Connect with us

UDUPI

ಕ್ರೀಡೆಗಳಲ್ಲಿನ ಕಾನೂನು ಮತ್ತು ನೈತಿಕತೆ : ಮಾಹೆ ಸ್ಪೋರ್ಟ್ಸ್ ಕೌನ್ಸಿಲ್ ವೆಬಿನಾರ್ ಸರಣಿ

Published

on

ಮಣಿಪಾಲ:  ಮಾಹೆ ಸ್ಪೋರ್ಟ್ಸ್ ಕೌನ್ಸಿಲ್ ಜುಲೈ 28 ರಿಂದ ಮಾಹೆ ಸ್ಪೋರ್ಟ್ಸ್ ವೆಬಿನಾರ್ ಸರಣಿ ಯನ್ನು ಆಯೋಜಿಸುತ್ತಿದೆ. ಜುಲೈ 28 ಮತ್ತು 29 ರಂದು “ಕ್ರೀಡೆಗಳಲ್ಲಿ ಕಾನೂನು ಮತ್ತು ನೈತಿಕ ಸಮಸ್ಯೆಗಳು” ಎಂಬ ವಿಷಯದ ಕುರಿತು ಮೊದಲ ವೆಬಿನಾರ್ ನಡೆಯಿತು.

ವೆಬಿನಾರ್ ಉದ್ಘಾಟಿಸಿ ಮಾತನಾಡಿದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಹೆಚ್. ಎಸ್. ಬಲ್ಲಾಳ್ ಈ ವೆಬಿನಾರ್ ಸರಣಿಗಳು ಮತ್ತು ಸ್ಪೋರ್ಟ್ಸ್ ವೆಬಿನಾರ್ ಸರಣಿ ಕಾರ್ಯಕ್ರಮಗಳು ಪ್ರತಿ ತಿಂಗಳು ಮುಂದುವರಿಯುತ್ತವೆ ಎಂದರು.

ಜುಲೈ 28 ರಂದು ನಡೆದ ಮೊದಲ ವೆಬಿನಾರ್ ಸರಣಿಯಲ್ಲಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ನಿರ್ಮಲಾ ಕುಮಾರಿ ಅವರು ಕ್ರೀಡೆಗೆ ಸಂಬಂಧಿಸಿದ ಕಾನೂನು ಸಮಸ್ಯೆಗಳ ಕುರಿತು ಮಾತನಾಡಿದರೆ, 29 ರಂದು ವೆಬಿನಾರ್ ಸರಣಿಯನ್ನು ಧಾರವಾಡ ಶ್ರೀ ಕೆ ಜಿ ನಾಡಗೀರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಡಾ. ಆನಂದ್ ನಾಡಗಿರ್ ಅವರು ನಡೆಸಿ ಕೊಟ್ಟರು.

ಮಣಿಪಾಲದ ಮಾಹೆ ಕ್ರೀಡಾ ಮಂಡಳಿಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ಸಿ ನಾಯಕ್ ಮತ್ತು  ಜಂಟಿ ಕಾರ್ಯದರ್ಶಿ ಡಾ.ಶೋಭಾ ME ಅವರು ವೆಬಿನಾರ್ ಮಾಡರೇಟರಾಗಿ ಕಾರ್ಯ ನಿರ್ವಹಿಸಿದರು.

ಮಣಿಪಾಲ್ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಉಪೇಂದ್ರ ನಾಯಕ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರೆ, ಮಣಿಪಾಲ್ ಕೆಎಂಸಿಯ ದೈಹಿಕ ಶಿಕ್ಷಣ ಉಪನಿರ್ದೇಶಕರಾದ ಡಾ. ದೀಪಕ್ ರಾಮ್ ಬೈರಿ ಅವರು ವಂದನಾರ್ಪಣೆ ಗೈದರು.

Baindooru

WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ

Published

on

ಉಡುಪಿ : ಚಾಲಕನ ನಿಯಂತ್ರಣ ತಪ್ಪಿ  ಸಿಮೆಂಟ್ ರೆಡಿಮಿಕ್ಸ್ ಲಾರಿಯೊಂದು ಪಲ್ಟಿಯಾದ ಘಟನೆ ಉಡುಪಿಯ  ಅಂಬಾಗಿಲು – ಪೆರಂಪಳ್ಳಿ ಕ್ರಾಸ್ ನಲ್ಲಿ ಸಂಭವಿಸಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಘಟನೆಯ ಸಂದರ್ಭ ಸ್ಥಳದಲ್ಲಿ ಯಾವುದೇ ವಾಹನ ಇರದೇ ಇದ್ದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ. ಸಿಮೆಂಟ್ ರೆಡಿಮಿಕ್ಸ್ ಲಾರಿ ಅಂಬಾಗಿಲಿನಿಂದ ಮಣಿಪಾಲದ ಕಡೆಗೆ ತೆರಳುತ್ತಿತ್ತು.

ಇದನ್ನೂ ಓದಿ : ಶೀಘ್ರದಲ್ಲೇ ಉಬರ್‌ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?

ಪೆರಂಪಳ್ಳಿಗೆ ತೆರಳುವ ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Continue Reading

Baindooru

ಕೊಲ್ಲೂರು ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಭೇಟಿ

Published

on

ಮಂಗಳೂರು/ಉಡುಪಿ: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಳಿಗ್ಗೆ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಬೈಂದೂರು ಸಮೀಪದ ಅರೆ ಶಿರೂರಿನ ಹೆಲಿಪ್ಯಾಡ್ ನಲ್ಲಿ ಇಳಿದ ಅವರು, ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.

ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಉಡುಪಿ ಜಿಲ್ಲೆಗೆ ಆಗಮಿಸಿದ ಉಪಮಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ , ಬಂದರು ಮತ್ತು ಮೀನುಗಾರಿಕೆ ಸಚಿವ ಮಾಂಕಾಳು ವೈದ್ಯ, ಶಾಸಕ ಗೋಪಾಲ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸ್ವಾಗತಿಸಿದರು.

 

ಇದನ್ನು ಓದಿ: ಪ್ರಧಾನಿ ಮೋದಿಗೆ ಗಯಾನಾ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ

 

ಇತ್ತೀಚೆಗೆ ಭಾರಿ ಮಹತ್ವ ಪಡೆದುಕೊಂಡಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಗೆಲುವು ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿರುವ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಕೊಲ್ಲೂರು ಮೂಕಾಂಬಿಕಾ ಭೇಟಿ ಮಹತ್ವ ಪಡೆದುಕೊಂಡಿದ್ದು, ಅವರು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ವಿಜಯಕ್ಕಾಗಿ ಪ್ರಾರ್ಥನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

Continue Reading

LATEST NEWS

ಪ್ರಸಿದ್ಧ ಯಕ್ಷಗಾನ ಕಲಾವಿದ, ಭಾಗವತ ಇ*ನ್ನಿಲ್ಲ; ಕಮಲಾಕ್ಷ ಪ್ರಭು ನಿ*ಧನ

Published

on

ಉಡುಪಿ: ಪ್ರಸಿದ್ಧ ಯಕ್ಷಗಾನ ಕಲಾವಿದ, ಭಾಗವತ ಮುಂಡ್ಕಿನಜೆಡ್ಡು ಕಮಲಾಕ್ಷ ಪ್ರಭು (58) ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇಂದು (ನ.18) ನಿ*ಧನರಾಗಿದ್ದಾರೆ.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿಯೇ ನೇತ್ರ ಶಸ್ತ್ರಚಿಕಿತ್ಸಾ ಕೊಠಡಿಯ ತಂತ್ರಜ್ಞರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಲ್ಪಕಾಲದ ಅಸೌಖ್ಯದಿಂದ ಸಾ*ವನ್ನಪ್ಪಿದ್ದಾರೆ.

ಯಕ್ಷಗಾನ ಕಲಾ ಕ್ಷೇತ್ರಕ್ಕೆ ಅಪೂರ್ವ ಸೇವೆ ಸಲ್ಲಿಸಿರುವ ಕಮಲಾಕ್ಷ ಪ್ರಭು ಸಹಸ್ರಾರು ಮಂದಿ ಯಕ್ಷಗಾನ ಕಲಾವಿದರ ಹುಟ್ಟಿಗೆ ಕಾರಣರಾಗಿದ್ದಾರೆ. ಬಡಗುತಿಟ್ಟಿನ ಯಕ್ಷಗಾನ ಕಲೆಯ ಉಳಿವು-ಬೆಳವಣಿಗೆಯಲ್ಲಿ ಪ್ರಮುಖರಾಗಿದ್ದ ಪ್ರಭು 90 ರ ದಶಕದಲ್ಲಿ ಮಣಿಪಾಲದ ಸರಳೇಬೆಟ್ಟುವಿನಲ್ಲಿ ಬಾಲಮಿತ್ರ ಯಕ್ಷ-ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಿ ಎಳೆಯ ಪ್ರತಿಭೆಗಳಿಗೆ ನಿರಂತರ ಉಚಿತ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದರು. ‘ಬಾಲಮಿತ್ರ ಯಕ್ಷಗಾನ ಮಂಡಳಿ’ ಯು ದೇಶ ಮಾತ್ರವಲ್ಲದೆ ದುಬೈ, ಸಿಂಗಾಪುರ, ಆಫ್ರಿಕಾ ಸೇರಿ ವಿಶ್ವದ ವಿವಿದೆಡೆ ಪ್ರದರ್ಶನ ನೀಡಿದೆ.

ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದ ‘ಮನೆ ಮನೆಗೆ ತೆರಳಿ ಯಕ್ಷಗಾನ’ ಪ್ರದರ್ಶನ ನೀಡುವ ‘ಹೂವಿನ ಕೋಲು’ ಪ್ರಾಕಾರವನ್ನು ನಗರ ಪ್ರದೇಶಕ್ಕೂ ತಲಪಿಸುವ ಸತ್ಕಾರ್ಯ ಮಾಡಿದ್ದರು.

ಮೃ*ತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Continue Reading

LATEST NEWS

Trending

Exit mobile version