Friday, August 19, 2022

ವಿಜಯಪುರಲ್ಲಿ ಸರ್ಕಾರಿ ಬಸ್- ಲಾರಿ ಡಿಕ್ಕಿ : ವಿದ್ಯಾರ್ಥಿನಿ- ಚಾಲಕ ಸ್ಥಳದಲ್ಲೇ ಸಾವು..!

ಲಾರಿ ಮತ್ತು ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ, ಲಾರಿ ಚಾಲಕ ಇಬ್ಬರೂ ಸ್ಥಳದಲ್ಲೇ ಸಾವನ್ನಪಿದ ಘಟನೆ ವಿಜಯಪುರದಲ್ಲಿ ಸಂಭವಿಸಿದೆ.

ವಿಜಯಪುರ : ಲಾರಿ ಮತ್ತು ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ, ಲಾರಿ ಚಾಲಕ ಇಬ್ಬರೂ ಸ್ಥಳದಲ್ಲೇ ಸಾವನ್ನಪಿದ ಘಟನೆ ವಿಜಯಪುರದಲ್ಲಿ ಸಂಭವಿಸಿದೆ.

ಇತರ 24 ಜನ ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಎಂದು ತಿಳಿದು ಬಂದಿದೆ. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಜತ್ತ್ ನಿಂದ ವಿಜಯಪುರಕ್ಕೆ ಹೊರಟಿದ್ದ ಲಾರಿ ಹಾಗೂ ವಿಜಯಪುರದಿಂದ ತಿಕೋಟಾ ತಾಲೂಕಿನ ಕನಮಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಈ ಅಫಘಾತ ಸಂಭವಿಸಿದೆ.

ಸ್‍ನಲ್ಲಿ ಪ್ರಯಾಣಿಸುತ್ತಿದ್ದ ವಿಜಯಪುರ ನಗರದ ನಿವಾಸಿಯಾದ 18 ವರ್ಷದ ವಿದ್ಯಾರ್ಥಿನಿ ಶ್ರದ್ಧಾ, ಲಾರಿ ಚಾಲಕ ತಮಿಳುನಾಡು ಮೂಲದ ಬಾಬು ವೆಂಕಟೇಶ ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಇತರೆ 24 ಜನರನ್ನು ವಿಜಯಪುರ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ದೆಹಲಿ ಉಪ ಮುಖ್ಯಮಂತ್ರಿ ಮನೆ ಮೇಲೆ CBI ದಾಳಿ: ಶೋಧ ಕಾರ್ಯ

ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೊಡಿಯಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಸಿಬಿಐ ಇಂದು ಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯ ಮುಂದುವರಿಸಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರುವ...

ಇಂದು & ನಾಳೆ ಮಂಗಳೂರಿನಲ್ಲಿ ಮೂಡುಬಿದ್ರೆ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ

ಮಂಗಳೂರು: ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ವಿವೇಕ್ ಮೋಟಾರ್ ಫೀಡರ್ ಮತ್ತು 11ಕೆ.ವಿ ಮಾರ್ಕೆಟ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.ಆದ ಕಾರಣ ಇಂದು ಬೆಳಿಗ್ಗೆ 10...

ಇಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಭರದ ಸಿದ್ದತೆ-ನಾಳೆ ವಿಟ್ಲ ಪಿಂಡಿ

ಉಡುಪಿ: ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.20 ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ...