Home ಕರ್ನಾಟಕ ವಾರ್ತೆ ಪ್ರವಾದಿ ಪೈಗಂಬರ್‌ ನಿಂದನೆ ಆರೋಪ: ಮಧುಗಿರಿ ಮೋದಿಯ ಬಂಧನ

ಪ್ರವಾದಿ ಪೈಗಂಬರ್‌ ನಿಂದನೆ ಆರೋಪ: ಮಧುಗಿರಿ ಮೋದಿಯ ಬಂಧನ

ಪ್ರವಾದಿ ಪೈಗಂಬರ್‌ ನಿಂದನೆ ಆರೋಪ: ಮಧುಗಿರಿ ಮೋದಿಯ ಬಂಧನ

ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ಮಾನವತಾವಾದಿ, ಪ್ರವಾದಿ ಮಹಮ್ಮದ್‌ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿ ನಿಂದನೆ ಮಾಡಿರುವ ಆರೋಪಿ ಮಧುಗಿರಿ ಮೋದಿ ಯಾನೆ ಅಥುಲ್‌ ಕುಮಾರ್‌ನನ್ನು ಬಂಧಿಸಲಾಗಿದೆ.

ತುಮಕೂರು ಪೊಲೀಸರು ಅನಂತಪುರದ ಆಝಾದ್ ನಗರದಲ್ಲಿ ಆತನನ್ನು ಬಂಧಿಸಿದ್ದು, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮಧುಗಿರಿಯ ಹೊನ್ನಾಪುರ ಗ್ರಾಮದ ನಿವಾಸಿ ಅಥುಲ್ ಕುಮಾರ್ ಸಬರ್ ವಾಲ್ ಅಲಿಯಾಸ್ ‘ಮಧುಗಿರಿ ಮೋದಿ’ಯನ್ನು ಬಂಧಿಸಲಾಗಿದೆ.

ಮಧುಗಿರಿ ಮೋದಿಯನ್ನು ಬಂಧಿಸುವಂತೆ ತುಮಕೂರು ನಗರ ಹಾಗೂ ಮಧುಗಿರಿಯಲ್ಲಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ರಚಿಸಿದ್ದ ಎರಡು ತಂಡಗಳ ಮೂಲಕ ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ನು ಈತ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌ಗಳಲ್ಲಿ ಪ್ರವಾದಿ ಮಹಮ್ಮದ್‌ ಪೈಗಂಬರ್‌ರನ್ನು ಅವಹೇಳನ ಮಾಡಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ತುಮಕೂರು, ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವೆಡೆ ಆತನ ವಿರುದ್ಧ ದೂರು ದಾಖಲಿಸಲಾಗಿತ್ತು. ರಾಜ್ಯದ ಮುಸ್ಲಿಂ ಒಕ್ಕೂಟ, ಕಾಂಗ್ರೆಸ್‌ ಸೇರಿದಂತೆ ವಿವಿಧ ಸಂಘಟನೆಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸದ್ಯ ಅರೋಪಿ ಮಧುಗಿರಿ ಮೋದಿ ಯಾನೆ ಅಥುಲ್‌ ಕುಮಾರ್‌ನನ್ನು ಬಂಧಿಸಲಾಗಿದೆ.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...