ಕರ್ಣಾಟಕ ಬ್ಯಾಂಕಿನ ಎಂ.ಡಿ, ಸಿಇಒ ಮಹಾಬಲೇಶ್ವರ ಎಂ.ಎಸ್. ರಿಗೆ ವರ್ಷದ ಸಿಇಒ’ ಪ್ರಶಸ್ತಿ..!
ಮಂಗಳೂರು: ದೇಶದ ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕಿನ ಎಂ.ಡಿ, ಸಿಇಒ ಮಹಾಬಲೇಶ್ವರ ಅವರು ದೇಶದ ಪ್ರತಿಷ್ಟಿತ ವರ್ಷದ ಸಿಇಒ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎಂ.ಎಸ್ ‘ವರ್ಲ್ಡ್ ಲೀಡರ್‌ಶಿಪ್ ಕಾಂಗ್ರೆಸ್ ಆಯಂಡ್ ಅವಾರ್ಡ್ಸ್’ ನೀಡುವ ಈ’ಸಿಇಒ ಆಫ್ ದ ಇಯರ್’ ಪ್ರಶಸ್ತಿಯನ್ನು ಮುಂಬೈನಲ್ಲಿ ನಡೆದ 19ನೇ ‘ಗ್ಲೋಬಲ್ ಎಡಿಷನ್ ಆಫ್ ಬಿಸಿನೆಸ್ ಲೀಡರ್ ಆಫ್ ದ ಇಯರ್’ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಅವರಿಗೆ ಪ್ರದಾನ ಮಾಡಲಾಯಿತು.
‘ಕೋವಿಡ್-19 ಸಂಕಷ್ಟದ ನಡುವೆಯೂ ಬ್ಯಾಂಕಿನ ಎಲ್ಲರ ಕಠಿಣ ಪರಿಶ್ರಮ ಹಾಗೂ ಬದ್ಧತೆಯ ಪ್ರತಿಫಲವಾಗಿ ಈ ಪ್ರತಿಷ್ಠಿತ ಪ್ರಶಸ್ತಿಯು ಒಲಿದು ಬಂದಿದೆ’ ಎಂದು ಪ್ರಶಸ್ತಿ ಸ್ವೀಕರಿಸಿ ಮಹಾಬಲೇಶ್ವರ ಅವರು ಪ್ರತಿಕ್ರೀಯಿಸಿದ್ದಾರೆ.