ಉಡುಪಿ: ಉಡುಪಿ ನಗರದಲ್ಲಿ ವ್ಯಕ್ತಿಯೊಬ್ಬರ ದೇಹದಲ್ಲಿ ಅಯಸ್ಕಾಂತ ಗುಣ ಕಂಡುಬಂದಿದೆ ಎಂದು ಹೇಳುವ ವಿಡಿಯೋ ವೈರಲ್ ಆಗುತ್ತಿದೆ.ಇಳಿವಯಸ್ಸಿನ ವ್ಯಕ್ತಿಯೊಬ್ಬರ ದೇಹದ ಮೇಲೆ ಸೌಟು, ಚಮಚೆ , ಕಾಯಿನ್ತೀಯ ಆಂಟಿ ಕಳೆದುಕೊಳ್ಳುತ್ತಿರುವ ವಿಡಿಯೋ ಇದಾಗಿದೆ.
ಇತ್ತೀಚೆಗೆ ದೆಹಲಿ ಮತ್ತು ನಾಸಿಕ್ ನಲ್ಲೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿತ್ತು. ಕೋವಿಡ್ ವ್ಯಾಕ್ಸಿನ್ ಪಡೆದ ನಂತರ ಈ ರೀತಿ ದೇಹದಲ್ಲಿ ಅಯಸ್ಕಾಂತೀಯ ಗುಣ ಅಭಿವೃದ್ಧಿಯಾಗುತ್ತದೆ ಎಂದು ಹೇಳಲಾಗಿತ್ತು. ಈ ವಿಡಿಯೋ ವಾಟ್ಸಪ್ ಸಂದೇಶದ ಮೂಲಕ ಎಲ್ಲಿಡೆ ಹಾರಾಡಲು ಆರಂಭವಾಗಿತ್ತು.
ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ರಾಮದಾಸ್ ಶೆಟ್ ಎನ್ನುವವರು ತನ್ನ ದೇಹದಲ್ಲಿ ಈ ಥರ ಆಗುತ್ತಾ ಎಂಬುದನ್ನು ನೋಡಲು ಪ್ರಯತ್ನಿಸಿದರು. ಈ ವೇಳೆ ಕೆಲವೊಂದು ವಸ್ತುಗಳು ಇವರ ದೇಹಕ್ಕೆ ಅಂಟೋದು ಗಮನಕ್ಕೆ ಬಂತು. ರಾಮದಾಸ್ ಕೂಡ ಇತ್ತೀಚೆಗಷ್ಟೆ ವ್ಯಾಕ್ಸಿನ್ ಪಡೆದಿದ್ದರು.
ವ್ಯಾಕ್ಸಿನ್ ಪಡೆದಿರುವುದರಿಂದಲೇ ಹೀಗೆ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೂ ಮೊದಲು ಅವರು ಈ ರೀತಿ ಯಾವುದೇ ಪ್ರಯತ್ನ ನಡೆಸಲಿಲ್ಲ. ವಾಟ್ಸಪ್ ಸಂದೇಶ ಬಂದ ನಂತರವೇ, ಕೆಲವೊಂದು ಮೆಟಲ್ ವಸ್ತುಗಳು ದೇಹಕ್ಕೆ ಅಂಟುವುದು ಇವರ ಗಮನಕ್ಕೆ ಬಂದಿದೆ.
ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ದೆಹಲಿ ಮತ್ತು ನಾಸಿಕದಲ್ಲಿ ನಡೆದ ಘಟನೆಯ ಬಗ್ಗೆ ಈಗಾಗಲೇ ತಜ್ಞರು, ಅಭಿಪ್ರಾಯ ವ್ಯಕ್ತಪಡಿಸಿದ್ದು ವ್ಯಾಕ್ಸಿನ್ ಪಡೆಯುವುದರಿಂದ ಈ ರೀತಿ ಆಗುವುದಿಲ್ಲ ಯಾವುದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಲಸಿಕೆ ಪಡೆದ ಬಳಿಕ ಅಯಸ್ಕಾಂತೀಯ ಲಕ್ಷಣ ಬರಲು ಸಾಧ್ಯವಿಲ್ಲ: ಜಿ.ಜಗದೀಶ್
ವ್ಯಕ್ತಿಯೊಬ್ಬರು ಕೊರೊನಾ ಲಸಿಕೆ ಪಡೆದುಕೊಂಡ ಬಳಿಕ ಮ್ಯಾಗ್ನೆಟಿಕ್ ಮೆನ್ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಲಸಿಕೆ ಪಡೆದುಕೊಂಡ ಬಳಿಕ ರಾಮ್ ದಾಸ್ ಶೇಟ್ ಎಂಬ ವ್ಯಕ್ತಿಯ ದೇಹದಲ್ಲಿ ಕಂಡುಬಂದ ಅಯಸ್ಕಾಂತೀಯ ಲಕ್ಷಣ ಲಸಿಕೆಯಿಂದ ಆಗಿರುವುದು ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅವರ ದೇಹದಲ್ಲಿ ಅಯಸ್ಕಾಂತೀಯ ಗುಣ ಕಂಡುಬಂದಿದೆ. ಹಣೆ ಬೆನ್ನು ಹೊಟ್ಟೆ ಭುಜ ಮೊಣಕೈ ಭಾಗದಲ್ಲಿ ಅಯಸ್ಕಾಂತೀಯ ಲಕ್ಷಣ ಕಂಡುಬಂದಿದೆ. ಅವರು ವ್ಯಾಕ್ಸೀನ್ ಪಡೆದುಕೊಂಡ ಮೇಲೆ ಈ ಲಕ್ಷಣ ಕಂಡುಬಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ವ್ಯಾಕ್ಸಿನ್ ನಿಂದ ಈ ದೇಹದ ಲಕ್ಷಣ ಬಂದಿರಲು ಸಾಧ್ಯವಿಲ್ಲ. ಅವರಿಗೆ ಬಿಪಿ ಹಾಗೂ ಶುಗರ್ ಇದೆ. ಆದ್ರೆ ಅಯಸ್ಕಾಂತೀಯ ಲಕ್ಷಣ ಹೇಗೆ ಬಂತು ಅನ್ನುವುದನ್ನ ಹೆಚ್ಚಿನ ಪರೀಕ್ಷೆಗೆ ಒಳಪಡಿಸಬೇಕಿದೆ ಎಂದು ಜಗದೀಶ್ ಹೇಳಿದ್ದಾರೆ.