ಬೆಂಗಳೂರು: ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ನಗರದ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ್ ಅಪಾರ್ಟ್ಮೆಂಟ್ನಲ್ಲಿ ಈ ದುರ್ಘಟನೆ ನಡೆದಿದೆ.
ಒಂದು ಫ್ಲ್ಯಾಟ್‌ನಲ್ಲಿ ಸಿಲಿಂಡರ್ ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ ಇಡೀ ಅಪಾರ್ಟ್ಮೆಂಟ್ಗೆ ಆವರಿಸಿದೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಬೆಂಕಿನಂದಿಸಲು ಪ್ರಯತ್ನ ಪಡುತ್ತಿದ್ದಾರೆ.
ಅಪಾರ್ಟ್ಮೆಂಟ್ನ ಒಳಗೆ ಇನ್ನಿಬ್ಬರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಜೊತೆಗೆ ಮೃತಪಟ್ಟವರ ಸಂಖ್ಯೆಯಲ್ಲೂ ಏರಿಕೆಯಾಗುವ ಸಾಧ್ಯತೆಯಿದೆ.
ಒಂದು ಫ್ಲ್ಯಾಟಿನಲ್ಲಿ ಕಾಣಿಸಿಕೊಂಡ ಬೆಂಕಿ ನಿಮಿಷಗಳಲ್ಲೆ ಅಪಾರ್ಟ್ ಮೆಂಟ್ ನ ಇತರ ಮೂರು ಫ್ಲ್ಯಾಟ್‌ಗಳಿಗೂ ಬೆಂಕಿ ಆವರಿಸಿತ್ತು. ಹೊಗೆ ಸಹ ಹೆಚ್ಚಾಗಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ‘ಎರಡು ಫ್ಲ್ಯಾಟ್‌ಗಳಲ್ಲಿ ಜನರು ಇದ್ದರು.
ಒಂದು ಫ್ಲ್ಯಾಟ್‌ನಲ್ಲಿ ಯಾರೂ ಇರಲಿಲ್ಲ. ಒಬ್ಬ ಮಹಿಳೆ ಸಹಾಯಕ್ಕಾಗಿ ಕೂಗಾಡಿದ್ದರು’ ಎಂದರು. ಸ್ಥಳಕ್ಕೆ ಬಂದಿರುವ ಅಗ್ನಿಶಾಮಕದ ದಳದ ಸಿಬ್ಬಂದಿ, ಬೆಂಕಿ ನಂದಿಸುತ್ತಿದ್ದಾರೆ.
ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಈ ಅಪಾರ್ಟ್‌ಮೆಂಟ್ ಸಮುಚ್ಚಯವಿದೆ. ಪೊಲೀಸರೂ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಫ್ಲ್ಯಾಟ್‌ನಲ್ಲಿರುವ ಎಲ್ಲ ವಸ್ತುಗಳು ಸುಟ್ಟಿವೆ.
ಮಂಗಳೂರು/ಆಂಧ್ರಪ್ರದೇಶ : ತೆಲುಗು ನಟ ಪ್ರಭಾಸ್ ಮದುವೆ ಬಗ್ಗೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅವರ ಮದುವೆಯ ಬಗ್ಗೆ ಯಾವಾಗಲೂ ವದಂತಿಗಳು ಹಬ್ಬುತ್ತಿರುತ್ತದೆ. ಇದೀಗ ಮತ್ತೆ ಪ್ರಭಾಸ್ ಮದುವೆ ವಿಚಾರ ಸುದ್ದಿಯಾಗುತ್ತಿದೆ. ಈ ಬಾರಿ ಗಾಸಿಪ್ ಅಲ್ಲ. ಪ್ರಭಾಸ್ ಮದುವೆ ಬಗ್ಗೆ ನಟ ರಾಮ್ ಚರಣ್ ತೇಜ ಅವರು ಮಾಹಿತಿ ನೀಡಿದ್ದಾರೆ.
ಆಂಧ್ರ ಹುಡುಗಿ ಜೊತೆ ಮದುವೆ!
ನಂದಮೂರಿ ಬಾಲಕೃಷ್ಣ ಅವರ ಜನಪ್ರಿಯ ಅನ್‌ಸ್ಟಾಪೇಬಲ್ ಟಾಕ್ ಶೋನಲ್ಲಿ ರಾಮ್ ಚರಣ್ ಸ್ನೇಹಿತ ಪ್ರಭಾಸ್ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಬಾಲಕೃಷ್ಣ ಅವರು ಪ್ರಭಾಸ್ ಮದುವೆ ಬಗ್ಗೆ ಕೇಳಿದ್ದಾರೆ. ಈ ವೇಳೆ ರಾಮ್ ಚರಣ್ ನಕ್ಕಿದ್ದಾರೆ. ಪ್ರಭಾಸ್ ಮದುವೆಯ ಕುರಿತು ಸುಳಿವು ನೀಡಿದ್ದಾರೆ. ಆಂಧ್ರಪ್ರದೇಶದ ಗಾನಪವರಂನ ಹುಡುಗಿಯನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.ಸದ್ಯ ಶೋನ ಟ್ರೇಲರ್ ಬಿಡುಗಡೆಯಾಗಿದ್ದು, ರಾಮ್ ಚರಣ್ ಹೇಳಿರುವ ಕೆಲವು ದೃಶ್ಯಗಳನ್ನು ತೋರಿಸಲಾಗಿದೆ. ಜನವರಿ 14 ರಂದು ಶೋ ಪ್ರಸಾರವಾಗಲಿದೆ. ಹಾಗಾಗಿ ಟ್ರೇಲರ್‌ನಲ್ಲಿ ತೋರಿಸಲಾಗಿರುವ ವಿಚಾರಗಳ ಸ್ಪಷ್ಟನೆ ಶೋ ಪೂರ್ತಿ ನೋಡಿದ ಮೇಲೆ ಗೊತ್ತಾಗಲಿದೆ.
ಈ ಹಿಂದೆ ಬಾಹುಬಲಿ ಸಿನಿಮಾ ವೇಳೆ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ನಾನು ಶೀಘ್ರದಲ್ಲಿ ಮದುವೆಯಾಗುವುದಿಲ್ಲ. ಏಕೆಂದರೆ, ನನ್ನ ಮಹಿಳಾ ಅಭಿಮಾನಿಗಳ ಭಾವನೆಗಳನ್ನು ನೋಯಿಸಲು ನಾನು ಬಯಸುವುದಿಲ್ಲ ಎಂದಿದ್ದರು.
ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಹೆಸರು ಹಲವು ಸಮಯಗಳಿಂದ ತಳುಕು ಹಾಕುತ್ತಿದೆ. ಇತ್ತೀಚೆಗೆ ಕೃತಿ ಸನೊನ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಗುಲ್ಲೂ ಹಬ್ಬಿತ್ತು. ಸದ್ಯ ಪ್ರಭಾಸ್ ಸಲಾರ್ ಬಳಿಕ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆ ಮೂರು ಸಿನಿಮಾ ಮಾಡುವ ಒಪ್ಪಂದ ಮಾಡಿಕೊಂಡಿದ್ದಾರೆ.
ಇನ್ನು ಆರ್ ಆರ್ ಆರ್ ಸಿನಿಮಾ ರಾಮ್ ಚರಣ್‌ಗೆ ದೊಡ್ಡ ಯಶಸ್ಸು ನೀಡಿತ್ತು. ಈಗ ಗೇಮ್ ಛೇಂಜರ್ ಆಗಿ ಅವರು ಬೆಳ್ಳಿ ಪರದೆಯ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಬಹುಭಾಷಾ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.
ಮಂಗಳೂರು/ಕ್ಯಾಲಿಫೋರ್ನಿಯಾ : ಲಾಸ್ ಎಂಜಲೀಸ್ ನ ವಿನಾಶಕಾರಿ ಕಾಡ್ಗಿಚ್ಚಿಗೆ ಕನಿಷ್ಠ ಐದು ಮಂದಿಯನ್ನು ಬಲಿಪಡೆದಿದೆ. ಸುಂದರ ನಗರಿಯಾದ ಕ್ಯಾಲಿಫೋರ್ನಿಯಾ ನಗರದ ಸುಮಾರು ನಾಲ್ಕು ಸಾವಿರ ಕಟ್ಟಡಗಳನ್ನು ಭಸ್ಮಗೊಳಿಸಿದೆ. ಕೋಟ್ಯಾಧಿಪತಿಗಳಾಗಿದ್ದವರೆಲ್ಲಾ, ಬೀದಿಪಾಲಾಗಿದ್ದಾರೆ.
ಹೀಗೆ ಬೀದಿಪಾಲಾದವರಲ್ಲಿ ಕೋಟ್ಯಾಧಿಪತಿ ಎಡ್ವಿನ್ ಕ್ಯಾಸ್ಟ್ರೋ ಕೂಡ ಒಬ್ಬರು. ಇವರು ಕಳೆದ ವರ್ಷ ಫೆಬ್ರವರಿಯಲ್ಲಿ ವಿಶ್ವದ ಅತಿದೊಡ್ಡ ಲಾಟರಿಯಲ್ಲಿ ಬರೊಬ್ಬರಿ 2.04 ಬಿಲಿಯನ್ (16,590 ಕೋಟಿ) ಗೆದ್ದಿದ್ದರು. ಈ ಲಾಟರಿ ಹಣದಿಂದ ಎಡ್ವಿನ್ ಅವರು ಕ್ಯಾಲಿಫೋರ್ನಿಯಾದ ಹಾಲಿವುಡ್ ಹಿಲ್ಸ್ ನಲ್ಲಿ ಬರೊಬ್ಬರಿ 3.8 ಮಿಲಿಯನ್ ಗೆ ಐಷಾರಾಮಿ ಮನೆ ತೆಗೆದುಕೊಂಡಿದ್ದರು.
ಆದರೆ ದುರಾದೃಷ್ಟವಶಾತ್ ಎಡ್ವಿನ್ ಕ್ಯಾಸ್ಟ್ರೋ ಅವರ ಐಷಾರಾಮಿ ಮನೆ ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದೆ. ಮಾರಣಾಂತಿಕ ಬೆಂಕಿಯು ಕ್ಯಾಸ್ಟ್ರೋ ಅವರ 3.8 ಮಿಲಿಯನ್ ನ ಮನೆಯಲ್ಲಿ ಉಳಿದಿರುವುದು ಕಾಂಕ್ರೀಟ್ ಕಂಬಗಳು ಮತ್ತು ಹೊಗೆಯಾಡುತ್ತಿರುವ ಮರಗಳು ಮಾತ್ರ.
ಎಡ್ವಿನ್ ಅವರ ಭವ್ಯ ಬಂಗಲೆಯಲ್ಲಿ ಐದು ಬೆಡ್ ರೂಮ್ ಮತ್ತು ಆರು ಸ್ನಾನಗೃಹಗಳನ್ನು ಒಳಗೊಂಡಿತ್ತು. ವರದಿಗಳ ಪ್ರಕಾರ ಈ ಐಷಾರಾಮಿ ಮನೆ ಐಕಾನಿಕ್ ಮಾರ್ಮೊಂಟ್ ಹೋಟೆಲ್ ನ ಮೇಲೆ ಇದೆ ಮತ್ತು ಖ್ಯಾತ ಗಾಯಕಿ ಅರಿಯಾನಾ ಗ್ರಾಂಡೆ, ನಟಿ ಡಕೋಟಾ ಜಾನ್ಸನ್ ಮತ್ತು ಹಾಸ್ಯನಟ ಜಿಮ್ಮಿ ಕಿಮ್ಮೆಲ್ ಸೇರಿದಂತೆ ಪ್ರಸಿದ್ದ ಹಾಲಿವುಡ್ ತಾರೆಯರ ನೆರೆಹೊರೆಯಲ್ಲಿ ಎಡ್ವಿನ್ ಅವರ ಮನೆ ಇತ್ತು.
ಆದರೆ ಇಂದು ಭವ್ಯ ಅರಮನೆಯ ಭವ್ಯ ನೆನಪು ಮಾತ್ರ ಉಳಿದಿದೆ. ಶ್ರೀಮಂತಿಕೆಯ ಉತ್ತಂಗುದಲ್ಲಿದ್ದ ಎಡ್ವಿನ್ ಈಗ ಬೀದಿಪಾಲಾಗಿದ್ದಾನೆ.
ರ್ಯಾಪರ್ ಚಂದನ್ ಶೆಟ್ಟಿ ಇತ್ತೀಚೆಗಷ್ಟೆ ‘ಕಾಟನ್ ಕ್ಯಾಂಡಿ’ ಹೆಸರಿನ ಹಾಡು ಬಿಡುಗಡೆ ಮಾಡಿದ್ದಾರೆ. ಇನ್ಸ್ಟಾಗ್ರಾಂ ರೀಲ್ಗಳಲ್ಲಿ ತಮ್ಮ ಹಾಡನ್ನು ಸಖತ್ ಪ್ರೊಮೋಷನ್ ಮಾಡುತ್ತಿದ್ದಾರೆ. ಬೇರೆ ಬೇರೆ ಸೆಲೆಬ್ರಿಟಿಗಳಿಂದ ತಮ್ಮ ಹಾಡಿಗೆ ರೀಲ್ಸ್ ಮಾಡಿಸುತ್ತಿದ್ದಾರೆ. ಆದರೆ ಇದೀಗ ಚಂದನ್ ಶೆಟ್ಟಿ ವಿರುದ್ಧ ಇದೀಗ ಕೃತಿ ಚೌರ್ಯ ಆರೋಪ ಎದುರಾಗಿದೆ. ಕನ್ನಡದ ರ್ಯಾಪರ್ ಒಬ್ಬರು, ಚಂದನ್ ಶೆಟ್ಟಿ ತಮ್ಮ ಹಳೆಯ ಹಾಡಿನ ಟ್ಯೂನ್ ಕದ್ದು, ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ತಾವು ಚಂದನ್ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ.
ಯುವರಾಜ್ ಹೆಸರಿನ ಮತ್ತೊಬ್ಬ ರ್ಯಾಪರ್, ಚಂದನ್ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದು, ತಾನು ಆರು ವರ್ಷದ ಹಿಂದೆ ‘ವೈ ಬುಲ್ ಪಾರ್ಟಿ’ ಹಾಡಿನ ಮೊದಲ ಪಲ್ಲವಿ ಹಾಗೂ ಎರಡನೇ ಚರಣ ನಕಲು ಮಾಡಿ ತಮ್ಮ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಚಂದನ್ ಶೆಟ್ಟಿಯೇ ಈ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದೆ ಆದರೆ ಅವರು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ನನ್ನ ಬಳಿಯೂ ಅವರು ಈ ಬಗ್ಗೆ ಕೇಳಿಲ್ಲ. ಹಾಗಾಗಿ ಈಗ ನಾನೇ ಈ ಬಗ್ಗೆ ಮಾತನಾಡುತ್ತಿದ್ದೇನೆ. ಚಂದನ್ ಶೆಟ್ಟಿ ವಿರುದ್ಧ ನಾವು ಕಾನೂನು ಮೊರೆ ಹೋಗಲಿದ್ದೀವಿ’ ಎಂದಿದ್ದಾರೆ ಯುವರಾಜ್.
‘ಆ ಹಾಡನ್ನು ನಾನು ಬಹಳ ಕಷ್ಟಪಟ್ಟು ಮಾಡಿದ್ದೆ. ಆಗಲೇ ಹಣ ಕೂಡಿಟ್ಟು 17 ಲಕ್ಷ ರೂಪಾಯಿ ಖರ್ಚು ಮಾಡಿ ಹಾಡು ಮಾಡಿದ್ದೆ. ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ನನ್ನ ಟ್ಯೂನ್ ಮಾತ್ರವೇ ಅಲ್ಲದೆ ಇನ್ನೊಬ್ಬರ ಬಿಜಿಎಂ ಅನ್ನು ಸಹ ಕದ್ದಿದ್ದಾರೆ. ಚಂದನ್ ಶೆಟ್ಟಿ ಈಗಾಗಲೇ ಬೆಳೆದಿದ್ದಾರೆ. ಆದರೆ ಅವರು ಇನ್ನೊಬ್ಬರನ್ನೂ ಬೆಳೆಯಲು ಬಿಡಬೇಕು. ಚಂದನ್ ಶೆಟ್ಟಿ ನನಗೆ ಮೊದಲಿನಿಂದಲೂ ಪರಿಚಯ. ಟ್ಯೂನ್ ಬೇಕು ಎಂದು ಕೇಳಿದ್ದರೆ ನಾನೇ ಕೊಟ್ಟುಬಿಡುತ್ತಿದ್ದೆ’ ಎಂದಿದ್ದಾರೆ.
‘ಕಾಟನ್ ಕ್ಯಾಂಡಿ’ ಸಿನಿಮಾದ ಹಾಡಿನ ಕೆಲ ಸಾಲುಗಳು, ಯುವರಾಜ್ ಅವರ ಹಳೆಯ ಹಾಡನ್ನು ಹೋಲುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಚಂದನ್ ಶೆಟ್ಟಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಧ್ರುವ ಸರ್ಜಾ ನಟಿಸಿದ್ದ ‘ಪೊಗರು’ ಸಿನಿಮಾಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದರು. ಆ ಸಿನಿಮಾದ ಒಂದು ಹಾಡನ್ನು ಚಂದನ್ ಶೆಟ್ಟಿ ಬೇರೊಂದು ಸಿನಿಮಾದಿಂದ ಎತ್ತಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಗ ಸ್ಪಷ್ಟನೆ ನೀಡಿದ್ದ ಚಂದನ್ ಶೆಟ್ಟಿ ಎರಡೂ ಹಾಡಿನ ಟೆಂಪೊ ಬೇರೆ ಬೇರೆ ಎಂದು ಸಮಜಾಯಿಷಿ ನೀಡಿದ್ದರು.