ಉಜಿರೆಯ ಅಣ್ಣತಮ್ಮಂದಿರಿಂದ ನಿರಂತರ ಅತ್ಯಾಚಾರ : ಲವ್ ಜಿಹಾದಿಯಿಂದ ನರಳುತ್ತಿದ್ದ ಯುವತಿ ಪೊಲೀಸ್ ಮೊರೆ..!
ಬೆಳ್ತಂಗಡಿ : ಲವ್ ಜಿಹಾದ್ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶಬ್ಬೀರ್ನನ್ನು ಬಂಧಿಸಿದ್ದು ಪ್ರಮುಖ ಆರೋಪಿ ಮೊಹಮ್ಮದ್ ರಿಜ್ವಾನ್ ಪರಾರಿಯಾಗಿದ್ದಾನೆ.
2018ರಲ್ಲಿ ಹಿಂದೂ ಯುವತಿ ಪರಿಚಯಿಸಿಕೊಂಡಿದ್ದ ರಿಜ್ವಾನ್ 2020ರ ನವೆಂಬರ್‌ನಲ್ಲಿ ಆಕೆಯನ್ನು ರಿಜಿಸ್ಟರ್ ಮದುವೆಯಾಗಿದ್ದ.
ಬಳಿಕ ಹಣೆಯಲ್ಲಿರೋ ಕುಂಕುಮ ತೆಗೆದು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡಿದ್ದ. ದುಬೈನಲ್ಲಿ ಕೆಲಸ ಕೊಡಿಸುತ್ತೇನೆ, ನಾವು ಸೆಟೆಲ್ ಆಗೋಣ ಎಂದು ಆಕೆಯನ್ನು ಪೀಡಿಸುತ್ತಿದ್ದ.
ಈ ರೀತಿ ಮೊಹಮ್ಮದ್ ರಿಜ್ವಾನ್ ಯುವತಿಗೆ ಕಿರುಕುಳ ನೀಡುತ್ತಿದ್ದ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದವರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಂಧಿತ ಶಬ್ಬೀರ್ ಇಬ್ಬರೂ ಅಣ್ಣತಮ್ಮಂದಿರು.
ಬೆಂಗಳೂರಿನ ಸ್ಪಾ ಒಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದು 2018 ರಲ್ಲಿ ಅಲ್ಲಿಗೆ ಆಗಾಗ ಬರುತ್ತಿದ್ದ ಉಜಿರೆ ಮೂಲ ಶಬ್ಬೀರ್ ಅ ಪರಿಚಯವಾಗಿದ್ದ.
ಬ್ರಿಗೇಡ್ ರಸ್ತೆಯ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಸಿ ಆಕೆಯನ್ನು ಹೋಟೆಲ್ ರೂಮ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.
ಯಾರಿಗಾದರೂ ವಿಷಯ ತಿಳಿಸಿದರೆ ಕೆಲಸದಿಂದ ತೆಗೆಯುವುದಾಗಿ, ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದಲ್ಲದೆ, ಆಸಿಡ್ ಹಾಕುವುದಾಗಿಯೂ ಆರೋಪಿ ಬೆದರಿಸಿದ್ದು, 2019 ರ ವರೆಗೆ 4 ಸಲ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಇಬ್ಬರ ವಿರುದ್ಧ ಯುವತಿ ಮೇಲೆ ಅತ್ಯಾಚಾರಗೈದ ಆರೋಪವಿದೆ. ಕಂಗಾಲಾದ ಯುವತಿ ಆತನ ಪರಿಚಿತರ ಬಳಿ ವಿಚಾರಿಸಿದಾಗ 2020 ರ ಸೆಪ್ಟಂಬರ್ 14ರಂದು ಮಂಗಳೂರು ಮೂಲದ ಯುವತಿಯೊಂದಿಗೆ ಆತ ಮದುವೆಯಾಗಿರುವುದು ಗೊತ್ತಾಗಿದೆ.
ಅಲ್ಲದೇ ಆ ಫೋಟೋ ವಾಟ್ಸಾಫ್ ಗಳಲ್ಲಿ ಹರಿಡಾದುತ್ತಿದೆ. ಅಲ್ಲದೇ ನೊಂದ ಯುವತಿಯ ತಂದೆ ತಮ್ಮ ಅಸಹಾಯಕ ಸ್ಥಿತಿಯ ಬಗ್ಗೆ ಮಾಡನಾಡಿರುವ ಆಡಿಯೋ ಕೂಡ ವೈರಲ್ ಆಗಿದೆ.
ಈ ಪ್ರಕರಣ ಸಂಬಂಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಜಾಲ ಇದೆಯಾ ಎಂಬ ಬಗ್ಗೆ ವಿವಿಧ ಆಯಾಮದಲ್ಲಿ ತನಿಖೆ ಮುಂದುವರೆದಿದೆ.