Saturday, August 13, 2022

ದೇಶದ ಏಕತೆಗೆ ಮದರಸದ ಶಿಕ್ಷಣಗಳೇ ಮುಳುವಾಗುತ್ತಿದೆ-ಶರಣ್ ಪಂಪ್‌ವೆಲ್

ಮಂಗಳೂರು: ಇವತ್ತು ದೇಶದಲ್ಲಿ ಹಿಂದೂಗಳ ಹತ್ಯೆ, ಪೊಲೀಸರ ಮೇಲೆ ದಾಳಿ,ರಸ್ತೆಗಳಲ್ಲಿ ಅಂಗಡಿಗಳಲ್ಲಿ, ಹಿಂದೂಗಳ ಮನೆಗಳ ಮೇಲೆ ದಾಳಿ ಇಂತಹ ಘೋರ ಕೃತ್ಯಗಳು ಪದೇ ಪದೇ ಸಂಭವಿಸುತ್ತಿರಲು ಅವರಿಗೆ ಮದರಸದಲ್ಲಿ ಸಿಗುತ್ತಿರುವ ಶಿಕ್ಷಣವೇ ಪ್ರಮುಖ ಕಾರಣ. ಆ ಶಿಕ್ಷಣ ಪಡೆದ ಯುವಕರು ಇಂದು ಹಿಂದೂಗಳ ವಿರುದ್ಧ ದಾಳಿ ಮಾಡುತ್ತಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್‌ ಪಂಪ್ವೆಲ್‌ ಹೇಳಿದರು.

ರಾಜಸ್ಥಾನದ ಉದಯ್ ಪುರದಲ್ಲಿ ಕನ್ಹಯ್ಯಲಾಲ್ ಹತ್ಯೆಯನ್ನು ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಬೃಹತ್ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯಲ್ಲಿ ಆಕ್ರೋಶ ಹೊರ ಹಾಕಿದ ಶರಣ್ ಪಂಪ್‌ವೆಲ್ “ಈ ದೇಶದಲ್ಲಿ ಸಾಕಷ್ಟು ಹಿಂದೂಗಳ ಹತ್ಯೆಯಾಗಿದೆ. ಆದ್ರೆ ನಿನ್ನೆ ರಾಜಸ್ಥಾನದ ಉದಯ್ ಪುರ್ ನಲ್ಲಿ ನಡೆದ ಅಮಾಯಕ ಹಿಂದೂವಿನ ಘೋರ ಹತ್ಯೆ ಬಹುಶಃ ನಾವು ಇದುವರೆಗೂ ನೋಡಿರದ ಒಂದು ದುರಂತವಾಗಿದೆ.

ಒಬ್ಬ ಅಮಾಯಕ ವ್ಯಾಪಾರಸ್ಥನ ಅಂಗಡಿಗೆ ವ್ಯಾಪಾರದ ಸೋಗಿನಲ್ಲಿ ಬಂದು ಮಾಂಸ ಕಡೀತ್ತಾರೆ ಅಷ್ಟೇ ಅಲ್ಲ ಅದನ್ನು ವೀಡಿಯೋ ಚಿತ್ರೀಕರಣ ಮಾಡಿ ಸಂತೋಷ ವ್ಯಕ್ತಪಡಿಸುತ್ತಾರೆ ಎಂದರೆ ಯೋಚಿಸಿ ಅವರಲ್ಲಿ ಕ್ರೂರತೆ ಎಷ್ಟರ ಮಟ್ಟಿಗೆ ಇದೆ ಎಂಬುವುದು’.


ಇಸ್ಲಾಂ ಅಂದೆ ಶಾಂತಿಯ ಸಂಕೇತ.ಭಾರತ ದೇಶದಲ್ಲಿ ನಾವು ಶಾಂತಿಯಿಂದ ಬದುಕುವವರು. ಆದರೂ ನಮ್ಮನ್ನು ಉಗ್ರಗಾಮಿಗಳು ಎಂದು ಕರೆಯುತ್ತಾರೆ ಎಂದು ಈ ದೇಶದ ಮುಸಲ್ಮಾನರು ಪದೇ ಪದೇ ಹೇಳ್ತಾರೆ. ನಾವು ಅಂಬೇಡ್ಕರ್‌ ಅವರನ್ನು ಗೌರವಿಸುವವರು ಎಂದು ಹೇಳ್ತಾರೆ.

ಆದ್ರೆ ಇಸ್ಲಾಂ ಶಾಂತಿಯ ಸಂಕೇತ ಅಲ್ಲ. ಹಿಂಸೆಯ ದಾರಿ.ದೇಶದಲ್ಲಿ ಇಂದು ಅರಾಜಕತೆ ಸೃಷ್ಟಿಯಾಗುತ್ತಿದೆ. ನಮ್ಮ ದೈವಸ್ಥಾನಗಳ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ದಾಳಿಯಾದ್ರೆ ಯಾರೂ ಪ್ರಶ್ನೆ ಮಾಡಲ್ಲ. ದೇಶದ ಎಲ್ಲಾ ಸಂತರು, ಸ್ವಾಮೀಜಿಗಳು ಯುವಕರಿಗೆ ಪ್ರೇರಣೆಯ ಸಂದೇಶ ಕೊಡಿ. ರಾಜಸ್ತಾನದ ಈ ಹತ್ಯೆಯನ್ನು ಎಲ್ಲಾ ಹಿಂದೂಗಳು ಖಂಡಿಸಬೇಕು. ಮೌನವನ್ನು ಮುರಿದು ಎಲ್ಲರೂ ಇದನ್ನು ಖಂಡನೆ ಮಾಡಬೇಕು’.


ಇವತ್ತು ನಾನು ಸರ್ಕಾರಕ್ಕೆ ಮನವಿ ಮಾಡುವುದು ಏನಂದ್ರೆ ಇಡೀ ದೇಶದಲ್ಲಿ ಜಾರಿಯಲ್ಲಿರುವ ಮದರಸ ಶಿಕ್ಷಣವನ್ನು ಬ್ಯಾನ್ ಮಾಡಿ ಇದು ನಮ್ಮ ಆಗ್ರಹವಾಗಿದೆ. ವೇದಿಕೆಗಳು, ಪ್ರತಿಭಟನೆಗಳು ಇದನ್ನೆಲ್ಲ ಬಿಟ್ಟು ಅವರ ಹಿಂಸೆಗೆ ನಾವು ಹಿಂಸೆಯ ಮೂಲಕವೇ ಉತ್ತರ ನೀಡಬೇಕಾದಲ್ಲಿ ಇನ್ನು ಮುಂದೆ ಕಾರ್ಯಕರ್ತರು ಅದಕ್ಕೂ ಕೂಡಾ ಸನ್ನದ್ಧರಾಗಬೇಕು’ ಎಂದು ಕಿಡಿಕಾರಿದರು.


ಅಷ್ಟೇ ಅಲ್ಲದೆ ಇವತ್ತು ದೇಶದಲ್ಲಿ ಸಂವಿಧಾನ, ಕಾನೂನು ಎಲ್ಲವೂ ನಮಗೆ ಮಾತ್ರ ಇದೆ ಎಂದು ಅನಿಸುತ್ತಿದೆ. ಕೇವಲ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದಕ್ಕೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ರು. ಆದ್ರೆ ಈ ಕೃತ್ಯಕ್ಕೆ ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ಈ ಸಂದರ್ಭ ರಾಜಸ್ಥಾನ ಮೂಲದ ಮೂವರು ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪ್ರತಿಭಟನೆಯಲ್ಲಿ ರಾಜಸ್ಥಾನದ ಉದಯ್ ಪುರ್ ನಲ್ಲಿ  ಕಡಿದು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತ ಪಡಿಸಲಾಯಿತು.

ಪ್ರತಿಭಟನೆಯಲ್ಲಿ ವಿ.ಹೆಚ್.ಪಿಯ ಶಿವಾನಂದ್ ಮೆಂಡನ್, ಭುಜಂಗ ಕುಲಾಲ್. ಪ್ರದೀಪ್ ಸರಿಪಳ್ಳ, ದೇವಿಪ್ರಸಾದ್ ಶೆಟ್ಟಿ,ಪುನೀತ್ ಅತ್ತಾವರ್ , ಗೋಪಾಲ್ ಕುತ್ತಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ತ್ರಿವರ್ಣ ಬೆಳಕಿನಲ್ಲಿ ಜಗಮಗಿಸುತ್ತಿದೆ ತುಂಬೆ ಡ್ಯಾಂ…

ಬಂಟ್ವಾಳ: ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಅಣೆಕಟ್ಟನ್ನು ದೇಶದ ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಪ್ರಯುಕ್ತ ತ್ರಿವರ್ಣ ಬೆಳಕಿನ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.ಮಂಗಳೂರು ಮಹಾನಗರ ಪಾಲಿಕಾ ಅಧೀನದಲ್ಲಿ ಇರುವ...

ಮಂಗಳೂರು: ಕೃಷಿ ವಿಜ್ಞಾನ ಕೇಂದ್ರದ ಗದ್ದೆಯಲ್ಲಿ ನೇಜಿ ನೆಟ್ಟ NSS ವಿದ್ಯಾರ್ಥಿಗಳು

ಮಂಗಳೂರು: ಎಕ್ಕೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಶೋಧನಾತ್ಮಕ ಚಟುವಟಿಕೆಗಳಿಗಾಗಿ ವೈಜ್ಞಾನಿಕ ರೀತಿಯಲ್ಲಿ ಉತ್ತಮ ತಳಿಗಳ ಭತ್ತದ ನಾಟಿ ಕೃಷಿಯು ಶುಕ್ರವಾರ ಕೃಷಿ ಕೇಂದ್ರ ಆವರಣದಲ್ಲಿ ನಡೆಯಿತು.ಮಂಗಳೂರು ವಿಶ್ವ ವಿದ್ಯಾ ನಿಲಯದ ರಾಷ್ಟ್ರೀಯ ಸೇವಾಯೋಜನೆಯು...

ಕೋರ್ಟ್‌ನಲ್ಲಿ ರಾಜಿಯಾಗಿ ಹೊರ ಬಂದು ಕತ್ತು ಕೊಯ್ದ ಪಿಶಾಚಿ ಗಂಡ

ಹಾಸನ: ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡು ಲೋಕ ಅದಾಲತ್‌ನಲ್ಲಿ ಭಾಗವಹಿಸಿ ರಾಜೀ ಮೂಲಕ ಹೊರಗೆ ಬಂದ ಗಂಡ ಪತ್ನಿಯ ಕತ್ತು ಕೊಯ್ದು, ಮಗುವನ್ನು ಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ಹೊಳೆನರಸೀಪುರದ ಕೋರ್ಟ್‌ ಆವರಣದಲ್ಲಿ...