ ವಾದಿಸಿದರು.ಇದಕ್ಕೆ ಪ್ರತಿ ವಾದ ನಡೆಸಲು ವಿಹೆಚ್​ಪಿ ಪರ ವಕೀಲ ಚಿದಾನಂದ ಕೆದಿಲಾಯ ಕಾಲಾವಕಾಶ ಕೇಳಿದ್ದಾರೆ.

    ನ್ಯಾಯಾಲಯ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತು.

    DAKSHINA KANNADA

    ಮಂಗಳೂರು: ಬೆಳ್ಳಂಬೆಳಗ್ಗೆ ಏರ್‌ಪೋರ್ಟ್‌ ಪರಿಸರದಲ್ಲಿ ಪ್ರತ್ಯಕ್ಷವಾದ ಚಿರತೆ

    Published

    on

    ಮಂಗಳೂರು:  ಬಜಪೆ ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿರುವ ಘಟನೆ ಶುಕ್ರವಾರ(ನ.8) ಮುಂಜಾನೆ ಬೆಳಕಿಗೆ ಬಂದಿದೆ.

    ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತು ವೀಕ್ಷಕರು ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಅಧಿಕಾರಿಯೊಬ್ಬರು ಶುಕ್ರವಾರ ಮುಂಜಾನೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಚಿರತೆ ರಸ್ತೆ ದಾಟಿದೆ ಕೂಡಲೇ ಅಧಿಕಾರಿ ತನ್ನ ಮೊಬೈಲ್ ನಿಂದ ಚಿರತೆ ದೃಶ್ಯವನ್ನು ಸೆರೆ ಹಿಡಿದ್ದಿದ್ದಾರೆ,

    ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: ಜ.22ಕ್ಕೆ ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಲಾಯಾನದ ರಜತ ಸಂಭ್ರಮ

    Published

    on

    ಮಂಗಳೂರು: ಯಕ್ಷಬೊಳ್ಳಿ ಅಭಿಮಾನಿ ಬಳಗ ಮತ್ತು ಯಕ್ಷಾಭಿಮಾನಿಗಳು ಕಡಬ ನೇತೃತ್ವದಲ್ಲಿ ಯಕ್ಷಗಾನ ಹಾಸ್ಯ ಕಲಾವಿದ ಯಕ್ಷಬೊಳ್ಳಿ ಕಡಬ ದಿನೇಶ್ ರೈ ‘ಕಲಾ ಯಾನದ ರಜತ ಸಂಭ್ರಮ- ಬೊಳ್ಳಿ ಪರ್ಬ- 25’ ಕಾರ್ಯಕ್ರಮ ಜ.22ಕ್ಕೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಕ್ಷೇತ್ರದ ವಠಾರದಲ್ಲಿ ಆಯೋಜಿಸಲಾಗಿದೆ.

    ಬೆಳಗ್ಗೆ 8ರಿಂದ ಸಪ್ತಶತಿ ಪಾರಾಯಣ ಸಹಿತ ನವಚಂಡಿಕಾ ಯಾಗ, ಮಧ್ಯಾಹ್ನ 2ರಿಂದ ಬೊಳ್ಳಿ ಪರ್ಬ- 25 ಉದ್ಘಾಟನೆ- ಯಕ್ಷಬೊಳ್ಳಿ ಸಂಭ್ರಮಕ್ಕೆ ಚಾಲನೆ, ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೆ ಜಿಲ್ಲೆಯ ಪ್ರಸಿದ್ಧ ಹಿಮ್ಮೇಳ – ಮುಮ್ಮೇಳ ಕಲಾ – ವಿದರ ಕೂಡುವಿಕೆಯಲ್ಲಿ ಯಕ್ಷ ಹಾಸ್ಯ ವೈಭವ, ಸಂಜೆ 5.30 ರಿಂದ 7.30ರವರೆಗೆ ಸಭಾ ಕಾರ್ಯಕ್ರಮ ಗುರುವಂದನೆ, ಗೌರವಾರ್ಪಣೆ, ಸನ್ಮಾನ ನೆರವೇರಲಿದೆ. ರಾತ್ರಿ 7.30 ರಿಂದ 1.30 ರವರೆಗೆ ಶ್ರೀ ಗೆಜ್ಜೆಗಿರಿ ಮೇಳದವರಿಂದ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

    ಕಡಬ ದಿನೇಶ ರೈ ಕಲಾಸೇವೆ ವಿವರ :

    ಕಡಬ ದಿನೇಶ ರೈ ಪ್ರಾರಂಭದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿ, ಬಳಿಕ ಶ್ರೀ ಕ್ಷೇತ್ರ ಕಟೀಲು, ಪುತ್ತೂರು ಮೇಳ, ಕುಂಟಾರು ಮೇಳ, ಮಂಗಳಾದೇವಿ ಮೇಳ, ತೆಂಕು – ಬಡಗು ಸಮ್ಮಿಶ್ರಗೊಂಡ ಹಿರಿಯಡ್ಕಮೇಳ, ತಳಕಲ ಮೇಳ, ಸುಂಕದಕಟ್ಟೆ ಮೇಳ, ಬಾಚಕೆರೆ ಮೇಳ, ಪ್ರಸ್ತುತ ಗೆಜ್ಜೆಗಿರಿ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ.

    ರವಿ ಕುಮಾರ್ ಸುರತ್ಕಲ್ ರಚಿಸಿದ ನಾಗತಂಬಿಲದ ಕೂಸಮ್ಮ (ನಂಜುಂಡ)ನ ಪಾತ್ರ ಯಕ್ಷ ರಂಗದಲ್ಲಿ ಹೊಸ ತಿರುವು ತಂದು ಕೊಟ್ಟಿತ್ತು. ನಾಗರಪಂಚಮಿಯ ನೋಣಯ್ಯ, ವಜ್ರ ಕುಟುಂಬದ ಕಪಟ ಸ್ವಾಮೀಜಿ, ಪವಿತ್ರ ಪಲ್ಲವಿಯ ಪದ್ಮಾವತಿ, (ಪದ್ದು) ಚೆನ್ನಿ- ಚೆನ್ನಮ್ಮದ ಪುರುಷೋತ್ತಮ, ವಿಜಯಕೇಸರಿಯ ಮಾರುತಿ, ಜೀವನಚಕ್ರದ ನಿಷ್ಠಾವಂತ ಸೇವಕ, ಗುಳಿಗೋದ್ಭವ ಪಂಜುರ್ಲಿ – ಪ್ರತಾಪ ದ ಗೋಪಾಲ, ಹಾಗೂ ಚಂದ್ರ, ಮನ ಸೂರೆಗೊಂಡ ಪಾತ್ರಗಳು. ತೆಂಕು -ಬಡಗಿನಲ್ಲಿ ತುಳು – ಕನ್ನಡದಲ್ಲಿ ಪೌರಾ ಣಿಕ, ಸಾಮಾಜಿಕ, ಐತಿಹಾಸಿಕ ಯಾವುದೇ ಪ್ರಸಂಗವಾದರೂ ಕಥೆಗೆ ಲೋಪ ಬಾರದಂತೆ ತಮ್ಮದೇ ಶೈಲಿಯ ಹಾಸ್ಯದಲ್ಲಿ ಜನರನ್ನು ರಂಜಿಸುತ್ತಿದ್ದಾರೆ. ಯಕ್ಷಗಾನ ಮಾತ್ರವಲ್ಲದೆ ನಾಟಕ, ತುಳು ಸಿನೆಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

    ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಕಡಬ ದಿನೇಶ ರೈ ಗೆ ಇರುವೈಲು ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ‘ಯಕ್ಷ ಬೊಳ್ಳಿ’ ಎಂಬ ಬಿರುದು ನೀಡಿ ಗೌರವಿಸಿದೆ.

    Continue Reading

    DAKSHINA KANNADA

    ಉಳಾಯಿಬೆಟ್ಟು ಪರಾರಿ ಬಳಿ ಬಾಲಕಿ ಅ*ತ್ಯಾಚಾರ, ಕೊ*ಲೆ ಪ್ರಕರಣ: ಮೂವರಿಗೆ ಜೀವಾವಧಿ

    Published

    on

    ಮಂಗಳೂರು: ಶಾಲೆಗೆ ಹೋಗುವ ಬಾಲಕಿಯ ಮೇಲೆ ಅ*ತ್ಯಾಚಾರ ನಡೆಸಿ ಕೊ*ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಮೂವರು ಆರೋಪಿಗಳನ್ನು ಗುರುವಾರ(ನ.7) ಜೀವಾವಧಿ ಶಿಕ್ಷೆಗೆ ಒಳಪಡಿಸಿದೆ.

    2021ರಲ್ಲಿ ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿ ಬಳಿ ಎಂಟು ವರ್ಷದ ಬಾಲಕಿಯನ್ನು ಜಯಸಿಂಗ್, ಮುಕೇಶ್ ಸಿಂಗ್, ಮನೀಶ್ ತಿರ್ಕಿ ಮೂವರು ಆರೋಪಿಗಳು ಅ*ತ್ಯಾಚಾರವೆಸಗಿ ಹ*ತ್ಯೆಗೈದಿದ್ದರು. ಈ ಘಟನೆಗೆ ಸಂಬಂಧಿಸಿ ಪೋಕ್ಸೋ ಪ್ರಕರಣದಡಿ ಮೂವರನ್ನು ಬಂಧಿಸಲಾಗಿತ್ತು.

    ಪ್ರಕರಣದ ತನಿಖೆಯನ್ನು ಪೊಲೀಸ್ ನಿರೀಕ್ಷಕರಾದ ಜಾನ್ಸನ್ ಡಿಸೋಜಾ ರವರು ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ಘನ ನ್ಯಾಯಾಲಯದ ನ್ಯಾಯಾದೀಶ ಮಾನು, ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮೃ*ತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ಒದಗಿಸಿದೆ.

    Continue Reading

    LATEST NEWS

    Trending