Connect with us

LATEST NEWS

ಬೆಳಗಾವಿ : ಕಾರು, ಬೈಕ್ ಮಧ್ಯೆ ಅಪಘಾತ -3 ಸಾವು..!

Published

on

ಬೆಳಗಾವಿ: ಕಾರು, ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಬಳಿ ನಡೆದಿದೆ.

 

ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತರನ್ನು ಗೋಪಾಲ ಮುತ್ನಾಳ(36), ರಾಮಣ್ಣ ಮಗ್ಗೆಪ್ಪಗೋಳ(40), ನೀಲವ್ವ ತಳವಾರ(44) ಎಂದು ಗುರುತಿಸಲಾಗಿದೆ.

ಮೃತ ಗೋಪಾಲ, ರಾಮಣ್ಣ ಇಬ್ಬರೂ ಪಿ.ಜಿ ಹುಣಶ್ಯಾಳ ಗ್ರಾಮದ ನಿವಾಸಿಗಳು. ಮೃತ ಮಹಿಳೆ ನೀಲವ್ವ ತಳವಾರ ಮೂಡಲಗಿ ತಾಲೂಕಿನ ನಾಗನೂರು ನಿವಾಸಿ. ಮೊಹರಂ ಆಚರಣೆಗೆಂದು ಗೋಕಾಕ್ ತಾಲೂಕಿನ ಮಕ್ಕಳಗೇರಿ ಗ್ರಾಮಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

 

ಗೋಕಾಕ್ ತಾಲೂಕಿನ ಸಂಗನಕೇರಿ ಬಳಿ ಕಾರು ಡಿಕ್ಕಿಯಾಗಿ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್‍ಗೆ ಡಿಕ್ಕಿಯಾಗಿ ಕಾರು ಸಹ ಪಲ್ಟಿಯಾಗಿದ್ದು, ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Click to comment

Leave a Reply

Your email address will not be published. Required fields are marked *

LATEST NEWS

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ -1 ವೇಳಾಪಟ್ಟಿ ಪ್ರಕಟ

Published

on

2025ನೇ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ -1 ನಡೆಯುತ್ತಿದ್ದರೆ, ಮಾರ್ಚ್ 21ರಿಂದ ಏಪ್ರಿಲ್ 04 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ನಡೆಯಲಿವೆ.

ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಮಾರ್ಚ್ 1ರಿಂದ ಮಾರ್ಚ್ 19ರವರೆಗೆ ದ್ವಿತೀಯ ಪಿಯು ಪರೀಕ್ಷೆ-1 ಹಾಗೂ ಮಾರ್ಚ್​ 20 ರಿಂದ ಏಪ್ರಿಲ್ 2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 16ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ದ್ವೀತಿಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ :

ಮಾರ್ಚ್ 1- ಕನ್ನಡ, ಅರೇಬಿಕ್
ಮಾರ್ಚ್ 3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
ಮಾರ್ಚ್ 5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
ಮಾರ್ಚ್ 7- ಇತಿಹಾಸ, ಭೌತಶಾಸ್ತ್ರ.
ಮಾರ್ಚ್ 10- ಐಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ.
ಮಾರ್ಚ್ 12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ.
ಮಾರ್ಚ್ 13- ಅರ್ಥಶಾಸ್ತ್ರ.
ಮಾರ್ಚ್ 15- ಇಂಗ್ಲಿಷ್.
ಮಾರ್ಚ್ 17- ಭೂಗೋಳಶಾಸ್ತ್ರ.
ಮಾರ್ಚ್ 18- ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್.
ಮಾರ್ಚ್ 20- ಹಿಂದಿ.

SSLC ಪರೀಕ್ಷೆ -1 ವೇಳಾಪಟ್ಟಿ :

ಮಾರ್ಚ್ 21- ಪ್ರಥಮ ಭಾಷೆ
ಮಾರ್ಚ್ 24- ಗಣಿತ
ಮಾರ್ಚ್ 26- ದ್ವಿತೀಯ ಭಾಷೆ
ಮಾರ್ಚ್ 29- ಸಮಾಜ ವಿಜ್ಞಾನ
ಏಪ್ರಿಲ್ 2- ವಿಜ್ಞಾನ
ಏಪ್ರಿಲ್ 4- ತೃತೀಯ ಭಾಷೆ

 

Continue Reading

chikkamagaluru

ನಕ್ಸಲರ ಶರಣಾಗತಿ ಬೆನ್ನಲ್ಲೇ ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ !

Published

on

ಮಂಗಳೂರು/ಚಿಕ್ಕಮಗಳೂರು : ಆರು ಜನ ನಕ್ಸಲರು ಶರಣಾಗತಿ ಆದ ಬೆನ್ನಲ್ಲೇ ಪೊಲೀಸರು ಶಸ್ತ್ರಾಸ್ತ್ರ, ಮದ್ದು ಗುಂಡು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಘಟಗಳಲ್ಲಿ ಎರಡು ದಶಕದಿಂದ ಬೇರೂರಿದ್ದ 6 ನಕ್ಸಲರು ಸರ್ಕಾರದ ಮುಂದೆ ಶರಣಾಗಿದ್ದಾರೆ. ಶರಣಾದ ಎಲ್ಲರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಶರಣಾದ ಒಂದೇ ದಿನದಲ್ಲಿ ಮೂರು ಲಕ್ಷ ಪ್ಯಾಕೇಜ್ ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆ ಆಗಿದೆ. ಮತ್ತೊಂದು ಕಡೆ ಎನ್ ಐಎ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಇಲಾಖೆಗೆ ಬಿಜೆಪಿ ಮೊರೆ ಹೋಗುತ್ತಿದೆ.

ಶರಣಾಗತಿ ನಂತರ ನ್ಯಾಯದ ಪ್ರಕ್ರಿಯೆ ಶುರುವಾಗಿದೆ. 6 ಜನ ನಕ್ಸಲರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಎನ್ ಐಎ ವಿಶೇಷ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 6 ನಕ್ಸಲರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಒಟ್ಟು 14 ದಿನಗಳ ಕಾಲ ಅಂದ್ರೆ ಜನವರಿ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನ ಬೆನ್ನಲ್ಲೆ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಯೋಧ ರವಿ ಯಲ್ಲಪ್ಪ ಹುತಾತ್ಮ

ಇದೆಲ್ಲದರ ನಡುವೆ ನಿನ್ನೆ ಕೊಪ್ಪ ತಾಲೂಕು ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಲೆಗುಳಿ ಕುಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ.
ಎಕೆ 56, 303 ರೈಫಲ್, ಸ್ವದೇಶೀ ನಿರ್ಮಿತ ಪಿಸ್ತೂಲ್ ಸೇರಿದಂತೆ ಒಟ್ಟು ಶಸ್ತ್ರಾಸ್ತ್ರಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಂತೆ 7.62 ಎಂಎಂ ಎಕೆ ಮದ್ದುಗುಂಡು, ಬೋರ್ ಕರ್ಟ್ರಿಜ್ಗಳು, ಸ್ವದೇಶಿ ನಿರ್ಮಿತ ಪಿಸ್ತೂಲ್, ಮದ್ದುಗುಂಡುಗಳು ಸೇರಿದಂತೆ ಒಟ್ಟು 176 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಜಯಪುರ ಪಿಎಸ್ ನಲ್ಲಿ ಅಪರಾಧ ಸಂಖ್ಯೆ 14/25 ರಲ್ಲಿ ಕಲಂ 3, 25(1), 7 ಮತ್ತು 25(10) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.
ಶರಣಾದ ನಕ್ಸಲರು ನೀಡಿರುವ ಮಾಹಿತಿ ಆಧರಿಸಿ ಈ ಕಾರ್ಯಚರಣೆ ನಡೆದಿದೆ ಎನ್ನಲಾಗಿದೆ. ನಕ್ಸಲರು ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಎಲ್ಲಿ ಅಡಗಿಸಿದ್ದಾರೆ ಎನ್ನುವ ಪ್ರಶ್ನೆಗೆ ಮೊದಲ ಹಂತದ ಉತ್ತರ ಸಿಕ್ಕಿದಂತಾಗಿದೆ.

Continue Reading

LATEST NEWS

ಭೀಕರ ಅ*ಪಘಾ*ತ; ಟ್ರಕ್ ಬೆಂ*ಕಿಗಾ*ಹುತಿ ; ಬೈಕ್ ಸವಾರ ಸಾ*ವು

Published

on

ಉಡುಪಿ : ಬೈಕ್ ಗೆ ಟ್ರಕ್ ಡಿ*ಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃ*ತಪಟ್ಟು, ಟ್ರಕ್ ಸಂಪೂರ್ಣ ಬೆಂ*ಕಿಗಾಹುತಿಯಾದ ಘಟನೆ ಶುಕ್ರವಾರ (ಜ.10) ಮದ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಕೊರಂಗ್ರಪಾಡಿ ಬಳಿ ನಡೆದಿದೆ.

ಕೊರಂಗ್ರಪಾಡಿಯಿಂದ ಉದ್ಯಾವರ ಮೂಲಕವಾಗಿ ಪಣಿಯೂರಿಗೆ ಮರಳುತ್ತಿದ್ದ ಬೈಕ್ ಸವಾರ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃ*ತ ಯುವಕ. ಉಡುಪಿಯಲ್ಲಿ ಪ್ಯಾರಾ ಮೆಡಿಕಲ್ ಕಲಿಯುತ್ತಿದ್ದ ಯುವಕ ರಾತ್ರಿ ಪರಿಚಯಸ್ಥರ ಮನೆಯ ಕಾರ್ಯಕ್ರಮಕ್ಕೆ ತೆರಳಿ, ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟ್ರಕ್‌ಗೆ ಡಿ*ಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂ*ಭೀರ ಏ*ಟಾಗಿದ್ದ ಬೈಕ್ ಸವಾರ ಸ್ಥ*ಳದಲ್ಲೇ ಮೃ*ತಪಟ್ಟಿದ್ದಾನೆ.

ಘಟನೆಯ ಮರುಕ್ಷಣ ಟ್ರಕ್ ನಲ್ಲೂ ಬೆಂ*ಕಿ ಕಾಣಿಸಿಕೊಂಡಿದ್ದು ಟ್ರಕ್ ಸಂಪೂರ್ಣ ಬೆಂ*ಕಿಗೆ ಆ*ಹುತಿಯಾಗಿದೆ. ಮದ್ಯ ರಾತ್ರಿ ಘಟನೆ ಸಂಭವಿಸಿದ ಕಾರಣ ತುರ್ತು ಪರಿಹಾರ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೇ ಬೆಂ*ಕಿ ಹೊ*ತ್ತಿ ಉರಿದಿದೆ. ಉಡುಪಿ ಅ*ಗ್ನಿಶಾಮಕ ಸಿಬ್ಬಂದಿಗಳಿಂದ ಬೆಂ*ಕಿ ನಂದಿಸುವ ಕಾರ್ಯ ನಡೆದಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Continue Reading

LATEST NEWS

Trending

Exit mobile version