ಹೆಣ್ಮಕ್ಕಳ ಪ್ರೀತಿಯ ಸಂಗಾತಿ ಮೇಕ್ಅಪ್ ಕಿಟ್. ಸೌಂದರ್ಯದ ಗುಟ್ಟನ್ನು ಹುದುಗಿಟ್ಟುಕೊಂಡಿರುವ ಈ ಕಿಟ್ನಲ್ಲಿ ಅಂದದ ಹೆಣ್ಣಿಗೆ ಮತ್ತಷ್ಟು ಚೆಂದ ಕಾಣಲು ಏನೆಲ್ಲಾ ಬೇಕೋ ಅವೆಲ್ಲವೂ ಬಚ್ಟಿಟ್ಟುಕೊಂಡಿರುತ್ತದೆ. ವಿಷಯ ಅದಲ್ಲ, ಒಬ್ಬರು ಬಳಸಿದ ಮೇಕ್ಅಪ್ ಐಟಂಗಳನ್ನು ಇನ್ನೊಬ್ಬರು ಬಳಸಬಹುದಾ ಅನ್ನೋದು!
ಸಾಮಾನ್ಯವಾಗಿ ಮೇಕ್ಅಪ್ ಹಂಚಿಕೊಳ್ಳಲು ಯಾರೂ ಸಲಹೆ ನೀಡಲ್ಲ. ವಿಶೇಷವಾಗಿ ನಿಮ್ಮ ಕಣ್ಣುಗಳು, ತುಟಿಗಳು ಅಥವಾ ಲೋಳೆಯ ಪೊರೆಗಳೊಂದಿಗೆ ಸಂಪರ್ಕಕ್ಕೆ ಬರುವ ಐಟಂಗಳಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಸ್ಟೈ, ಪಿಂಕ್ ಐ ಮತ್ತು ಶೀತ, ಹುಣ್ಣುಗಳಂತಹ ಸೋಂಕುಗಳಿಗೆ ಕಾರಣ ಆಗಬಹುದು. ಮತ್ತೊಬ್ಬರು ಬಳಸಿದ ವಸ್ತುಗಳನ್ನು ಯೂಸ್ ಮಾಡೋದ್ರಿಂದ ನಿಮ್ಮ ಚರ್ಮಕ್ಕೆ ಸೂಕ್ತವಾಗದಿದ್ದರೆ ಮೊಡವೆಗಳಿಗೂ ದಾರಿ ಮಾಡಿ ಕೊಡುತ್ತದೆ ಎನ್ನುತ್ತಾರೆ ತಜ್ಞರು.
ಬ್ಯಾಕ್ಟೀರಿಯಾ: ಮೇಕ್ಅಪ್ ವಸ್ತುಗಳಿಂದ ಬ್ಯಾಕ್ಟೀರಿಯಾಗಳು ಶೇಖರಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಅವುಗಳನ್ನು ಮುಚ್ಚದೆ ಅಥವಾ ತೆರೆದಿದ್ದರೆ.
ಕಣ್ಣುಗಳು: ಕಣ್ಣಿನ ಮೇಕಪ್ ಐಟಂಗಳಾದ ಮಸ್ಕರಾ, ಐಲೈನರ್ ಮತ್ತು ಕಾಜಲ್ ಹಂಚಿಕೊಳ್ಳುವುದು ಕಣ್ಣಿನ ಸೋಂಕುಗಳಿಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯಾಗಳು ಕಾಂಟ್ಯಾಕ್ಟ್ ಲೆನ್ಸ್‌ಗಳಿಗೆ ಅಂಟಿಕೊಳ್ಳಬಹುದು.
ತುಟಿಗಳು: ಲಿಪ್ಸ್ಟಿಕ್ ಅಥವಾ ತುಟಿಗೆ ಹಚ್ಚುವ ಬಣ್ಣವನ್ನು ಹಂಚಿಕೊಳ್ಳುವುದು ಕೂಡ ಅಪಾಯಕಾರಿ. ಇದರಿಂದಲೂ ಬ್ಯಾಕ್ಟೀರಿಯಾಗಳು ಹರಡುತ್ತವೆ.
ಬ್ರಷ್‌ಗಳು ಮತ್ತು ಅಪ್ಲಿಕೇಟರ್‌ಗಳು: ಬೇರೆಯವರ ಬ್ರಷ್‌ಗಳು ಮತ್ತು ಅಪ್ಲಿಕೇಟರ್‌ಗಳು ಎಷ್ಟು ಸ್ವಚ್ಛವಾಗಿವೆ ಎಂದು ತಿಳಿಯುವುದು ಕಷ್ಟ. ಮೇಕ್ಅಪ್ ಹಂಚಿಕೊಳ್ಳುವ ಬದಲು ನೀವು ಸ್ವಂತ ಮೇಕ್ಅಪ್ ಹೊಂದಿರೋರು ಒಳ್ಳೆಯದು.
ಮಂಗಳೂರು/ಬೆಂಗಳೂರು : ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ಚಾಲಕ ಲಾರಿ ಚಾಲನೆ ಮಾಡಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃ*ತಪಟ್ಟಿರುವ ಘಟನೆ ತುಮಕೂರು ರಸ್ತೆಯ ಪಾರ್ಲೆ ಜಿ ಫ್ಯಾಕ್ಟರಿ ಸಮೀಪದ ಟೋಲ್ ಬಳಿ ಶುಕ್ರವಾರ(ನ.15) ನಡೆದಿದೆ.
ಲಗ್ಗೆರೆ ನಿವಾಸಿ ಬಸವರಾಜ(37) ಮೃ*ತ ದುರ್ದೈವಿ. ರಾಯಚೂರು ಜಿಲ್ಲೆ ಸಿಂಧನೂರು ಮೂಲದ ಬಸವರಾಜ ಕೂಲಿ ಕಾರ್ಮಿಕನಾಗಿದ್ದು, ಲಗ್ಗೆರೆಯಲ್ಲಿ ನೆಲೆಸಿದ್ದರು. ಮುಂಜಾನೆ ಮಳೆ ಬರುತ್ತಿದ್ದ ಕಾರಣ ಟೋಲ್ ಬಳಿ ನಿಂತಿದ್ದ ಸರಕು ಸಾಗಣೆ ಲಾರಿಯೊಂದರ ಕೆಳಗೆ ಹೋಗಿ ಮಲಗಿದ್ದರು. ಟೀ ಕುಡಿಯಲು ಹೋಗಿದ್ದ ಲಾರಿ ಚಾಲಕ ಹಿಂದಿರುಗಿ ಬಂದು ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೇ ಲಾರಿಯನ್ನು ಏಕಾಏಕಿ ಚಾಲನೆ ಮಾಡಿಕೊಂಡು ತೆರಳಿದ್ದಾನೆ. ಈ ವೇಳೆ ಚಕ್ರಗಳು ಹರಿದು ಬಸವರಾಜ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ.
ಕೇರಳ : ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿ ಬಸ್ವೊಂದು ಅ*ಪಘಾತಕ್ಕೆ ಒಳಗಾಗಿ, ಇಬ್ಬರು ದಾ*ರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರಿನ ಸಮೀಪದ ಕೆಲಕಮ್ ಬಳಿ ನಿನ್ನೆ (ನ.15) ಬೆಳಿಗ್ಗೆ ಸಂಭವಿಸಿದೆ.
ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದ ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಸಾ*ವನ್ನಪ್ಪಿರುವ ದು*ರ್ದೈವಿಗಳು.
ಮಿನಿ ಬಸ್ ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬಸ್ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅ*ನಾಹುತ ನಡೆದಿದೆ. ಘಟನೆಯಲ್ಲಿ 9 ಮಂದಿ ಗಾ*ಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂ*ಭೀರವಾಗಿದೆ. ಅ*ಪಘಾತದ ಶಬ್ಧ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
‘ಕಯಂಕುಮಂ ದೇವ ಕಮ್ಯೂನಿಕೇಷ’ನ್ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್‌ನ ಸುಲ್ತಾನ್ ಬಥೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್ ಟೌನ್ ರಸ್ತೆ ಮಾರ್ಗವಾಗಿ ಕೆಲಕಮ್ ಪರ್ಯಾಯ ಮಾರ್ಗವನ್ನು ಮ್ಯಾಪ್ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ಎಸ್ ತಿರುಗಳಿಂದಾಗಿ ಮಿನಿ ಬಸ್ ಅ*ಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾ*ಯಗೊಂಡವರನ್ನು ಕಾಯಂಕುಲಂನ ಉನ್ನಿ, ಉಮೇಶ್, ಸುರೇಶ್ ಮತ್ತು ಶಿಬು, ಎರ್ನಾಕುಲಂನ ಬಿಂಧು, ಕಲ್ಲುವತುಕ್ಕಲ್ನ ಚೆಲ್ಲಪ್ಪನ್ ಮತ್ತು ಕೊಲ್ಲಂನ ಶ್ಯಾಮ್ ಹಾಗೂ ಅಥಿರುಂಗಲ್ನ ಸುಭಾಶ್ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು: ಸ್ಮಾರ್ಟ್ ಸಿಟಿ, ಕಡಲನಗರಿ ಮಂಗಳೂರಿನ ರಾಜಬೀದಿಯುದ್ದಕ್ಕೂ ಸಹಕಾರಿ ತೋರಣ. ಕರಾವಳಿ ಉತ್ಸವ ಮೈದಾನದಲ್ಲಿ ಮೈದಳೆದು ನಿಂತ ವಿಶಾಲವಾದ ಚಪ್ಪರ, ಆಕರ್ಷಕವಾಗಿ ಅಲಂಕೃತಗೊಂಡ ವೇದಿಕೆ. ಇದು ನ.16ರಂದು ನಡೆಯಲಿರುವ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹಕ್ಕೆ ಬಂದರು ನಗರಿ ಮಂಗಳೂರು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಮಹಾಉತ್ಸವ ನಡೆಯಲಿದೆ.
15 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಸಪ್ತಾಹಕ್ಕೆ ವಸ್ತು ಪ್ರದರ್ಶನ, ಬೃಹತ್ ಸಹಕಾರ ಜಾಥಾ ಮೆರುಗು ನೀಡಲಿದೆ. ಬೃಹತ್ ವೇದಿಕೆಯ ಮುಂಭಾಗ 4 ಹಂತದಲ್ಲಿ ಸಹಕಾರಿ ಬಂಧುಗಳು ಕುಳಿತುಕೊಳ್ಳಲು ವಿಶಾಲವಾದ ಚಪ್ಪರ ಹಾಕಲಾಗಿದೆ. ಪ್ರಥಮ ಹಂತದಲ್ಲಿ ವಿವಿಐಪಿ, ವಿಐಪಿಗಳು, ಮಾಧ್ಯಮ ಬಂಧುಗಳಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿ ನಾನಾ ಹಂತಗಳನ್ನು ವಿಭಜಿಸಲಾಗಿದೆ. ಸಭಾಂಗಣವಿಡೀ ತಂಪನ್ನಾಗಿಸಲು ಬೃಹತ್ ಗಾತ್ರ ಫ್ಯಾನ್‌ಗಳನ್ನು ಜೋಡಿಸಲಾಗಿದೆ.
ಸಹಕಾರ ಮಾಣಿಕ್ಯ ಪ್ರಶಸ್ತಿ :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ 2024ನೇ ಸಾಲಿನಿಂದ ಸಹಕಾರ ಮಾಣಿಕ್ಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಪ್ರಶಸ್ತಿ ಜತೆಗೆ 5 ಗ್ರಾಂ ಚಿನ್ನದ ಪದಕ, 10 ಸಾವಿರ ರೂ. ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಸಾಮಾನ್ಯ ವಿಭಾಗದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ಉಭಯ ಜಿಲ್ಲೆಗಳಲ್ಲಿ ಒಂದರಂತೆ ಹಾಗೂ ಹೈನುಗಾರಿಕೆ, ಕ್ರೆಡಿಟ್ ಸೊಸೈಟಿ, ಮೀನುಗಾರ ಸಹಕಾರ ಸಂಘ, ಸೌಹಾರ್ದ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ ಒಂದು ಹಾಗೂ 2013-24ನೇ ಸಾಲಿನಲ್ಲಿ ಶತಮಾನೋತ್ಸವ ಪೂರೈಸಿದ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗೌರವಿಸಲಾಗುವುದು.
ಜಾಥಾದಲ್ಲಿ ತಂಡಗಳ ಆಕರ್ಷಣೆ (ಬಾಕ್ಸ್) :
ಸಹಕಾರ ಜಾಥಾ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರ ಜಾಥಾ ಮೆರವಣಿಗೆ ನಡೆಯಲಿದೆ. ಈ ಜಾಥಾದಲ್ಲಿ ಸಹಕಾರಿ ರಥ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆ, ಮೊಳಹಳ್ಳಿ ಶಿವರಾವ್ ಟ್ಯಾಬ್ಲೋ, ಬ್ಯಾಂಕಿಂಗ್ ವ್ಯವಹಾರದ ಸ್ತಬ್ಧಚಿತ್ರ, ಹೈನುಗಾರಿಕೆಯ ಸ್ತಬ್ಧಚಿತ್ರ, ಮೀನುಗಾರಿಕೆಯ ಸ್ತಬ್ಧಚಿತ್ರ, ಕೃಷಿ ಉಪಕರಣಗಳ ಮಾರಾಟದ ಸ್ತಬ್ಧಚಿತ್ರ, ನಂದಿನಿ ಅನ್ ವಿಲ್ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್, ರಾಣಿ ಅಬ್ಬಕ್ಕನ ಸ್ತಬ್ಧಚಿತ್ರ, ರಬ್ಬರ್ ಟ್ಯಾಪಿಂಗ್‌ನ ಸ್ತಬ್ಧಚಿತ್ರ, ನವೋದರ ಗುಂಪಿನ ಸ್ತಬ್ಧಚಿತ್ರ, ಪತ್ತಿನ ಸಂಘಗಳ ಹಣಕಾಸಿನ ವ್ಯವಹಾರದ ಸ್ತಬ್ಧಚಿತ್ರ, ಚೆಂಡೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ ಸ್ತಬ್ಧಚಿತ್ರ, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ನೇತ್ರಾವತಿ ಮತ್ತು ಕುಮಾರಧಾರ ನದಿಯ ಸಂಗಮದ ಸ್ತಬ್ಧಚಿತ್ರ, ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಅಕ್ಕಿ ಮಿಲ್ಲಿನ ಸ್ತಬ್ಧಚಿತ್ರ, ರಸಗೊಬ್ಬರ ಮಾರಾಟ ಮತ್ತು ಬ್ಯಾಂಕಿಂಗ್ ವ್ಯವಹಾರದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ತುಳುನಾಡ ವೈಭವದ ಸ್ತಬ್ಧಚಿತ್ರ, ಕಂಬಳದ ಸ್ತಬ್ಧಚಿತ್ರ, ಹಳ್ಳಿ ಮನೆಯ ಸ್ತಬ್ಧಚಿತ್ರ ಸೇರಿದಂತೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಮೊಬೈಲ್ ಬ್ಯಾಂಕ್ ವಾಹನ ಸೇರಿದಂತೆ 32ಕ್ಕೂ ಅಧಿಕ ಸ್ತಬ್ಧಚಿತ್ರಗಳು ಜಾಥದಲ್ಲಿ ಭಾಗವಹಿಸಲಿದೆ.