ಮಂಗಳೂರು/ಕೇರಳ: ಮನೆಯವರ ಮಾತು ವಿರೋಧಿಸಿ ಕೇರಳ ಮೂಲದ ಯುವಕನ ಜೊತೆಗೆ ಮದುವೆಯಾಗಿದ್ದ ಮಹಿಳೆಯೊಬ್ಬಳು ಆ*ತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯ ಪಾಲೋಡ್‌ನ ಇಳವಟ್ಟಂನಲ್ಲಿ ನಡೆದಿದೆ.
ಇಂದುಜಾ (25) ಆ*ತ್ಮಹತ್ಯೆಗೆ ಶರಣಾದ ನವವಿವಾಹಿತೆ.
‘ಮಗಳ ಸಾ*ವಿಗೆ ಆಕೆಯ ಗಂಡ ಹಾಗೂ ಕುಟುಂಬವೇ ಕಾರಣ’ ಎಂದು ಮೃ*ತಳ ಪೋಷಕರು ಆರೋಪಿಸಿದ್ದಾರೆ. ಪಾಲೋಡ್ ಇಟಿಂಜಾರ್ ಕೊಳಚಲ್ ಕೊನ್ನಮೂಡ್ ಮೂಲದ ಇಂದುಜಾಗಂಡನ ಮನೆಯಲ್ಲಿಯೇ ಶ*ವವಾಗಿ ಪತ್ತೆಯಾಗಿದ್ದಾರೆ. ಇಂದುಜಾ ಅಭಿಜಿತ್ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದು, ಇವರಿಬ್ಬರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪೋಷಕರು ಎಷ್ಟೇ ಬುದ್ಧಿವಾದ ಹೇಳಿದರೂ ಅವರ ಮಾತು ಕೇಳದೆ ಮನೆ ಬಿಟ್ಟು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದಳು. ಬಳಿಕ ಇಂದುಜಾ ಪೋಷಕರು ಸುಮ್ಮನಾಗಿದ್ದರು. ‘ಮದುವೆಯಾಗಿ ಅಭಿಜಿತ್ ಮನೆಗೆ ಹೋದ ಇಂದುಜಾಗೆ ಪತಿಯ ಮನೆಯಲ್ಲಿ ನಿತ್ಯವೂ ನರಕಯಾತನೆ ಶುರುವಾಗಿತ್ತು. ಮಾನಸಿಕ ಕಿರುಕುಳ, ಬೆದರಿಕೆಯನ್ನು ಗಂಡನ ಮನೆಯವರು ಹಾಕುತ್ತಿದ್ದರು’ ಎಂಬ ಆರೋಪ ಕೇಳಿ ಬಂದಿದೆ. ಇಂದುಜಾ ಆ*ತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಮನೆಯ ಎರಡನೇ ಮಹಡಿಯಲ್ಲಿರುವ ಅಭಿಜಿತ್ ಮಲಗುವ ಕೋಣೆಯ ಕಿಟಕಿಯಿಂದ ನೇ*ಣು ಬಿಗಿದ ಸ್ಥಿತಿಯಲ್ಲಿ ಶ*ವ ಪತ್ತೆಯಾಗಿದ್ದು, ಅಭಿಜಿತನ್ನು ಬಂಧಿಸಲು ಒತ್ತಾಯಿಸಿದ್ದಾರೆ.
ಎರಡು ವರ್ಷ ಪ್ರೀತಿ ಮಾಡಿ ಮದುವೆಯಾಗಿದ್ದ ಈಕೆಗೆ ಆಕೆಯ ಪ್ರೀತಿಸಿದ ಗಂಡನೇ ಆಕೆಯ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇಂದುಜಾ ಖಾಸಗಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಭಿಜಿತ್ ಖಾಸಗಿ ವಾಹನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನೆ ನಡೆದ ಸಮಯದಲ್ಲಿ ಅಭಿಜಿತ್ ಅಜ್ಜಿ ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಂದುಜಾ ತಾಯಿ, ಹಾಗೂ ಸಹೋದರನ ಜೊತೆ ಫೋನನಲ್ಲಿ ಮಾತನಾಡುತ್ತಿದ್ದಳು ಎಂದು ಆಕೆಯ ಗಂಡನ ಮನೆಯವರು ಹೇಳಿದ್ದಾರೆ. ಈಕೆ ತನ್ನ ಗಂಡನ ಮನೆಯವರ ಕಿ*ರುಕುಳ, ಬೆ*ದರಿಕೆ ಕುರಿತು ತಾಯಿಯ ಬಳಿ ಹೇಳುತ್ತಿದ್ದಳು. ಮಗಳ ಸಾ*ವಿನಲ್ಲಿ ಅನೇಕ ಅನುಮಾನಗಳಿದ್ದು, ಸೂಕ್ತ ತನಿಖೆಯನ್ನು ಮಾಡಬೇಕೆಂದು ಮೃ*ತಳ ಪೋಷಕರು ಒತ್ತಾಯ ಮಾಡಿದ್ದಾರೆ.
ಅಭಿಜಿತ್ ಮಧ್ಯಾಹ್ನ ಮನೆಗೆ ಊಟ ಮಾಡಲು ಬಂದಾಗ ಇಂದುಜಾ ಕಿಟಕಿಯಲ್ಲಿ ನೇ*ಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಕೂಡಲೇ ಆಕೆಯನ್ನು ನೆಡುಮಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾಸರಗೋಡು: ಒಂದೂವರೆ ವರ್ಷಗಳ ಹಿಂದೆ ಕಾಸಗೋಡು ಜಿಲ್ಲೆಯ ಬೇಕಲ ಠಾಣಾ ವ್ಯಾಪ್ತಿಯ ಅನಿವಾಸಿ ಉದ್ಯಮಿ ಪೂಚಕ್ಕಾಡ್ ನ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55) ಅವರು ನಿಗೂಢವಾಗಿ ಸಾ*ವನ್ನಪ್ಪಿದ ಪ್ರಕರಣವು, ಕೊ*ಲೆ ಪ್ರಕರಣ ಎಂಬುದಾಗಿ ಸಾಬೀತಾಗಿದ್ದು, ಈ ಬಗ್ಗೆ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಮೇಲ್ಪರಂಬ ಕುಳಿಕುನ್ನುವಿನ ಶಮೀಮಾ (38), ಆಕೆಯ ಪತಿ ಉಬೈದ್ (40), ಪೂಚಕ್ಕಾಡ್ ನ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40) ಬಂಧಿತ ಆರೋಪಿಗಳು.
ಚಿನ್ನಾಭರಣಗಳನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ವಾಮಾಚಾರದ ಹೆಸರಲ್ಲಿ ಸುಮಾರು 596 ಪವನ್ ಚಿನ್ನಾಭರಣಗಳನ್ನು ಲಪಾಟಿಯಿಸಿದ ಪ್ರಕರಣ ಇದಾಗಿದೆ. ಚಿನ್ನಾಭರಣ ಲಪಟಾಯಿಸಿದ ವಿಷಯ ಗೊಯತ್ತಾಗುತ್ತಿದ್ದಂತೆ ಅವುಗಳನ್ನು ಮರಳಿಸುವಂತೆ ಗಫೂರ್ ಹಾಜಿ ಹೇಳಿದ್ದು, ಈ ಕಾರಣಕ್ಕಾಗಿ ಕೊ*ಲೆ ನಡೆಸಿರುವುದಾಗಿ ತನಿಖಾ ತಂಡ ತಿಳಿಸಿದೆ. 2023 ರ ಏಪ್ರಿಲ್ 14 ರಂದು ಕೊ*ಲೆ ನಡೆದಿತ್ತು. ಕೃ*ತ್ಯ ನಡೆದ ದಿನ ಗಫೂರ್ ಹಾಜಿ ಮಾತ್ರ ಮನೆಯಲ್ಲಿದ್ದರು. ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ತೆರಳಿದ್ದರು. ಮರಳಿ ಬಂದಾಗ ಗಫೂರ್ ಮನೆಯ ಮೂಲೆಯಲ್ಲಿ ಮೃ*ತಪಟ್ಟ ಸ್ಥಿತಿಯಲ್ಲಿ *ಪತ್ತೆಯಾಗಿದ್ದರು. ಅಸಹಜ ಸಾ*ವು ಎಂದು ಪತ್ನಿ, ಮಕ್ಕಳು, ಸಂಬಂಧಿಕರು ನಂಬಿದ್ದರು. ಇದರಿಂದ ಮೃ*ತದೇಹವನ್ನು ದಫನ ಮಾಡಲಾಗಿತ್ತು. ಕೆಲ ದಿನಗಳ ಬಳಿಕ ಗಮನಿಸಿದಾಗ ಮನೆಯಿಂದ 596 ಪವನ್ ಚಿನ್ನಾಭರಣ ನಾ*ಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅಬ್ದುಲ್ ಗಫೂರ್ ಅವರ ಪುತ್ರ ಅಹ್ಮದ್ ಮುಸಮ್ಮಿಲ್ ಬೇಕಲ ಠಾಣಾ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದರು .ಗಫೂರ್ ಹಾಜಿ ಅವರ ಕೊ*ಲೆಯ ಬಳಿಕ ನಾ*ಪತ್ತೆಯಾಗಿರುವ 596 ಪವನ್ ಆಭರಣಗಳ ವಶಕ್ಕೆ ತನಿಖಾ ತಂಡ ಪ್ರಕ್ರಿಯೆ ಆರಂಭಿಸಿದೆ. ಕೆಲವು ಚಿನ್ನಾಭರಣವನ್ನು ಮೂವರು ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಿದೆ.
ದೂರಿನ ಹಿನ್ನಲೆಯಲ್ಲಿ ಬೇಕಲ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. 2023 ಎಪ್ರಿಲ್ 27ರಂದು ಗಫೂರ್ ಹಾಜಿ ಮೃ*ತದೇಹವನ್ನು ಸ*ಮಾಧಿಯಿಂದ ಹೊರತೆಗೆದು ಮ*ರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮ*ರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಾ*ಯವಾಗಿರುವುದು ಕಂಡು ಬಂದಿತ್ತು. ಇದರಿಂದ ಕೊ*ಲೆ ಎಂಬುದು ಸ್ಪಷ್ಟಗೊಂಡಿತ್ತು. ತನಿಖಾ ತಂಡವು ಮನೆಯವರು, ಕುಟುಂಬಸ್ಥರು, ನಾಗರಿಕರು ಹಾಗೂ ಕ್ರಿಯಾ ಸಮಿತಿ ಸೇರಿದಂತೆ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಿತ್ತು. ತನಿಖೆ ವೇಳೆ ಶಮೀಮಾಳ ಸಹಚರರ ಬ್ಯಾಂಕ್ ಖಾತೆಗೆ ಭಾರೀ ಮೊತ್ತದ ಹಣ ಜಮೆ ಆಗಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ. ಮೃತ ಗಫೂರ್ ಹಾಜಿ ಮತ್ತು ಶಮಿಮಾಳ ನಡುವೆ ನಡೆದ ವಾಟ್ಸಾಪ್ ಸಂದೇಶಗಳು ಪೊಲೀಸರಿಗೆ ಲಭಿಸಿವೆ. ಶಮೀಮಾ ಗಫೂರ್ ಹಾಜಿ ಅವರಿಂದ ಈ ಹಿಂದೆ 10 ಲಕ್ಷ ರೂ. ನಗದು ಮತ್ತು ಚಿನ್ನಾಭರಣಗಳನ್ನು ಪಡೆದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದ್ದು, ಹಲವು ಪುರಾವೆಗಳು ಪೊಲೀಸರಿಗೆ ಲಭಿಸಿವೆ.
ಕೊಲ್ಲಂ: ಅಯ್ಯಪ್ಪ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಸರಕು ಸಾಗಣೆ ಟ್ರಕ್‌ಗೆ ಡಿ*ಕ್ಕಿ ಹೊಡೆದ ಪರಿಣಾಮ ಶಬರಿಮಲೆ ಯಾತ್ರಿಕರಾಗಿದ್ದ 46 ವರ್ಷದ ವ್ಯಕ್ತಿ ಮೃ*ತಪಟ್ಟಿರುವ ಘಟನೆ ಕೊಲ್ಲಂನ ಆರ್ಯಂಕಾವು ಚೆಕ್‌ಪೋಸ್ಟ್ ಬಳಿ ಇಂದು (ಡಿ.4) ಬೆಳಿಗ್ಗೆ ಸಂಭವಿಸಿದೆ.
ಬೆಳಗಿನ ಜಾವ 4.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ತಮಿಳುನಾಡಿನ 19 ಮಂದಿ ಯಾತ್ರಿಕರು ಗಾ*ಯಗೊಂಡಿದ್ದಾರೆ ಎಂದು ತೆನ್ಮಲ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿನಿ ಬಸ್ ಸುಮಾರು 24 ಯಾತ್ರಾರ್ಥಿಗಳೊಂದಿಗೆ ಶಬರಿಮಲೆಯಿಂದ ತಮಿಳುನಾಡಿಗೆ ಹಿಂದಿರುಗುತ್ತಿದ್ದಾಗ ನೆರೆಯ ರಾಜ್ಯದಿಂದ ಬಂದ ಸರಕು ಟ್ರಕ್‌ಗೆ ಮುಖಾಮುಖಿ ಡಿ*ಕ್ಕಿ ಹೊಡೆದಿದೆ. ಗಾ*ಯಗೊಂಡವರಲ್ಲಿ 17 ಮಂದಿ ಪುನಲೂರಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರನ್ನು ತಿರುವನಂತಪುರ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅ*ಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು: ಲಂಡನ್‌ನ ಚಾರ್ಲ್ಸ್ ದೊರೆಯ ಸಹಾಯಕ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡು ಮೂಲದ ಮುನಾ ಶಂಸುದ್ದೀನ್ ನೇಮಕಗೊಂಡಿದ್ದಾರೆ.
ಪುದಿಯಪುರಯಿಲ್ ನಿವಾಸಿ ಶಂಸುದ್ದೀನ್ ಲಂಡನ್‌ನಲ್ಲಿ ಓತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರು.
ಬ್ರಿಟಿಷ್ ಕಾನೂನು ಸಲಹೆ ಕಚೇರಿಯಲ್ಲಿ ಉದ್ಯೋಗ ಆರಂಭಿಸಿ ಲಂಡನ್ ವಿದೇಶಾಂಗ ಇಲಾಖೆಯ ಕಾಮನ್ವೆಲ್ತ್ ಡೆವಲಪ್‌ಮೆಂಟ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ ದೊರೆಯ ಪ್ರಧಾನ ಅಸಿಸ್ಟೆಂಟ್ ಸೆಕ್ರೆಟರಿಯಾಗುವ ಅವಕಾಶ ಲಭಿಸಿತು.
ಬ್ರಿಟನ್ ನಾಟಿಂಗಾಂ ವಿ.ವಿ.ಯಿಂದ ಮೆಥಮೆಟಿಕ್ಸ್ ಎಂಜನಿಯರಿಂಗ್‌ನಲ್ಲಿ ಪದವೀಧರೆಯಾಗಿದ್ದು, ಬ್ರಿಟಿಷ್ ವಿದೇಶಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜೆರುಸಲೇಂನಲ್ಲಿ ಬ್ರಿಟನ್ ಕನ್ಸಲೇಟಿವ್ ಜನರಲ್, ಪಾಕಿಸ್ಥಾನದ ಕರಾಚಿಯಲ್ಲಿ ಬ್ರಿಟನ್ ವಿದೇಶಾಂಗ ಇಲಾಖೆ ಮುಖ್ಯಸ್ಥೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಪತಿ ಡೇವಿಡ್ ಅವರು ವಿಶ್ವಸಂಸ್ಥೆಯ ಉದ್ಯೋಗಿ. 10 ವರ್ಷಗಳ ಹಿಂದೊಮ್ಮೆ ಊರಿಗೆ ಬಂದಿದ್ದರು.