ಮಂಗಳೂರು/ಪ್ರಯಾಗ್‌ರಾಜ್ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ವಿಶಿಷ್ಟ ಕಣ್ಣಿನ ಸುಂದರಿ ಮೊನಾಲಿಸಾ ಭೋಸ್ಲೆ (16) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಾಂತಿಯುತ ಸೌಂದರ್ಯದಿಂದ ವೈರಲ್ ಆಗಿದ್ದರು.
2025ರ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ, ಮಣಿಸರಗಳ ಮಾರಾಟಕ್ಕೆಂದು ಬಂದ ಮಧ್ಯಪ್ರದೇಶ ಮೂಲದ ಮೊನಾಲಿಸಾ ಅವರು ತಮ್ಮ ಕಣ್ಣಿನ ಸೌಂದರ್ಯದ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ.
ಇದರಿಂದ ರುದ್ರಾಕ್ಷಿ ಮಾಲೆಗಳನ್ನು ಖರೀದಿಸುವವರ ಸಂಖ್ಯೆ ಕಡೆಮೆಯಾಗಿದ್ದು, ಬದಲಿಗೆ ಆಕೆ ಜತೆಗೆ ಸೆಲ್ಫಿ, ಫೋಟೋಗೆ ಮುಗಿಬಿದ್ದು, ವ್ಯಾಪಾರಕ್ಕೂ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ಅವರ ತಂದೆ, ಇಂದೋರ್‌ನಲ್ಲಿರುವ ತಮ್ಮ ಮನೆಗೆ ವಾಪಸ್ ಕಳುಹಿಸಿದ್ದಾರೆ.
ಮೊನಾಲಿಸಾ ಯಾರು?
ನೆಟ್ಟಿಗರು ಪ್ರೀತಿಯಿಂದ “ಕಂದು ಸುಂದರಿ” ಎಂದು ಕರೆಯಲ್ಪಡುವ ಮೊನಾಲಿಸಾ ಭೋಸ್ಲೆ ಇಂದೋರ್‌ನ ಯುವತಿಯಾಗಿದ್ದು, ತನ್ನ ನೋಟದಿಂದಲೇ ಮೋಡಿ ಮಾಡಿ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾಳೆ. ತಮ್ಮ ಮನಮೋಹಕ ಕಣ್ಣುಗಳಿಂದಲೇ ಖ್ಯಾತಿ ಪಡೆದಿದ್ದಾಳೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ, ಮಣಿಸರಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ ಅವರ ವಿಡಿಯೋ ಅನೀರಿಕ್ಷಿತವಾಗಿ ವೈರಲ್ ಆಗಿದ್ದು, 15 ಮಿಲಿಯನ್ ವಿಕ್ಷಣೆ ಗಳಿಸಿದೆ. ಒಂದೇ ದಿನದಲ್ಲಿ ದೇಶವ್ಯಾಪಿ ಪ್ರಸಿದ್ದಿ ಪಡೆದಿದ್ದಾಳೆ.
ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆ ಸಮೀಪಿಸಿದೆ. ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೊಂದು ವೀಕ್ಷಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ.
ಗ್ರ್ಯಾಂಡ್ ಫಿನಾಲೆಗೆ ಹತ್ತಿರ ಇರುವಾಗಲೇ ಗೌತಮಿ ಜಾಧವ್ ಮತ್ತು ಧನರಾಜ್ ಆಚಾರ್ ಆಚೆ ಬಂದಿದ್ದಾರೆ. ಹೀಗಾಗಿ ಫಿನಾಲೆ ವಾರಕ್ಕೆ 6 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಆರು ಮಂದಿ ಸ್ಪರ್ಧಿಗಳಲ್ಲಿ ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೂ ಶುರುವಾಗಿದೆ. ಇದಕ್ಕೆ ಒಂದಿಷ್ಟು ಕಾರಣಗಳನ್ನು ನೋಡುವುದಾದರೆ, ಬಿಗ್ ಬಾಸ್ ಸೀಸನ್ 11 ಅನ್ನು ವಿಶ್ಲೇಷಣೆ ಮಾಡಿದಾಗ ಕೆಲವೊಂದಿಷ್ಟು ಸುಳಿವುಗಳು ಸಿಗುತ್ತವೆ. ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲೇ ಬಿಟ್ಟ ಪ್ರೋಮೋದಲ್ಲಿ ಈ ಬಾರಿ ಎಲ್ಲವೂ ಎರಡೆರಡು ಇರಲಿವೆ ಎನ್ನುವ ಸಂಗತಿಯನ್ನು ತಿಳಿಸಿದ್ದರು.
ಈ ಮಾದರಿಯಲ್ಲಿ ನೋಡುವುದಾದರೆ, ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲಿ ಯಾವ ಸೀಸನ್‌ಗಳಲ್ಲೂ ಇಲ್ಲದ ಸ್ವರ್ಗ ಮತ್ತು ನರಕ ಎಂಬ ಎರಡು ಎರಡು ಮನೆಗಳನ್ನು ಮಾಡಲಾಗಿತ್ತು. ಎರಡರಲ್ಲೂ ಸ್ಪರ್ಧಿಗಳನ್ನು ಹಾಕಲಾಗಿತ್ತು. ಇಬ್ಬರಿಗೂ ಟಾಸ್ಕ್‌ಗಳನ್ನು ಮತ್ತು ಮನೆಯ ಕೆಲಸಗಳಲ್ಲಿಯೂ ವ್ಯತ್ಯಾಸವಿತ್ತು.
ಆರಂಭದಲ್ಲಿ ಬಿಗ್ ಬಾಸ್ ಎರಡು ಮನೆಗಳಿಂದ ಶುರುವಾದ ಕಾರಣ ಈ ಸಲ ವಿನ್ನರ್ ಕೂಡ ಇಬ್ಬರು ಆಗಬಹುದೆಂಬ ಅನುಮಾನ ಹೆಚ್ಚಾಗಿತ್ತು. ಸ್ವರ್ಗ ವಾಸಿಗಳಲ್ಲಿ ಒಬ್ಬರನ್ನು ಮತ್ತು ನರಕ ವಾಸಿಗಳಲ್ಲಿ ಒಬ್ಬರನ್ನು ಸೇರಿ ಇಬ್ಬರು ಸ್ಪರ್ಧಿಗಳನ್ನು ವಿನ್ನರ್ ಮಾಡಬಹುದೆಂಬ ಅನುಮಾನ ಮೂಡಿತ್ತು.
ಆ ಪ್ರಕಾರ ನೋಡುವುದಾದರೆ, ಬಿಗ್ ಬಾಸ್ ಕನ್ನಡ ಸೀಸನ್ 11ರ ನರಕವಾಸಿಗಳಲ್ಲಿ ಮೋಕ್ಷಿತಾ ಪೈ ಒಬ್ಬರೇ ಈಗ ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್ ಮತ್ತು ಭವ್ಯಾ ಫಿನಾಲೆ ಹಂತದಲ್ಲಿದ್ದಾರೆ. ಇನ್ನುಳಿದ ಹನುಮಂತ ಮತ್ತು ರಜತ್ ವೈಲ್ಡ್ ಕಾರ್ಡ್ ಎಂಟ್ರಿಗಳಾಗಿದ್ದಾರೆ.
ಬಿಗ್ ಬಾಸ್ ಸೀಸನ್ 3 ರಲ್ಲಿ ನಟಿ ಶೃತಿ ಹೊರತು ಪಡಿಸಿದರೆ ಬೇರೆ ಯಾವ ಸೀಸನ್‌ನಲ್ಲೂ ಮಹಿಳಾ ಸ್ಪರ್ಧಿಗಳು ವಿನ್ನರ್ ಆಗಿರಲಿಲ್ಲ. ಹೀಗಾಗಿ ಈ ಬಾರಿ ನರಕವಾಸಿಗಳಲ್ಲಿ ಫಿನಾಲೆ ಹಂತಕ್ಕೆ ಬಂದ ಒನ್ ಆಂಡ್ ಓನ್ಲಿ ಸ್ಪರ್ಧಿ ಮೋಕ್ಷಿತಾ ಅವರಿಗೆ ಗೆಲುವಿನ ಸಿಹಿ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.
ಇನ್ನು ಬಿಗ್ ಬಾಸ್ ವೀಕ್ಷಕರ ಪ್ರಕಾರ ಸ್ವರ್ಗವಾಸಿಗಳಲ್ಲಿ ಉಗ್ರಂ ಮಂಜು, ತ್ರಿವಿಕ್ರಮ್ ಮತ್ತು ಭವ್ಯಾ ಈ ಮೂವರಲ್ಲಿ ಮಂಜು ಅವರನ್ನು ವಿನ್ನರ್ ಮಾಡಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಸೀಸನ್ 11 ರಲ್ಲಿ ಉಗ್ರಂ ಮಂಜು ಕ್ಯಾಪ್ಟನ್ ಆದ ವೇಳೆ ರಾಜನ ಟಾಸ್ಕ್ ಒಂದನ್ನು ನೀಡಲಾಗಿತ್ತು. ಅಲ್ಲಿ ಮಂಜು ರಾಜನಾಗಿದ್ದರು. ಇವರಿಗೆ ತಂಗಿಯಾಗಿದ್ದ ಮೋಕ್ಷಿತಾ ಯುವರಾಣಿಯಾಗಿದ್ದರು. ಈ ಟಾಸ್ಕ್ ಮೂಲಕ ಇವರಿಬ್ಬರು ವಿನ್ನರ್ ಎಂಬ ಸುಳಿವನ್ನು ಮೊದಲೇ ನೀಡಿದ್ದರಾ ಎಂಬ ಡೌಟ್ ವೀಕ್ಷಕರ ಮನದಲ್ಲಿ ಮೂಡಿದೆಯಂತೆ.
ಈ ಕಾರಣದಿಂದ ಮೋಕ್ಷಿತಾ ಮತ್ತು ಮಂಜು ಇಬ್ಬರೂ ಬಿಗ್ ಬಾಸ್ ವಿನ್ನರ್ ಆಗಬಹುದು ಅಥವಾ ಉಗ್ರಂ ಮಂಜು ವಿನ್ನರ್ ಆಗಿ ಮೋಕ್ಷಿತಾ ರನ್ನರ್ ಆಗಬಹುದು ಇಲ್ಲವೇ ಮೋಕ್ಷಿತಾ ವಿನ್ನರ್ ಆಗಿ ಮಂಜು ರನ್ನರ್ ಆಗಬಹುದು ಎಂಬ ಸುದ್ದಿ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಟ್ರೋಫಿ ನೀಡಿದ ಸುಳಿವೇನು ?
ಈ ಬಾರಿಯ ಬಿಗ್ ಬಾಸ್ ಟ್ರೋಫಿ ಕೂಡ ತುಂಬಾ ಡಿಫರೆಂಟ್ ಆಗಿದೆ. ಪ್ರತಿ ಬಾರಿ ಕಣ್ಣನ್ನು ಹೊಂದಿರುತ್ತಿದ್ದ ಬಿಗ್ ಬಾಸ್ ಟ್ರೋಫಿ ಈ ಬಾರಿ ಎರಡು ರೆಕ್ಕೆಗಳನ್ನು ಹೊಂದಿದೆ. ಎರಡು ರೆಕ್ಕೆಗಳ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಎಂದು ಬರೆದಿದ್ದು, ಇದು ಡಬಲ್ ವಿನ್ನರ್ ಸುಳಿವಿರಬಹುದು ಎನ್ನಲಾಗ್ತಿದೆ.
ಈ ಎಲ್ಲಾ ವೈರಲ್ ಸಂಗತಿಗಳು ಬಿಗ್ ಬಾಸ್ ವೀಕ್ಷಕರಲ್ಲಿ ಮೂಡಿರುವ ಅನುಮಾನವಾಗಿದೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಸಿಗಲಿದೆ.
ಮಂಗಳೂರು/ಹರ್ಯಾಣ : ಭಾರತದ ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾಗಿರುವ ನೀರಜ್ ಸದ್ದಿಲ್ಲದೆ ವಿವಾಹವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ತನ್ನ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ವಿಚಾರ ಬಹಿರಂಗ ಪಡಿಸಿದ್ದಾರೆ.
ಜೀವನದ ಹೊಸ ಅಧ್ಯಾಯನವನ್ನು ಕುಟುಂಬದೊಂದಿಗೆ ಶುರು ಮಾಡಿದ್ದೇನೆ. ನಮ್ಮನ್ನು ಈ ಹಂತಕ್ಕೆ ತಲುಪಿಸಿದ ಪ್ರತಿಯೊಂದು ಆಶೀರ್ವಾದಕ್ಕೂ ಕೃತಜ್ಞ. ಸಂತೋಷ, ಪ್ರೀತಿಯಿಂದ ಬಂಧ ಬೆಸೆದಿದೆ. ನೀರಜ್ – ಹಿಮಾನಿ ಎಂದು ಶೀರ್ಷಿಕೆ ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ ನೀರಜ್. ಹಿಮಾನಿ ಮೋರ್ ಸೋನಿಪತ್ ಮೂಲದವರಾಗಿದ್ದು, ಯುಎಸ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ನವದಂಪತಿ ಹನಿಮೂನ್‌ಗೆ ತೆರಳಿದ್ದಾರೆ ಎನ್ನಲಾಗಿದೆ.
ಹಿಮಾನಿಯೂ ಕ್ರೀಡಾಪಟು:
ನೀರಜ್ ಚೋಪ್ರಾ ಮದುವೆ ಫೋಟೋಗಳನ್ನು ಹಂಚಿಕೊಂಡ ಮೇಲೆಯೆ ಅವರು ವಿವಾಹವಾಗಿರುವ ವಿಚಾರ ಗೊತ್ತಾಗಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ನೀರಜ್ ಚೋಪ್ರಾ ಕೈ ಹಿಡಿದ ಯುವತಿ ಯಾರು ಎಂಬ ಕುತೂಹಲ ಮನೆ ಮಾಡಿದೆ. ಗೂಗಲ್‌ನಲ್ಲಿ ಹಿಮಾನಿ ಬಗ್ಗೆ ಹುಡುಕಾಟ ನಡೆಸಲಾಗಿದೆ.
ಹಿಮಾನಿ ಮೋರ್ ಟೆನಿಸ್ ತಾರೆಯೂ ಹೌದು. ಸೋನಿಪತ್‌ನ ಲಿಟಲ್ ಏಂಜಲ್ಸ್ ಶಾಲೆಯಲ್ಲಿ ಓದಿದ್ದಾರೆ. ಲೂಯಿಸಿಯಾನ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಫ್ರಾಂಕ್ಲಿನ್ ಪಿಯರ್ಸ್ ವಿಶ್ವವಿದ್ಯಾನಿಲಯದಲ್ಲಿ ಟೆನಿಸ್ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಮಿರಾಂಡಾ ಹೌಸ್‌ನಲ್ಲಿ ರಾಜ್ಯ ಶಾಸ್ತ್ರ ಮತ್ತು ಭೌತಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸದ್ಯ ಯುಎಸ್‌ಯಲ್ಲಿ ಓದುತ್ತಿದ್ದಾರೆ. ಅಂದಹಾಗೆ ಹಿಮಾನಿ ಸಹೋದರ ಹಿಮಾಂಶು ಕೂಡ ಟೆನಿಸ್ ಆಟಗಾರ ಎಂದು ತಿಳಿದುಬಂದಿದೆ.
ಅಭಿಮಾನಿಗಳಿಂದ ಶುಭಾಶಯ :
ಒಂದಿಂಚು ಮಾಹಿತಿ ನೀಡದೆ ಮದುವೆಯಾಗಿ ಶಾ*ಕ್ ಕೊಟ್ಟಿದ್ದಾರೆ ನೀರಜ್ ಚೋಪ್ರಾ. ನೀರಜ್ ಚೋಪ್ರಾ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ನವದಂಪತಿಗೆ ಅಭಿನಂದನೆಗಳು. ಚೆನ್ನಾಗಿರಿ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದಿದ್ದ ನೀರಜ್ ಚೋಪ್ರಾ ಎಲ್ಲರ ಮನ ಗೆದ್ದಿದ್ದರು. ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಈ ಮೂಲಕ ಸತತ 2 ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಮಂಗಳೂರು : ಮಹಾನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಕಲುಷಿತವಾಗಿದೆ. ಎಸ್ ಟಿಪಿಗಳು ನೀರಿನ ಮೂಲವನ್ನು ಸೇರುತ್ತಿದ್ದು, ಕೊಳಚೆ ನೀರನ್ನೇ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಮೇಯರ್ ಅವರಿಗೆ ಈಗಾಗಲೇ ಎರಡು ಬಾರಿ ಮನವಿ ಮಾಡಿ ಸದನದ ಬಾವಿಗಿಳಿದರೂ ಪ್ರಯೋಜನವಾಗಿಲ್ಲ. ಸತ್ಯಶೋಧನಾ ಸಮಿತಿ ರಚಿಸುವುದಕ್ಕೂ ಪಾಲಿಕೆಯ ಆಡಳಿತ ಮುಂದಾಗಿಲ್ಲ. ಹೀಗಾಗಿ ನಾವೇ ಸಮಿತಿ ರಚಿಸಿ ತನಿಖೆ ಮಾಡಿದ್ದೇವೆ. ಎಲ್ಲಿ ಎಸ್‌ಟಿಪಿ ಕೊಳಚೆ ನೀರು ಸೇರುತ್ತಿದೆಯೋ ಅಲ್ಲಿ ಹೋಗಿ ಪ್ರತ್ಯಕ್ಷ ವರದಿ ತಯಾರಿಸಿ ಅದನ್ನು ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಭೇಟಿಯ ಸಂದರ್ಭದಲ್ಲಿ ನೀಡಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಈ ಬಗ್ಗೆ ತನಿಖೆ ಮಾಡುವಂತೆ ಪಾಲಿಕೆಯ ನೂತನ ಕಮಿಷನರ್ ಅವರಿಗೆ ಸತ್ಯಶೋಧನಾ ವರದಿ ನೀಡಿದ್ದೇವೆ. ನಾವು ದೂರು ಕೊಟ್ಟು ಸುಮ್ಮನೆ ಇರುವುದಿಲ್ಲ. ಅದು ನಿಜವೇ ಸುಳ್ಳೇ ಎಂಬ ಬಗ್ಗೆ ತನಿಖೆ ಮಾಡುತ್ತೇವೆ. ಪಚ್ಚನಾಡಿ, ಬಜಾಲ್, ಮಧ್ಯದಲ್ಲಿರುವ ಎಸ್ ಟಿಪಿಯನ್ನು ನಿರ್ವಹಣೆ ಮಾಡಲು ಎಂಆರ್ ಪಿಎಲ್ ಕಂಪೆನಿಗೆ ಒಪ್ಪಿಸಬೇಕಿದೆ. ಇದರಿಂದ ನಿರ್ವಹಣೆ ವೆಚ್ಚ ಕಡಿಮೆಯಾಗುವುದಲ್ಲದೆ ಮಂಗಳೂರಿನ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತದೆ. ಮಧ್ಯದಲ್ಲಿರುವ ಎಸ್ ಟಿಪಿಯಲ್ಲಿ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಇದರಿಂದಾಗಿ ಅಲ್ಲಿಗೆ ಸಮೀಪದ ಖಂಡಿಗೆ ಎಂಬಲ್ಲಿ ತೋಡು, ಕೆರೆಯ ನೀರು ಕಲುಷಿತಗೊಂಡಿದೆ. ಪರಿಣಾಮ ವರ್ಷಕ್ಕೊಮ್ಮೆ ನಡೆಯುವ ಖಂಡಿಗೆ ಮೀನು ಹಿಡಿಯುವ ಜಾತ್ರೆಗೆ ಕಂಟಕ ಎದುರಾಗಿದೆ.
ಕೆರೆಗೆ ಇಳಿದರೆ ಮಾರಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಿಮ್ಮ ಆಡಳಿತದಲ್ಲಿ ಹೀಗಿರಲಿಲ್ವಾ ಅಂತಾ ಕೇಳ್ತಾರೆ. ಹೌದು ನಮ್ಮ ಕಾಲದಲ್ಲಿ ಕೆರೆಯ ನೀರಲ್ಲಿ ಬಟ್ಟೆ ತೊಳೆಯುತ್ತಿದ್ದರು. ಮೀನು ಹಿಡೀತಿದ್ದರು. ಈಗ ನೀರಿನ ಮೂಲಗಳಿಗೆ ಇಳಿಯುವ ಹಾಗೇ ಇಲ್ಲ. ಇದಕ್ಕೆ ಯಾರು ಹೊಣೆ? ಎಂದು ವಾಗ್ದಾಳಿ ನಡೆಸಿದರು.
ಎಸ್ ಟಿಪಿ ಚಾಲನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ. ಅಲ್ಲಿ 13 ಜನರಿಗೆ ನಿರ್ವಹಣೆಗೆ ಸಂಬಳ ನೀಡಲಾಗುತ್ತದೆ. ಆದರೆ ಯಾರೂ ಅಲ್ಲಿಲ್ಲ. ಕರೆಂಟ್ ಹೋದರೆ ಜನರೇಟರ್ ಇಲ್ಲ. ಒಂದು ಎಸ್ ಟಿಪಿಗೆ ವರ್ಷಕ್ಕೆ ಒಂದೂವರೆ ಕೋಟಿಯಂತೆ ಮೂರು ಎಸ್ ಟಿಪಿಗೆ ನಾಲ್ಕೂವರೆ ಕೋಟಿ ಹಣ ಪಡೆಯುತ್ತಾರೆ. ಇದೆಂತ ಸಾಧನೆ? ಇನ್ನಾದರೂ ಈ ಬಗ್ಗೆ ಕ್ರಮ ಜರುಗಿಸದೆ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Pingback: ಮಂಗಳೂರಿನ ಜನತೆಗೆ ಕಲುಷಿತ ನೀರು; ಎಸ್‌ಟಿಪಿಯಲ್ಲಿ ಜನರೇಟರ್ ಇಲ್ಲ, ಮನೆಯಲ್ಲಿರುವ 13 ಸಿಬ್ಬಂದಿಗೆ ಸಂಬಳ : ಐವಾನ್ ಡ