Connect with us

LATEST NEWS

ಮಹಾಕುಂಭ ಮೇಳ 2025: ಗಮನ ಸೆಳೆಯುತ್ತಿರುವ ನಾಗಾ ಸಾಧ್ವಿಗಳು

Published

on

ಮಂಗಳೂರು/ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ-2025 ಜನವರಿ 13 ಕ್ಕೆ ಆರಂಭವಾಗಿದ್ದು, ಫೆಬ್ರುವರಿ 26ರ ತನಕ ನಡೆಯಲಿದೆ. ಮಹಾ ಕುಂಭಮೇಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು, ಅಪಾರವಾದ ನಂಬಿಕೆ, ಶ್ರದ್ಧೆಯು ಸಂಕೇತವಾಗಿದೆ. ಉತ್ತರ ಪ್ರದೇಶ ಸರ್ಕಾರ ಮಹಾ ಕುಂಭಮೇಳಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದೆ. ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾ ಕುಂಭಮೇಳ ಬಹಳ ವಿಶೇಷವಾಗಿದ್ದು, 114 ವರ್ಷಗಳ ಬಳಿಕ ಈ ಮಹಾ ಕುಂಭಮೇಳ ನಡೆಯುತ್ತಿದೆ. ಇಲ್ಲಿ ದೇಶದ ನಾಗಾಸಾಧುಗಳು ಆಗಮಿಸಿದ್ದು, ಇದೀಗ ಮಹಿಳಾ ನಾಗಾಸಾಧುಗಳು ಬಹಳ ವಿಶೇಷವಾಗಿ ಆಕರ್ಷಣೀಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಪುರುಷ ನಾಗಾ ಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದು, ಅವರು ಕುಟುಂಬ ಮತ್ತು ಭೌತಿಕ ಆಸ್ತಿಗಳ ಜೊತೆಗೆ ತಮ್ಮ ಎಲ್ಲಾ ಬಾಂಧವ್ಯಗಳನ್ನು ಕಡಿದು, ತಪಸ್ಸಿನ ಜೀವನವನ್ನು ಸ್ವೀಕರಿಸುತ್ತಾರೆ. ನಾಗಾ ಸಾಧ್ವಿಗಳಿಗೆ ನೀಡುವ ದೀಕ್ಷಾ ಪ್ರಕ್ರಿಯೆಯೂ ಪುರುಷರಿಗೆ ನೀಡುವುದರಷ್ಟೇ ಕಠಿಣವಾಗಿದೆ. ಅವರು ತಮ್ಮ ಗುರುಗಳಿಗೆ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಬೇಕು. ಗುರು ಆಕೆಯನ್ನು ಒಪ್ಪಿಕೊಳ್ಳುವ ಮೊದಲು ತೀವ್ರವಾದ ಆಧ್ಯಾತ್ಮಿಕ ಪರೀಕ್ಷೆಗಳು ಮತ್ತು ತರಬೇತಿಗಳಿಗೆ ಒಳಗಾಗಬೇಕು. ಆಧ್ಯಾತ್ಮಿಕ ಅನ್ವೇಷಣೆಗಾಗಿ ತಮ್ಮ ಲೌಕಿಕ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿರುತ್ತಾರೆ. ಅವರು ತಮ್ಮ ಹಿಂದಿನ ಜೀವನದಿಂದ ಎಲ್ಲವನ್ನೂ ಬಿಟ್ಟು ಆಧ್ಯಾತ್ಮಿಕ ಮಾರ್ಗಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸ್ತ್ರೀ ನಾಗಾಸಾಧುಗಳು ವಿರಕ್ತ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಸಂಸಾರ, ದಾಂಪತ್ಯದ ಕಡೆಗೆ ಇವರು ಹೊರಳುವಂತಿಲ್ಲ. ಹಾಗೆ ಹೋದರೆ ಅವರನ್ನು ನಾಗಾ ಪಂಥದಿಂದ ತೆಗೆಯುಲಾಗುತ್ತದೆ.

ನಾಗಾ ಸಾಧ್ವಿಗಳು ಆಂತರಿಕವಾಗಿ ಹೆಚ್ಚಿನ ಸಾಧನೆ ಮಾಡುತ್ತಾರೆ. ಯಾಕೆಂದರೆ ಪುರುಷರಿಗಿಂತ ಇವರ ಹಾರ್ಮೋನುಗಳು ದೇಹದಲ್ಲಿ ಈ ಕಠಿಣ ವ್ರತಗಳ ಸಂದರ್ಭದಲ್ಲಿ ಯದ್ವಾತದ್ವಾ ವರ್ತಿಸುತ್ತವೆ. ಜೊತೆಗೆ, ಇವರು ಆಕರ್ಷಕವಾಗಿದ್ದರೆ, ಇತರ ಪುರುಷರ ಅಥವಾ ನಾಗಾ ಸಾಧುಗಳ ವೇಷದಲ್ಲಿರುವ ದುರುಳರ ಕಣ್ಣು ಕೂಡ ಇವರ ಮೇಲೆ ಬಿದ್ದು ಅನಾಹುತ ಆಗುವ ಸಾಧ್ಯತೆಗಳಿರುತ್ತವೆ. ಆದರೆ ಪರಿಪಕ್ವ ನಾಗಾ ಸಾಧ್ವಿಗಳು ತಮ್ಮ ಕಠೋರವಾದ ದೃಷ್ಟಿ ಮಾತ್ರದಿಂದಲೇ ದುಷ್ಟರನ್ನು ಹಿಮ್ಮೆಟ್ಟಿಸಬಲ್ಲರು. ದೀಕ್ಷೆಗೆ ಮುನ್ನ ನಾಗಾ ಸಾಧ್ವಿಗಳು ಆರರಿಂದ ಹನ್ನೆರಡು ವರ್ಷಗಳ ಕಾಲ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸಬೇಕಾಗುತ್ತದೆ. ಅವರು ತಮ್ಮ ಸಾಧನೆ ಅಥವಾ ತೀವ್ರವಾದ ತಪಸ್ಸಿನ ಸಮಯದಲ್ಲಿ ಸಾಮಾನ್ಯವಾಗಿ ಗುಹೆಗಳು, ಕಾಡುಗಳು ಅಥವಾ ಪರ್ವತಗಳಂತಹ ಪ್ರತ್ಯೇಕ ಸ್ಥಳಗಳಲ್ಲಿ ವಾಸವಿರಬೇಕಾಗುತ್ತದೆ. ಸಾಮಾನ್ಯವಾಗಿ ನಾಗಾ ಸಾಧ್ವಿಗಳು ಅಖಾಡಗಳು ಅಥವಾ ಸನ್ಯಾಸಿಗಳಿರುವ ಆಶ್ರಮಗಳಲ್ಲಿ ವಾಸಿಸುತ್ತಾರೆ. ಪುರುಷ ನಾಗಾ ಸಾಧುಗಳು ಮೈಮೇಲೆ ಒಂದೆಳೆ ಬಟ್ಟೆಯಿಲ್ಲದೆ ಓಡಾಡಬಲ್ಲರು. ಆದರೆ ಸಾಧ್ವಿಗಳು ಹಾಗೆ ಮಾಡಲಾರರು. ಯಾಕೆಂದರೆ ಸಮಾಜ ಅವರನ್ನು ಹಾಗೆ ಒಪ್ಪಿಕೊಳ್ಳಲಾರದು. ಬದಲಾಗಿ ಅವರು “ಗಂಟಿ” ಎಂದು ಕರೆಯಲ್ಪಡುವ ಕುಂಕುಮ ಬಣ್ಣದ ಬಟ್ಟೆಯನ್ನು ಧರಿಸಬೇಕು. ತಲೆಕೂದಲು ಕತ್ತರಿಸದೆ ಜಟೆ ಬಿಟ್ಟಿರಬೇಕು. ಹಣೆಯ ಮೇಲಿನ ವಿಶಿಷ್ಟ ತಿಲಕದಿಂದ ಸಾಧ್ವಿಗಳೆಂದು ಗುರುತಿಸಲ್ಪಡುತ್ತಾರೆ.

ಮಹಿಳೆಯರು ಸನ್ಯಾಸ ಸ್ವೀಕಾರ ಆಚರಣೆಯ ಭಾಗವಾಗಿ ತಮ್ಮದೇ ‘ಪಿಂಡದಾನ’ವನ್ನು ಮಾಡಬೇಕು. ಸಾಮಾನ್ಯವಾಗಿ ಇದು ಮರಣದ ನಂತರ ನಡೆಸಲಾಗುವ ಸಾಂಪ್ರದಾಯಿಕ ಆಚರಣೆ. ಇದು ಅವರ ಹಿಂದಿನ ಜೀವನದ ಅಂತ್ಯ ಮತ್ತು ಸನ್ಯಾಸಿಗಳಾಗಿ ಅವರ ಪುನರ್ಜನ್ಮವನ್ನು ಸಂಕೇತಿಸುತ್ತದೆ. ನಾಗಾ ಸಾಧ್ವಿಗಳು ನಾಗಾ ಸಮುದಾಯದಲ್ಲಿ ಗೌರವಾನ್ವಿತ ಸ್ಥಾನ ಹೊಂದಿರುತ್ತಾರೆ. ಅವರನ್ನು “ಮಾತಾ” (ತಾಯಿ) ಎಂದು ಸಂಬೋಧಿಸಲಾಗುತ್ತದೆ. ನಾಗಾ ಸಾಧ್ವಿಗಳು ತಮ್ಮ ಅಸಾಧಾರಣ ಆಧ್ಯಾತ್ಮಿಕ ಶಕ್ತಿ ಮತ್ತು ಕಠಿಣವಾದ ವ್ರತಗಳಿಗಾಗಿ ಖ್ಯಾತರಾಗಿದ್ದಾರೆ. ಮಹಾ ಕುಂಭಮೇಳದಲ್ಲಿ ಅವರ ಉಪಸ್ಥಿತಿಯನ್ನು ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ಇವರು ಎಲ್ಲರ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸ್ವಯಂ-ಸಾಕ್ಷಾತ್ಕಾರದ ಪ್ರಾಮುಖ್ಯತೆಯನ್ನು ನೆನಪಿಸುವವರಂತೆ ಕಾರ್ಯನಿರ್ವಹಿಸುತ್ತಾರೆ.

Click to comment

Leave a Reply

Your email address will not be published. Required fields are marked *

LATEST NEWS

ಗೆಳತಿಯ ಖಾ*ಸಗಿ ಫೊಟೋ, ವಿಡಿಯೋ ಶೇರ್ ಮಾಡಿ ಆ*ತ್ಮಹ*ತ್ಯೆಗೆ ಶರಣಾದ ಯುವಕ

Published

on

ಮಂಗಳೂರು/ಹುಬ್ಬಳ್ಳಿ: ಯುವಕನೋರ್ವ ಪ್ರೇಯಸಿಯ ಕಾಟದಿಂದ ಬೇಸತ್ತು ಆ*ತ್ಮಹ*ತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ನಡೆದಿದೆ.

ಸಂದೇಶ್ ಉಣಕಲ್‌ (27) ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶನಿವಾರ ಮನೆಯಿಂದ ನಾ*ಪತ್ತೆಯಾಗಿದ್ದ ಸಂದೇಶ, ಉಣಕಲ್ ಕೆರೆಗೆ ಬಿ*ದ್ದು ಆ*ತ್ಮಹ*ತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ತನ್ನ ತಾಯಿಗೆ ವಾಯ್ಸ್ ಮೆಸೇಜ್ ಮಾಡಿ ‘ನನ್ನ ಸಾ*ವಿಗೆ ಸಂಜನಾ(ಪ್ರೇಯಸಿ) ಕಾರಣ’ ಎಂದು ತಿಳಿಸಿದ್ದಾನೆ.

ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್ ಏಕಾಏಕಿ ಶನಿವಾರ ಮನೆಯಿಂದ ನಾ*ಪತ್ತೆಯಾಗಿದ್ದ. ಈ ಕುರಿತು ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಆದರೆ ಇದೀಗ ಸಂದೇಶ ಶ*ವವಾಗಿ ಪ*ತ್ತೆಯಾಗಿದ್ದಾನೆ. ಆ*ತ್ಮಹ*ತ್ಯೆಗೂ ಮುನ್ನ ತನ್ನ ಪ್ರೇಯಸಿಯ ಜೊತೆಗಿನ ಖಾ*ಸಗಿ ವಿಡಿಯೋ, ವಾಟ್ಸಪ್ ಚಾಟ್, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಇನ್ನು ಮಗನನ್ನು ಕ*ಳೆದುಕೊಂಡ ತಾಯಿಯ ಕೂಗು ಮುಗಿಲು ಮುಟ್ಟಿದೆ.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ, ಏಕಾಏಕಿ ಸಂದೇಶ್ ಆ*ತ್ಮಹ*ತ್ಯೆ ಮಾಡಿಕೊಂಡ ಹಿಂದಿನ ನಿಜವದ ಕಾರಣ ತಿಳಿದಿಲ್ಲ. ಈ ಕುರಿತು ಅನುಮಾನಗಳು ಹುಟ್ಟಿಕೊಂಡಿದ್ದು, ಪೊಲೀಸ್‌ ತನಿಖೆಯಲ್ಲಿ ಸಾವಿಗೆ ಕಾರಣ ತಿಳಿದು ಬರಬೇಕಷ್ಟೇ.

Continue Reading

BIG BOSS

ಧನರಾಜ್ ಗೆ ಒಲಿದ ಅದೃಷ್ಟ; ಭವ್ಯಾಗೆ ಆಘಾತ !

Published

on

ಮಂಗಳೂರು : ಸಾಕಷ್ಟು ಟ್ವಿಸ್ಟ್ ಗಳನ್ನು ಕಂಡ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಈಗ ಫಿನಾಲೆಯ ಹಂತಕ್ಕೆ ತಲುಪುತ್ತಿದೆ. ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿತ್ತು.

ಈ ವಾರದ ನಾಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.

ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಧನರಾಜ್ ಬಿಗ್ ಬಾಸ್ ಕೊಟ್ಟ ಟಾಸ್ಕ್ ವೊಂದರಲ್ಲಿ ವಿನ್ ಆಗಿದ್ದಾರೆ.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ನ್ಯೂ ಪೋಸ್ಟ್; ದರ್ಶನ್ ಅಭಿಮಾನಿಗಳಿಗೆ ದಿಲ್‌ಖುಷ್

ಕೊನೆಯ ಟಾಸ್ಕ್ ನಲ್ಲೂ ಗೆದ್ದುಕೊಂಡ ಧನರಾಜ್ ಬಿಗ್ ಬಾಸ್ 100 ಅಂಕಗಳನ್ನು ಕೊಟಿದ್ದರು. ಅದರಲ್ಲೂ ಕೊನೆಗೆ ಧನರಾಜ್ ಪ್ರತಿ ಸ್ಪರ್ಧಿಯ ಅಂಕವನ್ನು ಪಡೆದುಕೊಳ್ಳಬೇಕು ಅಂತ ಹೇಳಿದ್ದರು. ಆಗ ಧನರಾಜ್ ಭವ್ಯಾ ಗೌಡ ಅವರ ಅಂಕವನ್ನು ಪಡೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಬಿಗ್ ಬಾಸ್ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ನಿಂದ ಧನರಾಜ್ ಸೇಫ್ ಆಗಿದ್ದೀರಿ ಎಂದು ಘೋಷಣೆ ಮಾಡಿದ್ದಾರೆ.

ಮಿಡ್​​ ವೀಕ್​ ನಾಮಿನೇಷನ್​ ಸೀಟ್​ನಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್​, ಮಂಜಣ್ಣ, ರಜತ್​, ಮೋಕ್ಷಿತಾ ಹಾಗೂ ಗೌತಮಿ ಇದ್ದಾರೆ. ಸ್ಟ್ರಾಂಗ್ 6 ಸ್ಪರ್ಧಿಗಳು ಯಾರು ಬಿಗ್​ಬಾಸ್​ ಮನೆಯಿಂದ ಮಿಡ್​ ವೀಕ್​ ಎಲಿಮಿನೇಟ್​ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ಒಂದು ಕಡೆ ಟಾಸ್ಕ್ ಪಾಯಿಂಟ್ ಟೇಬಲ್ ನಲ್ಲಿ ಟಾಪ್ ನಲ್ಲಿದ್ದ ಭವ್ಯಾಗೆ, ಧನರಾಜ್ ಅವರ ನಿರ್ಧಾರ ಶಾಕ್ ಆಗಿತ್ತು.

 

Continue Reading

bengaluru

ಸರಿಗಮ ವಿಜಿ ಹೆಸರಿಗೆ ‘ಸರಿಗಮ’ ಸೇರಿಕೊಳ್ಳಲು ಆ ಒಂದು ನಾಟಕ ಕಾರಣ !

Published

on

ಮಂಗಳೂರು/ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧ*ನ ಹೊಂದಿದ್ದಾರೆ. ಅವರು ಕನ್ನಡ ಸಿನಿಮಾ, ಧಾರವಾಹಿ ಹಾಗೂ ರಂಗಭೂಮಿಯಲ್ಲಿ ನಟಿಸಿದ್ದರು.

ಸರಿಗಮ ವಿಜಿ ಅವರ ಮೂಲ ಹೆಸರು ವಿಜಯ್ ಕುಮಾರ್. ಆದರೆ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಹಲವರಲ್ಲಿ ಇದೆ.

‘ಸರಿಗಮ ವಿಜಿ’ ಎಂದೇ ಕರೆಯಲ್ಪಡುವ ನಟ ವಿಜಯ್ ಕುಮಾರ್ (76) ಅವರು ಬುಧವಾರ (ಜ.15) ನಿಧ*ನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವಾರದ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ 9:45ರ ಸುಮಾರಿಗೆ ಅವರು ನಿಧ*ನ ಹೊಂದಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಇ*ನ್ನಿಲ್ಲ

ಬೆಂಗಳೂರಿನ ವಿಮಾನಪುರದಲ್ಲಿ (ಎಚ್ಎಎಲ್ ಪ್ರದೇಶ) ಜನಿಸಿದ ವಿಜಯ್ ಕುಮಾರ್, ನಾಟಕದ ನಂಟು ಇಟ್ಟುಕೊಂಡು ಸಿನಿಮಾಲೋಕ ಪ್ರವೇಶಿಸಿದವರು. ‘ಬೆಳುವಲದ ಮಡಿಲಲ್ಲಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ನಟನಾಗಿ ಮೊದಲ ಹೆಜ್ಜೆ ಇಟ್ಟ ಅವರು ಎನ್ ಜಿಇಎಫ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿದವರು. ಈ ಅವಧಿಯಲ್ಲೇ ಅವರು ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ ಬರೆದರು.

ಇದು ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ, ಹೈದರಾಬಾದ್, ಚೆನ್ನೈ, ದೆಹಲಿಗಳಲ್ಲಿಯೂ ಆ ನಾಟಕ ಪ್ರದರ್ಶನವಾಗಿತ್ತು. ಸುಮಾರು 1390 ಪ್ರದರ್ಶನಗಳಲ್ಲಿ ‘ಸಂಸಾರದಲ್ಲಿ ಸರಿಗಮ’ ನಾಟಕ ಕಂಡಿತ್ತು. ಇದೇ ಕಾರಣಕ್ಕೆ ವಿಜಿ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡು ಸರಿಗಮ ವಿಜಿ ಎಂದೇ ಜನಪ್ರಿಯರಾದರು.

ಹಲವು ದಿಗ್ಗಜ ನಟರ ಜೊತೆ ತೆರೆಹಂಚಿಕೊಂಡಿದ್ದ ವಿಜಿ ಅವರು, ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಹಲವು ಧಾರವಾಹಿಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Continue Reading

LATEST NEWS

Trending

Exit mobile version