ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ: ದೇಶದಲ್ಲಿ ಒಂದೇ ದಿನ 13,586 ಮಂದಿಯಲ್ಲಿ ಸೋಂಕು..!!
Published
5 years agoon
By
Adminಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ: ದೇಶದಲ್ಲಿ ಒಂದೇ ದಿನ 13,586 ಮಂದಿಯಲ್ಲಿ ಸೋಂಕು..!!
ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೊರೊನಾ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದೆ. ಇದುವರೆಗೆ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 3,752 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,20,504 ಕ್ಕೇರಿಕೆಯಾದರೆ ಒಂದೇ ದಿನ 100 ಜನ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 5,751 ಕ್ಕೇರಿಕೆಯಾಗಿದೆ.
ಇವುಗಳ ಮಧ್ಯೆ ಕೊರೊನಾ ವಾರಿಯರ್ಸ್ ಗಳಾದ ಪೊಲೀಸರು ಕೊರೊನಾ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಸೃಷ್ಟಿಸಿದ್ದು 3,820 ಪೊಲೀಸರು ಇದುವರೆಗೆ ಸೋಂಕಿಗೆ ತುತ್ತಾಗಿದ್ದಾರೆ.
45 ಪೊಲೀಸರು ಕೊರೋನಾಕ್ಕೆ ಪ್ರಾಣ ಕಳಕೊಂಡಿದ್ದಾರೆ. ಕೊರೊನಾ ವಿಷಯ ಸಂಬಂಧಿಸಿ ಪೊಲೀಸರ ಮೇಲೆ ದಾಳಿ ನಡೆದಿರುವ 268 ಪ್ರಕರಣ ದಾಖಲಾಗಿದ್ದು 851 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರಕಾರ ಅಧಿಕೃತ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಸರಕಾರದ ಆಶ್ರಯದಲ್ಲಿ 122 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದ್ದು,
ಇಲ್ಲಿ ಇತರ ರಾಜ್ಯಗಳ 4,138 ಕಾರ್ಮಿಕರಿಗೆ ಆಹಾರ ಮತ್ತಿತರ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಇನ್ನು ಕೊರೋನಾ ವೈರಸ್ ಅಟ್ಟಹಾಸ ದೇಶದಲ್ಲಿ ಮುಂದುವರೆದಿದ್ದು, ಒಂದೇ ದಿನ 13,586 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜೂನ್ 19ರ,ಶುಕ್ರವಾರ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 336 ಮಂದಿಯನ್ನು ಮಹಾಮಾರಿ ವೈರಸ್ ಬಲಿಪಡೆದುಕೊಂಡಿದ್ದು, ಈ ಮೂಲಕ ಸಾವಿನ ಸಂಖ್ಯೆ 12,573ಕ್ಕೆ ತಲುಪಿದೆ.
ಇನ್ನು 3,80,532 ಮಂದಿ ಸೋಂಕಿತರ ಪೈಕಿ 2,04,711 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ ದೇಶದಲ್ಲಿ 1,63,248 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
You may like
LATEST NEWS
ಬಸ್ ಕದ್ದ ಪ್ರಕರಣಕ್ಕೆ ಟ್ವಿಸ್ಟ್; ಕಥೆ ಹಾಗಲ್ಲ ಹೀಗೆ ಎಂದ ವಿದೇಶದಲ್ಲಿರುವ ಮಾಲಕ
Published
3 minutes agoon
19/01/2025By
NEWS DESK4ಕಾಪು : ಸೇಲ್ ಮಾಡಿದ ಬಸ್ಸನ್ನು ತಾವೇ ಕದ್ದಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲಿ ತಂದೆ, ಮಗನ ವಿರುದ್ಧ ದೂರು ದಾಖಲಾಗಿತ್ತು. ಇದೀಗ ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳಾಗಿದ್ದು, ಸುಳ್ಳು ದೂರು ದಾಖಲಿಸಲಾಗಿದೆ ಎಂದು ವಿದೇಶದಲ್ಲಿರುವ ಬಸ್ ಮಾಲಕ ಸಮೀರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಬಸ್ಸನ್ನು ಕದ್ದಿಲ್ಲ. ನನ್ನ ಬಸ್ಸನ್ನು ನಾನು ವಾಪಾಸ್ ಪಡೆದುಕೊಂಡಿದ್ದೇನೆ. ಅಲ್ಲದೆ ನನಗೆ ಬಸ್ಸಿನ ಎಲ್ಲ ಮೊತ್ತ ಇದುವರೆಗೂ ಸಿಕ್ಕಿಲ್ಲ ಎಂದು ಸಮೀರ್ ಹೇಳಿದ್ದಾರೆ.
ಏನಿದು ಬಸ್ ಕಥೆ?
ತಮ್ಮ ಬಸ್ಸನ್ನು ತುಮಕೂರಿನ ಮೊಹಮ್ಮದ್ ಗೌಸ್ ಎಂಬವರಿಗೆ ಮಾರಾಟ ಮಾಡಲಾಗಿತ್ತು. ಅದನ್ನು 9,50,000 ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಮೊಹಮ್ಮದ್ ಗೌಸ್ ಅವರು ತಮಗೆ ಚೆಕ್ ಮುಖಾಂತರ 9.50 ಲಕ್ಷ ಪಾವತಿಸಿದ್ದರು. ಆದರೆ ಈ ನಡುವೆ ನಗದೀಕರಣಕ್ಕೆ ಚೆಕ್ ಬ್ಯಾಂಕಿಗೆ ಹಾಕಿದಾಗ ಅದು ಬೌನ್ಸ್ ಆಗಿದೆ. ಅಲ್ಲದೆ ಅವರು ಫೋನ್ ಪೇ ಮುಖಾಂತರ 2.26 ಲಕ್ಷ ಹಾಕಿದ್ದಾರೆ. ಒಂದು ಲಕ್ಷ ನಗದು ಹಣ ಕೊಟ್ಟಿದ್ದಾರೆ. ಬಳಿಕ ನನಗೆ ಸೇರಬೇಕಾದ ಹಣವನ್ನು ಅವರು ಕೊಟ್ಟಿಲ್ಲ. ಆರು ತಿಂಗಳಾದರೂ ಹಣ ಬಂದಿಲ್ಲ. ಹೀಗಾಗಿ ಹಣ ಕೇಳಿದಾಗ ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಅಂತಿದ್ದರು. ಈ ನಡುವೆ ಅವರು ಆರು ತಿಂಗಳ ಕಾಲ ಬಸ್ಸನ್ನು ತುಮಕೂರಿನಲ್ಲಿ ಬಳಸಿದ್ದಾರೆ. ದಾಖಲೆ ಇಲ್ಲದೆ ಬಸ್ ಓಡಿಸಬೇಡಿ ಎಂದರೂ ಕೇಳಿಲ್ಲ. ನನಗೆ ಬೆದರಿಕೆ ಹಾಕಿದ್ದರಿಂದ ಅಲ್ಲದೆ ಹಣವನ್ನೂ ಪಾವತಿಸದೇ ಇದ್ದಿದ್ದರಿಂದ ಬಸ್ಸನ್ನು ಮರಳಿ ವಾಪಾಸ್ ತಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೌಸ್ ಆರೋಪ ಏನು?
ತುಮಕೂರಿನ ನಿವಾಸಿ , ಮೊಹಮ್ಮದ್ ಗೌಸ್ ಎಂಬವರು ಸ್ನೇಹಿತರಲ್ಲಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದಾಗ ಒಎಲ್‌ಎಕ್ಸ್ ಮೂಲಕ ಉಡುಪಿಯ ಕಾಪುವಿನ ಸಮೀರ್ ಅವರ ಬಳಿ ಸೆಕೆಂಡ್ ಹ್ಯಾಂಡ್ ಬಸ್ ಇರುವ ಮಾಹಿತಿ ಪಡೆದುಕೊಂಡಿದ್ದರು. ಸಮೀರ್ ಅವರನ್ನು ಸಂಪರ್ಕಿಸಿ ಬಸ್ ಖರೀದಿಗೆ ಮಗ ಸಿದ್ದೀಕ್ ಹಾಗೂ ಸ್ನೇಹಿತ ಜಾವೇದ್ ಜೊತೆಯಲ್ಲಿ ಕಾಪುವಿನ ಮಲ್ಲಾರ್ ಎಂಬಲ್ಲಿಗೆ ಬಂದಿದ್ದರು.
ಇದನ್ನೂ ಓದಿ : ಮಾಟಮಂತ್ರದ ಹೆಸರು ಹೇಳಿ ವೃದ್ಧೆಗೆ ಮೂತ್ರ ಕುಡಿಸಿದ ಗ್ರಾಮಸ್ಥರು
ಅಲ್ಲಿ ಸಮೀರ್ ಇವರಿಗೆ ಬಸ್ ತೋರಿಸಿದ್ದು, ದಾಖಲೆ ಪತ್ರ ಮತ್ತೆ ಕೊಡುವುದಾಗಿ ಹೇಳಿ ಎರಡು ಲಕ್ಷ ಮುಂಗಡ ಪಡೆದುಕೊಂಡಿದ್ದು, ಬಾಕಿ ಹಣವನ್ನು ಹದಿನೈದು ದಿನಗಳಲ್ಲಿ ಪಡೆದುಕೊಂಡಿದ್ದ. ಆದ್ರೆ, ತುಮಕೂರಿನಲ್ಲಿ ನಿಲ್ಲಿಸಿದ ಬಸ್ಸನ್ನು ಮತ್ತೆ ಉಡುಪಿಗೆ ತಂದಿದ್ದಾರೆ ಎಂದು ಆರೋಪಿಸಿದ್ದರು. ತಂದೆ ಮಗ ಇಬ್ಬರೂ ಸೇರಿ ವಂಚಿಸಿದ್ದಾಗಿ ಕಾಪು ಠಾಣೆಗೆ ಗೌಸ್ ದೂರು ನೀಡಿದ್ದರು.
ನಾಗ ಚೈತನ್ಯ ಜೊತೆ ನಟಿ ಸಮಂತಾ, ವಿಚ್ಛೇದನ ಪಡೆದು ಮೂರು ವರ್ಷ ಕಳೆದಿದೆ. ನಾಗ ಚೈತನ್ಯ ಈಗಾಗಲೇ ಎರಡನೇ ಮದುವೆಯಾಗಿದ್ದಾರೆ. ಆದರೆ ನಟಿ ಸಮಂತಾ ಮಾತ್ರ ಸಿಂಗಲ್ ಆಗಿ ಉಳಿದಿದ್ದಾರೆ. ಆದರೆ ಸಮಂತಾ, ಖ್ಯಾತ ನಿರ್ದೇಶಕನೊಬ್ಬನೊಟ್ಟಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರಕತೆ, ವೆಬ್ ಸರಣಿಗಳನ್ನು ನಿರ್ದೇಶನ ಮಾಡುತ್ತಿರುವ ನಿರ್ದೇಶಕನ ಜೊತೆ ಸಮಂತಾ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೂ ಹರಿದಾಡಿತ್ತು. ಆದರೆ ಇದೀಗ ಸುದ್ದಿ ಖಾತ್ರಿಯಾಗಿದೆ ಎನ್ನಲಾಗುತ್ತಿದೆ.
ಸಮಂತಾ, ಇತ್ತೀಚೆಗೆ ಗಲಾಟಾ ಇಂಡಿಯಾ ಹೆಸರಿನ ತಮಿಳು ಯೂಟ್ಯೂಬ್ ಚಾನೆಲ್ಗೆ ಸಂದೇಶ ನೀಡುತ್ತಿದ್ದರಂತೆ. ಸಂದರ್ಶನದ ಮಧ್ಯೆ ಸಮಂತಾ ವಾಟ್ಸ್ಆಪ್ಗೆ ಸಂದೇಶವೊಂದು ಬಂತಂತೆ. ಅದೂ ಆಡಿಯೋ ಸಂದೇಶ. ಆ ಆಡಿಯೋ ಸಂದೇಶವನ್ನು, ಸಂದರ್ಶನದ ನಡುವೆಯೇ ಸಮಂತಾ ತೆರೆದು ಕೇಳಿಸಿಕೊಂಡಿದ್ದಾರೆ. ಆ ಬಳಿಕ ಅವರ ಮುಖ ಚಹರೆಯೇ ಬದಲಾಯ್ತಂತೆ. ಸಂದೇಶ ಕೇಳಿಸಿಕೊಂಡ ಬಳಿಕ ನಟಿ ನಾಚಿ ನೀರಾದರಂತೆ. ಆ ಬಳಿಕ ಇನ್ನಷ್ಟು ಉತ್ಸಾಹದಿಂದ ಸಂದರ್ಶನ ಮುಂದುವರೆಸಿದರಂತೆ. ಅಲ್ಲೇ ಇದ್ದವರ ಪ್ರಕಾರ ಆ ಸಂದೇಶ ಒಬ್ಬ ಯುವ ನಿರ್ದೇಶಕನದ್ದು.
ಖ್ಯಾತ ವೆಬ್ ಸರಣಿ ನಿರ್ದೇಶಕ ಜೋಡಿಯಾದ ರಾಜ್ ಆಂಡ್ ಡಿಕೆ ಅವರಲ್ಲಿ ರಾಜ್ ಜೊತೆಗೆ ಸಮಂತಾ ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇದೆ. ಇದೀಗ ಸಮಂತಾ, ಗಲಾಟಾ ಇಂಡಿಯಾ ಸಂದರ್ಶನದ ಸಮಯದಲ್ಲಿ ರಾಜ್ ಅವರಿಂದಲೇ ಸಂದೇಶ ಸ್ವೀಕರಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ರಾಜ್ ಕಳಿಸಿದ್ದಾರೆ ಎನ್ನಲಾಗುತ್ತಿರುವ ಆ ಆಡಿಯೋ ಸಂದೇಶದಲ್ಲಿ ನಿಖರವಾಗಿ ಏನಿತ್ತು ಎಂಬುದು ತಿಳಿದು ಬಂದಿಲ್ಲ. ರಾಜ್ ನಿಧಿಮೋರು ಖ್ಯಾತ ನಿರ್ದೇಶಕ. ಈ ಮುಂಚೆ ಟಿವಿ ಎಪಿಸೋಡ್ಗಳಿಗೆ ಚಿತ್ರಕತೆ ಬರೆಯುತ್ತಿದ್ದರು. ಸಮಂತಾ ನಟಿಸಿದ ಮೊದಲ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್’ ಇವರೇ ನಿರ್ದೇಶನ ಮಾಡಿದ್ದರು. ಅದರ ಹೊರತಾಗಿ ‘ಗನ್ಸ್ ಆಂಡ್ ಗುಲಾಬ್ಸ್’, ‘ಫರ್ಜಿ’ ಇನ್ನೂ ಕೆಲವು ವೆಬ್ ಸರಣಿಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಸಮಂತಾ ನಟಿಸುತ್ತಿರುವ ‘ರಕ್ತ ಬ್ರಹ್ಮಾಂಡ್’ ವೆಬ್ ಸರಣಿಗೆ ಇವರೇ ನಿರ್ಮಾಪಕರು. ಅಂದಹಾಗೆ ಸಮಂತಾ ಜೊತೆಗೆ ಹೆಸರು ಕೇಳಿ ಬರುತ್ತಿರುವ ರಾಜ್ಗೆ ಈಗಾಗಲೇ ಮದುವೆ ಆಗಿದೆ.
DAKSHINA KANNADA
ನಾಳೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಹಾರಕ್ಕೆ
Published
42 minutes agoon
19/01/2025By
NEWS DESK3ಮಂಗಳೂರು : ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಜ. 20 ಮತ್ತು 21ರಂದು ಬಿಹಾರಕ್ಕೆ ತೆರಳಿದ್ದಾರೆ.
ಪಾಟ್ನಾದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಪೀಠಾಸೀನಾ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಲಿರುವ ಅವರು “ಸಂವಿಧಾನದ 75ನೇ ವಾರ್ಷಿಕೋತ್ಸವ: ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಸಂಸತ್ತು ಮತ್ತು ಶಾಸಕಾಂಗ ಸಂಸ್ಥೆಗಳ ಕೊಡುಗೆ” ಎಂಬ ವಿಷಯದಲ್ಲಿ ತಮ್ಮ ಅನಿಸಿಕೆಗಳನ್ನು ಮಂಡಿಸಲಿದ್ದಾರೆ.
ಇದನ್ನೂ ಓದಿ: ತುಳುಚಲನಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ
ಈ ಸಮ್ಮೇಳನದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪೀಠಾಸೀನ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
LATEST NEWS
ಮಾಟಮಂತ್ರದ ಹೆಸರು ಹೇಳಿ ವೃದ್ಧೆಗೆ ಮೂತ್ರ ಕುಡಿಸಿದ ಗ್ರಾಮಸ್ಥರು
ರಾಯಚೂರು ಡಿಸಿ ಆಗಿದ್ದವರು…ಸನ್ಯಾಸಿ ಆಗಿದ್ದು ಹೇಗೆ ?
ಮಹಾಕುಂಭ ಮೇಳದಲ್ಲಿ ಜನಪ್ರಿಯರಾಗುತ್ತಿದ್ದಾರೆ ರಷ್ಯಾ ಬಾಬ
ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಗುಂಡಿಕ್ಕಿ ಹ*ತ್ಯೆ
ಆರ್.ಜಿ.ಕರ್ ವಿದ್ಯಾರ್ಥಿನಿಯ ಅತ್ಯಾ*ಚಾರ, ಕೊ*ಲೆ ಪ್ರಕರಣ; ನ್ಯಾಯಾಲಯದಿಂದ ಮಹತ್ವದ ತೀರ್ಪು
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡ ಪ್ರಕಟ
Trending
- BIG BOSS6 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS5 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS5 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
- BIG BOSS6 days ago
ಬಿಗ್ ಬಾಸ್ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?