Tuesday, October 19, 2021

MAA ಚುನಾವಣೆಯಲ್ಲಿ ಪ್ರಕಾಶ್‌ ರೈಗೆ ಸೋಲು: ‘ಫಲಿತಾಂಶವನ್ನು ಗೌರವಿಸುತ್ತೇನೆ’ ಎಂದ ರೈ

ಹೈದರಾಬಾದ್‌: ತೆಲುಗು ಸಿನಿಮಾ ರಂಗದ ಕಲಾವಿದರ ಸಂಘ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಯ ಫಲಿತಾಂಶ ಹೊರಗೆ ಬಿದ್ದಿದ್ದು, ಮಂಚು ವಿಷ್ಣು ವಿರುದ್ಧ ಪ್ರಕಾಶ್ ರೈ ಸೋಲುಂಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ತೆಲುಗು ನಟ ವಿಷ್ಣು ಮಂಚು ಮತ್ತು ಪ್ರಕಾಶ್ ರಾಜ್ ನಡುವೆ ಭಾರಿ ಹಣಾಹಣಿಯೇ ನಡೆದಿತ್ತು.


ಆದರೆ ಅಂತಿಮವಾಗಿ ವಿಷ್ಣು ಮಂಚು 381 ಮತ ಗಳಿದಸಿದರೆ ಪ್ರಕಾಶ್ ರಾಜ್ 274 ಮತ ಗಳಿಸಿದರು. ಅಧ್ಯಕ್ಷ ಸ್ಥಾನದ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್, ‘ಫಲಿತಾಂಶವನ್ನು ಗೌರವಿಸುತ್ತೇನೆ.

ವಿಷ್ಣು ಮಂಚು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ. ಅಲ್ಲದೇ ಸೋಲು ಗೆಲುವನ್ನೂ ಮೀರಿ ಚಿತ್ರರಂಗದ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಹ ಪ್ರಕಾಶ್ ರಾಜ್ ಕರೆ ಕೊಟ್ಟಿದ್ದಾರೆ.
ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್​ನ 925 ಸದಸ್ಯರಲ್ಲಿ 883 ಸದಸ್ಯರಿಗೆ ಮತದಾನ ಹಕ್ಕು ಲಭ್ಯವಿತ್ತು. ಈ ಪೈಕಿ 655 ಮತಗಳಷ್ಟೇ ಚಲಾವಣೆಗೊಂಡಿದ್ದವು.

ಮತ ಚಲಾಯಿಸದವರ ಪೈಕಿ ಖ್ಯಾತನಾಮರಾದ ಮಹೇಶ್ ಬಾಬು, ವೆಂಕಟೇಶ್, ಅಲ್ಲು ಅರ್ಜುನ್, ಎನ್​ಟಿಆರ್ ಮತ್ತು ನಾಗ ಚೈತನ್ಯ ಸಹ ಸೇರಿದ್ದಾರೆ.
ಪ್ರಕಾಶ್ ರೈ ಅವರು ಮೂಲತಃ ತೆಲುಗು ನಟ ಅಲ್ಲ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು.

ಆದರೆ ಹಲವು ಸ್ಟಾರ್ ಕಲಾವಿದರು ಪ್ರಕಾಶ್ ರಾಜ್ ಪರ ನಿಂತಿದ್ದರೂ. ಆದರೂ ಅವರು ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...